For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಆರೋಗ್ಯಯುತವಾದ ತ್ವಚೆ ಪಡೆಯಲು ಸಿಂಪಲ್ ಟಿಪ್ಸ್ ಗಳು

|

ಇದು ಮಾನ್ಸೂನ್ ಕಾಲ. ಎಲ್ಲೆಲ್ಲೂ ಸಾಕಷ್ಟು ತೇವಾಂಶವಿರುವ ಮಳೆಗಾಲ. ಇದರ ಆರಂಭದೊಂದಿಗೆ ನಮ್ಮ ದಿನಚರಿಯೂ ಬದಲಾಗಲು ಶುರುವಾಗುವುದು. ಅದರಲ್ಲಿ ತ್ವಚೆಯ ರಕ್ಷಣೆಗೆ ಬಳಸುವ ಉತ್ಪನ್ನವೂ ಒಂದು. ಋತುಮಾನ ಯಾವುದೇ ಇರಲಿ ಮೂಲಭೂತ ತ್ವಚೆ ರಕ್ಷಣೆಯ ದಿನಚರಿಯನ್ನು ಅನುಸರಿಸುವುದು ಬಹಳ ಮುಖ್ಯವಾಗಿದೆ. ಇಲ್ಲಿ ನಾವು ಮಾನ್ಸೂನ್ ಗೆ ತಕ್ಕಂತೆ ನಿಮ್ಮ ತ್ವಚೆಯ ರಕ್ಷಣೆಯ ವಿಧಾನಗಳನ್ನು ಹೇಗೆ ಬದಲಾಯಿಸಿಕೊಳ್ಳಬಹುದು ಎಂಬುದನ್ನು ಹೇಳದ್ದೇವೆ.

ಮಳೆಗಾಲದಲ್ಲಿ ನಿಮ್ಮ ತ್ವಚೆಯನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ:

1. ಮಾಯಿಶ್ಚರೈಸರ್:

1. ಮಾಯಿಶ್ಚರೈಸರ್:

ಮಳೆಗಾಲದಿಂದ ಸಾಕಷ್ಟು ತೇವಾಂಶ ರೂಪಿತವಾಗಿರುವುದರಿಂದ ನಿಮ್ಮ ಮಾಯಿಶ್ಚರೈಸರನ್ನು ಲೈಟ್ ಇರುವುದಕ್ಕೆ ಬದಲಾಯಿಸಿ ಅಥವಾ ತೆಳುವಾಗಿ ಹಚ್ಚಿ. ಇದರಿಂದ ನಿಮ್ಮ ತ್ವಚೆಗೆ ಅಗತ್ಯವಿರುವಷ್ಟು ಲಭ್ಯವಾಗುವುದು.

2. ಸನ್ ಸ್ಕ್ರೀನ್:

2. ಸನ್ ಸ್ಕ್ರೀನ್:

ಪ್ರತಿ ಋತುವಿನಲ್ಲೂ ಸನ್‌ಸ್ಕ್ರೀನ್ ಅತ್ಯಗತ್ಯವಾಗಿರುತ್ತದೆ. ದಿನವಿಡೀ ಚರ್ಮವು ತೇವಾಂಶ ಮತ್ತು ಜಿಡ್ಡಿನ ಭಾವನೆಯಿಂದ ದೂರವಿರಲು ಜೆಲ್ ಆಧಾರಿತ ವಾಟರ್ ಪ್ರೂಫ್ ಸನ್‌ಸ್ಕ್ರೀನ್ ಬಳಸುವುದು ಅಗತ್ಯವಾಗಿರುತ್ತದೆ. ಮೋಡವಿರುವ ದಿನದಂದು ಸಹ ಯುವಿಎ ಮತ್ತು ಸೂರ್ಯನ ಯುವಿಬಿ ಕಿರಣಗಳಿಂದ ರಕ್ಷಿಸಲು ದಿನಕ್ಕೆ ಎರಡು ಬಾರಿ ಸನ್‌ಸ್ಕ್ರೀನ್ ಹಚ್ಚುವುದು ಮುಖ್ಯವಾಗಿರುತ್ತದೆ. ಇದು ನಮ್ಮ ಮೊಬೈಲ್ ಅಥವಾ ಕಂಪ್ಯೂಡರ್ ನಿಂದ ಹೊರಬರುವ ಹಾನಿಕಾರಕ ನೀಲಿ ಕಿರಣಗಳಿಂದಲೂ ರಕ್ಷಣೆ ನೀಡುವುದು.

3. ಮೇಕಪ್ ಉತ್ಪನ್ನಗಳು:

3. ಮೇಕಪ್ ಉತ್ಪನ್ನಗಳು:

ಮಳೆಗಾಲದಲ್ಲಿ ಮೇಕ್ ಅಪ್ ಬಳಸುವ ಪ್ರಾಡಕ್ಟ್ ಗಳನ್ನು ಕೂಡಾ ಬಹಳ ಜಾಗರೂಕತೆಯಿಂದ ಆರಿಸಬೇಕು. ನೀರನ್ನು ಹಿಡಿದಿಟ್ಟುಕೊಳ್ಳುವಂತಹ ಮೇಕಪ್ ಉತ್ಪನ್ನಗಳನ್ನು ಬಳಸಿ. ಇದರಿಂದ ತೇವಾಂಶದ ಸಮಸ್ಯೆ ಇರುವುದಿಲ್ಲ.

4.ದೇಹದ ತೇವಾಂಶ:

4.ದೇಹದ ತೇವಾಂಶ:

ತೇವಾಂಶವು ಚರ್ಮವನ್ನು ತೇವವಾಗಿಸಲು ಕಾರಣವಾಗುವುದರಿಂದ, ಮುಖದ ಚರ್ಮವನ್ನು ಮಾತ್ರವಲ್ಲದೆ ದೇಹದ ಚರ್ಮವನ್ನೂ ಒಣಗಿಸುವುದು ಮುಖ್ಯ. ಮುಖದಿಂದ ಯಾವುದೇ ಹೆಚ್ಚುವರಿ ತೇವಾಂಶ / ಬೆವರುವಿಕೆಯನ್ನು ಹೀರಿಕೊಳ್ಳಲು ಪುಡಿಯ ಬದಲು ಬ್ಲಾಟಿಂಗ್ ಶೀಟ್‌ಗಳನ್ನು ಬಳಸಬಹುದು. ಅಂಡರ್ ಆರ್ಮ್ಸ್, ತೊಡೆ ಸಂದಿ, ಕುತ್ತಿಗೆಯಡಿಯಲ್ಲಿ ಡಸ್ಟಿಂಗ್ ಪೌಡರ್ನ್ನು ಬಳಸುವುದರಿಂದ ಯಾವುದೇ ಸೋಂಕುಗಳು ಬೆಳೆಯದಂತೆ ತಡೆಯಬಹುದು. .

5. ಕೂದಲ ರಕ್ಷಣೆಗೆ:

5. ಕೂದಲ ರಕ್ಷಣೆಗೆ:

ಈ ಮಾನ್ಸೂನ್ ಸಮಯದಲ್ಲಿ ಕೂದಲು ಒದ್ದೆಯಾಗುವುದರಿಂದ, ಕೂದಲು ಉಬ್ಬಿಕೊಡು, ಕೊಳಕಾದಂತೆ ಕಾಣುತ್ತದೆ. ಆದ್ದರಿಂದ ಚೆನ್ನಾಗಿ ತೊಳೆದು ಒಣಗಿಸಿಕೊಳ್ಳಿ. ನಾವು ಸಾಮಾನ್ಯವಾಗಿ ನೆತ್ತಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡುತ್ತೇವೆ. ಇದರಿಂದ ರಕ್ತಪರಿಚಲನೆ ಸುಧಾರಣೆಯಾಗುವುದು ಆದರೆ ಕೂದಲಿನ ಹೊರಪದರಕ್ಕೆ ಯಾವುದೇ ಲಾಭ ಸಿಗುವುದಿಲ್ಲ. ಆದ್ದರಿಂದ ನೀವು ನಿಮ್ಮ ಕೂದಲನ್ನು ತೊಳೆದ ನಂತರ ಆಂಟಿ ಫ್ರಿಜ್ ಸೀರಮ್ ಬಳಸಿ. ಕೂದಲಿಗೆ ಕಲರಿಂಗ್ ಮಾಡವುದರಿಂದ ಅದು ತನ್ನ ನೈಸರ್ಗಿಕ ಬಣ್ಣ ಮತ್ತು ಕೂದಲಿನ ವಿನ್ಯಾಸವನ್ನು ಕಳೆದುಕೊಂಡಿರುತ್ತದೆ. ಇನ್ನು ಮಳೆಗಾಲದಲ್ಲಿ ಇದರ ಬಣ್ಣ ಮತ್ತಷ್ಟು ಬದಲಾಗಿ, ಆ ಬಣ್ಣಗಳು ಬಣ್ಣವನ್ನು ಕಳೆದುಕೊಳ್ಳುತ್ತವೆ. ಇದಕ್ಕಾಗಿ ಕೂದಲಿನ ಬಣ್ಣವನ್ನು ರಕ್ಷಿಸಲು ರೂಪಿಸಲಾದ ಶ್ಯಾಂಪೂಗಳನ್ನು ದಯವಿಟ್ಟು ಬಳಸಿ. ಪ್ರಯಾಣ ಮಾಡುವಾಗ ನಿಮ್ಮ ಕೂದಲನ್ನು ಮುಚ್ಚಿಕೊಳ್ಳಿ.

English summary

How to Take Care of Your Skin in Monsoon in Kannada

Here we talking about How to Take Care of Your Skin in Monsoon in Kannada, read on
Story first published: Friday, June 11, 2021, 13:12 [IST]
X
Desktop Bottom Promotion