For Quick Alerts
ALLOW NOTIFICATIONS  
For Daily Alerts

ಹೆಚ್ಚಾಗಿ ಮನೆಯೊಳಗೇ ಇರುವುದು ಚರ್ಮಕ್ಕೆ ಒಳ್ಳೆಯದಲ್ಲ

|

ಯಾರೂ ಕೂಡ ಕನಸಿನಲ್ಲೂ ಊಹಿಸದೆ ಇರುವಂತಹ ಪರಿಸ್ಥಿತಿಗೆ ಕೊರೋನಾ ವೈರಸ್ ವಿಶ್ವವನ್ನು ತಳ್ಳಿದೆ. ಕಳೆದ ಎರಡು ತಿಂಗಳಿಂದ ನಾವು ಲಾಕ್ ಡೌನ್ ನಲ್ಲಿ ಇದ್ದೇವೆ ಮತ್ತು ಕೊರೋನಾ ವೈರಸ್ ಭೀತಿಯಿಂದಾಗಿ ಹೊರಗಡೆ ಹೋಗಲು ಹೆದರುತ್ತಿದ್ದೇವೆ.

Staying Inside At Home Is Harmful How?

ಹೀಗಾಗಿ ಮುಂದಿನ ದಿನಗಳಲ್ಲಿ ಏನಾಗುತ್ತದೆಯಾ ಎನ್ನುವ ಭೀತಿಯು ನಮ್ಮನ್ನು ಕಾಡುತ್ತಲಿದೆ. ಹೆಚ್ಚಿನವರು ಕೊರೋನಾ ಸೋಂಕು ಹರಡುವುದು ಬೇಡ ಎನ್ನುವ ಕಾರಣಕ್ಕಾಗಿ ಮನೆಯಿಂದ ಹೊರಗೆ ಬರುತ್ತಲೇ ಇಲ್ಲ.

ಆದರೆ ಇದರಿಂದ ನಮ್ಮ ಚರ್ಮ ಮತ್ತು ಚರ್ಮದ ಆರೈಕೆ ಕಡೆಗೆ ಈ ವೇಳೆ ಹೆಚ್ಚು ಗಮನಹರಿಸಬೇಕು. ಯಾಕೆಂದರೆ ಹೊರಗಡೆ ಹೋಗದೆ ಇದ್ದರೆ ಅದರಿಂದ ಚರ್ಮದ ಮೇಲೆ ಪರಿಣಾಮ ಉಂಟಾಗುತ್ತದೆ.

ನೀಲಿ ಬೆಳಕಿನ ಪರಿಣಮ

ನೀಲಿ ಬೆಳಕಿನ ಪರಿಣಮ

ನೀಲಿ ಬೆಳಕಿನ ದುಷ್ಪರಿಣಾಮದ ಬಗ್ಗೆ ನಿಮಗೆ ತಿಳಿದಿರಬಹುದು. ನಾವು ಬಳಸುವಂತಹ ಲ್ಯಾಪ್ ಟಾಪ್, ಮೊಬೈಲ್, ಟಿವಿ ಮತ್ತು ಟಾಬ್ಲೆಟ್ ಗಳಿಂದ ನೀಲಿ ಬೆಳಕು ಬರುವುದು ಮತ್ತು ಇದು ಚರ್ಮದ ತಡೆಗೋಡೆಯನ್ನು ದುರ್ಬಲಗೊಳಿಸುತ್ತದೆ. ಹೀಗಾಗಿ ವರ್ಣಕುಂದುವುದು ಅಥವಾ ಅಕಾಲಿಕವಾಗಿ ಚರ್ಮವು ನೆರೆಯುವಂತಹ ಲಕ್ಷಣಗಳು ಕಾಣಿಸಬಹುದು. ಕೆಲವೊಂದು ಸಂದರ್ಭದಲ್ಲಿ ಇದು ಚರ್ಮದ ಕ್ಯಾನ್ಸರ್ ಉಂಟು ಮಾಡಬಹುದು.

ಮನೆಯಲ್ಲೇ ದಿನದ ಹೆಚ್ಚಿನ ಸಮಯ ಕಳೆಯುತ್ತಿರುವ ಕಾರಣದಿಂದಾಗಿ ಗ್ಯಾಡ್ಜೆಟ್‌ಗಳ ಬಳಕೆಯು ಹೆಚ್ಚಾಗುತ್ತದೆ ಮತ್ತು ಇದರಿಂದ ಬರುವಂತಹ ನೀಲಿ ಕಿರಣಗಳು ಕೂಡ. ಇದು ಚರ್ಮಕ್ಕೆ ದೊಡ್ಡ ದುಸ್ವಪ್ನವಾಗಿದೆ. ನೀವು ಗಜೆಟ್ ನಿಂದ ದೂರವಿದ್ದಷ್ಟು ಅದು ಚರ್ಮಕ್ಕೆ ಒಳ್ಳೆಯದು. ಕೆಲಸದ ನಿಮಿತ್ತ ನೀವು ಇದನ್ನು ಬಳಸುತ್ತಿದ್ದರೆ ಆಗ ಏನೂ ಮಾಡಲು ಆಗಲ್ಲ. ಆದರೆ ಇದನ್ನು ಫಿಲ್ಟರ್ ಮಾಡುವಂತಹ ಕೆಲವು ಸಾಧನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದನ್ನು ಬಳಸಬಹುದು.

ಒಳಗಡೆ ಇದ್ದರು ಬಿಸಿಲಿನಿಂದ ಚರ್ಮಕ್ಕೆ ಹಾನಿ ಆಗಬಹುದು

ಒಳಗಡೆ ಇದ್ದರು ಬಿಸಿಲಿನಿಂದ ಚರ್ಮಕ್ಕೆ ಹಾನಿ ಆಗಬಹುದು

ಮನೆಯಿಂದ ಹೊರಗಡೆ ಹೋಗದೆ ಇದ್ದರೆ ಆಗ ನಮಗೆ ಸನ್ ಸ್ಕ್ರೀನ್ ಬೇಕಿಲ್ಲವೆನ್ನುವ ಎನ್ನುವ ನಂಬಿಕೆ ಮೇಲೆ ನಾವಿದ್ದೇವೆ. ಆದರೆ ಸೂರ್ಯನ ಕಿರಣಗಳು ಮನೆಯೊಳಗೆ ತಲುಪಿ ಚರ್ಮಕ್ಕೆ ಹಾನಿ ಉಂಟು ಮಾಡಬಹುದು. ಇದು ಗಾಜಿನ ಮೂಲಕ ಒಳಗೆ ಬರಬಹುದು ಅಥವಾ ನೀವು ನಡೆದುಕೊಂಡು ಹೋಗುವ ವೇಳೆ ಕೂಡ ಇದು ಹಾನಿ ಉಂಟು ಮಾಡಬಹುದು. ಹೀಗಾಗಿ ನೀವು ಮನೆಯಲ್ಲಿ ಇರುವ ವೇಳೆ ಸನ್ ಸ್ಕ್ರೀನ್ ಬಳಕೆ ಮಾಡದಿದ್ದರೂ ಚಿಂತಿಲ್ಲವೆಂದು ಭಾವಿಸಬೇಡಿ. ನೀವು ಬೆಳಗ್ಗೆ ಎದ್ದ ಬಳಿಕ ಸನ್ ಸ್ಕ್ರೀನ್ ಹಚ್ಚಿಕೊಳ್ಳಿ.

ಉದಾಸೀನತೆ ನೈಸರ್ಗಿಕ ಕಾಂತಿ ಕುಂದಿಸುವುದು

ಉದಾಸೀನತೆ ನೈಸರ್ಗಿಕ ಕಾಂತಿ ಕುಂದಿಸುವುದು

ಲಾಕ್ ಡೌನ್ ಸಂದರ್ಭದಲ್ಲಿ ಹೆಚ್ಚಿನ ಜನರು ತಮ್ಮ ಚರ್ಮದ ಬಗ್ಗೆ ಹೆಚ್ಚು ಆರೈಕೆ ಮಾಡುವರು. ಆದೇ ರೀತಿಯಾಗಿ ಕೆಲವರು ಉದಾಸೀನತೆ ತೋರಿಸುವರು ಮತ್ತು ಇದರಿಂದ ಚರ್ಮದ ಸರಿಯಾದ ಆರೈಕೆ ಮಾಡುವುದಿಲ್ಲ. ನೀವು ಮಾಡುವಂತಹ ಚರ್ಮದ ಆರೈಕೆಯು ಚರ್ಮಕ್ಕೆ ಒಂದು ಅಭ್ಯಾಸವಾಗಿ ಬಿಟ್ಟಿರುತ್ತದೆ. ಸರಿಯಾಗಿ ಚರ್ಮದ ಆರೈಕೆ ಮಾಡದೆ ಇದ್ದರೆ ಆಗ ಅದರಿಂದ ಚರ್ಮವು ನಿಸ್ತೇಜ ಮತ್ತು ಬಳಲಿದಂತೆ ಕಂಡುಬರುವುದು.

ನೀವು ಮನೆಯಲ್ಲೇ ಇರುವ ಕಾರಣದಿಂದಾಗಿ ಧೂಳು ಮತ್ತು ಕಲ್ಮಷವು ಅಂಟಿಕೊಳ್ಳುವುದಿಲ್ಲವೆಂದು ತಿಳಿದಿದ್ದರೆ ನೀವು ಮತ್ತೊಮ್ಮೆ ಆಲೋಚನೆ ಮಾಡಿ. ನೀವು ಚರ್ಮವನ್ನು ನಿಯಮಿತವಾಗಿ ಸರಿಯಾದ ಕ್ರಮದಲ್ಲಿ ಆರೈಕೆ ಮಾಡಿದರೆ ಅದು ತುಂಬಾ ಒಳ್ಳೆಯದು. ಯಾಕೆಂದರೆ ಚರ್ಮದ ರಂಧ್ರಗಳಲ್ಲಿ ಕಲ್ಮಷವು ತುಂಬಿರುವುದು.

ಏರ್ ಕಂಡೀಷನರ್ ನಿಂದ ಚರ್ಮವು ಒಣಗುವುದು

ಏರ್ ಕಂಡೀಷನರ್ ನಿಂದ ಚರ್ಮವು ಒಣಗುವುದು

ಚರ್ಮವು ತುಂಬಾ ನಿಸ್ತೇಜ ಮತ್ತು ಒಣಗುತ್ತದೆ ಎಂದು ನಿಮಗನಿಸುತ್ತದೆಯಾ? ಹಾಗಾದರೆ ನೀವು ಏರ್ ಕಂಡೀಷನ್ ಕೋಣೆಯಲ್ಲಿ ಕುಳಿತಿರುತ್ತೀರಿ ಎಂದರ್ಥ. ಏರ್ ಕಂಡೀಷನರ್ ನಮಗೆ ತಂಪು ನೀಡಿದರೂ ಅದರಿಂದ ಚರ್ಮವು ಒಣಗುವುದು. ಹೀಗಾಗಿ ದೀರ್ಘಕಾಲ ತನಕ ಏರ್ ಕಂಡೀಷನರ್ ಇರುವ ಕೋಣೆಯಲ್ಲಿ ಕುಳಿತರೆ ಅದು ಚರ್ಮಕ್ಕೆ ಹಾನಿ ಉಂಟು ಮಾಡುವುದು. ಇದು ಚರ್ಮವು ಒಣಗುವಂತೆ ಮಾಡುವುದಲ್ಲದೆ, ತುರಿಕೆ, ಚರ್ಮವು ಎದ್ದೇಳುವುದು ಮತ್ತು ಚರ್ಮವು ಕೆಂಪಾಗುವಂತೆ ಮಾಡುವುದು. ಹೀಗಾಗಿ ಮೊಡವೆ ಸ್ಥಿತಿಯು ಕೆಟ್ಟದಾಗಬಹುದು.

ಮನೆಯಲ್ಲಿ ಏರ್ ಕಂಡೀಷನರ್ ಇದ್ದರೆ ಆಗ ನೀವು ಇದನ್ನು ಗಮನಿಸಿ ಮತ್ತು ಚರ್ಮದ ಆರೈಕೆ ಬಗ್ಗೆ ಗಮನಹರಿಸಿ.

 ನೀವೇ ತಯಾರಿಸುವ ಉತ್ಪನ್ನಗಳು

ನೀವೇ ತಯಾರಿಸುವ ಉತ್ಪನ್ನಗಳು

ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲಿ ಕುಳಿತು ಬೋರ್ ಹೊಡೆಯುವ ಕೆಲವರು ಏನಾದರೂ ಫೇಸ್ ಮಾಸ್ಕ್ ಅಥವಾ ಸ್ಕ್ರಬ್ ತಯಾರಿಸಲು ಪ್ರಯತ್ನಿಸುವರು. ಇದಕ್ಕಾಗಿ ಕೆಲವು ನೈಸರ್ಗಿಕ ಸಾಮಗ್ರಿಗಳನ್ನು ಕೂಡ ಬಳಸುವರು. ಆದರೆ ಇದನ್ನು ಕಣ್ಣುಮುಚ್ಚಿಕೊಂಡು ಬಳಸಿದರೆ ಅದು ಹಾನಿ ಉಂಟು ಮಾಡಬಹುದು. ನೀವು ಇಂತಹ ಯಾವುದೇ ಫೇಸ್ ಮಾಸ್ಕ್ ನ್ನು ತಯಾರಿಸುವ ಮೊದಲು ಅದರ ಬಗ್ಗೆ ಸರಿಯಾದ ಮಾಹಿತಿ ಸಂಗ್ರಹಿಸಿಕೊಳ್ಳಿ.

ಮುಖಕ್ಕೆ ನೀವು ಈ ಫೇಸ್ ಮಾಸ್ಕ್ ನ್ನು ಎಷ್ಟು ಸಲ ಬಳಸುತ್ತಿದ್ದೀರಿ ಎನ್ನುವುದು ಕೂಡ ಮುಖ್ಯವಾಗಿರುವುದು. ಚರ್ಮವು ಅದಾಗಿಯೇ ಪುನಶ್ಚೇತನಗೊಳ್ಳುವುದು. ಆದರೆ ನೀವು ದಿನಾಲೂ ಏನಾದರೂ ಹಚ್ಚಿಕೊಂಡರೆ ಆಗ ಅದರಿಂದ ಹಾನಿ ಆಗುವುದು ಮತ್ತು ಇದು ಚರ್ಮಕ್ಕೆ ಹಾನಿ ಉಂಟು ಮಾಡುವುದು. ಹೀಗಾಗಿ ನೀವು ಇಂತಹ ಮನೆಯಲ್ಲೇ ತಯಾರಿಸುವ ಫೇಸ್ ಮಾಸ್ಕ್ ಗಳ ಬಗ್ಗೆ ಸರಿಯಾದ ಮಾಹಿತಿ ತಿಳಿಯಿರಿ.

English summary

How Staying Indoors Affects Our Skin

Here we have explained staying inside too much is not good for your skin, here is side effect of staying indoor too much time, Read on.
X
Desktop Bottom Promotion