For Quick Alerts
ALLOW NOTIFICATIONS  
For Daily Alerts

ಈ ಆಹಾರಗಳು ನಿಮ್ಮ ತ್ವಚೆಗೆ ಸಕತ್ ಹೊಳಪು ನೀಡುವುದು

|

ಮೇಕಪ್‌ ಮಾಡಲು ಇಷ್ಟ ಪಡುವವರು, ಪಡದವರು, ಪುರುಷ, ಮಹಿಳೆ ಯಾರೇ ಆಗಿರಲಿ ತ್ವಚೆಯಲ್ಲಿ ಬೇಗನೆ ನೆರಿಗೆ ಬಿದ್ದು, ವಯಸ್ಸಾದವರಂತೆ ಕಾಣುವುದನ್ನು ಇಷ್ಟ ಪಡುವುದಿಲ್ಲ.

Super Diet Tips For Glowing Skin

ಸಾಮಾನ್ಯವಾಗಿ ಹದಿಹರೆಯದ ವಯಸ್ಸಿನಲ್ಲಿ ತ್ವಚೆ ಕಡೆ ಅಷ್ಟಾಗಿ ಗಮನ ಕೊಡುವುದಿಲ್ಲ, ಅದೇ ವಯಸ್ಸು 30 ದಾಟುತ್ತಿದ್ದಂತೆ ನಮ್ಮ ತ್ವಚೆ ಡ್ರೈಯಾಗುತ್ತದೆ, ಕಣ್ಣಿನ ಪಕ್ಕ ನೆರಿಗೆಗಳು ಬೀಳಲು ಪ್ರಾರಂಭಿಸುತ್ತದೆ, ನಮ್ಮ ವಯಸ್ಸು ಮುಖದಲ್ಲಿ ಗೋಚರಿಸಲಾರಂಭಿಸುತ್ತದೆ.

ಆದರೆ ನೀವು ತೆಗೆದುಕೊಳ್ಳುವ ಆಹಾರದಲ್ಲಿ ಇಲ್ಲಿ ನೀಡಿರುವ ಈ ಆಹಾರಗಳನ್ನು ಸೇವಿಸಿದ್ದೇ ಆದರೆ ವಯಸ್ಸು 30-40 ಆಗಲಿ, ನಿಮ್ಮ ತ್ವಚೆ ಮಾತ್ರ 25ರ ಚೆಲುವಿನಿಂದ ಕಂಗೊಳಿಸುವುದು. ನಾವಿಲ್ಲಿ ಮಿಸಸ್‌ ಫೇಸ್‌ ಆಫ್‌ ಸೌತ್ ವಿನ್ನರ್‌ ಆಗಿರುವ ಅಂಜಲಿರಾವ್‌ ಅವರು ನೀಡಿರುವ ಡಯಟ್‌ ಸೀಕ್ರೆಟ್‌ ಅನ್ನು ಇಲ್ಲಿ ಹೇಳಿದ್ದೇವೆ. ನೀವು ಈ ರೀತಿ ಮಾಡಿದ್ದೇ ಕೆಲವೇ ತಿಂಗಳಿನಲ್ಲಿ ನಿಮ್ಮ ತ್ವಚೆಯಲ್ಲಿ ಹೊಳಪು ಹೆಚ್ಚುವುದು 100% ಗ್ಯಾರಂಟಿ.

ಮುಖದ ನೆರಿಗೆ ತಡೆಗಟ್ಟಲು 7 ಸೂಪರ್ ಡಯಟ್ ಟಿಪ್ಸ್

1. ನೀರು:

1. ನೀರು:

ನಿಮ್ಮ ತ್ವಚೆ ಆಕರ್ಷಕವಾಗಿ ಕಾಣಬೇಕೆಂದರೆ ಮೊದಲಿಗೆ ನೀವು ಮಾಡಬೇಕಾಗಿರುವುದು ನೀರು ಕುಡಿಯಬೇಕು. ದಿನದಲ್ಲಿ 8 ಲೋಟ ಣೀರು ಕುಡಿಯಬೇಕು. ಬರೀ ನೀರು ಕುಡಿಯಲು ಬೋರ್‌ ಎನ್ನುವವರು ಅದಕ್ಕೆ ಅರಿಶಿಣ ಅಥವಾ ತರಕಾರಿ, ಕಿತ್ತಳೆ ಹೀಗೆ ಯಾವುದಾದರೂ ಫ್ಲೇವರ್‌ ಸೇರಿಸಿ ಕುಡಿಯಬಹುದು. ಹೀಗೆ ಮಾಡುವುದರಿಂದ ಅವುಗಳ ಪೌಷ್ಠಿಕಾಂಶವೂ ದೊರೆಯುವುದರಿಂದ ತ್ವಚೆಯ ಹೊಳಪು ಹೆಚ್ಚುತ್ತದೆ. ನೀರು ಕುಡಿಯುವುದರಿಂದ ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕಲೂ ಸಹಕಾರಿ ಅಲ್ಲದೆ ಜೀರ್ಣಕ್ರಿಯೆಗೂ ತುಂಬಾ ಒಳ್ಳೆಯದು. ನಿಮ್ಮ ಆರೋಗ್ಯ ಹಾಗೂ ಸೌಂದರ್ಯ ವೃದ್ಧಿಗೆ ನೀರು ಕುಡಿಯಲೇಬೇಕು.

2. ಆಯುರ್ವೇದ:

2. ಆಯುರ್ವೇದ:

1. ಅಶ್ವಗಂಧ ನಮ್ಮ ಸೌಂದರ್ಯ ವೃದ್ಧಿಸುವಲ್ಲಿ ತುಂಬಾನೇ ಸಹಕಾರಿ, ಇದು ಮುಖದಲ್ಲಿ ಬೇಗನೆ ನೆರಿಗೆ ಬೀಳುವುದನ್ನು ತಡೆಗಟ್ಟುತ್ತದೆ. ದಿನದಲ್ಲಿ ಅರ್ಧ ಟೀ ಸ್ಪೂನ್ ಅಶ್ವಗಂಧ ಪುಡಿ ತೆಗೆದುಕೊಂಡರೆ ಸಾಕು. ಇದನ್ನು ಜೇನಿನಲ್ಲಿ ಅಥವಾ ನೀರಿನಲ್ಲಿ ಕಲೆಸಿ ತೆಗೆದುಕೊಳ್ಳಬಹುದು.

2. ಆಮ್ಲ ಪುಡಿ: ನೆಲ್ಲಿಕಾಯಿ ಒಣಗಿಸಿ ಮಾಡಿರುವ ಪುಡಿಯನ್ನು ಅರ್ಧ ಚಮಚ ತೆಗೆದುಕೊಂಡು ಅದನ್ನು ಒಂದು ಲೋಟ ಬಿಸಿ ನೀರಿನಲ್ಲಿ ಕಲೆಸಿ ಕುಡಿಯುವುದು ಕೂಡ ನಿಮ್ಮ ತ್ವಚೆಗೆ ತುಂಬಾನೇ ಒಳ್ಳೆಯದು.

3. ಬಣ್ಣದ ತರಕಾರಿಗಳು

3. ಬಣ್ಣದ ತರಕಾರಿಗಳು

ತರಕಾರಿಗಳು ಆರೋಗ್ಯಕ್ಕೆ ಅವಶ್ಯಕ ಎಂಬುವುದು ನಮಗೆಲ್ಲರಿಗೂ ಗೊತ್ತು, ಆದರೆ ನೀವು ನಿಮ್ಮ ತ್ವಚೆ ಸೌಂದರ್ಯ ಹೆಚ್ಚಿಸಲು ಬಯಸುವುದಾದರೆ ಅವುಗಳಲ್ಲಿ ಕೆಲವೊಂದು ತರಕಾರಿಗಳನ್ನು ಹೆಚ್ಚು ಬಳಸಬೇಕು. ಅದರಲ್ಲೂ ಅಧಿಕ ಬಣ್ಣದ ಅಂದರೆ ಕ್ಯಾರೆಟ್, ಬೀಟ್‌ರೂಟ್, ಕೆಂಪು, ಹಸಿರು, ಹಳದಿ ದುಂಡು ಮೆಣಸು ಇವುಗಳನ್ನು ಹೆಚ್ಚಾಗಿ ತಿನ್ನಿ. ಇದು ನಿಮ್ಮ ತ್ವಚೆಯ ಹೊಳಪು ಹೆಚ್ಚಿಸುತ್ತದೆ.

 4. ವಾಲ್ನಟ್

4. ವಾಲ್ನಟ್

ದಿನದಲ್ಲಿ 3-4 ವಾಲ್ನಟ್‌ ತಿನ್ನಿ, ಇದು ತ್ವಚೆ ಹೊಳಪು ಹೆಚ್ಚಿಸಲು ತುಂಬಾನೇ ಸಹಕಾರಿ. ನೀವು ವಾಲ್ನಟ್‌ ಒಂದು ವಾರ ತೆಗೆದುಕೊಂಡರೆ ನಿಮ್ಮ ತ್ವಚೆಯಲ್ಲಿರುವ ಬದಲಾವಣೆಯನ್ನು ಗಮನಿಸಬಹುದು. ಹೆಚ್ಚು ವಾಲ್ನಟ್‌ ತಿನ್ನಬೇಡಿ, ಏಕೆಂದರೆ ಇದರಲ್ಲಿ ಕ್ಯಾಲೋರಿ ಕೂಡ ಅಧಿಕವಿರುವುದರಿಂದ 3-4 ತಿನ್ನುವುದು ಒಳ್ಳೆಯದು. ನಿಮ್ಮ ತ್ವಚೆ ಈಗಾಗಲೇ ಹಾಳಾಗಿದ್ದರೂ ಅದನ್ನು ಸರಿಪಡಿಸುವಲ್ಲಿ ತುಂಬಾನೇ ಸಹಕಾರಿ. ಇದು ತ್ವಚೆ,ಕೂದಲು ಹಾಗೂ ನಮ್ಮ ಜ್ಞಾಪಕ ಶಕ್ತಿಗೆ ತುಂಬಾನೇ ಒಳ್ಳೆಯದು.

ಇದನ್ನು ಒಂದೆರಡು ದಿನ ಮಾಡಿ ಬಿಡಬೇಡಿ, ಪ್ರತಿದಿನ ತಿನ್ನಬೇಕು.

5. ಕೊತ್ತಂಬರಿ ಸೊಪ್ಪು

5. ಕೊತ್ತಂಬರಿ ಸೊಪ್ಪು

ನಾವೆಲ್ಲಾ ಸಾಮಾನ್ಯವಾಗಿ ಕೊತ್ತಂಬರಿ ಸೊಪ್ಪನ್ನು ಬಳಸುತ್ತೇವೆ, ಆದರೆ ನಿಮ್ಮ ತ್ವಚೆಯ ಹೊಳಪು ಹೆಚ್ಚಿಸಲು ಹೇಗೆ ಬಳಸಬೇಕೆಂದು ಗೊತ್ತೇ? ಹೌದು ದಿನಾ ಬೆಳಗ್ಗೆ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಜಗಿಯಿರಿ, ಇನ್ನು ಇದರಿಂದ ಚಟ್ನಿ ಮಾಡಿ ತಿನ್ನಿ. ಹೀಗೆ ಮಾಡುವುದರಿಂದ ತ್ವಚೆಗೆ ತುಂಬಾ ಒಳ್ಳೆಯದು. ಇದು ಎಣ್ಣೆ ತ್ವಚೆ, ಒಣ ತ್ವಚೆ ಹೀಗೆ ಎಲ್ಲಾ ಬಗೆಯ ತ್ವಚೆಯವರಿಗೆ ತುಂಬಾ ಒಳ್ಳೆಯದು. ಇನ್ನು ಮುಖದಲ್ಲಿ ಪಿಗ್ಮೆಂಟೇಷನ್ ಸಮಸ್ಯೆಯಿದ್ದರೆ ಇದನ್ನು ತಿನ್ನುವುದರಿಂದ ಅದು ಮಾಯವಾಗುವುದು.

6. ಕೆಂಪಕ್ಕಿ ಅನ್ನ

6. ಕೆಂಪಕ್ಕಿ ಅನ್ನ

ಇನ್ನು ನೀವು ಕೆಂಪಕ್ಕಿ ಅನ್ನ ತಿನ್ನುವುದು ಕೂಡ ತ್ವಚೆಗೆ ತುಂಬಾ ಒಳ್ಳೆಯದು. ಬೆಳ್ತಕ್ಕಿ ಅಥವಾ ಪಾಲಿಷ್ ಮಾಡಿದ ಅಕ್ಕಿಗಿಂತ , ಪಾಲಿಷ್‌ ಮಾಡಿರದ ಕೆಂಪಕ್ಕಿ ಅನ್ನ ತಿನ್ನುವುದರಿಂದ ಇದರಲ್ಲಿ ಪ್ರೊಟೀನ್ ಹಾಗೂ ನಾರಿನಂಶ ಅಧಿಕವಿರುವುದರಿಂದ ತ್ವಚೆಗೆ ತುಂಬಾ ಒಳ್ಳೆಯದು, ಇದು ತ್ವಚೆಯ ಹೊಳಪನ್ನು ಹೆಚ್ಚಿಸುವುದು.

 7. ಹಣ್ಣುಗಳು

7. ಹಣ್ಣುಗಳು

ಇನ್ನು ಕಲ್ಲಂಗಡಿ ಹಣ್ಣು, ಕಿತ್ತಳೆ ಹೀಗೆ ಎಲ್ಲಾ ಬಗೆಯ ಹಣ್ಣುಗಳು ಕೂಡ ತ್ವಚೆಯ ಸೌಂದರ್ಯ ಕಾಪಾಡುವಲ್ಲಿ ತುಂಬಾನೇ ಸಹಕಾರಿ. ದಿನದಲ್ಲಿ 2-3 ಬಗೆಯ ಹಣ್ಣುಗಳನ್ನು ಆಹಾರಕ್ರಮದಲ್ಲಿದ್ದರೆ ದೇಹಕ್ಕೆ ಬೇಕಾದ ಪೋಷಕಾಂಶಗಳು ದೊರೆಯುತ್ತವೆ, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

English summary

Healthy Diet Tips For Glowing Skin

If you want to have young skin after 30 also then better to follow these tips, here are super diet tips to get glowing skin, Read on
X
Desktop Bottom Promotion