For Quick Alerts
ALLOW NOTIFICATIONS  
For Daily Alerts

ನಿಮ್ಮ ಮೆದುಳಿನ ಶಕ್ತಿ ಹೆಚ್ಚಿಸುವ ಅತ್ಯದ್ಭುತ ಆಹಾರಗಳು

By Hemanth P
|

ಜಂಜಾಟದ ಇಂದಿನ ವ್ಯಸ್ತ ಜೀವನದಲ್ಲಿ ನಮ್ಮ ಮೆದುಳು ತುಂಬಾ ಬಳಲಿದ ಮತ್ತು ಕ್ರಿಯೆಯಿಲ್ಲದಂತಿರುತ್ತದೆ. ನಮ್ಮ ಮೆದುಳಿಗೆ ನಿರಂತರ ವರ್ಧಕ ಬೇಕಿರುತ್ತದೆ ಮತ್ತು ಮೆದುಳಿಗೆ ನಾವು ಮಾಲೀಕರಾಗಿರುವ ಕಾರಣ ನೈಸರ್ಗಿಕ ಔಷಧಿಯೊಂದಿಗೆ ಇದನ್ನು ಒದಗಿಸುವುದು ತುಂಬಾ ಮುಖ್ಯ. ನಾವು ದಿನಾಲೂ ಸೇವಿಸುವ ಆಹಾರದಲ್ಲಿ ಮೆದುಳಿಗೆ ಬೇಕಾಗಿರುವ ಆಹಾರವಿದೆಯೆಂದು ಹೆಚ್ಚಿನವರು ಹೇಳಬಹುದು.

ಅದಾಗ್ಯೂ, ಮೆದುಳಿನ ಶಕ್ತಿ ಉನ್ನತ ಮಟ್ಟದಲ್ಲಿಡಲು ನಾವು ಸ್ವಲ್ಪ ಹೆಚ್ಚಿನ ಮಟ್ಟದ ಆಹಾರ ಸೇವಿಸುವ ಅಗತ್ಯವಿದೆ. ವಿವಿಧ ವರ್ಗದ ಬೆರ್ರಿಗಳಿಂದ ಹಿಡಿದು ವಿಟಮಿನ್ ಆಹಾರಗಳು ನಮ್ಮ ಮೆದುಳಿನ ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮಾನಸಿಕವಾಗಿ ನೀವು ಬಳಲಿದರೆ ಇದು ನಿಮ್ಮ ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಒಂದು ವಿಧದ ಆಹಾರ ಬೇಕೆಂಬುದರ ಲಕ್ಷಣವಾಗಿದೆ. ಕೆಳಗೆ ಕೊಟ್ಟಿರುವ ಕೆಲವೊಂದು ಆಹಾರಗಳು ನಿಮ್ಮ ಮೆದುಳಿನ ಶಕ್ತಿ ಹೆಚ್ಚಿಸುವುದರೊಂದಿಗೆ ಸಂಪೂರ್ಣವಾಗಿ ನಿಮ್ಮ ಉತ್ತಮ ಆರೋಗ್ಯಕ್ಕೆ ನೆರವಾಗುತ್ತದೆ. ಪರ್ಕಿನ್ಸನ್ ನಂತಹ ಕಾಯಿಲೆಯಿಂದ ದೂರವಿಡಲು ಮೆದುಳಿನ ಆಹಾರ ಅತ್ಯಗತ್ಯ.

ಈ ಆಹಾರಗಳಲ್ಲಿರುವ ಕೆಲವೊಂದು ರಾಸಾಯನಿಕಗಳು ಮಕ್ಕಳಲ್ಲಿ ಐಕ್ಯೂ ಹೆಚ್ಚಿಸುತ್ತದೆ. ಇದರಿಂದ ಅವರು ಕಲಿಕೆಯಲ್ಲಿ ಅಗ್ರಸ್ಥಾನಕ್ಕೇರಲು ಸಾಧ್ಯ. ತಜ್ಞರ ಪ್ರಕಾರ ಮೆದುಳಿನ ಆಹಾರಗಳನ್ನು ಮಕ್ಕಳ ಪರೀಕ್ಷೆಯ ಸಮಯದಲ್ಲಿ ಅವರಿಗೆ ನೀಡಬೇಕು. ಇದರಿಂದ ಅವರು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುವುದು ತಪ್ಪುತ್ತದೆ. ನಿಮ್ಮ ಮೆದುಳಿಗೆ ಅಗತ್ಯವಿರುವ ಮತ್ತು ಅದರ ಶಕ್ತಿ ಹೆಚ್ಚಿಸಬಲ್ಲ ಕೆಲವೊಂದು ಆರೋಗ್ಯಕರ ಆಹಾರಗಳು ಇಲ್ಲಿವೆ.

ವಾಲ್ ನಟ್ಸ್

ವಾಲ್ ನಟ್ಸ್

ವಾಲ್ ನಟ್ಸ್ ನಲ್ಲಿರುವ ಪಾಲಿಫೀನಾಲ್ ಗಳು ಮೆದುಳಿನಲ್ಲಿ ನರಕೋಶಗಳ ಮಧ್ಯೆ ಸಂಪರ್ಕವನ್ನು ಸುಧಾರಿಸುತ್ತದೆ. ನೀವು ದಿನದಲ್ಲಿ ಕೆಲವೊಂದು ವಾಲ್ ನಟ್ಸ್ ಗಳನ್ನು ತಿಂದರೆ ನಿಮ್ಮ ಮೆದುಳಿನ ಶಕ್ತಿ ಶೇ.19ರಷ್ಟು ಹೆಚ್ಚಾಗುತ್ತದೆ.

ಕಾಫಿ

ಕಾಫಿ

ಕೆಫಿನ್ ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದರ ಹೆಚ್ಚಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ದಿನಕ್ಕೆ ಒಂದು ಕಪ್ ಮಾತ್ರ ಸೇವಿಸಿ.

ಮೀನು

ಮೀನು

ಒಮೆಗಾ-3 ಫ್ಯಾಟ್ ಆ್ಯಸಿಡ್ ನ್ನು ಒಳಗೊಂಡಿರುವ ಮೀನನ್ನು ವಾರದಲ್ಲಿ ಒಂದು ಸಲವಾದರೂ ಸೇವಿಸುದರಿಂದ ಮೆದುಳಿನ ಶಕ್ತಿ ಹೆಚ್ಚುತ್ತದೆ.

ಬಸಲೆ ಸೊಪ್ಪು

ಬಸಲೆ ಸೊಪ್ಪು

ಈ ಎಲೆಯ ತರಕಾರಿಯು ಮೆಗ್ನಿಶಿಯಂನಿಂದ ಸಮೃದ್ಧವಾಗಿದ್ದು, ರಕ್ತನಾಳಗಳನ್ನು ಹಿಗ್ಗಿಸಿ ದೇಹ ಹಾಗೂ ಮೆದುಳಿಗೆ ರಕ್ತ ಸಂಚಾರವೂ ಸರಿಯಾಗಿ ಆಗುವಂತೆ ಮಾಡುತ್ತದೆ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ತರಕಾರಿ ಎಣ್ಣೆಯ ಬದಲು ಆಲಿವ್ ಎಣ್ಣೆ ಬಳಸಿ. ಇದರಲ್ಲಿ ಫ್ಯಾಟಿ ಆ್ಯಸಿಡ್ ಮತ್ತು ಪಾಲಿಫೀನಾಲ್ ಗಳು ಕೀಲುಗಳಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಮೆದುಳಿನ ಶಕ್ತಿ ವೃದ್ಧಿಸುತ್ತದೆ.

ಅಗಸೆ ಬೀಜ(ಫ್ಲಾಕ್ಸ್ ಸೀಡ್ಸ್)

ಅಗಸೆ ಬೀಜ(ಫ್ಲಾಕ್ಸ್ ಸೀಡ್ಸ್)

ಇದು ಗಾತ್ರದಲ್ಲಿ ತುಂಬಾ ಸಣ್ಣದಿರಬಹುದು. ಆದರೆ ಇದರಲ್ಲಿ ಪ್ರೋಟಿನ್ ಮತ್ತು ನಾರಿನಾಂಶ ಹೆಚ್ಚಿದೆ. ಇದನ್ನು ಮೊಸರು ಅಥವಾ ಸಿರಾಲ್ ಗೆ ಸೇರಿಸಿ ಸೇವಿಸಿದರೆ ನಿಮ್ಮ ಮೆದುಳಿನ ಶಕ್ತಿ ಹೆಚ್ಚಲು ನೆರವಾಗುತ್ತದೆ.

ಮಸ್ಸೆಲ್ಸ್

ಮಸ್ಸೆಲ್ಸ್

ಈ ಆಹಾರದಲ್ಲಿರುವ ಅಧಿಕ ಮಟ್ಟದ ವಿಟಮಿನ್ ಬಿ12 ನಿಮ್ಮ ಮೆದುಳಿನ ನರಗಳನ್ನು ವಿಯೋಜಿಸಲು ನೆರವಾಗುತ್ತದೆ. ತಿಂಗಳಲ್ಲಿ ಒಂದು ಸಲ ತಿಂದರೆ ಇದು ಒಳ್ಳೆಯದು.

ಮೊಸರು

ಮೊಸರು

ಮೊಸರಿನಲ್ಲಿ ಕ್ಯಾಲ್ಸಿಯಂ ಅಧಿಕವಾಗಿದೆ. ಇದು ಮೆದುಳಿನ ಎಲ್ಲಾ ಕ್ರಿಯೆಗಳಿಗೆ ನೆರವಾಗುವುದರೊಂದಿಗೆ ನಿಮ್ಮ ಮೆದುಳಿನ ಆರೋಗ್ಯವನ್ನು ವೃದ್ಧಿಸುತ್ತದೆ.

ಶತಾವರಿ

ಶತಾವರಿ

ಖಿನ್ನತೆಯಿಂದ ಬಳಲುತ್ತಿರುವ ಅರ್ಧದಷ್ಟು ಮಂದಿಯಲ್ಲಿ ಫೋಲೆಟ್ ಮಟ್ಟವು ಕಡಿಮೆಯಾಗಿರುತ್ತದೆ. ಇದು ಪೌಷ್ಠಿಕಾಂಶಗಳಿಂದ ತುಂಬಿದ ಆಹಾರವಾಗಿದ್ದು, ಮೆದುಳಿಗೆ ಹಾನಿಯುಂಟು ಮಾಡಬಲ್ಲ ಯಾವುದೇ ಮಟ್ಟದ ಖಿನ್ನತೆಯನ್ನು ದೂರ ಮಾಡಬಲ್ಲದು.

ಪುದೀನಾ

ಪುದೀನಾ

ತಾಜಾ ಪುದೀನಾದ ಸುವಾಸನೆಯು ಪ್ರಚೋದಕದಂತೆ ಕೆಲಸ ಮಾಡಿ ಜಾಗೃತಾವಸ್ಥೆ ಮತ್ತು ಮೆದುಳಿನ ಕ್ರಿಯೆಯನ್ನು ಉತ್ತಮ ಪಡಿಸುತ್ತದೆ. ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ದಿನದಲ್ಲಿ ಒಂದು ಕಪ್ ಪುದೀನಾ ಚಹಾ ಕುಡಿಯಿರಿ.

ಅರಶಿನ

ಅರಶಿನ

ಅಲ್ಝೆಮರ್ ಕಾಯಿಲೆಯಲ್ಲಿ ವಿಶ್ವದಲ್ಲೇ ಭಾರತದ ಪ್ರಮಾಣವು ತುಂಬಾ ಕಡಿಮೆಯಿದೆ. ಯಾವುದೇ ಪದಾರ್ಥದಲ್ಲಿ ಅರಶಿನವನ್ನು ಸೇರಿಸುವುದರಿಂದ ಅಪಾಯಕಾರಿ ಕಾಯಿಲೆ ಬರುವ ಸಾಧ್ಯತೆ ತುಂಬಾ ಕಡಿಮೆಯಾಗಿದೆ. ಅಲ್ಝೆಮರ್ ಕಾಯಿಲೆಯು ಮೆದುಳಿನಲ್ಲಿ ಉರಿಯೂತ ಕಾರ್ಯದಿಂದ ಆರಂಭವಾಗುತ್ತದೆ.

ಸ್ಟ್ರಾಬೆರ್ರಿ

ಸ್ಟ್ರಾಬೆರ್ರಿ

ಈ ಬೆರ್ರಿಗಳಲ್ಲಿ ಉರಿಯೂತ ವಿರೋಧಿ ಗುಣಗಳಿವೆ. ಈ ಗುಣಗಳಿಂದ ಅದು ಮೆದುಳು ಮತ್ತು ಜ್ಞಾಪಕ ಶಕ್ತಿಯನ್ನು ಕಾಪಾಡುತ್ತದೆ.

ಅವಕಾಡೋ

ಅವಕಾಡೋ

ಇದರಲ್ಲಿ ಮೆದುಳಿಗೆ ಬೇಕಾಗಿರುವ ಉತ್ತಮ ಕೊಬ್ಬನ್ನು ಹೊಂದಿದೆ. ಇದು ರಕ್ತಚಲನೆ ಸರಾಗವಾಗಿ ಆಗಲು ಮತ್ತು ಮೆದುಳಿನ ಆರೋಗ್ಯ ಉತ್ತಮಪಡಿಸಲು ನೆರವಾಗುತ್ತದೆ.

ಬಾಳೆಹಣ್ಣು

ಬಾಳೆಹಣ್ಣು

ಸಿಹಿ ಹಳದಿ ಹಣ್ಣಿನಲ್ಲಿ ಮ್ಯಾಂಗನೀಸ್ ಉನ್ನತ ಮಟ್ಟದಲ್ಲಿದೆ. ಇದು ಮೆದುಳಿನ ಬೆಳವಣಿಗೆ ಮತ್ತು ಕ್ರಿಯೆಗೆ ನೆರವಾಗುತ್ತದೆ.

ಮೊಟ್ಟೆಯ ಲೋಳೆ

ಮೊಟ್ಟೆಯ ಲೋಳೆ

ಮೊಟ್ಟೆಯ ಹಳದಿ ಲೋಳೆಯಲ್ಲಿ ಕೋಲೀನ್ ಸಮೃದ್ಧವಾಗಿದೆ. ಈ ಪೌಷ್ಠಿಕಾಂಶವು ಮೆದುಳಿನಲ್ಲಿರುವ ನರಕೋಶಕ್ಕೆ ಸಂಕೇತಗಳನ್ನು ಕಳುಹಿಸುವ ಕಾರ್ಯವನ್ನು ವೇಗವಾಗಿ ಮಾಡಿ ಮೆದುಳಿನ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ಇತ್ತೀಚಿನ ಸಂಶೋಧನೆಯಿಂದ ಸಾಬೀತಾಗಿದೆ.

ತೆಂಗಿನ ಎಣ್ಣೆ

ತೆಂಗಿನ ಎಣ್ಣೆ

ತಮ್ಮ ಆಹಾರದಲ್ಲಿ ತೆಂಗಿನ ಎಣ್ಣೆಯನ್ನು ಬಳಸುವವರ ಮೆದುಳಿನ ಶಕ್ತಿಯು ಹೆಚ್ಚಾಗಲು ಇದು ನೆರವಾಗುತ್ತದೆ. ತೆಂಗಿನ ಎಣ್ಣೆ ಕೆಟೊನ್ಸ್ ನ್ನು ನಿರ್ಮಿಸುತ್ತದೆ. ಇದು ಮೆದುಳಿಗೆ ಇಂಧನವನ್ನು ಒದಗಿಸುತ್ತದೆ.

ಓಟ್ಸ್

ಓಟ್ಸ್

ಒಳ್ಳೆಯ ಕಾರ್ಬ್ ನಿಂದ ಸಮೃದ್ಧವಾಗಿರುವ ಈ ಆಹಾರವು ನಿಮ್ಮ ಮೆದುಳಿಗೆ ಶಕ್ತಿ ನೀಡುತ್ತದೆ. ಒಂದು ಬೌಲ್ ಓಟ್ಸ್ ಮತ್ತು ಹಣ್ಣು ನಿಮ್ಮ ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆ ಹೆಚ್ಚಿಸುತ್ತದೆ.

ಕುಂಬಳಕಾಯಿ ಬೀಜಗಳು

ಕುಂಬಳಕಾಯಿ ಬೀಜಗಳು

ಈ ಬೀಜಗಳಲ್ಲಿ ಟ್ರಿಪ್ಟೊಫಾನ್ ಎನ್ನುವ ಅಮಿನೋ ಆ್ಯಸಿಡ್ ಸಮೃದ್ಧವಾಗಿದೆ. ಇದು ನರಪೇಕ್ಷಕವು ಸರಿಯಾದ ರೀತಿಯಲ್ಲಿ ಕೆಲಸ ಮಾಡಿ ಸಾಮಾಜಿಕ ಆತಂಕ ಕಡಿಮೆ ಮಾಡಲು ಅಗತ್ಯವಿದೆ.

ಒಣದ್ರಾಕ್ಷಿ

ಒಣದ್ರಾಕ್ಷಿ

ನಿಯಮಿತ ಒಣದ್ರಾಕ್ಷಿಯಲ್ಲಿ ಬೊರೊನ್ ಎನ್ನುವ ಅಂಶವಿದ್ದು, ಇದು ಎಚ್ಚರಿಕೆ ಮತ್ತು ಜ್ಞಾಪಕಶಕ್ತಿಯನ್ನು ಹೆಚ್ಚಿಸುತ್ತದೆ. ಸ್ವಲ್ಪ ಒಣದ್ರಾಕ್ಷಿ ತಿನ್ನುವುದರಿಂದ ನಿಮ್ಮ ಮೆದುಳಿಗೆ ಒಳ್ಳೆಯದು.

ಹೂಕೋಸು

ಹೂಕೋಸು

ಹೆಚ್ಚಿನವರಿಗೆ ರುಚಿಸದ ಹಸಿರು ತರಕಾರಿಯಲ್ಲಿ ವಿಟಮಿನ್ ಕೆ ಉನ್ನತ ಮಟ್ಟದಲ್ಲಿದೆ. ಹೂಕೋಸು ಗ್ರಹಿಕೆಯ ಕ್ರಿಯೆ ವೃದ್ಧಿಸುತ್ತದೆ ಮತ್ತು ಮೆದುಳಿನ ಶಕ್ತಿಯನ್ನು ಸುಧಾರಿಸುತ್ತದೆ.

ಸೇಜ್

ಸೇಜ್

ಸ್ವಲ್ಪ ಸೇಜ್ ನ್ನು ನಿಮ್ಮ ಚಹಾಗೆ ಸೇರಿಸಿ ಕುಡಿದರೆ ನಿಮ್ಮ ಮೆದುಳಿನ ಶಕ್ತಿ ವೃದ್ಧಿಸುತ್ತದೆ. ಸಾಮಾನ್ಯ ಚಹಾ ಕುಡಿಯುವ ಬದಲು ಸೇಜ್ ಸೇರಿಸಿ ಭಿನ್ನವಾದ ಚಹಾ ಆಸ್ವಾದಿಸಿ.

ಬ್ಲ್ಯಾಕ್ಕರಂಟ್

ಬ್ಲ್ಯಾಕ್ಕರಂಟ್

ಈ ಬೆರ್ರಿಯಲ್ಲಿರುವ ವಿಟಮಿನ್ ಸಿ ಮಾನಸಿ ಚಟುವಟಿಕೆಯನ್ನು ವೃದ್ಧಿಸುತ್ತದೆ. ಒಂದು ಬೌಲ್ ಬ್ಲ್ಯಾಕ್ಕರಂಟ್ ನ್ನು ಸೇವಿಸಿದರೆ ಅದು ನಿಮ್ಮ ಮೆದುಳಿಗೆ ನೆರವಾಗುತ್ತದೆ.

ನೀರು

ನೀರು

ಮೆದುಳನ್ನು ಕ್ರಿಯಾತ್ಮಕವಾಗಿಡಲು ನಮ್ಮ ದೇಹಕ್ಕೆ ಹೆಚ್ಚಿನ ನೀರು ಅಗತ್ಯವಿದೆ. ಮೆದುಳಿನ ಮೂರನೇ ಒಂದು ಭಾಗವು ನೀರಿನಿಂದ ತುಂಬಿರುವ ಕಾರಣ ನಿರ್ಜಲೀಕರಣವು ನಿಮ್ಮ ಮೆದುಳಿನ ಕ್ರಿಯೆಯ ಮೇಲೆ ಪರಿಣಾಮ ಬೀರಬಹುದು.

ಚೆರ್ರಿಗಳು

ಚೆರ್ರಿಗಳು

ಕೆಂಪು ಚೆರ್ರಿಗಳು ಮೆದುಳಿನ ಸಾಮಾನ್ಯ ಆಹಾರಗಳಲ್ಲಿ ಒಂದಾಗಿದೆ. ಕೆಂಪು ಚೆರ್ರಿಗಳು ಒಂದು ಗಂಟೆಯೊಳಗೆ ನಿಮ್ಮ ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ.

ಸೇಬು

ಸೇಬು

ಕೆಂಪು ಸೇಬಿನಲ್ಲಿರುವ ಕೆಲವು ವರ್ಗದ ರಾಸಾಯನಿಕಗಳು ನರನಾಶ ಮಾಡುವಂತಹ ಕಾಯಿಲೆಗಳಾದ ಪರ್ಕಿಸನ್ ಮತ್ತು ಅಲ್ಝೆಮರ್ ನಿಂದ ಮೆದುಳನ್ನು ರಕ್ಷಿಸುತ್ತದೆ. ದಿನಕ್ಕೊಂದು ಸೇಬು, ವೈದ್ಯರಿಂದ ನಮ್ಮನ್ನು ದೂರವಿಡುತ್ತದೆ ಎನ್ನುವ ಮಾತು ನಿಜ.

English summary

25 Healthy Foods To Boost Brain Power

If you feel tired mentally, it is the first sign that your brain requires particular types of foods which will boost the power. These foods which have been enlisted below which help to boost These are some of the healthy foods to feed your brain and boost its power.
X
Desktop Bottom Promotion