For Quick Alerts
ALLOW NOTIFICATIONS  
For Daily Alerts

ಈ ಎಣ್ಣೆಯನ್ನು ಬಳಸುವುದರಿಂದ ನಿಮ್ಮ ಚರ್ಮದ ಕಾಂತಿ ಮಾಸುವುದಿಲ್ಲ

|

ಅವಕಾಡೋ ಎಣ್ಣೆ ಅದರ ಸೌಂದರ್ಯ ವರ್ಧಕ ಗುಣಗಳಿಗೆ ಹೆಸರುವಾಸಿ. ಎಸ್ಜಿಮಾ ಮತ್ತು ಮೊಡವೆಗಳಂತಹ ಚರ್ಮ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿ ಅವಕಾಡೋ ಸೇವನೆ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಇದಷ್ಟೇ ಅಲ್ಲ, ತ್ವಚೆಯ ಕಾಂತಿಯನ್ನು ಹೆಚ್ಚಿಸಿ, ಚರ್ಮದ ಯೌವ್ವನತೆಗೆ ಕಾರಣವಾಗುವ ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸಲು ಹಾಗೂ ಕೂದಲಿನ ಹಾನಿಯನ್ನು ತಡೆಗಟ್ಟಲು ಅವಕಾಡೋ ಸಹಾಯಕ. ಇಷ್ಟು ಸೌಂದರ್ಯ ಸ್ನೇಹಿಯಾಗಿರುವ ಅವಕಾಡೋ ಎಣ್ಣೆಯ ನಿಮಗೆ ತಿಳಿದಿಲ್ಲದ ಮತ್ತಷ್ಟು ಪ್ರಯೋಜನಗಳು ಇಲ್ಲಿವೆ.

ಅವಕಾಡೋ ಎಣ್ಣೆಯ ಸೌಂದರ್ಯ ಲಾಭಗಳನ್ನು ಈ ಕೆಳಗೆ ನೀಡಿಲಾಗಿದೆ:

ವಯಸ್ಸಾಗುವಿಕೆ ವಿರೋಧಿ ಗುಣಲಕ್ಷಣಗಳು:

ವಯಸ್ಸಾಗುವಿಕೆ ವಿರೋಧಿ ಗುಣಲಕ್ಷಣಗಳು:

ನಮಗೆ ವಯಸ್ಸಾದಂತೆ, ನೈಸರ್ಗಿಕ ತೈಲ ಮತ್ತು ಕಾಲಜನ್ ಉತ್ಪಾದನೆ ಕಡಿಮೆಯಾಗುತ್ತದೆ. ಇದು ಚರ್ಮದ ಶುಷ್ಕತೆ ಮತ್ತು ಕಳೆಗುಂದುವಿಕೆಗೆ ಕಾರಣವಾಗುತ್ತದೆ. ಮುಖದ ಸುಕ್ಕುಗಳಿಗೆ ಆವಕಾಡೊ ಎಣ್ಣೆಯನ್ನು ಬಳಸುವುದು ಉತ್ತಮ ಆಯ್ಕೆಯಾಗಿದೆ. ಜೊತೆಗೆ ಚರ್ಮದ ಶುಷ್ಕತೆಯನ್ನು ಕಡಿಮೆ ಮಾಡಲು ಮತ್ತು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಲು ಅವಕಾಡೋ ಎಣ್ಣೆಯನ್ನು ಹಚ್ಚಬಹುದು. ಇದು ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡುವುದು.

ಸ್ವತಂತ್ರ ರಾಡಿಕಲ್ಗಳು ರೋಗಕ್ಕೆ ಆಹ್ವಾನ ನೀಡುವುದಲ್ಲದೆ, ವಯಸ್ಸಿನ ಕಲೆಗಳು, ಸುಕ್ಕುಗಳು ಮತ್ತು ಚರ್ಮದ ಕ್ಯಾನ್ಸರ್ನಂತಹ ಹೆಚ್ಚು ಗಂಭೀರವಾದ ಸಮಸ್ಯೆಗಳು ಸೇರಿದಂತೆ ಎಲ್ಲಾ ರೀತಿಯ ಚರ್ಮ ಸಂಬಂಧಿ ಬದಲಾವಣೆಗೆ ಕಾರಣವಾಗತ್ತದೆ. ಅವಕಾಡೋ ಎಣ್ಣೆಯನ್ನು ಹಚ್ಚುವುದರಿಂದ ಈ ಸಾಧ್ಯತೆ ಕಡಿಮೆಯಾಗುತ್ತದೆ.

ಬಿಸಿಲಿನ ಬೇಗೆಯನ್ನು ಕಡಿಮೆ ಮಾಡುವುದು:

ಬಿಸಿಲಿನ ಬೇಗೆಯನ್ನು ಕಡಿಮೆ ಮಾಡುವುದು:

ಆವಕಾಡೊ ಎಣ್ಣೆಯಲ್ಲಿ ವಿಟಮಿನ್ ಇ, ಬೀಟಾ-ಕ್ಯಾರೋಟಿನ್, ವಿಟಮಿನ್ ಡಿ, ಪ್ರೋಟೀನ್, ಲೆಸಿಥಿನ್ ಮತ್ತು ಕೊಬ್ಬಿನಾಮ್ಲಗಳು ಸಮೃದ್ಧವಾಗಿರುವುದರಿಂದ, ಚರ್ಮವನ್ನು ಆರೋಗ್ಯಕರವಾಗಿಡಲು ಮತ್ತು ಸೂರ್ಯನ ಹಾನಿಕರಕ ಕಿರಣಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಚರ್ಮದ ಕಿರಿಕಿರಿ ಕಡಿಮೆ ಮಾಡುತ್ತದೆ:

ಚರ್ಮದ ಕಿರಿಕಿರಿ ಕಡಿಮೆ ಮಾಡುತ್ತದೆ:

ಆವಕಾಡೊ ಎಣ್ಣೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಜೀವಸತ್ವಗಳು ಎಸ್ಜಿಮಾ ಮತ್ತು ಸೋರಿಯಾಸಿಸ್ಗೆ ಸಂಬಂಧಿಸಿದ ಶುಷ್ಕ, ಕಿರಿಕಿರಿ ಮತ್ತು ತುರಿಕೆಯ ಚರ್ಮವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಈ ಸಮಸ್ಯೆ ಹೊಂದಿರುವ ವ್ಯಕ್ತಿಯು ಮೊದಲು ಪ್ಯಾಚ್ ಟೆಸ್ಟ್ ಮಾಡುವುದು ಉತ್ತಮ ಏಕೆಂದರೆ ಕೆಲವರಿಗೆ ಇದು ಸಮಸ್ಯೆಯನ್ನು ಉಲ್ಬಣಿಸಬಹುದು.

ಮೊಡವೆಗಳನ್ನು ತಡೆಗಟ್ಟಲು ಸಹಾಯ:

ಮೊಡವೆಗಳನ್ನು ತಡೆಗಟ್ಟಲು ಸಹಾಯ:

ಎಪಿಡರ್ಮಿಸ್ ಎಂದು ಕರೆಯಲ್ಪಡುವ ಚರ್ಮದ ಹೊರಗಿನ ಪದರವು ಆವಕಾಡೊ ಎಣ್ಣೆಯಲ್ಲಿರುವ ಪೋಷಕಾಂಶಗಳನ್ನು ಸುಲಭವಾಗಿ ಹೀರಿಕೊಳ್ಳುತ್ತದೆ, ಇದು ಹೊಸ ಚರ್ಮವನ್ನು ರೂಪಿಸಲು ಸಹ ಸಹಾಯ ಮಾಡುತ್ತದೆ. ಈ ಎಣ್ಣೆ ಹಚ್ಚಿ, ಸ್ವಲ್ಪ ಸಮಯದ ಬಳಿಕ ಬೆಚ್ಚಗಿನ ನೀರಿನಿಂದ ತೊಳೆದರೆ, ಎಣ್ಣೆಯ ಅಂಶವನ್ನು ಬಿಡದೆ ಚರ್ಮವನ್ನು ಹೈಡ್ರೀಕರಿಸುತ್ತದೆ. ಇದು ಮೊಡವೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

English summary

Beauty Benefits of Avocado Oil in Kannada

Here we talking about Beauty benefits of avocado oil in kannada, read on
Story first published: Friday, May 14, 2021, 18:04 [IST]
X
Desktop Bottom Promotion