ಆಸ್ಕರ್ 2017: ಮಿರಮಿರನೇ ಮಿಂಚು ಹರಿಸಿದ ಪ್ರಿಯಾಂಕಾ ಚೋಪ್ರಾ

By: Hemanth
Subscribe to Boldsky

ಆಸ್ಕರ್ ಪ್ರಶಸ್ತಿ ಪಡೆಯಲು ಆ ಚಿತ್ರವು ವಿಶ್ವದೆಲ್ಲೆಡೆಯ ಚಿತ್ರಗಳನ್ನು ಮೀರಿಸುವಂತಿರಬೇಕು. ಭಾರತೀಯ ಚಿತ್ರಗಳು ಆಸ್ಕರ್ ಗೆ ಆಯ್ಕೆಯಾದರೂ ಪ್ರಶಸ್ತಿ ಸುತ್ತಿನಲ್ಲಿ ಡುಮ್ಕಿ ಹೊಡೆಯುತ್ತದೆ. ಆದರೆ ಆಸ್ಕರ್ ಕೇವಲ ಪ್ರಶಸ್ತಿ ಪ್ರಧಾನ ಸಮಾರಂಭವಲ್ಲ. ಇಲ್ಲಿ ವಿಶ್ವದೆಲ್ಲೆಡೆಯಿಂದ ಬಂದಿರುವಂತಹ ವಿವಿಧ ಭಾಷೆಯ ನಟ ನಟಿಯರನ್ನು ಕಾಣಬಹುದು. ಇಲ್ಲಿ ಗ್ಲಾಮರ್ ಹಾಗೂ ಸೌಂದರ್ಯದ ಮಿಲನವಾಗುತ್ತದೆ. 

Priyanka-chopra

ಗ್ಲಾಮರ್ ಬಗ್ಗೆ ಹೇಳುವುದಾದರೆ ನಮ್ಮ ಬಾಲಿವುಡ್ ಮಂದಿ ಕೂಡ ಹಿಂದೆ ಬಿದ್ದಿಲ್ಲ. ಅದರಲ್ಲೂ ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್ ನಲ್ಲಿ ಕೆಲಸ ಮಾಡುತ್ತಾ ಪ್ರತಿಯೊಬ್ಬರನ್ನು ಸೆಳೆಯುತ್ತಾ ಇದ್ದಾಳೆ.

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಆಸ್ಕರ್ ನ ರತ್ನಗಂಬಳಿಯಲ್ಲಿ ಶ್ವೇತವರ್ಣದ ಬಟ್ಟೆಯನ್ನು ಧರಿಸಿ ಹೆಜ್ಜೆ ಹಾಕುತ್ತಿರುವಾಗ ಪ್ರತಿಯೊಬ್ಬರ ದೃಷ್ಟಿ ಕೂಡ ಆಕೆಯ ಮೇಲಿತ್ತು. ಪ್ರಿಯಾಂಕಾ ಈ ಬಟ್ಟೆಯಲ್ಲಿ ತನ್ನ ಸೌಂದರ್ಯವನ್ನು ಹೆಚ್ಚಿಸಿರುವುದು ಮಾತ್ರವಲ್ಲದೆ ಇದಕ್ಕಾಗಿ ಆಕೆ ಬಿಳಿಯ ರಾಲ್ಫ ಆ್ಯಂಡ್ ರುಸ್ಸೊವನ್ನು ಆಯ್ಕೆ ಮಾಡಿಕೊಂಡಿದ್ದಾಳೆ.

Priyanka-chopra

ಭುಜಗಳು ಇಲ್ಲದ ಬಿಳಿ ಗೌನ್ ಕುತ್ತಿಗೆ ಸಮೀಪದ ಹರಿತವಾಗಿದೆ. ಆಸ್ಕರ್ ನ್ನು ವೀಕ್ಷಿಸುತ್ತಾ ಇದ್ದರೆ ಇದರ ಅಳತೆಯನ್ನು ನೀವು ಅಂದಾಜು ಮಾಡಿರಬಹುದು. ಗೌನ್ ಹಿಂಬದಿಯಿಂದ ಮಂಡಿಯೆತ್ತರದ ತನಕ ಸೀಳಿಕೊಂಡಿದೆ. ಸ್ವಲ್ಪ ರಜತ ಬಣ್ಣ ಮಿಶ್ರಿತವಾಗಿರುವ ಈ ಗೌನ್ ನಲ್ಲಿ ಪ್ರಿಯಾಂಕ ತುಂಬಾ ಸೆಕ್ಸಿಯಾಗಿ ಕಾಣಿಸುತ್ತಿದ್ದಾಳೆ.

Priyanka-chopra

ತನ್ನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲು ಕೈಗೆ ಬಳೆಗಳನ್ನು ತೊಟ್ಟಿರುವುದು ಮಾತ್ರವಲ್ಲದೆ ಕಿವಿಯಲ್ಲಿ ವಿಶೇಷವಾದ ಓಲೆಗಳಿವೆ. ಈ ಗೌನ್ ತುಂಬಾ ಬಿಗಿಯಾಗಿದೆ ಎಂದು ನಮಗನಿಸುತ್ತಾ ಇದೆ. ಆದರೆ ಪ್ರಿಯಾಂಕಾ ಈ ಗೌನ್ ನಲ್ಲಿ ತುಂಬಾ ಸುಂದರವಾಗಿ ಕಾಣಿಸುವುದು ಮಾತ್ರ ನಿಜ.

English summary

Priyanka-chopra-at-oscars-2017-red-carpet-lookbook

Oscars is not just for the movie buffs. The glitz and glamour of the red carpet is awaited by many fashion fanatics throughout the year. So before we start with the others, let's start with the one and only Priyanka Chopra.
Story first published: Monday, February 27, 2017, 23:32 [IST]
Subscribe Newsletter