For Quick Alerts
ALLOW NOTIFICATIONS  
For Daily Alerts

ಮೆದುಳು ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸಲು 12 ಯೋಗಾಸನಗಳು

By Super
|

ಯೋಗದಲ್ಲಿನ ಭಂಗಿಯನ್ನು ಆಸನಗಳೆಂದು ಕರೆಯಲಾಗುತ್ತದೆ. ಇದರಲ್ಲಿನ ಕೆಲವೊಂದು ಭಂಗಿಗಳು ಅಥವಾ ಆಸನಗಳು ದೇಹದ ವಿವಿಧ ಭಾಗಗಳಲ್ಲಿ ರಕ್ತ ಸಂಚಲ ಉತ್ತಮಪಡಿಸುತ್ತದೆ. ದೇಹಕ್ಕೆ ಬರುವ ವಿವಿಧ ರೀತಿಯ ರೋಗಗಳನ್ನು ಇದು ತಡೆಯುತ್ತದೆ.

ಯೋಗದ ಅತ್ಯಂತ ಪ್ರಾಮುಖ್ಯ ಅಂಶವೆಂದರೆ ಧ್ಯಾನ ಹಾಗೂ ಉಸಿರಾಟದ ಮೇಲೆ ನಿಯಂತ್ರಣ ಸಾಧಿಸುವುದು. ಇದರಿಂದ ನಿಮ್ಮ ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ. ದಿನದಲ್ಲಿ 20 ನಿಮಿಷದ ಯೋಗವು ನಿಮ್ಮ ಮೆದುಳಿನ ಕೆಲಸದ ವೇಗ ಮತ್ತು ನಿಖರತೆ ಹೆಚ್ಚಿಸುತ್ತದೆ.

ಕೆಲವೊಂದು ಯೋಗಾಸನಗಳನ್ನು ದಿನನಿತ್ಯ ಅಭ್ಯಾಸ ಮಾಡುವ ಮೂಲಕ ನಿಖರತೆಯನ್ನು ಪಡೆಯಬಹುದಾಗಿದೆ. ಮೆದುಳಿನ ಮೇಲೆ ಯೋಗಾಸನದ ಪ್ರಭಾವ ಅಪಾರ. ಕೆಲವೊಂದು ಯೋಗಾಸನಗಳು ಮೆದುಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ನೆರವಾಗುತ್ತದೆ.

ದಿನನಿತ್ಯ ಕೆಲವೊಂದು ಯೋಗಾಸನಗಳನ್ನು ಮಾಡುವುದರಿಂದ ಮೆದುಳಿಗೆ ತುಂಬಾ ನೆರವಾಗಲಿದೆ. ಮೆದುಳಿನ ಮೇಲೆ ಯೋಗದ ಪ್ರಭಾವವು ಮೆದುಳು ವಿಶ್ರಾಂತಿ ಪಡೆಯಲು, ದೇಹವು ಉತ್ತಮವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ.

ಹೊಳೆಯುವ ತ್ವಚೆಗಾಗಿ 9 ಯೋಗಾಸನಗಳು

ನಿಂತುಕೊಂಡು ಮುಂದಕ್ಕೆ ಬಾಗುವುದು(ಉತ್ತನಾಸನ)

ನಿಂತುಕೊಂಡು ಮುಂದಕ್ಕೆ ಬಾಗುವುದು(ಉತ್ತನಾಸನ)

ಮೆದುಳಿಗೆ ಬೇಕಾಗಿರುವ ಈ ಯೋಗಾಸನಕ್ಕೆ ನೀವು ನೇರವಾಗಿ ನಿಲ್ಲಬೇಕಾಗುತ್ತದೆ. ಇದರ ಬಳಿಕ ಬಗ್ಗಿ ಕೈಗಳನ್ನು ಪಾದಗಳ ಮುಂದಿಡುವುದು. ಈ ವೇಳೆ ಬೆನ್ನು ಮತ್ತು ಮೊಣಕಾಲುಗಳು ನೇರವಾಗಿರಲಿ.

ಮರದ ಆಸನ(ವೃಕ್ಷಾಸನ)

ಮರದ ಆಸನ(ವೃಕ್ಷಾಸನ)

ಮೆದುಳಿಗೆ ಯೋಗದ ಲಾಭವಾಗಲು ನೇರವಾಗಿ ನಿಲ್ಲಿ. ಬಲಕಾಲನ್ನು ಬಗ್ಗಿಸಿ, ಇದು ಎಡತೊಡೆಯ ಮೇಲಿರಲಿ ಮತ್ತು ಕಾಲ್ಬೆರಳುಗಳು ಕೆಳಮುಖವಾಗಿರಲಿ. ಕೈಗಳನ್ನು ತಲೆಯ ಮೇಲೆ ಕೊಂಡುಹೋಗಿ ನಮಸ್ಕಾರ ಮಾಡುವ ಭಂಗಿಯಲ್ಲಿರಲಿ.

ತ್ರಿಕೋನ ಭಂಗಿ(ತ್ರಿಕೋನಾಸನ)

ತ್ರಿಕೋನ ಭಂಗಿ(ತ್ರಿಕೋನಾಸನ)

ನೇರವಾಗಿ ಕಾಲುಗಳಲ್ಲಿ ನಿಂತುಕೊಳ್ಳಿ ಮೊಣಕಾಲುಗಳು ನೇರವಾಗಿರಲಿ, ನೆಲಕ್ಕೆ ಸಮಾನಾಂತರವಾಗಿ ನಿಮ್ಮ ಕೈಗಳನ್ನು ಎತ್ತಿ. ಬಲದ ಕಾಲು ಮತ್ತು ಬೆನ್ನು ನೆಲಕ್ಕೆ ಸಮಾನಾಂತರವಾಗಿರಲಿ.

ಆವರ್ತ ತ್ರಿಕೋನ ಭಂಗಿ(ಪರಿವೃತ್ತ ತ್ರಿಕೋನಾಸನ)

ಆವರ್ತ ತ್ರಿಕೋನ ಭಂಗಿ(ಪರಿವೃತ್ತ ತ್ರಿಕೋನಾಸನ)

ಇದು ಆವರ್ತ ತ್ರಿಕೋನ ಭಂಗಿ. ನಿಮ್ಮ ಎಡಗೈ ಮೈದಾನದ ಮೇಲೆ ವಿಶ್ರಾಂತಿ ಪಡೆಯುತ್ತಿರಲಿ. ನಿಮ್ಮ ಬಲಗೈಯನ್ನು ಲಂಬವಾಗಿ ಎತ್ತಿ, ಈ ವೇಳೆ ಹೆಬ್ಬೆರಳನ್ನು ನೋಡುತ್ತಿರಿ.

ಅಧೋ ಮುಖ ಶ್ವಾನಾಸನ

ಅಧೋ ಮುಖ ಶ್ವಾನಾಸನ

ಮೆದುಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಇದು ಒಂದು ಯೋಗಾಸನ. ಇದಕ್ಕಾಗಿ ಎಲ್ಲಾ ನಾಲ್ಕನ್ನು ಆರಂಭಿಸಬೇಕಾಗುತ್ತದೆ. ಮೈದಾನದಿಂದ ಮೊಣಕಾಲುಗಳನ್ನು ಮೇಲಕ್ಕೆತ್ತಿ, ಎದೆಯನ್ನು ಕಾಲಿನ ಕಡೆಗೊತ್ತಲು ಪ್ರಯತ್ನಿಸಿ.

ಒಂಟೆ ಭಂಗಿ (ಉಷ್ಟ್ರಾಸನ)

ಒಂಟೆ ಭಂಗಿ (ಉಷ್ಟ್ರಾಸನ)

ಕಾಲುಗಳನ್ನು ಅಗಲವಾಗಿಸಿ ಮಂಡಿಯೂರಿ, ಪಾದದ ತುದಿಯು ನೆಲದ ಮೇಲೆ ಚಪ್ಪಟೆಯಾಗಿರಲಿ, ನಿಮ್ಮ ತೊಡೆಗಳು, ಬೆನ್ನು ಮತ್ತು ಕುತ್ತಿಗೆ ನೆಲಕ್ಕೆ ಲಂಬವಾಗಿರಲಿ. ಯೋಗದ ಈ ಭಂಗಿ ಮೆದುಳಿಗೆ ತುಂಬಾ ಲಾಭಕಾರಿ.

ಹರೆ ಭಂಗಿ (ಶಶಂಕಾಸನ)

ಹರೆ ಭಂಗಿ (ಶಶಂಕಾಸನ)

ಹಿಮ್ಮಡಿಯಲ್ಲಿ ಕುಳಿತುಕೊಂಡು ಆರಂಭಿಸಿ. ಬೆನ್ನು ಮತ್ತು ಕುತ್ತಿಗೆ ನೇರವಾಗಿರಲಿ. ದೇಹವನ್ನು ತೊಡೆಯ ತನಕ ಬಗ್ಗಿಸಿ, ಇದರಿಂದ ಹಣಿಯು ನೆಲಕ್ಕೆ ಸ್ಪರ್ಶಿಸಲಿ. ಇದು ಮೆದುಳಿಗೆ ಉತ್ತಮ ಯೋಗಾಸನ.

ಸೂರ್ಯನಿಗೆ ನಮಸ್ಕಾರ(ಸೂರ್ಯನಮಸ್ಕಾರ)

ಸೂರ್ಯನಿಗೆ ನಮಸ್ಕಾರ(ಸೂರ್ಯನಮಸ್ಕಾರ)

ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಸೂರ್ಯನಮಸ್ಕಾರವು ಅತ್ಯಂತ ಜನಪ್ರಿಯ ಮತ್ತು ಸ್ವೀಕರಿಸಲ್ಪಟ್ಟ ಯೋಗಾಸನವಾಗಿದೆ. ಮೆದುಳಿನ ಕ್ರಿಯೆಯನ್ನು ಉತ್ತಮಪಡಿಸಲು ಸೂರ್ಯನಮಸ್ಕಾರ ಅಭ್ಯಾಸ ಮಾಡಿ.

ಕುಳಿತು ಮುಂದಕ್ಕೆ ಬಾಗುವುದು(ಪಶ್ಚಿಮೋತ್ತಾಸನ)

ಕುಳಿತು ಮುಂದಕ್ಕೆ ಬಾಗುವುದು(ಪಶ್ಚಿಮೋತ್ತಾಸನ)

ಪಶ್ಚಿಮೋತ್ತಾಸನವನ್ನು ಮಾಡಲು ಕಾಲುಗಳನ್ನು ನೇರವಾಗಿಟ್ಟುಕೊಂಡು ಕುಳಿತುಕೊಳ್ಳಿ, ಕೈಗಳು ನಿಮ್ಮ ದೇಹದ ಜೊತೆಗಿರಲಿ. ದೇಹವನ್ನು ಮುಂದಕ್ಕೆ ಬಗ್ಗಿಸಿ. ಮೂಳೆತುದಿಯನ್ನು ಉದ್ದವಾಗಿಸಿ ಮತ್ತು ಕಾಲ್ಬೆರಳುಗಳ ಕಡೆ ನಿಮ್ಮ ಕೈಗಳನ್ನು ವಿಸ್ತರಿಸಿ.

ನೇಗಿಲ ಭಂಗಿ (ಹಲಾಸನ)

ನೇಗಿಲ ಭಂಗಿ (ಹಲಾಸನ)

ಇದು ಆರಂಭದಲ್ಲಿ ಯೋಗ ಕಲಿಯುವವರಿಗೆ ತುಂಬಾ ಕಠಿಣ. ಆದರೆ ಇದನ್ನು ನಿಯಮಿತವಾಗಿ ಕಲಿಯುವುದರಿಂದ ಮೆದುಳಿನ ಕಾರ್ಯವು ಸರಿಯಾಗಿ ಆಗಲು ನೆರವಾಗುತ್ತದೆ. ನೆಲದ ಮೇಲೆ ಮಲಗಿಕೊಂಡು ಕಾಲುಗಳನ್ನು ಮೇಲಕ್ಕೆತ್ತಿ, ತಲೆಯ ಮೇಲಿಂದ ಕಾಲುಗಳನ್ನು ನೆಲಕ್ಕೆ ಸ್ಪರ್ಶಿಸುವಂತೆ ಮಾಡಿ.

ಸಿಡಿಲಿನ ಭಂಗಿ (ವಜ್ರಾಸನ)

ಸಿಡಿಲಿನ ಭಂಗಿ (ವಜ್ರಾಸನ)

ಮೆದುಳಿನ ಚಟುವಟಿಕೆಗೆ ಇದು ಅತ್ಯಂತ ಪರಿಣಾಮಕಾರಿ ಆಸನ. ಮೊಣಕಾಲಿನೊಂದಿಗೆ ನೆಲದ ಮೇಲೆ ಮಂಡಿಯೂರಿಕೊಳ್ಳಿ, ದೊಡ್ಡ ಕಾಲ್ಬೆರಳು ಮತ್ತು ಕಣಕಾಲು ಸಮಾನಾಂತರವಾಗಿರಲಿ. ಮೊಣಕಾಲುಗಳ ಮೇಲೆ ನಿಮ್ಮ ಅಂಗೈಯನ್ನಿಡಿ ಮತ್ತು ಎದುರು ನೋಡುತ್ತಿರಿ.

ತಾವರೆ ಭಂಗಿ (ಪದ್ಮಾಸನ)

ತಾವರೆ ಭಂಗಿ (ಪದ್ಮಾಸನ)

ಪಾದವನ್ನು ವಿರುದ್ಧ ತೊಡೆಗಳ ಮೇಲಿಡಿ. ಕೈಗಳು ಮೊಣಕಾಲಿನ ಮೇಲಿಡಿ ಮತ್ತು ಅಂಗೈ ಮೇಲ್ಮುಖವಾಗಿರಲಿ, ಹೆಬ್ಬೆರಳು ಹಾಗೂ ತೋರ್ಬೆರಳು ಜತೆಯಾಗಿರಲಿ. ಕಣ್ಣುಗಳನ್ನು ಮುಚ್ಚಿ ಮತ್ತು ಉಸಿರಾಟದ ಕಡೆ ಗಮನಹರಿಸಿ.

English summary

12 Yoga Asanas For Your Brain

The following are a few yoga asanas for brain that need to be done on a daily basis. Yoga benefits on brain will help relax the mind and body to perform better.
X
Desktop Bottom Promotion