For Quick Alerts
ALLOW NOTIFICATIONS  
For Daily Alerts

ಈ ಟೊಮೆಟೊ ಮನೆಮದ್ದುಗಳಿಂದ ಮೊಡವೆ, ಕಲೆ ಹೋಗಲಾಡಿಸಬಹುದು

|

ಮೊಡವೆ ಸಮಸ್ಯೆ ಎನ್ನುವುದು ಹದಿಹರೆಯದಲ್ಲಿ ಕಂಡು ಬರುವ ಸಮಸ್ಯೆಯಾದರೂ ಕೆಲವರಲ್ಲಿ ಮೂವತ್ತರ ಪ್ರಾಯದಲ್ಲೂ ಕಂಡು ಬರುತ್ತದೆ. ಮೊಡವೆ ಬಂದು ಹೋಗುವುದಾದರೆ ಯಾರೂ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಅದು ಬಂದು ಹೋಗುವಾಗ ಕಲೆ ಉಂಟಾಗುವುದರಿಂದ ಮೊಡವೆ ಬಂದರೆ ಹೆಚ್ಚು ಆತಂಕಕ್ಕೆ ಒಳಗಾಗುತ್ತಾರೆ. ಮೊ0ಡವೆ ತುಂಬಾ ಇದ್ದರೆ ಕೆಲವರಿಗೆ ಅತ್ಮವಿಶ್ವಾಸ ಕೂಡ ಕಡಿಮೆಯಾಗುವುದು.

ಮುಖದ ಸೌಂದರ್ಯವನ್ನೇ ಹಾಳು ಮಾಡುವ ಮೊಡವೆ ಹಾಗೂ ಅದರಿಂದ ಉಂಟಾಗುವ ಕಲೆಯನ್ನು ಕೆಲವೊಂದು ಮನೆಮದ್ದುಗಳ ಮೂಲಕ ಇಲ್ಲವಾಗಿಸಬಹುದು. ಇಲ್ಲಿ ನಾವು ಮೊಡವೆ ಸಮಸ್ಯೆ ತಡೆಗಟ್ಟಲು ಅತ್ಯುತ್ತಮವಾದ ಮನೆಮದ್ದು ನೀಡಿದ್ದೇವೆ.

Acne And Acne Scars

ಮೊಡವೆಗೆ ಕಾರಣ:
ಮೊಡವೆ ಪ್ರಮುಖವಾಗಿ ಎರಡು ಕಾರಣಗಳಿಂದ ಉಂಟಾಗುತ್ತದೆ. 1. ಬ್ಯಾಕ್ಟಿರಿಯಾ ಸೋಂಕು 2. ಜಿಡ್ಡಿನಂಶ ಇನ್ನು ಹದಿಹರೆಯದವರಲ್ಲಿ ಹರ್ಮೋನ್‌ಗಳ ವ್ಯತ್ಯಾಸದಿಂದಾಗಿ ಈ ರೀತಿಯ ಸಮಸ್ಯೆ ಉಂಟಾಗುತ್ತದೆ. ಈ ಮೊಡವೆ ಸಮಸ್ಯೆಯನ್ನು ಟೊಮೆಟೊ ಬಳಸಿ ಹೋಗಲಾಡಿಸಬಹುದಾಗಿದೆ. ಇದರಲ್ಲಿರುವ ಲೈಕೊಪೆನೆ, ಆ್ಯಂಟಿಆಕ್ಸಿಡೆಂಟ್ ಮುಖವನ್ನು ಕ್ಲೆನ್ಸ್ ಮಾಡುವುದರಿಂದ ಮೊಡವೆಯನ್ನು ಕಡಿಮೆ ಮಾಡುತ್ತದೆ, ಕಲೆಯನ್ನು ಹೋಗಲಾಡಿಸುತ್ತದೆ ಹಾಗೂ ಇದರಿಂದ ಮುಖಕ್ಕೆ ಯಾವುದೇ ತೊಂದರೆ ಕೂಡ ಉಂಟಾಗುವುದಿಲ್ಲ. ಇಲ್ಲಿ ಟೊಮೆಟೊ ಬಳಸಿ ಮೊಡವೆ ಹೋಗಲಾಡಿಸುವುದು ಹೇಗೆ ಎಂದು ಹೇಳಿದ್ದೇವೆ ನೋಡಿ:
1. ಟೊಮೆಟೊ

1. ಟೊಮೆಟೊ

ಮೊಡವೆ ಹೋಗಲಾಡಿಸಲು ಟೊಮೆಟೊ ಮಾತ್ರ ಹಚ್ಚಿದರೂ ಸಾಕು. ಒಂದು ಹಣ್ಣಾದ ಟೊಮೆಟೊವನ್ನು ತೆಗೆದು ಅದರ ಒಳಭಾಗದ ರಸವನ್ನು ಚಿಕ್ಕ ಬೌಲ್‌ಗೆ ಹಾಕಿ, ಆ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಒಂದು ಗಂಟೆ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆದು ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿದರೆ ಸಾಕು.

ಈ ವಿಧಾನವನ್ನು ಮುಖದಲ್ಲಿ ಮೊಡವೆ ಇಲ್ಲದಿದ್ದರೂ ಳಸಬಹುದು. ಇದರಿಂದ ಮುಖದಲ್ಲಿರುವ ಕೊಳೆ ಹೋಗಿ ಕ್ಲೆನ್ಸ್ ಆಗುತ್ತದೆ ಹಾಗೂ ಮುಖದ ಹೊಳಪು ಹೆಚ್ಚುವುದು.

ಟೊಮೆಟೊ ಹಾಗೂ ಮೊಸರು

ಟೊಮೆಟೊ ಹಾಗೂ ಮೊಸರು

ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ತ್ವಚೆಯನ್ನು ಎಕ್ಸ್‌ಫೋಲೆಟ್ ಮಾಡುತ್ತದೆ. ಇದನ್ನು ಟೊಮೆಟೊ ಜತೆ ಮಿಶ್ರ ಮಾಡಿದರೆ ಮೊಡವೆ ಹೋಗಲಾಡಿಸುವ ಉತ್ತಮವಾದ ಮನೆಮದ್ದಾಗಿದೆ.

ಬೇಕಾಗುವ ಸಾಮಗ್ರಿ

1/2 ಟೊಮೆಟೊ

2 ಚಮಚ ಮೊಸರು

ಬಳಸುವ ವಿಧಾನ

ಟೊಮೆಟೊದ ಬೀಜ ತೆಗೆದು, ಅದರ ಸಿಪ್ಪೆ ಕೂಡ ತೆಗೆದು ಬೌಲ್‌ನಲ್ಲಿ ಹಾಕಿ ಮ್ಯಾಶ್ ಮಾಡಿ, ಅದಕ್ಕೆ ಮೊಸರು ಮಿಕ್ಸ್ ಮಾಡಿ, ಆ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಒಂದು ಗಂಟೆ ಬಿಡಿ, ನಂತರ ಮುಖ ತೊಳೆಯಿರಿ.

ಟೊಮೆಟೊ ಮತ್ತು ಸೌತೆಕಾಯಿ

ಟೊಮೆಟೊ ಮತ್ತು ಸೌತೆಕಾಯಿ

ಸೌತೆಕಾಯಿಯಲ್ಲಿ ಮಾಯಿಶ್ಚರೈಸರ್‌ ಗುಣವಿದೆ ಹಾಗೂ ತ್ವಚೆಯನ್ನು ತಂಪಾಗಿಸುತ್ತದೆ. ಇದರಲ್ಲಿರುವ ಆಸ್ಟ್ರಿಜೆಂಟ್ ಅಂಶ ರಂಧ್ರಗಳನ್ನು ಮುಚ್ಚಿ ಮೊಡವೆಯನ್ನು ನಿಯಂತ್ರಿಸುತ್ತದೆ. ಸೌತೆಕಾಯಿಗೆ ಉರಿಯೂತ ಕಡಿಮೆ ಮಾಡುವ ಗುಣವಿರುವುದರಿಂದ ಉರಿಯೂತ ಕಡಿಮೆ ಮಾಡುವಲ್ಲಿ ಸಹಕಾರಿ.

ಬೇಕಾಗುವ ಸಾಮಗ್ರಿ

1 ಚಮಚ ಟೊಮೆಟೊ ರಸ

1 ಚಮಚ ಸೌತೆಕಾಯಿ ರಸ

ಬಳಕೆ

ಎರಡು ರಸವನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ನಂತರ ಮುಖ ತೊಳೆಯಿರಿ. ಈ ರೀತಿ ವಾರದಲ್ಲಿ 2-3 ಬಾರಿ ಮಾಡುತ್ತಾ ಬಂದರೆ ಸಾಕು ಮೊಡವೆ ಕಡಿಮೆಯಾಗುವುದು, ಮುಖದಲ್ಲಿ ಕಾಂತಿ ಹೆಚ್ಚುವುದು.

ಟೊಮೆಟೊ ಹಾಗೂ ನಿಂಬೆರಸ

ಟೊಮೆಟೊ ಹಾಗೂ ನಿಂಬೆರಸ

ಮೊಡವೆ ತುಂಬಾ ಎದ್ದಿದ್ದರೆ ಈ ವಿಧಾನದಿಂದ ಸ್ವಲ್ಪ ಉರಿಯಾಗಬಹುದು. ಆದರೆ ಮೊಡವೆ ಕಡಿಮೆ ಮಾಡುವಲ್ಲಿ ನಿಂಬೆರಸ ಹಾಗೂ ಟೊಮೆಟೊ ಸಹಕಾರಿಯಾಗಿದೆ. ನಿಂಬೆರಸ ತ್ವಚೆಯನ್ನು ಆಳದಿಂದ ಕ್ಲೆನ್ಸ್ ಮಾಡುತ್ತದೆ ಹಾಗೂ ಮೊಡವೆಗೆ ಕಾರಣವಾದ ಬ್ಯಾಕ್ಟಿರಿಯಾವನ್ನು ನಾಶ ಪಡಿಸುತ್ತದೆ. ಟೊಮೆಟೊ ಮುಖದ ಕಲೆ ಕಡಿಮೆ ಮಾಡುತ್ತದೆ.

1 ಚಮಚ ಟೊಮೆಟೊ ರಸ, 1ಚಮಚ ನಿಂಬೆರಸ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಬೇಕು. ಈ ರೀತಿ ಎರಡು ದಿನಕ್ಕೊಮ್ಮೆ ಮಾಡುತ್ತಾ ಬಂದರೆ ಮೊಡವೆ ಹಾಗೂ ಕಲೆ ಇಲ್ಲವಾಗುವುದು.

ಟೊಮೆಟೊ ಮತ್ತು ಕಿತ್ತಳೆ

ಟೊಮೆಟೊ ಮತ್ತು ಕಿತ್ತಳೆ

ಕಿತ್ತಳೆಯಲ್ಲಿ ವಿಟಮಿನ್ ಸಿ ಇದ್ದು ತ್ವಚೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಇದು ತ್ವಚೆಯಲ್ಲಿ ಮೊಡವೆ ಕಡಿಮೆ ಮಾಡುವಲ್ಲಿ ಸಹಕಾರಿ. ಕಿತ್ತಳೆ ಸಿಪ್ಪೆ ಒಣಗಿಸಿ ಕೂಡ ಬಳಸಬಹುದು.

ಬೇಕಾಗುವ ಸಾಮಗ್ರಿ

1 ಚಮಚ ಟೊಮೆಟೊ ರಸ

2 ಚಮಚ ಕಿತ್ತಳೆ ರಸ

ಈ ಎರಡು ರಸವನ್ನು ಮಿಶ್ರ ಮಾಡಿ

English summary

Tomato-Based Home Remedies For Acne And Acne Scars

You Know by using tomato you can get healthy skin,let's see how you can actually use it to enrich the skin and tackle the issue of acne.
Story first published: Monday, December 16, 2019, 17:28 [IST]
X
Desktop Bottom Promotion