For Quick Alerts
ALLOW NOTIFICATIONS  
For Daily Alerts

ಬಾಳೆಹಣ್ಣಿನ ಸಿಪ್ಪೆಯ ಈ ಪ್ರಯೋಜನಗಳನ್ನ ತಿಳಿದರೆ ಅದನ್ನು ಎಂದಿಗೂ ಎಸೆಯುವುದಿಲ್ಲ

|

ಈ ಜಗತ್ತಿನಲ್ಲಿ ಸಿಗುವ ಪ್ರತಿಯೊಂದು ವಸ್ತುವಿನಿಂದಲೂ ಒಂದಲ್ಲ ಒಂದು ರೀತಿಯ ಪ್ರಯೋಜನ ಸಿಗುತ್ತದೆ. ಆದರೆ ನಮಗೆ ತಿಳಿದಿರುವುದಿಲ್ಲ ಅಷ್ಟೇ. ಅವುಗಳಲ್ಲಿ ಒಂದು ಬಾಳೆಹಣ್ಣಿ ಸಿಪ್ಪೆ.

ಬಾಳೆಹಣ್ಣು ನಿಮ್ಮ ದೇಹಕ್ಕೆ ಮತ್ತು ತ್ವಚೆಗೆ ತುಂಬಾ ಉತ್ತಮ ಎಂಬುದು. ಆದರೆ ಬಾಳೆಹಣ್ಣಿನ ಸಿಪ್ಪೆಗಳಲ್ಲಿ ಹೆಚ್ಚಿನ ವಿಟಮಿನ್ ಬಿ 6, ಬಿ 12 ಇರುವುದರಿಂದ ನಿಮ್ಮ ಚರ್ಮಕ್ಕೆ ಒಳ್ಳೆಯ ಪ್ರಯೋಜನಗಳನ್ನು ನೀಡುತ್ತವೆ. ಸಿಪ್ಪೆಗಳಲ್ಲಿ ಪ್ರೋಟೀನ್, ಫೈಬರ್, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಗಳಂತಹ ಪೋಷಕಾಂಶಗಳಿಂದ ಕೂಡಿದ್ದು, ಇದು ನಿಮ್ಮ ತ್ವಚೆಯನ್ನು ತಾರುಣ್ಯ ಪೂರ್ಣವಾಗಿ ಕಾಣಲು ಸಹಾಯ ಮಾಡುತ್ತದೆ.

ಬಾಳೆಹಣ್ಣಿನ ಸಿಪ್ಪೆಯಿಂದ ನೀವೇ ಮಾಡಿಕೊಳ್ಳಬೇಕಾದ ಪರಿಹಾರಗಳನ್ನು ಈ ಕೆಳಗೆ ನೀಡಲಾಗಿದೆ;

1. ಬಾಳೆಹಣ್ಣಿನ ಸಿಪ್ಪೆಯ ಫೇಸ್ ಪ್ಯಾಕ್:

1. ಬಾಳೆಹಣ್ಣಿನ ಸಿಪ್ಪೆಯ ಫೇಸ್ ಪ್ಯಾಕ್:

ಒಂದು ಬಾಳೆಹಣ್ಣನ್ನು ತೆಗೆದುಕೊಂಡು ಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಜೊತೆಗೆ ಬಾಳೆಹಣ್ಣಿನ ಸಿಪ್ಪೆಯನ್ನೂ ಅದೇ ರೀತಿ ಮಾಡಿ. ಮಿಕ್ಸರ್ ಸಹಾಯದಿಂದ ಬಾಳೆಹಣ್ಣಿನ ಸಿಪ್ಪೆಯನ್ನು ಪೇಸ್ಟ್ ಮಾಡಿ, ಈಗ ಫೇಸ್ ಮಾಸ್ಕ್ ಗಾಗಿ ಕೇವಲ ಎರಡು ತುಂಡು ಬಾಳೆಹಣ್ಣುಗಳನ್ನು ಅದಕ್ಕೆ ಸೇರಿಸಿ. ಉಳಿದ ಬಾಳೆಹಣ್ಣನ್ನು ಮಧ್ಯಾಹ್ನದ ಲಘು ಆಹಾರವಾಗಿ ಸೇವಿಸಿ.

ಬಾಳೆಹಣ್ಣಿನ ಸಿಪ್ಪೆ ಪೇಸ್ಟ್‌ಗೆ ಎರಡು ಚಮಚ ಹಾಲು ಸೇರಿಸಿ ಮತ್ತು ಎಲ್ಲವನ್ನೂ ಒಟ್ಟಿಗೆ ಬೆರೆಸಿ. ಈ ಬಾಳೆಹಣ್ಣಿನ ಪೇಸ್ಟ್ ಅನ್ನು ರೆಫ್ರಿಜರೇಟರ್ ಒಳಗೆ 10-15 ನಿಮಿಷಗಳ ಕಾಲ ಇಡಿ. ತದನಂತರ ತಣ್ಣನೆಯ ಕಂದು ಬಣ್ಣದ ಮಾಸ್ಕನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿ. ಇದನ್ನು 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.

2. ಸಿಪ್ಪೆಯ ಸ್ಕ್ರಬ್ಬರ್:

2. ಸಿಪ್ಪೆಯ ಸ್ಕ್ರಬ್ಬರ್:

ಬಾಳೆಹಣ್ಣಿನ ಸಿಪ್ಪೆಯನ್ನು ಸಣ್ಣ ಭಾಗಗಳಾಗಿ ಕತ್ತರಿಸಿ ಅದನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಉಜ್ಜಲು ಪ್ರಾರಂಭಿಸಿ. ಬಾಳೆಹಣ್ಣಿನ ಸಿಪ್ಪೆಯು ಕಾಲಜನ್ ಅನ್ನು ಹೆಚ್ಚಿಸಲು, ಕಪ್ಪು ವಲಯಗಳನ್ನು ಕಡಿಮೆ ಮಾಡಲು, ಡೆಡ್ ಸ್ಕಿನ್ ತೆಗೆದುಹಾಕಲು, ನಿಮ್ಮ ಚರ್ಮದೊಳಗಿನ ತೈಲ ಗ್ರಂಥಿಗಳನ್ನು ನಿಯಂತ್ರಿಸಲು ಮತ್ತು ನಿಮ್ಮ ರಂಧ್ರಗಳನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ. ಇದನ್ನು 20-30 ನಿಮಿಷಗಳ ಕಾಲ ಬಿಡಿ ಮತ್ತು ಬೆಚ್ಚಗಿನ ತೊಳೆಯುವ ಬಟ್ಟೆಯನ್ನು ಬಳಸಿ ಅದನ್ನು ತೆಗೆಯಿರಿ.

 3. ಹಲ್ಲುಗಳು ಬಿಳಿಮಾಡುವುದು:

3. ಹಲ್ಲುಗಳು ಬಿಳಿಮಾಡುವುದು:

ಬಾಳೆಹಣ್ಣಿನ ಸಿಪ್ಪೆಯಲ್ಲಿ ಹಲ್ಲುಗಳ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುವ ಜೀವಿರೋಧಿ ಗುಣಗಳಿವೆ. ಆದ್ದರಿಂದ ನೀವು

ಬಾಳೆಹಣ್ಣಿನ ಸಿಪ್ಪೆಯ ಕೆಲವು ತುಂಡುಗಳನ್ನು ತೆಗೆದುಕೊಂಡು ಅದನ್ನು ನಿಮ್ಮ ಹಲ್ಲು ಮತ್ತು ಒಸಡುಗಳ ಮೇಲೆ ಉಜ್ಜಿಕೊಳ್ಳಿ. ಈ ಪರಿಹಾರವನ್ನು ಸತತವಾಗಿ ಒಂದು ವಾರದವರೆಗೆ ಮಾಡಿದರೆ, ಹಲ್ಲುಗಳನ್ನು ಬಿಳಿಯಾಗುವುದನ್ನು ನೀವು ಕಾಣಬಹುದು.

4. ಕಣ್ಣಿನ ಡಾರ್ಕ್ ಸರ್ಕಲ್ ಕಡಿಮೆ ಮಾಡುವುದು:

4. ಕಣ್ಣಿನ ಡಾರ್ಕ್ ಸರ್ಕಲ್ ಕಡಿಮೆ ಮಾಡುವುದು:

ಬಾಳೆಹಣ್ಣಿನ ಸಿಪ್ಪೆಯನ್ನು ಎರಡು ಸಣ್ಣ ಭಾಗಗಳಾಗಿ ಕತ್ತರಿಸಿ ಫ್ರೀಜರ್‌ನೊಳಗೆ 10-15 ನಿಮಿಷಗಳ ಕಾಲ ಸಂಗ್ರಹಿಸಿ. ಈ ಸಿಪ್ಪೆಯನ್ನು ನಿಮ್ಮ ಕಣ್ಣುಗಳ ಕೆಳಗೆ 20 ನಿಮಿಷಗಳ ಕಾಲ ಇಡಿ ಮತ್ತು ಇದನ್ನು ವಾರಕ್ಕೆ ಮೂರು ಬಾರಿ ಪುನರಾವರ್ತಿಸಿ. ಬಾಳೆಹಣ್ಣಿನ ಸಿಪ್ಪೆಗಳು ಡಾರ್ಕ್ ವಲಯಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಜೊತೆಗೆ ಕಣ್ಣುಗಳಿಂದ ಪಫಿನೆಸ್ ಮತ್ತು ಊತವನ್ನು ನಿವಾರಿಸುತ್ತದೆ.

5. ತೊಂಡೆಯಂತ ತುಟಿಗಳು:

5. ತೊಂಡೆಯಂತ ತುಟಿಗಳು:

ಬಾಳೆಹಣ್ಣಿನ ಸಿಪ್ಪೆಯಲ್ಲಿ ಬಿಳಿಮಾಡುವ ಗುಣಗಳು ಮತ್ತು ಹಲವಾರು ಉತ್ಕರ್ಷಣ ನಿರೋಧಕಗಳು ಇದ್ದು ಅದು ನಿಮ್ಮ ತುಟಿಗಳಿಗೆ ಹೊಳಪು ಮಾತ್ರವಲ್ಲದೆ ಕೊಬ್ಬಿದಂತೆ ಮಾಡುತ್ತದೆ. ಒಂದು ವಾರ ಪ್ರತಿದಿನ 10 ನಿಮಿಷಗಳ ಕಾಲ ನಿಮ್ಮ ತುಟಿಗಳಿಗೆ ತಣ್ಣನೆಯ ಬಾಳೆಹಣ್ಣಿನ ಸಿಪ್ಪೆಯನ್ನು ಉಜ್ಜಿಕೊಳ್ಳಿ ಮತ್ತು ವ್ಯತ್ಯಾಸವನ್ನು ನೀವೇ ನೋಡಿ.

English summary

How to Use Banana Peel for Radiant Skin in Kannada

Here we talking about How to Use Banana Peel for Radiant Skin in kannada, read on
Story first published: Monday, July 12, 2021, 13:46 [IST]
X
Desktop Bottom Promotion