For Quick Alerts
ALLOW NOTIFICATIONS  
For Daily Alerts

ತ್ವಚೆ ಕಳೆಗುಂದಿದೆಯೇ ಈ ಮನೆಮದ್ದುಗಳನ್ನು ಟ್ರೈ ಮಾಡಿ

|

ಶುಭ್ರವಾದ ಮತ್ತು ಲಕಲಕನೇ ಹೊಳೆಯುವ ಕಾಂತಿಯುಕ್ತವಾದ ತ್ವಚೆಯು ಆರೋಗ್ಯವಂತಿಕೆಯ ಲಕ್ಷಣವಾಗಿದ್ದು, ಅಂತಹ ತ್ವಚೆಯ ಆರೈಕೆಯು ಸಾಕಷ್ಟು ದಕ್ಷತೆಯನ್ನು ಬೇಡುತ್ತದೆ. ಮಾಲಿನ್ಯಕ್ಕೆ ಹಾಗೂ ಸೂರ್ಯನ ನೇರಳಾತೀತ ಕಿರಣಗಳಿಗೆ ತ್ವಚೆಯನ್ನು ಪದೇ ಪದೇ ಒಡ್ಡಿಕೊಳ್ಳುವುದು ಮತ್ತು ಅಪೌಷ್ಟಿಕ ಆಹಾರಸೇವನೆಯು ತ್ವಚೆಗೆ ಸಂಬಂಧಿಸಿದ ತೊಂದರೆಗಳನ್ನು ತೀವ್ರಗೊಳಿಸುತ್ತದೆ. ಹೀಗಾದಾಗ, ನಿಮ್ಮ ತ್ವಚೆಯು ತನ್ನ ನೈಸರ್ಗಿಕ ಕಾಂತಿ ಮತ್ತು ವಿನ್ಯಾಸವನ್ನು ಕಳೆದುಕೊಳ್ಳುತ್ತದೆ. ತ್ವಚೆಗೆ ಈ ರೀತಿಯಾಗಿ ಉಂಟಾಗುವ ನಷ್ಟವನ್ನು ಸರಿದೂಗಿಸುವುದಕ್ಕೆಂದು ಅನೇಕ ಬಾರಿ, "ತ್ವಚೆಯನ್ನು ಕಾಂತಿಯುಕ್ತಗೊಳಿಸುತ್ತದೆ" ಎಂಬ ಜಾಹೀರಾತನ್ನು ಹೊತ್ತ, ವಾಣಿಜ್ಯಾತ್ಮಕ ಮತ್ತು ರಾಸಾಯನಿಕ ವಸ್ತುಗಳನ್ನೊಳಗೊಂಡ ಉತ್ಪನ್ನಗಳನ್ನು ಬಳಸಲು ನೀವು ಮುಂದಾಗುವಿರಿ. ಹೀಗೆ ಮಾಡಿದಲ್ಲಿ ನಿಮ್ಮ ತ್ವಚೆಗೆ ಅನುಕೂಲವಾಗುವುದಕ್ಕಿಂತಲೂ ಇನ್ನಷ್ಟು ಹಾನಿಯಾಗುವ ಸಂಭವವೇ ಹೆಚ್ಚು. ಏಕೆಂದರೆ, ಆ ಉತ್ಪನ್ನಗಳಲ್ಲಿರಬಹುದಾದ ರಾಸಾಯನಿಕ ವಸ್ತುಗಳು ಅಡ್ಡ ಪರಿಣಾಮಗಳನ್ನುಂಟು ಮಾಡುತ್ತವೆ.
ಆದ್ದರಿಂದ ನಾವಿಲ್ಲಿ ತ್ವಚೆಗೆ ಹಾನಿಯಾದಂತಹ ನೈಸರ್ಗಿಕ ಮನೆಮದ್ದುಗಳ ಮೂಲಕ ಚರ್ಮವನ್ನು ಕಾಂತಿಯುಕ್ತಗೊಳಿಸುವುದು ಹೇಗೆ ಎಂಬುದನ್ನು ನಿಮಗೆ ತಿಳಿಸಿ ಕೊಡಲಿದ್ದೇವೆ.

home remedies for Dull Skin

ತ್ವಚೆಯನ್ನು ಕಾಂತಿಯುಕ್ತಗೊಳಿಸುವುದಕ್ಕೆ ನೈಸರ್ಗಿಕ ಪರಿಹಾರೋಪಾಯಗಳು

1. ಲಿಂಬೆ

1. ಲಿಂಬೆ

ಲಿಂಬೆಯು ವಿಟಮಿನ್ ಸಿ ಅಥವಾ ಆಸ್ಕಾರ್ಬಿಕ್ ಆಮ್ಲದ ಒಂದು ಸಮೃದ್ಧ ಮೂಲವಾಗಿದೆ. ವಿಟಮಿನ್ ಸಿ ಯ ಒಂದು ವೈಶಿಷ್ಟ್ಯವೇನೆಂದರೆ ಇದಕ್ಕೆ ವರ್ಣ-ಪ್ರತಿಬಂಧಕ ಗುಣಲಕ್ಷಣವಿದೆ. ಆದ್ದರಿಂದ ಇದು ತ್ವಚೆಯ ಗೌರವರ್ಣವನ್ನು ಸುಧಾರಿಸುವಲ್ಲಿ ಹಾಗೂ ತ್ವಚೆಯನ್ನು ಕಾಂತಿಯುಕ್ತಗೊಳಿಸುವಲ್ಲಿ ನೆರವಾಗುತ್ತದೆ.

ನೀವು ಮಾಡಬೇಕಾದುದೇನು ?

ಲಿಂಬೆಹಣ್ಣೊಂದನ್ನು ಹಿಂಡಿ ಅದರ ರಸವನ್ನು ಬಟ್ಟಲೊಂದರಲ್ಲಿ ಸಂಗ್ರಹಿಸಿರಿ.

ಒಂದು ಸ್ವಚ್ಛ ಹತ್ತಿಯ ಉಂಡೆಯನ್ನು ಬಳಸಿಕೊಂಡು ಆ ರಸವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿರಿ.

15 ರಿಂದ 20 ನಿಮಿಷಗಳ ಕಾಲ ಅದನ್ನು ಹಾಗೆಯೇ ಮುಖದ ಮೇಲೆ ಹಾಗೆಯೇ ಇರಲಿ, ಬಳಿಕ ನೀರಿನಿಂದ ತೊಳೆದು ತೆಗೆಯಿರಿ.

ಹೀಗೆ ವಾರಕ್ಕೆರಡು ಬಾರಿ ಮಾಡಿಕೊಳ್ಳಿರಿ.

ಎಚ್ಚರಿಕೆ: ಲಿಂಬೆಯ ರಸವು ನಿಮ್ಮ ತ್ವಚೆಗೆ ಚುಚ್ಚುವ ಅಥವಾ ಉರಿಯುವ ಅನುಭವವನ್ನುಂಟು ಮಾಡುವ ಸಾಧ್ಯತೆ ಇದೆ. ಆದ್ದರಿಂದ, ಮೇಲಿನ ಕ್ರಮವನ್ನು ಕೈಗೊಳ್ಳುವುದಕ್ಕೆ ಮೊದಲು, ಮುಖದ ಒಂದು ಸಣ್ಣ ಭಾಗದ ಮೇಲೆ ಪರೀಕ್ಷೆಯನ್ನು ಕೈಗೊಳ್ಳಿರಿ. ಲಿಂಬೆ ರಸವು ಸೂರ್ಯರಶ್ಮಿಗೆ ನಿಮ್ಮ ತ್ವಚೆಯನ್ನು ಸಂವೇದನಾಶೀಲವನ್ನಾಗಿಸುವ ಸಾಧ್ಯತೆ ಇರುವುದರಿಂದ, ನೀವು ಹೊರಗೆ ಹೋಗುವುದಕ್ಕೆ ಮೊದಲು ಸನ್ ಸ್ಕ್ರೀನ್ ಅನ್ನು ಲೇಪಿಸಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಿರಿ.

2. ಸಕ್ಕರೆಯ ಲೇಪನ

2. ಸಕ್ಕರೆಯ ಲೇಪನ

ಸಕ್ಕರೆಯು ಅಲ್ಪಪ್ರಮಾಣದಲ್ಲಿ ಅಪಘರ್ಷಕ (ಅಬ್ರೆಸ್ಸಿವ್) ಗುಣಧರ್ಮವನ್ನು ಹೊಂದಿರುವುದರಿಂದ, ಅದು ಶುಷ್ಕ ತ್ವಚೆಯ ಮತ್ತು ಮೃತ ತ್ವಚೆಯ ಕೋಶಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗಬಲ್ಲದು. ಹೀಗಾದಾಗ, ನಿಮ್ಮ ತ್ವಚೆಯು ಕಾಂತಿಯುಕ್ತವಾಗಿ ಕಂಗೊಳಿಸಬಲ್ಲದು.

ನೀವು ಮಾಡಬೇಕಾದುದೇನು ?

ಡಬ್ಬಿಯೊಂದನ್ನು ತೆಗೆದುಕೊಳ್ಳಿರಿ ಹಾಗೂ ಅದಕ್ಕೆ ಒಲೀವ್ ಎಣ್ಣೆ ಮತ್ತು ಜೇನುತುಪ್ಪವನ್ನು ಹಾಕಿರಿ.

ಇದಕ್ಕೆ ಅರ್ಧ ಕಪ್ ನಷ್ಟು ಕಂದು ಸಕ್ಕರೆಯನ್ನು ಸೇರಿಸಿರಿ ಹಾಗೂ ಚೆನ್ನಾಗಿ ಮಿಶ್ರಗೊಳಿಸಿರಿ.

ಶುಷ್ಕ ಹಾಗೂ ಮೃತ ಜೀವಕೋಶಗಳನ್ನು ತೊಡೆದು ಹಾಕುವ ದಿಶೆಯಲ್ಲಿ, ಈ ಮಿಶ್ರಣದೊಂದಿಗೆ ನಿಮ್ಮ ಮುಖವನ್ನು ಮೇಲೆ ವೃತ್ತಾಕಾರವಾಗಿ ಉಜ್ಜಿರಿ.

4 ರಿಂದ 5 ನಿಮಿಷಗಳ ಬಳಿಕ, ನೀರಿನಿಂದ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿರಿ.

ಈ ರೀತಿಯಾಗಿ ನೀವು ವಾರಕ್ಕೆರಡು ಬಾರಿ ಮಾಡಿಕೊಳ್ಳಬಹುದು.

3. ಜೇನುತುಪ್ಪ

3. ಜೇನುತುಪ್ಪ

ಜೇನುತುಪ್ಪವು ಫ್ರಕ್ಟೋಸ್, ಗ್ಲುಕೋಸ್, ಹಾಗೂ ಆಲ್ಫಾ-ಹೈಡ್ರಾಕ್ಸಿ ಆಮ್ಲಗಳನ್ನೊಳಗೊಂಡಿದ್ದು ಇವು ತ್ವಚೆಯು ಗಾಢವಾದ ಕಪ್ಪುವರ್ಣದತ್ತ ತಿರುಗುವ ಪ್ರಮಾಣವನ್ನು ತಗ್ಗಿಸುತ್ತವೆ ಹಾಗೂ ಆ ಮೂಲಕ ನಿಮ್ಮ ತ್ವಚೆಯು ಹೆಚ್ಚು ಕಾಂತಿಯುಕ್ತವಾಗಿ ಹಾಗೂ ಹೆಚ್ಚು ತಾರುಣ್ಯಭರಿತವಾಗಿ ಕಾಣುವಂತೆ ಮಾಡುತ್ತವೆ.

ನೀವು ಮಾಡಬೇಕಾದುದೇನು ?

ಲಿಂಬೆ ಹಣ್ಣೊಂದನ್ನು ಹಿಂಡಿ ಅದರ ರಸವನ್ನು ಸಂಗ್ರಹಿಸಿರಿ.

ಇದಕ್ಕೆ ಒಂದು ಟೇಬಲ್ ಚಮಚದಷ್ಟು ಜೇನುತುಪ್ಪವನ್ನು ಸೇರಿಸಿರಿ ಹಾಗೂ ಚೆನ್ನಾಗಿ ಮಿಶ್ರಗೊಳಿಸಿರಿ.

ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿರಿ ಹಾಗೂ ಅದನ್ನು 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಇರಗೊಡಿರಿ.

ಬಳಿಕ ನೀರಿನಿಂದ ಚೆನ್ನಾಗಿ ತೊಳೆಯಿರಿ.

ವಾರಕ್ಕೆರಡು ಬಾರಿ ಇದನ್ನು ಪುನರಾವರ್ತಿಸಿರಿ.

ಎಚ್ಚರಿಕೆ: ಲಿಂಬೆಯ ರಸವು ನಿಮ್ಮ ತ್ವಚೆಗೆ ಚುಚ್ಚುವ ಅಥವಾ ಉರಿಯುವ ಅನುಭವವನ್ನುಂಟು ಮಾಡುವ ಸಾಧ್ಯತೆ ಇದೆ. ಆದ್ದರಿಂದ, ಮೇಲಿನ ಕ್ರಮವನ್ನು ಕೈಗೊಳ್ಳುವುದಕ್ಕೆ ಮೊದಲು, ಮುಖದ ಒಂದು ಸಣ್ಣ ಭಾಗದ ಮೇಲೆ ಪರೀಕ್ಷೆಯನ್ನು ಕೈಗೊಳ್ಳಿರಿ.

4. ಚಾಕೊಲೇಟ್ ಮಾಸ್ಕ್

4. ಚಾಕೊಲೇಟ್ ಮಾಸ್ಕ್

ಚಾಕೊಲೇಟ್ ಅನ್ನು ಕೋಕೋವಾ ಬೀನ್ ಗಳಿಂದ ಮಾಡಲಾಗುತ್ತದೆ. ಉತ್ಕರ್ಷಕಾರಕ ಒತ್ತಡವನ್ನು ತಟಸ್ಥಗೊಳಿಸುವ ದಿಶೆಯಲ್ಲಿ ನೆರವಾಗಬಲ್ಲ ಆಂಟಿ-ಆಕ್ಸಿಡೆಂಟ್ ಗುಣಧರ್ಮಗಳನ್ನು ಕೋಕೋವಾ ತೋರಿಸಿಕೊಟ್ಟಿದೆ. ಇದರರ್ಥವೇನೆಂದರೆ ಇದು ತ್ವಚೆಯ ಜೀವಕೋಶಗಳ ನಷ್ಟವಾಗುವಿಕೆಯನ್ನು ಹಾಗೂ ತ್ವಚೆಯು ಕಳಾಹೀನವಾಗುವುದನ್ನು ತಗ್ಗಿಸುವ ದಿಶೆಯಲ್ಲಿ ನೆರವಾಗಬಲ್ಲದು.

ನೀವು ಮಾಡಬೇಕಾದುದೇನು ?

ಕಡುವರ್ಣದ ಚಾಕೊಲೇಟ್ ಬಾರ್ (ಉದ್ದನೆಯ ಆಯತಾಕಾರದ ತುಣುಕು)ಗಳನ್ನು ಕರಗಿಸಿರಿ.

ಕರಗಿದ ಚಾಕೊಲೇಟ್ ಗೆ ಒಂದು ಟೇಬಲ್ ಚಮಚದಷ್ಟು ಹಾಲನ್ನು ಹಾಗೂ ಕೆಲಹನಿಗಳಷ್ಟು ಜೇನುತುಪ್ಪವನ್ನು ಸೇರಿಸಿರಿ.

ಅವನ್ನು ಚೆನ್ನಾಗಿ ಮಿಶ್ರಗೊಳಿಸಿರಿ ಹಾಗೂ ಮಿಶ್ರವನ್ನು ತಣ್ಣಗಾಗಗೊಡಿರಿ.

ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಾಗೂ ಕುತ್ತಿಗೆಗೆ ಲೇಪಿಸಿರಿ ಮತ್ತು 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಇರಗೊಡಿರಿ.

ನೀರಿನಿಂದ ಚೆನ್ನಾಗಿ ತೊಳೆದು ತೆಗೆಯಿರಿ.

ಈ ಫೇಸ್ ಮಾಸ್ಕ್ ಅನ್ನು ನೀವು ಪ್ರತೀ ವಾರಕ್ಕೊಮ್ಮೆ ಬಳಸಬಹುದು.

5. ಅಲೊವೆರಾ

5. ಅಲೊವೆರಾ

ಲೋಳೆಸರವು ಅಲೋಯಿನ್ ಅನ್ನು ಒಳಗೊಂಡಿದ್ದು, ಇದು ಟೈರೋಸಿನೇಸ್ ಮಂದಕದ ರೀತಿಯಲ್ಲಿ ಕಾರ್ಯಾಚರಿಸುತ್ತದೆ ಹಾಗೂ ತ್ವಚೆಯು ಗಾಢ ಕಪ್ಪುವರ್ಣಕ್ಕೆ ತಿರುಗುವುದರ ಪರಿಣಾಮಗಳನ್ನು ಹಿಮ್ಮುಖವಾಗಿಸುವ ದಿಶೆಯಲ್ಲಿ ನೆರವಾಗುತ್ತದೆ. ಪ್ರತಿಯಾಗಿ ಈ ಪ್ರಕ್ರಿಯೆಯು ಕಳಾಹೀನ ತ್ವಚೆಯನ್ನು ಕಾಂತಿಯುಕ್ತವನ್ನಾಗಿಸುವ ದಿಶೆಯಲ್ಲಿ ನೆರವಾಗುತ್ತದೆ.

ನೀವು ಮಾಡಬೇಕಾದುದೇನು ?

ಲೋಳೆಸರದ ಎಲೆಯೊಂದನ್ನು ಕತ್ತರಿಸುವುದರ ಮೂಲಕ ಅದರಿಂದ ಸ್ರವಿಸಲ್ಪಡುವ ದಪ್ಪಸೋನೆಯನ್ನು ಸಂಗ್ರಹಿಸಿರಿ.

ಒಂದು ದೊಡ್ಡ ಚಮಚದಷ್ಟು ದಪ್ಪಸೋನೆಯನ್ನು ಒಂದು ಚಿಕ್ಕ ಚಮಚದಷ್ಟು ಕಂದುಸಕ್ಕರೆಯೊಂದಿಗೆ ಬೆರೆಸಿರಿ.

ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಾಗೂ ಕುತ್ತಿಗೆಗೆ ಲೇಪಿಸಿರಿ ಮತ್ತು ನೀರಿನಿಂದ ಚೆನ್ನಾಗಿ ತೊಳೆದು ತೆಗೆಯಿರಿ.

ಹೀಗೆ ವಾರಕ್ಕೆರಡು ಬಾರಿ ಕೈಗೊಳ್ಳಿರಿ.

6. ಗಿಣ್ಣು

6. ಗಿಣ್ಣು

ತ್ವಚೆಗೆ ಸಂಬಂಧಿಸಿದ ಅನಾರೋಗ್ಯ ಪರಿಸ್ಥಿತಿಗಳನ್ನು ಉಪಚರಿಸುವುದಕ್ಕೆಂದು ಸಾಂಪ್ರದಾಯಿಕ ಜೌಷಧದಲ್ಲಿ ವ್ಯಾಪಕವಾಗಿ ಬಳಸಲಾಗುವ ಒಂದು ಜನಪ್ರಿಯ ಉತ್ಪನ್ನವೇ ಈ ಗಿಣ್ಣು. ಟೈರೋಸಿನೇಸ್ ನ ಚಟುವಟಿಕೆಯನ್ನು ಮಂದಗತಿಗೊಳಿಸುವ ಎಲ್ - ಸಿಸ್ಟೀನ್ ಎಂಬ ಸಂಯುಕ್ತವೊಂದರ ನೈಸರ್ಗಿಕ ಮೂಲವಾಗಿದೆ ಈ ಗಿಣ್ಣು. ತ್ವಚೆಯು ಕಡುಕಪ್ಪು ಬಣ್ಣಕ್ಕೆ ತಿರುಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುವಲ್ಲಿ ಇದು ನೆರವಾಗುತ್ತದೆ ಹಾಗೂ ಕಳಾಹೀನ ತ್ವಚೆಯನ್ನು ಕಾಂತಿಯುತವನ್ನಾಗಿಸುತ್ತದೆ.

ನೀವು ಮಾಡಬೇಕಾದುದೇನು?

ಅರ್ಧ ಕಪ್ ನಷ್ಟು ಗಿಣ್ಣನ್ನೂ ಮತ್ತು ಒಂದು ದೊಡ್ಡ ಚಮಚದಷ್ಟು ಜೇನುತುಪ್ಪವನ್ನೂ ಬೆರೆಸಿರಿ.

ಮಿಶ್ರಣವನ್ನು ನಿಮ್ಮ ಮುಖದ ಹಾಗೂ ಕುತ್ತಿಗೆಯ ಮೇಲೆ ಲೇಪಿಸಿಕೊಳ್ಳಿರಿ.

15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಇರಗೊಡಿರಿ ಹಾಗೂ ಬಳಿಕ ನೀರಿನಿಂದ ಚೆನ್ನಾಗಿ ತೊಳೆದು ತೆಗೆಯಿರಿ.

ಹೀಗೆ ನೀವು ವಾರಕ್ಕೆರಡು ಬಾರಿ ಮಾಡಬಹುದು.

7. ಸೌತೆಕಾಯಿ

7. ಸೌತೆಕಾಯಿ

ಸೌತೆಕಾಯಿಯು ವಿಟಮಿನ್ ಸಿ ಯ ಮತ್ತು ಟೈರೋಸಿನೇಸ್ ನ ಕಾರ್ಯಚಟುವಟಿಕೆಯನ್ನು ತಗ್ಗಿಸಲು ನೆರವಾಗುವ, ಜೈವಿಕವಾಗಿ ಸಕ್ರಿಯವಾಗಿರುವ (ಬಯೋ-ಆಕ್ಟಿವ್) ಇನ್ನಿತರ ಸಂಯುಕ್ತವಸ್ತುಗಳ ಒಂದು ಸಮೃದ್ಧ ಆಗರವಾಗಿದೆ. ಪ್ರತಿಯಾಗಿ, ಇದು ತ್ವಚೆಯು ಕಡುಕಪ್ಪುಬಣ್ಣದತ್ತ ಹೊರಳುವುದನ್ನು ತಗ್ಗಿಸುತ್ತದೆ ಹಾಗೂ ಕಳಾಹೀನ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ.

ನೀವು ಮಾಡಬೇಕಾದುದೇನು ?

ಸೌತೆಕಾಯಿಯೊಂದನ್ನು ಸರಿಯಾಗಿ ಅರ್ಧಭಾಗ ಕತ್ತರಿಸಿರಿ ಹಾಗೂ ಅದನ್ನು ಬ್ಲೆಂಡರ್ ವೊಂದರಲ್ಲಿ ಹಾಕಿರಿ.

ಒಂದು ದೊಡ್ಡ ಚಮಚದಷ್ಟು ಲೋಳೆಸರದ ದಪ್ಪಸೋನೆಯನ್ನು ಅದಕ್ಕೆ ಸೇರಿಸಿರಿ ಹಾಗೂ ಅವರೆಡೂ ಚೆನ್ನಾಗಿ ಬೆರೆತು ಒಂದು ನುಣ್ಣನೆಯ ಪೇಸ್ಟ್ ನಂತಾಗುವವರೆಗೆ ಅವನ್ನು ಚೆನ್ನಾಗಿ ಬ್ಲೆಂಡ್ ಮಾಡಿರಿ (ಮಿಶ್ರ ಮಾಡಿರಿ).

ಈ ಮಾಸ್ಕ್ ಅನ್ನು ಲೇಪಿಸಿಕೊಳ್ಳಿರಿ ಹಾಗೂ 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಇರಗೊಡಿರಿ.

ಬಳಿಕ, ನೀರಿನಿಂದ ಈ ಮಾಸ್ಕ್ ಅನ್ನು ಚೆನ್ನಾಗಿ ತೊಳೆದು ನಿವಾರಿಸಿರಿ.

ನೀವು ಈ ಫೇಸ್‌ ಪ್ಯಾಕ್ ಅನ್ನು ವಾರಕ್ಕೊಮ್ಮೆ ಬಳಸಬಹುದು.

8. ಅನಾನಾಸು

8. ಅನಾನಾಸು

ಟೈರೋನೇಸ್ ನ ಕಾರ್ಯಚಟುವಟಿಕೆಯನ್ನು ತಗ್ಗಿಸುವ ದಿಶೆಯಲ್ಲಿ ನೆರವಾಗುವ ಜೈವಿಕವಾಗಿ ಸಕ್ರಿಯವಾಗಿರುವ ಗಂಧಕಯುಕ್ತ ಸಂಯುಕ್ತವಸ್ತುಗಳ ಒಂದು ಸಮೃದ್ಧ ಆಗರವಾಗಿದೆ ಈ ಅನಾನಾಸು. ಈ ಮೂಲಕ ಈ ಸಂಯುಕ್ತವಸ್ತುಗಳು ಕಳಾಹೀನ ತ್ವಚೆಯನ್ನು ಕಾಂತಿಯುಕ್ತವನ್ನಾಗಿಸುವಲ್ಲಿ ನೆರವಾಗಬಲ್ಲವು.

ನೀವು ಮಾಡಬೇಕಾದುದೇನು ?

ಒಂದು ಅಥವಾ ಎರಡು ಅನಾನಾಸು ಹೋಳುಗಳನ್ನು ಬ್ಲೆಂಡರ್ ವೊಂದರಲ್ಲಿ ಬ್ಲೆಂಡ್ ಮಾಡಿಕೊಳ್ಳಿರಿ.

ಎರಡು ಸಣ್ಣ ಚಮಚಗಳಷ್ಟು ಕಡ್ಲೆಹಿಟ್ಟನ್ನು ಈ ಪೇಸ್ಟ್ ಗೆ ಸೇರಿಸಿರಿ ಮತ್ತು ಅವುಗಳನ್ನು ಚೆನ್ನಾಗಿ ಮಿಶ್ರ ಮಾಡಿರಿ.

ಈ ಪೇಸ್ಟ್ ಅನ್ನು ನಿಮ್ಮ ಮುಖದ ಮೇಲೆ ಹಾಗೂ ನಿಮ್ಮ ಕುತ್ತಿಗೆಯ ಮೇಲೆ ಲೇಪಿಸಿಕೊಳ್ಳಿರಿ ಮತ್ತು ಹಾಗೆಯೇ ಒಣಗಲು ಬಿಡಿರಿ.

ಬಳಿಕ ನಿಮ್ಮ ಮುಖವನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಈ ಫೇಸ್ ಪ್ಯಾಕ್ ಅನ್ನು ನೀವು ವಾರಕ್ಕೊಂದು ಬಾರಿ ಬಳಸಿಕೊಳ್ಳಬಹುದು.

English summary

Best Home Remedies For Dull Skin

Here we are discussing about Dull Skin: Causes, Natural Remedies, And Prevention Tips. Clear and glowing skin is a sign of good health, and taking care of it requires diligence. Several factors like exposure to pollution, UV rays from the sun, and a poor diet can aggravate skin issues.
X
Desktop Bottom Promotion