For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆ ಡಯಾಬಿಟಿಸ್ ಒಂದು ಒಳನೋಟ

By Dr Arpandev Bhattacharyya
|
Pergnancy Diabetes Monitoring

ಗರ್ಭಾವಸ್ಥೆ ಡಯಾಬಿಟಿಸ್ ಬೇರೆ ಡಯಾಬಿಟಿಸ್ ಗಿಂತ ಭಿನ್ನ ಹೇಗೆ?

ಗರ್ಭಾವಸ್ಥೆಯ ಮಧುಮೇಹದಲ್ಲಿ ಸಕ್ಕರೆ ಅಂಶ ನಿಯಂತ್ರಣ ಅತಿಮುಖ್ಯವಾದುದು. ಅದರಲ್ಲೂ ಆಹಾರ ಸೇವಿಸಿದ ನಂತರದ ಶುಗರ್ ಪರೀಕ್ಷೆಯಲ್ಲಿ ಸಮತೋಲನ ಕಾಯ್ದುಕೊಳ್ಳಲೇಬೇಕು. ಈ ಪರಿಸ್ಥಿತಿಯಲ್ಲಿ ಇನ್ಸುಲಿನ್ ತೆಗೆದುಕೊಳ್ಳುವ ಪ್ರಮಾಣವೂ ಅಧಿಕವಾಗಿರುತ್ತದೆ. ಗರ್ಭದಲ್ಲಿನ ಕೂಸಿನ ತೂಕ ಹೆಚ್ಚಿದ್ದಂತೆ ಗರ್ಭವೇಷ್ಟನ(placenta) ಗಾತ್ರ ಹಿರಿದಾಗುತ್ತದೆ. ಅಲ್ಲದೆ, ಗರ್ಭವೇಷ್ಟನ ಕೂಡಾ ಒಂದು ಬಗೆ ಹಾರ್ಮೋನ್ ಅನ್ನು ಉತ್ಪತ್ತಿ ಮಾಡುತ್ತದೆ ಇದು ಇನ್ಸುಲಿನ್ ವಿರುದ್ಧ ಕಾರ್ಯ ನಿರ್ವಹಿಸುತ್ತದೆ. ಇನ್ಸುಲಿನ್ ಪ್ರಮಾಣ ಹೆಚ್ಚಳವಾಗದಿದ್ದರೆ ಗರ್ಭವೇಷ್ಟನ ಕಾರ್ಯ ನಿರ್ವಹಣೆಗೆ ಧಕ್ಕೆ ಉಂಟಾಗುತ್ತದೆ.

ಗರ್ಭಾವಸ್ಥೆ ಮಧುಮೇಹಿಗಳಿಗೆ ಆಹಾರ ಪಥ್ಯ ಹೇಗೆ?

ಗರ್ಭಾವಸ್ಥೆಯಲ್ಲಿ ಕ್ಯಾಲೋರಿ ಸೇವನೆ ಸ್ವಲ್ಪ ಅಧಿಕವಾಗಿರುತ್ತದೆ. ಆದರೆ, 500 ಕ್ಯಾಲೋರಿಗಿಂತ ಹೆಚ್ಚಿನ ಪ್ರಮಾಣದ ಸೇವನೆ ಹಾನಿಕರ ಎನ್ನುತ್ತಾರೆ ವೈದ್ಯರು. ಇನ್ನು ಸ್ಥೂಲಕಾಯರಿಗೆ ಕ್ಯಾಲೋರಿ ಹೆಚ್ಚಿಸಿಕೊಳ್ಳುವ ಅಗತ್ಯವಿಲ್ಲ. ಅಲ್ಲದೆ, ಗರ್ಭಾವಸ್ಥೆಯಲ್ಲಿ ಹೆಚ್ಚಿನ ದೈಹಿಕ ಕಸರತ್ತು ಮಾಡಿ ತೂಕ ಇಳಿಸಿಕೊಳ್ಳಲು ತೊಡಗುವುದು ಅಪಾಯ. ದೈನಂದಿನ ಆಹಾರ ಸೇವನೆ ಕ್ರಮ ಹಾಗೂ ಮಧುಮೇಹ ನಿಯಂತ್ರಣ ಕುರಿತು ತಜ್ಞರೊಡನೆ ಸಮಾಲೋಚನೆ ನಡೆಸಿ ನಂತರ ಸಮತೋಲನ ಆಹಾರ ಸೇವಿಸಲು ತೊಡಗಬೇಕು. ಮೂರು ಬಾರಿ ಊಟ ಹಾಗೂ ಅಷ್ಟೆ ಬಾರಿ ಆರೋಗ್ಯಕರ ತಿಂಡಿ, ಹಣ್ಣು ಹಂಪಲು ಸೇವನೆ ಎಲ್ಲ ರೀತಿಯಿಂದಲೂ ಸೂಕ್ತ

ಗರ್ಭಾವಸ್ಥೆ ಮಧುಮೇಹಿಗಳಿಗೆ ಗುಳಿಗೆ ಸೇವನೆ ನಿಷಿದ್ಧವೇ?

ಗರ್ಭಾವಸ್ಥೆ ಸಂದರ್ಭದಲ್ಲಿ ತಾಯಿಯ ಮಧುಮೇಹ ನಿಯಂತ್ರಣದ ಜೊತೆಗೆ ಮಗುವಿನ ಸಕ್ಕರೆ ಪ್ರಮಾಣದ ಮೇಲೆ ಕೂಡಾ ನಿಗಾ ವಹಿಸಬೇಕಾಗುತ್ತದೆ. ಗುಳಿಗೆಗಳನ್ನು ಸೇವಿಸುವುದರಿಂದ ಮಗುವಿನ ರಕ್ತದಲ್ಲಿನ ಸಕ್ಕರೆ ಅಂಶ ಇಳಿಮುಖವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಲ್ಲದೆ, ಮಾತ್ರೆಗಳು ನಿಧಾನವಾಗಿ ಕಾರ್ಯ ನಿರ್ವಹಿಸುವುದರಿಂದ ಗರ್ಭಿಣಿಯರ ಚಿಕಿತ್ಸಾ ವಿಧಾನದಲ್ಲಿ ಬದಲಾವಣೆ ಮಾಡಲು ಕಷ್ಟವಾಗುತ್ತದೆ.

ಗರ್ಭಿಣಿಯರ ಮಧುಮೇಹ ದರ್ಶಕವಾಗಿ ಯಾವ ವಿಧಾನ ಸೂಕ್ತ?

ಗರ್ಭಿಣಿಯರು ಮಧುಮೇಹದ ಏರಿಳಿತ ಅರಿಯಲು ಗ್ಲುಕೋಮೀಟರ್ ಬಳಸುವುದು ಸೂಕ್ತ. ಈ ದರ್ಶಕದ ಮೂಲಕ ಅಂಗೈಯಲ್ಲೇ ಅಂಕಿ ಅಂಶಗಳು ಸಿಗುತ್ತವೆ. ಉಪಹಾರದ ನಂತರ ಗ್ಲುಕೋಸ್ ಪರೀಕ್ಷೆ ಅಲ್ಲದೆ, ಪ್ರತಿ ಊಟದ ನಂತರ ಪರೀಕ್ಷೆ ಮಾಡಿಕೊಳ್ಳುವುದು ಉತ್ತಮ. HbA1C ಪರೀಕ್ಷೆ ಕೂಡಾ ಸರಾಸರಿ ಪ್ರಮಾಣವನ್ನು ತಿಳಿಯಲು ಸಹಕಾರಿಯಾಗಿರುತ್ತದೆ.

ಯಾವ ಕಾಲದಲ್ಲಿ ಸಕ್ಕರೆ ಪ್ರಮಾಣ ತಿಳಿಯಬೇಕು?

ಮೊದಲೇ ಹೇಳಿದಂತೆ ಗರ್ಭಾವಸ್ಥೆ ಸಮಯದಲ್ಲಿ ಡಯಾಬಿಟಿಸ್ ಪರೀಕ್ಷೆ ಹಾಗೂ ನಿಯಂತ್ರಣ ಬಹಳ ಮುಖ್ಯ. ಊಟಕ್ಕೆ ಮುನ್ನ (ಉಪವಾಸವಿದ್ದು) ಒಮ್ಮೆ ಪರೀಕ್ಷೆ ಮಾಡಿಕೊಳ್ಳಬೇಕು. ಉಪಹಾರ ಸೇವಿಸಿ 2 ಗಂಟೆ ನಂತರ , ಊಟವಾದ 2 ಗಂಟೆ ನಂತರ ಹಾಗೂ ರಾತ್ರಿ ಭೋಜನ ಮಾಡಿ 2 ಗಂಟೆ ನಂತರ ಪರೀಕ್ಷಿಸಿಕೊಳ್ಳಬೇಕು. ಇದೇ ಕ್ರಮವನ್ನು ವಾರಕ್ಕೆ ಎರಡು ಸಾರಿಯಂತೆ 2-3 ಬಿಟ್ಟು ಅನುಸರಿಸಬೇಕು. ಪರೀಕ್ಷೆ ಆರಂಭಕ್ಕೂ ಮುನ್ನ ವೈದ್ಯರ ಸಲಹೆ ಪಡೆದು ನಂತರ ಸ್ವತಃ ಗ್ಲುಕೋಮೀಟರ್ ಬಳಸಿ ಪರೀಕ್ಷಿಸಿಕೊಳ್ಳಬಹುದು.

English summary

ಗರ್ಭಾವಸ್ಥೆ ಡಯಾಬಿಟಿಸ್ ಒಂದು ಒಳನೋಟ

Pregnancy Diabetes, needs to be controlled to for the safety of both the child and the mother. Thus, it is necessary to monitor diabetes in pregnancy. We do not give tablet in pregnancy with the fear that baby’s blood sugar may drop.
X
Desktop Bottom Promotion