For Quick Alerts
ALLOW NOTIFICATIONS  
For Daily Alerts

ವಾತಾವರಣಕ್ಕೆ ಆಧರಿಸಿ ಯಾವ ಮಾಸ ಧಿರಿಸಿನ ಆಯ್ಕೆ ಹೇಗಿರಬೇಕು?

|

ಯಾವತ್ತಾದರೂ ಯಾವ ತಿಂಗಳಲ್ಲಿ ಯಾವ ಬಣ್ಣದ ಉಡುಪು ಧರಿಸಬೇಕು ಎಂಬ ಬಗ್ಗೆ ಯೋಚಿಸಿದ್ದೀರಾ? ಇಂದೆಂತ ಪ್ರಶ್ನೆ ಎಂದು ಆಶ್ಚರ್ಯ ಪಡಬೇಡಿ.

From January To December, Which Colour Outfit To Wear Based On Weather?

ಜನವರಿಯಿಂದ ಡಿಸೆಂಬರ್ ವರೆಗೆ ಹವಾಮಾನ ಮತ್ತು ಮಾನಸಿಕ ಸ್ಥಿತಿಗತಿಗೆ ಅನುಗುಣವಾಗಿ ನಮ್ಮ ಫ್ಯಾಷನ್ ಸ್ಟೇಟ್ ಮೆಂಟ್ ನ್ನು ತೀರ್ಮಾನಿಸಿಕೊಳ್ಳಬಹುದು. ನಾವಿಲ್ಲಿ ಆ ಬಗ್ಗೆ ಸವಿವರವನ್ನು ನೀಡಿದ್ದೇವೆ. ಹಾಗಾದ್ರೆ ಯಾವ ತಿಂಗಳು ಯಾವ ಬಣ್ಣದ ಬಟ್ಟೆ ಧರಿಸಬೇಕು ಎಂಬ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

ಜನವರಿ

ಜನವರಿ

Courtesy: Richa Chadha's Instagram

ಇದು ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ವರ್ಷದ ಮೊದಲ ತಿಂಗಳು. ಪ್ರತಿಯೊಬ್ಬರು ಹೊಸ‌ ಹುಮ್ಮಸ್ಸಿನೊಂದಿಗೆ ಹೊಸ ವರ್ಷ ಮೊದಲ ತಿಂಗಳನ್ನು ಕಳೆಯುತ್ತಿರುತ್ತಾರೆ. ಹೊಸ ಕೆಲಸಕ್ಕೆ ಕೈ ಹಾಕಬೇಕು ಎಂಬ ನಿರ್ಧಾರ ಕೈಕೊಂಡಿರುತ್ತಾರೆ. ಧನಾತ್ಮಕವಾಗಿ ಆ ನಿಟ್ಟಿನಲ್ಲಿ ಯೋಚಿಸುತ್ತಾರೆ ಮತ್ತು ಯೋಜಿಸುತ್ತಾರೆ. ಇನ್ನು ಕಾಲವನ್ನು ಗಣನೆಗೆ ತೆಗೆದುಕೊಂಡರೆ ಇದು ಚಳಿಯ ಹವಾಮಾನವನ್ನು ಹೊಂದಿರುತ್ತದೆ. ನಾಳೆಯ ಕಿರಣಗಳು ಹೊಸ ಹೂವಿನ ಸ್ಪರ್ಷಕ್ಕೆ ಕಾದಿರಿತ್ತವೆ. ಆ ನಿಟ್ಟಿನಲ್ಲಿ ರಿಚಾ ಚಾಧಾ ಸೀರೆ ಪರಿಪೂರ್ಣ ಹೊಂದಿಕೆಯಾಗುವಂತಿದೆ. ಜಾವಿದ್ ಅಕ್ತರ್ ಅವರ ಹುಟ್ಟುಹಬ್ಬಕ್ಕಾಗಿ ರಾಧಿಕಾ ಡಿಸೈನ್ ಮಾಡಿ ಪ್ರಿಂಟ್ ಮಾಡಿರುವ ಸೀರೆ ಇದು. ಈ ಸೀರೆಯಲ್ಲಿ ಬಿಳಿಯ ಬಣ್ಣದಲ್ಲಿ ಗುಲಾಬಿ, ಕಪ್ಪು ಮತ್ತು ಬಿಳಿ ಹೂವುಗಳ ಚಿತ್ರಣ ಇದೆ. ತೋಳಿಲ್ಲದ ಕಪ್ಪು ಬ್ಲೌಸ್ ನ್ನು ಆಕೆ ಈ ಸೀರೆಗೆ ಧರಿಸಿದ್ದಾಳೆ.

ಫೆಬ್ರವರಿ

ಫೆಬ್ರವರಿ

Courtesy: Marks & Spencer

ಫೆಬ್ರವರಿ ತಿಂಗಳು ಬಹಳ ವಿಶೇಷವಾದ ತಿಂಗಳು. ಕಡಿಮೆ ದಿವಸಗಳಿರುವ ಈ ತಿಂಗಳು ಬೇಗನೆ ಮುಗಿದು ಹೋಗುತ್ತದೆ. ಫೆಬ್ರವರಿ ಯಲ್ಲಿ ಚಳಿಯೂ ಹೆಚ್ಚಿರುತ್ತದೆ. ಹಾಗಾಗಿ ನಮ್ಮನ್ನ ನಾವು ಬೆಚ್ಚಗಿಡುವುದು ಬಹಳ ಮುಖ್ಯ. ಅಷ್ಟೇ ಅಲ್ಲ ನಾವು ಈ ಸಮಯದಲ್ಲಿ ವಸಂತ ಕಾಲದ ನಿರೀಕ್ಷೆಯಲ್ಲಿಯೂ ಇರುತ್ತೇವೆ. ನಾವು ಈ ತಿಂಗಳಲ್ಲಿ ಹೆಚ್ಚು ಒಳಗೇ ಇರಲು ಬಯಸುದಿಲ್ಲ ಮತ್ತು ಚಳಿ ಕಾಯಿಸಬೇಕು ಎಂದು ಅನ್ನಿಸುವುದಿಲ್ಲ. ಕ್ರೀಡಾಬೂಟುಗಳನ್ನು ಧರಿಸಿ ಮತ್ತು ಕೆಲವು ಪಾದಯಾತ್ರೆಗಳನ್ನು ಕೈಗೊಳ್ಳಿ. ಈಜುವಿಕೆಯಂತಹ ನಿರೀಕ್ಷಿತ ಚಟುವಟಿಕೆಗಳನ್ನು ಕೈಗೊಳ್ಳಿ. ಮಾರ್ಕ್ಸ್ & ಸ್ಪೆನ್ಸರ್ ಅವರ ಈ ಬಟ್ಟೆ ಪರಿಪೂರ್ಣವಾಗಿದೆ ಏಕೆಂದರೆ ಇದು ಗಂಟು ಹಾಕಿದ ಟುಕ್ಸೆಡೊ ಬೂದು ಜಾಕೆಟ್ ಮತ್ತು ಪೋಲ್ಕ-ಚುಕ್ಕೆಗಳ ಮ್ಯೂಟ್ ಬ್ರೌನ್ ಸ್ಕರ್ಟ್ ಅನ್ನು ಹೊಂದಿರುತ್ತದೆ.ಚಳಿಗಾಲದ ಅಗತ್ಯತೆಯನ್ನು ಈ ಜಾಕೆಟ್ ಪೂರೈಸುತ್ತದೆ ಮತ್ತು ಬೂದು ಬಣ್ಣದ ಜಾಕೆಟ್ ಚಳಿಗಾಲದ ಸಂಕೇತವಾಗಿದೆ ಮತ್ತು ಮಾಸಿದ ಬಣ್ಣವು ವಸಂತ ಕಾಲದ ನಿರೀಕ್ಷೆಯನ್ನು ಸೂಚಿಸುವಂತಿದೆ. ಸ್ಪೋರ್ಟ್ಸ್ ಶೂಗಳು ಓಡುವುದಕ್ಕೆ ಮತ್ತು ಕೆಲಸವನ್ನು ಬೇಗನೆ ಈ ತಿಂಗಳು ಕೆಲಸವನ್ನು ಪೂರೈಸಬೇಕು ಎಂಬಂತಿವೆ.

ಮಾರ್ಚ್

ಮಾರ್ಚ್

Courtesy: Zara

ವಸಂತ ಕಾಲ ಬಂದಾಗ ನಾವು ನಮ್ಮ ಚಳಿಗಾಲದ ಬಟ್ಟೆಗಳನ್ನು ಬದಿಗೆ ಹಾಕಲು ಬಯಸುತ್ತೇವೆ.ಮಾರ್ಚ್ ತಿಂಗಳಲ್ಲಿ ಬೇಸಿಗೆಯ ಬಟ್ಟೆಗಳನ್ನು ಅಂದರೆ ಹೆಚ್ಚು ಗಾಳಿಯಾಡುವ ಬಟ್ಟೆಗಳನ್ನು ಧರಿಸಲು ನಾವು ಇಚ್ಛಿಸುತ್ತೇವೆ. ಮಾರ್ಚ್ ತಿಂಗಳಿಗೆ ಹಸಿರು ಬಣ್ಣ ಶ್ರೇಷ್ಠ.ಮೊದಲ ಹಂತದ ಹೂವುಗಳ ಅಥವಾ ಚಿಗುರಿನ ಪ್ರತೀಕವಾಗಿರುವ ಹಸಿರು ಈ ಕಾಲಕ್ಕೆ ಹೇಳಿ ಮಾಡಿಸಿದ ಬಣ್ಣ. ಮಾರ್ಚ್ ತಿಂಗಳಲ್ಲಿ ಮಂಜು ಕರಗಲು ಆರಂಭಿಸುತ್ತದೆ ಮತ್ತು ಮರಗಳು ಪುನಃ ಚಿಗುರಲು ಪ್ರಾರಂಭಿಸುತ್ತದೆ.ಹಸಿರು ಬಣ್ಣವು

. ಜೀವನ,ಪ್ರಕೃತಿ ಮತ್ತು ಶಕ್ತಿಯನ್ನು ಬಿಂಬಿಸುತ್ತದೆ. ಇವೆಲ್ಲವೂ ಕೂಡ ವಸಂತ ಕಾಲದ ಚಿಹ್ನೆ ಗಳು. ಹಾಗಾಗಿ ಜಾರಾಳ ಈ ಹಸಿರು ತೋಳು ರಹಿತ ಫ್ರಿಲ್ಸ್ ಗಳಿರುವ ಈ ಡ್ರೆಸ್ ಹೊಸತನವನ್ನು ಸೂಚಿಸುತ್ತದೆ. ಅವಳು ಬಿಳಿ ಹೂವುಗಳ ಗುಚ್ಛವನ್ನು ಕೂಡ ಹೊಂದಿದ್ದಾಳೆ. ಅದು ವಸಂತ ನೋಟವನ್ನು ನೀಡುತ್ತದೆ.

ಏಪ್ರಿಲ್

ಏಪ್ರಿಲ್

Courtesy: H&M

ಏಪ್ರಿಲ್ ತಿಂಗಳಲ್ಲಿ ವಸ್ತುಗಳು ಹೆಚ್ಚು ಸುಂದರವಾಗಿ ಕಣುತ್ತವೆ. ಈ ಕಾಲದಲ್ಲಿ ಹಸಿರು ಗಿಡಗಂಟೆಗಳು ಬಣ್ಣದ ಹೂವುಗಳಿಂದ ಕಂಗೊಳಿಸುತ್ತವೆ.ಇದು ಧನಾತ್ಮಕವಾಗಿರುವ ತಿಂಗಳು ಮತ್ತು ಸೂರ್ಯರಶ್ಮಿಗೆ ಸಂಬಂಧಿಸಿದ ತಿಂಗಳು.. ಎಪ್ರಿಲ್ ತಿಂಗಳಲ್ಲಿ ಬೈಸಾಖಿಯಂತಹ ಹಬ್ಬಗಳೂ ಕೂಡ ಇವೆ. ಇದು ಹಳದಿ ಬಣ್ಣಕ್ಕೆ ಸಂಬಂಧಿಸಿದ್ದಾಗಿದೆ.ಹಳದಿಯು ಸಂತೋಷದ ಪ್ರತೀಕವಾಗಿದೆ.ಹಾಗಾಗಿ ಮಾಡೆಲ್ ಧರಿಸಿರುವ ಹಳದಿ ಬಣ್ಣದ ಧಿರಿಸುಗಳು ಎಪ್ರಿಲ್ ಗೆ ಫರ್ಫೆಕ್ಟ್ ಆಗಿದೆ. ಕ್ಯಾಷುವಲ್ ಟಾಪ್ ನ್ನು ಆಕೆ ಧರಿಸಿದ್ದಾಳೆ ಮತ್ತು ನಿಂಬೆ ಬಣ್ಣದ ಹೆಚ್&ಎಂ ನಿಂದ‌ ತಯಾರಿಸಲ್ಪಟ್ಟ ಟಾಪ್ ನ್ನು ಧರಿಸಿದ್ದಾಳೆ.ಆಕೆಯ ಸೂರ್ಯ ಚುಂಬನದಂತಹ ಮೇಕಪ್ ಅತ್ಯುತ್ತಮ ಎಫೆಕ್ಟ್ ನ್ನು ಎಪ್ರೆ ತಿಂಗಳಿಗೆ ನೀಡಿದೆ.

ಮೇ

ಮೇ

Courtesy: Sonam Kapoor's Instagram

ಋತುಗಳ ಪ್ರಕಾರ ಪರಿವರ್ತನೆ ಪ್ರಾರಂಭವಾಗುವ ತಿಂಗಳು ಮೇ. ನಾವು ವಸಂತವನ್ನು ಪರಿಪೂರ್ಣವಾಗಿ ಸ್ವೀಕರಿಸಬೇಕಾಗಿರುವ ತಿಂಗಳು. ಎಲ್ಲೆಲ್ಲೂ ಸಮಾಧಾನವಿರಬೇಕಾದ ತಿಂಗಳೂ ಹೌದು.. ಮಾನ್ಸೂನ್ ಪ್ರವೇಶಿಸಲು ಪ್ರಾರಂಭವಾಗುವುದರಿಂದಾಗಿ ಈ ತಿಂಗಳು ಅತೀ ಹೆಚ್ಚು ಸೆಖೆಯೂ ಇರುವುದಿಲ್ಲ. ವಾತಾವರಣವು ಈ ತಿಂಗಳಲ್ಲಿ ಫರ್ಫೆಕ್ಟ್ ಆಗಿರುತ್ತದೆ. ವಾತಾವರಣದಲ್ಲಿ ತಾಪಮಾನವು ಸಮತೋಲನಕ್ಕೆ ಬರುವ ತಿಂಗಳು ಇದು. ಈ ಸಮಯವು ನಮಗೆ ಬಹಳ ಹಗುರ ಹಾಗೂ ನಿರಾಳತೆಯನ್ನು ನೀಡುತ್ತದೆ. ಹಾಗಾಗಿ ತಿಂಗಳಲ್ಲಿ ಬಿಳಿ ಬಣ್ಣದ ಬಟ್ಟೆಗಳಿಗಿಂತ ಶ್ರೇಷ್ಠ ವಾದದ್ದು ಮತ್ತೊಂದಿಲ್ಲ ಎನಿಸುತ್ತದೆ. ಸೋನಂ ಕಪೂರ್ ಅಹುಜಾ ಧರಿಸಿರುವ ಈ ಡ್ರೆಸ್ ಮೇ ತಿಂಗಳಿಗೆ ಹೇಳಿ ಮಾಡಿಸಿದಂತಿದೆ. ಬಹಳ ಹಿತವಾದ ಅನುಭವವನ್ನು ಇದು ನೀಡುತ್ತದೆ.

ಜೂನ್

ಜೂನ್

Courtesy: Diana Penty's Instagram

ಮಾನ್ಸೂನ್ ಪ್ರವೇಶದಿಂದಾಗಿ ಜೂನ್ ತಿಂಗಳಲ್ಲಿ ನಾವು ಇದರ ಬಗ್ಗೆ ಯೋಚಿಸಬೇಕಾಗುತ್ತದೆ. ವಸಂತ ಕಾಲ ಮತ್ತು ಮಾನ್ಸೂನ್ ನಡುವಿನ ಬರುವ ತಿಂಗಳು ಜೂನ್. ಹಾಗಾಗಿ ಈ ಸಮಯದಲ್ಲಿ ಆಕಾಶವು ನೀಲಿ ಬಣ್ಣದಲ್ಲಿರುತ್ತದೆ. ತಂಪಾದ ಗಾಳಿಯು ಬೇಸಿಗೆಯ ಉಷ್ಣತೆಯನ್ನು ಜೂನ್ ತಿಂಗಳಲ್ಲಿ ಕಡಿಮೆ‌ ಮಾಡುತ್ತದೆ. ಜೂನ್ ನಲ್ಲಿ ನೀವು ಮಳೆಯನ್ನು ನಿರೀಕ್ಷಿಸಬಹುದು ಮತ್ತು ಪುನಃ ಆಕಾಶವು ನೀಲಿ ಬಣ್ಣಕ್ಕೆ ತಿರುಗುತ್ತದೆ. ಜುಲೈ ಮತ್ತು ಅಗಸ್ಟ್ ನಲ್ಲಿ ಗುಡುಗು ಬರುವುದಕ್ಕಿಂತ ಕಡಿಮೆ ಆರ್ಭಟವು ಈ ಜೂನ್ ತಿಂಗಳಲ್ಲಿ ಇರುತ್ತದೆ. ನೀಲಿಯು ಶಾಂತತೆಯನ್ನು ಪ್ರತಿನಿಧಿಸುತ್ತದೆ. ಹಾಗಾಗಿ ನೀಲಿ ಔಟ್ ಫಿಟ್ ಈ ತಿಂಗಳಿಗೆ ಹೇಳಿ ಮಾಡಿಸುತ್ತದೆ. ಡಯಾನ ಪೆಂಟಿ ಧರಿಸಿದ ಈ ತಿಳಿ ನೀಲಿ ಬಣ್ಣ ಖಂಡಿತ ಈ ತಿಂಗಳ ಪರಿಪೂರ್ಣ ಡ್ರೆಸ್ ಆಗಿದೆ.ಇದು ತಂಪಾದ ಅಂಶವನ್ನು ಹೊಂದಿದೆ.

ಜುಲೈ

ಜುಲೈ

Courtesy: House of Masaba

ಈ ತಿಂಗಳಲ್ಲಿ ಸಾಮಾನ್ಯವಾಗಿ ಆಕಾಶವು ಕಡು ನೀಲಿ ವರ್ಣದಲ್ಲಿರುತ್ತದೆ.ಈ ತಿಂಗಳಲ್ಲಿ ಗುಡುಗು,ಸಿಡಿಲು, ಮಿಂಚನ್ನ ಸಾಮಾನ್ಯವಾಗಿ ಆಲಿಸುತ್ತಲೇ ಇರುತ್ತೇವೆ. ಮಾನ್ಸೂನ್ ತಿಂಗಳು ಜುಲೈ.ಆದರೆ ಸಂಪೂರ್ಣ ಮಾನ್ಸೂನ್ ಬರಲು ಜುಲೈ ನಲ್ಲಿ ಸದವಲ್ಪ ಸಮಯ ಬೇಕಾಗುತ್ತದೆ. ಸಾಮಾನ್ಯವಾಗಿ ಜುಲೈ ಎರಡನೇ ವಾರದಲ್ಲಿ ಮಾನ್ಸೂನ್ ಪ್ರವೇಶಿಸುತ್ತದೆ. ಶ್ರೀಮಂತ‌ ಶೇಡ್ ಇರುವ ನೀಲಿ ವರ್ಣದ ವಸ್ತ್ರವು ಈ ತಿಂಗಳಿಗೆ ಹೇಳಿ ಮಾಡಿಸಿದ ವರ್ಣವಾಗಿದೆ.

ಅಗಸ್ಟ್

ಅಗಸ್ಟ್

Courtesy: Forever New

ಅಗಸ್ಟ್ ತಿಂಗಳಲ್ಲಿ ಮಳೆಯು ಅತ್ಯುತ್ತಮವಾಗಿರುತ್ತದೆ. ಆರ್ದ್ರತೆ ಇರುತ್ತದೆ. ಗುಡುಗು ಸಹಿತ ಮಳೆಯಿಂದಾಗಿ ಈ ಸಮಯದಲ್ಲಿ ಶೀತವಾಗುತ್ತದೆ.ಅಗಸ್ಟ್ ನಲ್ಲಿ ಆಕಾಶವು ಬೂದು ಬಣ್ಣದ್ದಾಗಿರುತ್ತದೆ. ಆದರೆ ಅದರ ಮಧ್ಯದಲ್ಲಿ ನೀಲಿ ಬಣ್ಣದ ದಿನಗಳೂ ಕೂಡ ಇರುತ್ತದೆ. ಅಗಸ್ಟ್ ತಿಂಗಳು ಅನೇಕ ವಿಚಾರಗಳ ಸಮ್ಮಿಶ್ರಣವಾಗಿದೆ. ಅತೀ ಹೆಚ್ಚು ತೇವಾಂಶವಿರುವ ತಿಂಗಳು ಇದಾಗಿದ್ದು ನಮ್ಮನ್ನ ನಾವು ಬೆಚ್ಚಗಿಡುವುದಕ್ಕೆ ಈ ತಿಂಗಳು ಬಯಸುತ್ತೇವೆ. ಹಾಗಾಗಿ ಉಲ್ಲನ್ನಿನ ಬೂದು ಬಣ್ಣದ ಸ್ವೆಟರ್ ಮತ್ತು ನೀಲಿ ಬಣ್ಣದ ಡೇನಿಮ್ ಗಳು ಅಗಸ್ಟ್ ತಿಂಗಳಿಗೆ ಉತ್ತಮ ಡ್ರೆಸ್ ಕೋಡ್ ಆಗಿದೆ.ಹಾಗಾಗಿ ಬೆಚ್ಚಗಿಡಬಹುದಾದ ಬೂದು ಸ್ವೆಟರ್ ನ್ನು ನೀವು ಈ ತಿಂಗಳಲ್ಲಿ ಧರಿಸಬಹುದು.

ಸೆಪ್ಟೆಂಬರ್

ಸೆಪ್ಟೆಂಬರ್

Courtesy: Radhika Madan's Instagram

ಗುಡುಗು ಸಹಿತ ಮಳೆಯ ನಂತರ ಈ ತಿಂಗಳಲ್ಲಿ ಮಳೆ ಸ್ವಲ್ಪ ಕಡಿಮೆಯಾಗುತ್ತದೆ. ಉರಿಯುತ್ತಿರುವ ಕಿತ್ತಳೆ ವರ್ಣ ಎಲ್ಲೆಲ್ಲೂ ಇರುತ್ತದೆ. ಮರದಲ್ಲಿ ಹೂವುಗಳಿರುತ್ತದೆ. ಇದನ್ನು ನೋಡಿಯೇ ತಿಳಿಯುತ್ತದೆ ಸೆಪ್ಟೆಂಬರ್ ತಿಂಗಳು ಸನಿಹಿಸಿದೆ ಎಂದು. ಆಕಾಶವು ಕಿತ್ತಳೆ ವರ್ಣಕ್ಕೆ ತಿರುಗಿರುತ್ತದೆ ಮತ್ತು ವಿಭಿನ್ನ ಛಾಯೆಯನ್ನು ಹೊಂದಿರುತ್ತದೆ.ಮಳೆಯು ಎಲ್ಲವನ್ನು ಸ್ವಚ್ಛಗೊಳಿಸಿದ ನಂತರ ಹೆಚ್ಚು ಶುದ್ಧತೆ ಮತ್ತು ಕಾಂತಿ ಇರುತ್ತದೆ. ಇದು ಸೆಪ್ಟೆಂಬರ್ ತಿಂಗಳನ್ನು ಸುಂದರಗೊಳಿಸಿರುತ್ತದೆ ಮತ್ತು ಪ್ರಯಾಣಿಕರನ್ನು ಪ್ರೇರೇಪಿಸುತ್ತದೆ.ರಾಧಿಕಾ‌ಮದನ್ ರ ಕಿತ್ತಳೆ‌ ಡ್ರೆಸ್ ಸೆಪ್ಟೆಂಬರ್ ತಿಂಗಳ ಉತ್ಸಾಹವನ್ನು ಇಮ್ಮಡಿಗೊಳಿಸುವಂತಿದೆ. ಕಿತ್ತಳೆ ವರ್ಣದ ಡ್ರೆಸ್ ಜೊತೆಗೆ ಕಂದು ವರ್ಣದ ಟಿಂಗ್ ಅಕ್ಟೋಬರ್ ಗೆ ನಮ್ಮನ್ನು ಸಜ್ಜುಗೊಳಿಸುವಂತಹ ಧಿರಿಸಾಗಿರುತ್ತದೆ.

ಅಕ್ಟೋಬರ್

ಅಕ್ಟೋಬರ್

Courtesy: Raffughar

ಅಕ್ಟೋಬರ್ ತಿಂಗಳಿಗಿಂತ ಹೆಚ್ಚು ಕಾವ್ಯಾತ್ಮಕ ವಾಗಿರುವ ತಿಂಗಳು ಬೇರೊಂದಿಲ್ಲ. ಕಂದು ಬಣ್ಣದ ಎಲೆಗಳು ಉದುರುವ ಸಮಯ ಮತ್ತು ಇದು ಫಸಲನ್ನು ಕೊಯ್ಯುವ‌ ಸಮಯವಾಗಿದೆ. ಮೇ ತಿಂಗಳಂತೆಯೇ ಅಕ್ಟೋಬರ್ ಮತ್ತೊಂದು ತಂಪೆನಿಸುವ ತಿಂಗಳಾಗಿದೆ. ಬೇಸಿಗೆ ಮತ್ತು ಚಳಿಗಾಲದ ನಡುವಿನ ತಿಂಗಳಂತೆ. ಕಂದು ಬಣ್ಣವು ಈ ತಿಂಗಳಲ್ಲಿ ಭೂಮಿಯನ್ನು ಪ್ರತಿನಿಧಿಸುತ್ತದೆ. ಕಂದು ಬಣ್ಣದ ಎಲೆಗಳ ವರ್ಣವನ್ನೇ ನೀವು ಈ ತಿಂಗಳ ಧಿರಿಸಿಗೆ ಬಳಕೆ‌ ಮಾಡಬಹುದು. ನಾಟ್ ಜೊತೆಗೆ ನೆರಿಗೆಗಳಿರುವ ಟಾಪ್ ಮತ್ತು ಅರ್ಧ ಪೈಜಾಮವು ಅಧ್ಬುತ ಕಾಂಬಿನೇಷನ್ ಆಗಿದ್ದು ಅಕ್ಟೋಬರ್ ನಲ್ಲಿ ಧರಿಸಲು ಸೂಕ್ತವಾಗಿದೆ.

ನವೆಂಬರ್

ನವೆಂಬರ್

Courtesy: Kalki Koechlin's Instagram

ನವೆಂಬರ್ ತಿಂಗಳಲ್ಲಿ ಚಿಂತನಶೀಲತೆಯು ಅತ್ಯುತ್ತಮವಾಗಿರುವ ತಿಂಗಳು. ನವೆಂಬರ್ ನಲ್ಲಿ ಚಳಿಗಾಲದ ಆರಂಭವಾಗುತ್ತದೆ. ಕೆಂಪು ಮತ್ತು ಕಡುಗೆಂಪು ಬಣ್ಣದ ಚಿನಾರ್ ಎಲೆಗಳಿಗೆ ನಾವು ಈ ಸಮಯದಲ್ಲಿ ಗುಡ್ ಬಾಯ್ ಹೇಳುತ್ತಿರುತ್ತೇವೆ. ಇದು ಬೇಸಿಗೆ ಮತ್ತು ಶರತ್ಕಾಲವನ್ನು ಸೂಚಿಸುತ್ತದೆ. ಚಳಿಗಾಲವನ್ನು ಸ್ವಾಗತಿಸುವ ಸಮಯ ಇದು. ಈ ತಿಂಗಳಲ್ಲಿ ಮನಸ್ಸು ಮೂಡಿಯಾಗಿರುತ್ತದೆ. ಶೀತ ಮತ್ತು ಉಷ್ಣತೆಯ ಸಮ್ಮಿಲನದಿಂದಾಗಿ ಮನಸ್ಸು ಮೂಡಿಯಾಗುತ್ತದೆ. ಹಾಗಾಗಿ ನವೆಂಬರ್ ತಿಂಗಳಿಗೆ ಕಲ್ಕಿ ಕೊಚ್ಲಿನ್ ನಂತಹ ಔಟ್ ಫಿಟ್ ಹೇಳಿ ಮಾಡಿಸಿದ್ದಾಗಿದೆ. ಉರಿಯುತ್ತಿರುವ ಕೆಂಪು ಪ್ಯಾಂಟ್ ಬೇಸಿಗೆಯ ಪ್ರಜ್ವಲಿಸುವ ಶಕ್ತಿಯ ಸ್ಫೋಟವನ್ನು ಸೂಚಿಸುತ್ತದೆ ಮತ್ತು ಮ್ಯೂಟ್ ಮಾಡಿದ ಹಳದಿ ಕುರ್ತಾ ಇದಕ್ಕೆ ವ್ಯತಿರಿಕ್ತತೆಯನ್ನು ತೋರಿಸುತ್ತದೆ, ಇದು ಚಳಿಗಾಲದ ನಿಶ್ಯಬ್ದತೆಯಾಗಿರುತ್ತದೆ.

ಡಿಸೆಂಬರ್

ಡಿಸೆಂಬರ್

Courtesy: Turn Black

ರಾತ್ರಿಗಳು ಡಿಸೆಂಬರ್ ನಲ್ಲಿ ಹೆಚ್ಚು ಸಮಯವಿರುತ್ತದೆ ಮತ್ತು ಹಗಲಿನಲ್ಲಿ ಮೋಡ ಕವಿದ ಕತ್ತಲಿನ ವಾತಾವರಣವಿರುತ್ತದೆ. ಈ ತಿಂಗಳಲ್ಲಿ ಹೆಚ್ಚಾಗಿ ಕಪ್ಪು ಅಥವಾ ಬೂದು ಬಣ್ಣದ ಮೋಡಗಳು ಮತ್ತು ಬಿಳಿ ಹಿಮದ ಹಾಳೆಯು ವಾತಾವರಣವನ್ನು ಆವರಿಸಿರುತ್ತದೆ. ಡಿಸೆಂಬರ್ ನ ವಾತಾವರಣವನ್ನು ಬ್ಲಾಕ್ ಎಂಡ್ ವೈಟ್ ತಿಂಗಳು ಎನ್ನಬಹುದು. ಕ್ರಿಸ್ ಮಸ್, ಹೊಸ ವರ್ಷದ ಪಾರ್ಟಿಗಳು ಡಿಸೆಂಬರ್ ನ ಹೈಲೆಟ್.ಈ ತಿಂಗಳ ವಾತಾವರಣವು ಕತ್ತಲೆಯಾಗಿ, ಶೀತದಂತಿರುತ್ತದೆ. ಹಾಗಾಗಿ ಡಿಸೆಂಬರ್ ಗೆ ಕಪ್ಪು ಬೆಸ್ಟ್ ಆಯ್ಕೆ. ಕಪ್ಪು ಬೆಚ್ಚಗಿಡುವುದಕ್ಕೂ ಕೂಡ ನೆರವು ನೀಡುತ್ತದೆ.

ಹಾಗಾದ್ರೆ ಯಾವ ತಿಂಗಳ ಧಿರಿಸು ನಿಮಗೆ ಇಷ್ಟವಾಗುತ್ತದೆ? ಮರೆಯದೆ ನಮಗೆ ಕಮೆಂಟ್ ಮೂಲಕ ತಿಳಿಸಿ.

English summary

From January To December, Which Colour Outfit To Wear Based On Weather?

Here we are discussing about From January To December, Which Colour Outfit To Wear Based On Weather?. Find out what coloured outfit you should wear from January to December. Read more.
Story first published: Tuesday, May 19, 2020, 14:23 [IST]
X
Desktop Bottom Promotion