For Quick Alerts
ALLOW NOTIFICATIONS  
For Daily Alerts

ಸದಾ ಯಂಗ್ ಆಗಿರಲು ಈ ಸಲಹೆಗಳನ್ನ ತಪ್ಪದೇ ಪಾಲಿಸಿದರೆ ಸಾಕು..

|

ವಯಸ್ಸಾಗುವಿಕೆ ಎಂಬುದು ಪ್ರತಿಯೊಬ್ಬರಿಗೂ ಸಂಭವಿಸುವ ನೈಸರ್ಗಿಕ ಪ್ರಕ್ರಿಯೆ. ಆದರೆ, ನಮ್ಮಲ್ಲಿ ಕೆಲವರು ಬೇಗನೇ ವಯಸ್ಸಾದಂತೆ ಕಾಣುತ್ತಾರೆ. ಅಂತಹವರಿಗೆ ತ್ವಚೆಯ ಬಗ್ಗೆ ಸ್ವಲ್ಪ ಕಾಳಜಿ ಅವಶ್ಯಕವಾಗಿರುತ್ತದೆ. ಆರೋಗ್ಯಕರ ಆಹಾರ, ಉತ್ತಮ ನಿದ್ರೆ ಮತ್ತು ಸರಿಯಾದ ತ್ವಚೆಯ ದಿನಚರಿಯನ್ನು ಅನುಸರಿಸಿದರೆ, ನಾವು ಸುಲಭವಾಗಿ ಆರೋಗ್ಯಕರ ಮತ್ತು ಯೌವ್ವನದಂತೆಯೇ ಕಾಣುವ ಚರ್ಮವನ್ನು ಪಡೆಯಬಹುದು. ಇದರ ಜೊತೆಗೆ ಈ ಕೆಳಗೆ ನೀಡಿರುವ ಅಂಶಗಳು ಸಹ ನಿಮ್ಮನ್ನು ಸಣ್ಣ ವಯಸ್ಸಿನವರನ್ನಾಗಿ ಕಾಣಲು ಸಹಾಯ ಮಾಡುತ್ತದೆ.

ವಯಸ್ಸಾಗುವಿಕೆಯನ್ನು ತಡೆಯಲು ಸಹಾಯ ಮಾಡುವ ಅತ್ಯುತ್ತಮ ತ್ವಚೆಯ ದಿನಚರಿಗಳು ಇಲ್ಲಿವೆ:

ಸನ್‌ಸ್ಕ್ರೀನ್ ಬಳಸಿ:

ಸನ್‌ಸ್ಕ್ರೀನ್ ಬಳಸಿ:

ವಯಸ್ಸಾಗುವಿಕೆಯನ್ನು ತಡೆಯಲು ಪ್ರಮುಖ ರಿಹಾರವೆಂದರೆ ಸನ್ಸ್ಕ್ರೀನ್. ಸೂರ್ಯನಿಂದ ನಿಮ್ಮನ್ನು ರಕ್ಷಿಸಲು ಇದು ಅತ್ಯಂತ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ. ನಿಮ್ಮ ತ್ವಚೆಯ ಮೇಲೆ ವಯಸ್ಸಾಗುವಿಕೆಯನ್ನು ಸೂಚಿಸುವ ಯಾವುದೇ ಚಿಹ್ನೆಗಳಿಗೆ ಸೂರ್ಯನ ಹಾನಿಕಾರಕ ಕಿರಣಗಲೇ ಕಾರಣವಾಗಿದೆ. ಇದು ಕಪ್ಪು ಕಲೆಗಳು, ಸುಕ್ಕುಗಳಿಗೆ ಕಾರಣವಾಗಬಹುದು. ಆದ್ದರಿಂದ, ಇಂತಹ ಚಿಹ್ನೆಗಳನ್ನು ಕಡಿಮೆ ಮಾಡಲು ಒಳಾಂಗಣದಲ್ಲಿದ್ದಾಗ ಅಥವಾ ಮೋಡದ ದಿನದಲ್ಲಿಯೂ ಬ್ರಾಡ್-ಸ್ಪೆಕ್ಟ್ರಮ್ ಸನ್‌ಸ್ಕ್ರೀನ್ (ಕನಿಷ್ಠ SPF 30 ಇರುವ) ಬಳಸುವುದು ಸೂಕ್ತ. ಸನ್ ಸ್ಕ್ರೀನ್ ಹಚ್ಚುವುದರ ಜೊತೆಗೆ, ಹಾನಿಕಾರಕ ಕಿರಣಗಳಿಂದ ತಪ್ಪಿಸಿಕೊಳ್ಳಲು ಉದ್ದನೆಯ ತೋಳುಗಳಿರುವ ಬಟ್ಟೆ, ಸನ್ಗ್ಲಾಸ್ ಮತ್ತು ಟೋಪಿಗಳನ್ನು ಹೊಂದಿರುವ ಬಟ್ಟೆಗಳನ್ನು ಧರಿಸಬಹುದು.

ಸರಿಯಾದ ನಿದ್ರೆ:

ಸರಿಯಾದ ನಿದ್ರೆ:

ನಿದ್ದೆ ಮಾಡುವಾಗ ನಮ್ಮ ದೇಹವು ತನ್ನನ್ನು ತಾನೇ ಸರಿಪಡಿಸಿಕೊಳ್ಳುತ್ತದೆ. ನಿದ್ರೆಯ ಸಮಯದಲ್ಲಿ, ನಿಮ್ಮ ಚರ್ಮದ ರಕ್ತದ ಹರಿವು ಹೆಚ್ಚಾಗುವುದರಿಂದ, ಸುಕ್ಕುಗಳು ಮತ್ತು ವಯಸ್ಸಿನ ಕಲೆಗಳನ್ನು ಕಡಿಮೆ ಮಾಡುತ್ತದೆ. 7-9ಗಂಟೆಗಳ ಕಾಲ ನಿದ್ರೆ ಮಾಡಲು ಶಿಫಾರಸು ಮಾಡಲಾಗಿದೆ. ಜನರಲ್ಲಿ ಕಳಪೆ ನಿದ್ರೆಯು ಸಾಮಾನ್ಯವಾಗಿ ವೃದ್ಧಾಪ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸಂಬಂಧಿಸಿರಬಹುದು. ಉದಾಹರಣೆಗೆ: ಆತಂಕವು ನಿದ್ರಾಹೀನತೆಗೆ ಕಾರಣವಾಗಬಹುದು. ಇದು ಕ್ರಮೇಣ ನಿಮ್ಮ ಚರ್ಮದ ಮೇಲೆ ವಯಸ್ಸಾಗುವಿಕೆಯ ಲಕ್ಷಣಗಳನ್ನು ನೀಡಬಹುದು.

ಆರೋಗ್ಯಕರ ಆಹಾರ:

ಆರೋಗ್ಯಕರ ಆಹಾರ:

ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿರುವ ಆಹಾರವು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುತ್ತದೆ ಜೊತೆಗೆ ಹಾನಿ ಮತ್ತು ಅಕಾಲಿಕ ವಯಸ್ಸಾಗುವಿಕೆಯಿಂದ ಚರ್ಮವನ್ನು ರಕ್ಷಿಸುತ್ತದೆ. ವಯಸ್ಸಾಗುವಿಕೆಯ ಲಕ್ಷಣಗಳನ್ನು ತಪ್ಪಿಸಲು ನೀವು ಏನು ತಿನ್ನುತ್ತೀರಿ ಎಂಬುದರ ಮೇಲೆ ಗಮನ ಹರಿಸುವುದು ಮುಖ್ಯ. ಹಸಿರು ಎಲೆಗಳುಳ್ಳ ತರಕಾರಿಗಳು, ದೊಣ್ಣೆಮೆಣಸು, ಬ್ರೊಕೋಲಿ, ಕ್ಯಾರೆಟ್ ಇತ್ಯಾದಿ ತರಕಾರಿಗಳು, ಹಣ್ಣುಗಳು ಮತ್ತು ದಾಳಿಂಬೆ, ಬೆರಿಹಣ್ಣುಗಳು, ಆವಕಾಡೊ, ಇತ್ಯಾದಿ ಹಣ್ಣುಗಳನ್ನು ಸೇವಿಸಿ. ನೀವು ನಿಮ್ಮ ಆಹಾರದಲ್ಲಿ ಗ್ರೀನ್ ಟೀ ಮತ್ತು ಆಲಿವ್ ಎಣ್ಣೆಯನ್ನು ಕೂಡ ಸೇರಿಸಬಹುದು.

ಮಾಯಿಶ್ಚರೈಸರ್:

ಮಾಯಿಶ್ಚರೈಸರ್:

ವಯಸ್ಸಾದಂತೆ ನಿಮ್ಮ ಚರ್ಮವನ್ನು ನಿಯಮಿತವಾಗಿ ತೇವಗೊಳಿಸುವುದು ಮುಖ್ಯ. ಮಾಯಿಶ್ಚರೈಸರ್ ಹಚ್ಚಿದಾಗ, ಅದು ನಿಮ್ಮ ಚರ್ಮದಲ್ಲಿ ನೀರನ್ನು ಹಿಡಿದಿಟ್ಟುಕೊಂಡು, ತಾಜಾವಾಗಿರಿಸುತ್ತದೆ. ಇದು ಸುಕ್ಕುಗಳು ಅಥವಾ ಸೂಕ್ಷ್ಮ ರೇಖೆಗಳಂತಹ ವಯಸ್ಸಾದ ಗೋಚರ ಚಿಹ್ನೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಿಟಮಿನ್ ವಿಶೇಷವಾಗಿ ವಿಟಮಿನ್ ಸಿ ಅಥವಾ ವಿಟಮಿನ್ ಎ ಹೊಂದಿರುವ ಮಾಯಿಶ್ಚರೈಸರ್ ಹಚ್ಚಲು ಶಿಫಾರಸು ಮಾಡಲಾಗಿದೆ. ಈ ಪದಾರ್ಥಗಳು ಸುಕ್ಕುಗಳು ಉಂಟಾಗದಂತೆ ತಡೆಯುವಲ್ಲಿ ಪರಿಣಾಮಕಾರಿ.

ತ್ವಚೆಯ ಆರೈಕೆ ಉತ್ಪನ್ನಗಳು:

ತ್ವಚೆಯ ಆರೈಕೆ ಉತ್ಪನ್ನಗಳು:

ವಯಸ್ಸಾಗುವಿಕೆಯ ಚಿಹ್ನೆಗಳನ್ನು ತಡೆಗಟ್ಟಲು ತ್ವಚೆ ಉತ್ಪನ್ನಗಳನ್ನು ಆರಿಸುವಾಗ, ಉತ್ಪನ್ನಗಳಲ್ಲಿನ ಪದಾರ್ಥಗಳ ಬಗ್ಗೆ ವಿಶೇಷ ಗಮನ ಹರಿಸುವುದು ಮುಖ್ಯ. ನಿಮ್ಮ ಚರ್ಮವನ್ನು ನಿರ್ವಿಷಗೊಳಿಸುವ, ಸಮಸ್ಯೆಗಳನ್ನು ಗುಣಪಡಿಸುವ ಉತ್ಪನ್ನಗಳನ್ನು ಎತ್ತಿಕೊಳ್ಳಿ. ಇದಕ್ಕಾಗಿ ಪರಿಶುದ್ಧ ಅಲೋವೆರಾ ಜೆಲ್ ಜೊತೆಗೆ ಲ್ಯಾವೆಂಡರ್ ಎಸೆನ್ಶಿಯಲ್ ಆಯಿಲ್ ಉತ್ತಮ ಆಯ್ಕೆ. ಇದು ಸೂರ್ಯನ ಹಾನಿಯಿಂದ ತ್ವಚೆಗೆ ಶಕ್ತಿಯನ್ನು ನೀಡುತ್ತದೆ ಮತ್ತು ವಯಸ್ಸಾಗುವುದನ್ನು ವಿಳಂಬಗೊಳಿಸುತ್ತದೆ.

English summary

Simple tips to prevent ageing in Kannada

Here we talking about Simple tips to prevent ageing in Kannada, read on
Story first published: Saturday, October 9, 2021, 13:14 [IST]
X
Desktop Bottom Promotion