For Quick Alerts
ALLOW NOTIFICATIONS  
For Daily Alerts

ಡಯಾಬಿಟಿಸ್ ತೊಂದರೆ ಯಾರಿಗೆ ಹೆಚ್ಚು?

By Dr Arpandev Bhattacharyya
|
Obesity Risk,Diabetes

ಡಯಾಬಿಟಿಸ್ ಗೆ ವಂಶವಾಹಿಯಾಗಿ ಹರಡುವ ರೋಗದ ಕೌಟುಂಬಿಕ ಚರಿತ್ರೆ ಪ್ರಮುಖ ಅಂಶ. ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಹಿಂದೆ ಈ ಕಾಯಿಲೆ ಬಂದಿದ್ದರೆ, ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ಸಮಸ್ಥಿತಿಯಲ್ಲಿದ್ದರೂ ಪ್ರತಿವರ್ಷಮಧುಮೇಹ ಪರೀಕ್ಷೆಗೊಳಪಟ್ಟರೆ ಒಳ್ಳೆಯದು.

ಸದಾ ಕುಳಿತೇ ಕೆಲಸಮಾಡುವ ಕಾರ್ಯಶೈಲಿವುಳ್ಳವರು, ಸ್ಥೂಲಕಾಯರು, ಧೂಮಪಾನಿಗಳು, ಅಧಿಕವಾಗಿ ಮದ್ಯ ಸೇವಿಸುವುದು, ಉನ್ನತವಾದ ರಕ್ತದೊತ್ತಡವುಳ್ಳವರು ಹಾಗೂ ಗರ್ಭಾವಸ್ಥೆಯಲ್ಲಿ ಮಧುಮೇಹ ರೋಗದ ಪೂರ್ವ ಇತಿಹಾಸವುಳ್ಳ ಮಹಿಳೆಯರು ಅಥವಾ ಸಾಮಾನ್ಯಕ್ಕಿಂತ ಅಧಿಕ ತೂಕದ (ಜನನ ಸಮಯದ ಮಗುವಿನ ತೂಕ 4 ಕೆಜಿಗಿಂತ ಅಧಿಕ) ಮಗು ಹೆರುವ ಸ್ತ್ರೀಯರಿಗೆ ಮಧುಮೇಹದ ತೊಂದರೆ ಇದ್ದೇ ಇರುತ್ತದೆ.

ಡಯಾಬಿಟಿಸ್ ರೋಗದ ಲಕ್ಷಣಗಳೇನು?

ರೋಗದ ಪ್ರಾರಂಭದದಿನಗಳಲ್ಲಿ ವಯಸ್ಕರಲ್ಲಿ ಯಾವುದೇ ಲಕ್ಷಣಗಳು ತಕ್ಷಣಕ್ಕೆ ಗೋಚರಿಸುವುದಿಲ್ಲ. ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ 180mg% ದಾಟಿದಾಗ, ಮೂತ್ರದಲ್ಲಿ ಸಕ್ಕರೆ ಅಂಶ ಹೆಚ್ಚಾಗಿ ಕಾಣತೊಡಗುತ್ತದೆ. ಮೂತ್ರದಲ್ಲಿ ಸಕ್ಕರೆ ಅಂಶ ಹೆಚ್ಚಾದಂತೆ ನೀವು ಹೆಚ್ಚೆಚ್ಚು ಮೂತ್ರ ವಿಸರ್ಜನೆ ಮಾಡತೊಡಗುತ್ತಿರಿ.

ಬಾಯಾರಿಕೆ ಹಾಗೂ ದಣಿವು ಕೂಡಾ ಹೆಚ್ಚಾಗುತ್ತದೆ. ದಿನಗಳು ಕಳೆದಂತೆ ನಿಮ್ಮ ದೇಹದ ತೂಕವು ಕಮ್ಮಿಯಾಗತೊಡಗುತ್ತದೆ. ಒಂದು ಕಡೆ ಹಸಿವು ಹೆಚ್ಚಾಗುತ್ತಿದ್ದಂತೆ ನೀವು ಹೆಚ್ಚೆಚ್ಚು ಆಹಾರ ಸೇವಿಸತೊಡಗಿದರೂ ನಿಮ್ಮ ದೇಹದ ತೂಕ ಇಳಿಮುಖವಾಗತೊಡಗುತ್ತದೆ. ಸಕ್ಕರೆ ಪ್ರಮಾಣ ಹೆಚ್ಚಿದ್ದಂತೆಲ್ಲಾ ರೋಗದ ಸೋಂಕು ಹೆಚ್ಚುವ ಸಾಧ್ಯತೆಯಿದ್ದು, ಗಾಯ,ವ್ರಣದಿಂದ ಬಳಲುವವರು ಸಕ್ಕರೆ ಪ್ರಮಾಣ ತಗ್ಗಿಸಿಕೊಳ್ಳಲು ಸಾಕಷ್ಟು ಶ್ರಮಪಡಬೇಕಾಗುತ್ತದೆ. ಕೆಲವರಿಗೆ ದೃಷ್ಟಿದೋಷ ಕೂಡಾ ಬಾಧಿಸಬಹುದು.

ಡಯಾಬಿಟಿಸ್ ರೋಗ ನಿರ್ಣಯ ಹೇಗೆ ?

ಮುಂಜಾನೆ ಹೊಟ್ಟೆಗೆ ಏನನ್ನೂ ಸೇವಿಸದ ಸಂದರ್ಭದಲ್ಲಿ ರಕ್ತದಲ್ಲಿನ ಗ್ಲುಕೋಸ್ ಪ್ರಮಾಣ 110mgಗಿಂತ ಕಡಿಮೆ ಪ್ರಮಾಣದಲ್ಲಿರಬೇಕು. ಮೂತ್ರದಲ್ಲಿನ ಸಕ್ಕರೆ ಪ್ರಮಾಣ ಅಳತೆ ಮಾಡುವುದರ ಮೂಲಕ ರೋಗವನ್ನು ನಿರ್ಣಯಿಸುವುದು ಅಷ್ಟು ಸೂಕ್ತವಲ್ಲ.

ಉಪವಾಸವಿದ್ದಾಗ ರಕ್ತದ ಗ್ಲುಕೋಸ್ ಪ್ರಮಾಣ 110mg ಇಂದ 125 mg ಒಳಗಿದ್ದರೆ ಅದನ್ನು ಡಯಾಬಿಟಿಸ್ ಗಡಿಗೆರೆಯಲ್ಲಿದೆ ಎಂದು ನಿರ್ಣಯಿಸಬಹುದು. ಆದರೆ, 126mg ಅಥವಾ ಅಧಿಕ ಪ್ರಮಾಣದಲ್ಲಿದ್ದರೆ ಡಯಾಬಿಟಿಎಸ್ ತಗುಲಿದೆ ಎಂದು ನಿರ್ಣಯಿಸಲಾಗುತ್ತದೆ.

ಇದಲ್ಲದೆ ದಿನದ ಯಾವುದೇ ಸಮಯದಲ್ಲಿ ರಕ್ತದ ಮಾದರಿ(ಸ್ಯಾಂಪಲ್) ಅನ್ನು ತೆಗೆದುಕೊಂಡು ಪರೀಕ್ಷಿಸಲಾಗುತ್ತದೆ. ಗ್ಲುಕೋಸ್ ಪ್ರಮಾಣ 200mg ದಾಟಿದರೆ ಡಯಾಬಿಟಿಎಸ್ ಎಂದು ನಿರ್ಣಯಿಸಲಾಗುತ್ತದೆ. ಪದೇ ಪದೇ ಪರೀಕ್ಷಿಸುವ ಅಗತ್ಯವಿಲ್ಲ. ಆದರೆ, ಕೆಲವು ಸಂಶಯಾತ್ಮಕ ಪ್ರಕರಣಗಳಲ್ಲಿ ಮಾತ್ರ ಗ್ಲುಕೋಸ್ ಟಲೆರಸ್ ಪರೀಕ್ಷೆ(GTT) ಮಾಡಲಾಗುತ್ತದೆ.

GTT ಗೆ ನಿಯಮಾವಳಿಗಳು

* 3 ದಿನಗಳ ಕಾಲ ಸಾಮಾನ್ಯ ಆಹಾರ

* ರಾತ್ರಿ ವೇಳೆ ಹೊಟ್ಟೆಗೆ ಉಪವಾಸ

* ರಕ್ತ, ಮೂತ್ರದಲ್ಲಿನ ಸಕ್ಕರೆ ಪ್ರಮಾಣದ ಮಾದರಿಯ ಅಗತ್ಯವಿರುವುದಿಲ್ಲ.

* ಪ್ರತಿ 5 ನಿಮಿಷಕ್ಕೆ100 ಮಿ.ಲೀ ನೀರಿನೊಂದಿಗೆ 75 ಗ್ರಾಂಗಳಷ್ಟು ಗ್ಲುಕೋಸ್(ಗ್ಲೂ ಕಾನ್ ಡಿ) ಸೇವಿಸಿ.

* ಆನಂತರ 2 ಗಂಟೆ ಬಿಟ್ಟು ರಕ್ತದಲ್ಲಿನ ಸಕ್ಕರೆ ಪ್ರಮಾಣದ ಮಾದರಿ ಸಂಗ್ರಹ, ಮೂತ್ರ ಮಾದರಿ ಬೇಕಿಲ್ಲ.

ನಮ್ಮ ಆಸ್ಪತ್ರೆಯಲ್ಲಿ ತಸಾಮಾನ್ಯ ಆರೋಗ್ಯವಂತ ಜನರ ಪಾಸಣೆ ಮಾಡಿ ಪಡೆದ ಮಾಹಿತಿಗನುಗುಣವಾಗಿ ಉಪವಾಸ ಸಮಯದಲ್ಲಿನ ರಕ್ತದ ಸಕ್ಕರೆ ಪ್ರಮಾಣ 90mg/dl ಇದ್ದರೆ ಮುಂದಿನ 2 ಗಂಟೆಗಳಲ್ಲಿ ಡಯಾಬಿಟಿಸ್ ಗಡಿಗೆರೆ ಮುಟ್ಟುವ ಅಥವಾ ಗ್ಲುಕೋಸ್ ಟಾಲರಸ್ ಗೆ ಹಾನಿಗೊಂಡಿರುವುದು ಕಂಡುಬರುತ್ತದೆ. ಗ್ಲುಕೋಸ್ ಪ್ರಮಾಣ ಸುಮಾರು 140mg/dl ಮುಟ್ಟಿರುತ್ತದೆ.

ಆದ್ದರಿಂದ ಉಪವಾಸ ಸಮಯದ ಗ್ಲುಕೋಸ್ ಪ್ರಮಾಣ 90mg% ಉಳ್ಳ ಎಲ್ಲರಿಗೂ GTT ಗೆ ಒಳಪಡುವಂತೆ ಸೂಚಿಸುತ್ತೇವೆ. ಇದರಿಂದ ಡಯಾಬಿಟಿಸ್ ಹಾಗೂ ಗಡಿ ಗೆರೆ ಪ್ರಮಾಣದಲ್ಲಿರುವ ಡಯಾಬಿಟಿಸ್ ಎಂದು ಪೂರ್ವದಲ್ಲೇ ನಿರ್ಣಯಿಸಬಹುದಾಗಿದೆ.

ಡಯಾಬಿಟಿಸ್ ನ ವಿವಿಧತೆಗಳ ಬಗ್ಗೆ ಮುಂದಿನ ಲೇಖನದಲ್ಲಿ ನಿರೀಕ್ಷಿಸಿ

English summary

Diabetes Risks, Symptoms, Diagnosis, Treatment

People suffering from obesity and who have the habit of smoking and are alcoholic are at risk of Diabetes. Some major symptoms of diabetes is are weight loss, excessive urination etc. Read ahead how to diagnose it.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more