For Quick Alerts
ALLOW NOTIFICATIONS  
For Daily Alerts

ತ್ವಚೆಗೆ ಕಾಂತಿ ಹೆಚ್ಚಿಸುವ ಸರಳವಾದ ಮೂರು ಆಯುರ್ವೇದಿಕ್ ಟಿಪ್ಸ್

|

ತ್ವಚೆಗೆ ನೈಸರ್ಗಿಕ ಕಾಂತಿ ಬೇಕಾದರೆ ಆಗ ಮಾರುಕಟ್ಟೆಯಲ್ಲಿ ಸಿಗುವಂತಹ ಉತ್ಪನ್ನಗಳನ್ನು ಬಳಸುವುದಲ್ಲ. ಅದಕ್ಕಾಗಿ ಮನೆಯಲ್ಲೇ ಕೆಲವೊಂದು ಆಯುರ್ವೇದದ ತ್ವಚೆಯ ಕಾಂತಿ ಹೆಚ್ಚಿಸುವಂತಹ ವಿಧಾನವನ್ನು ಬಳಸಿಕೊಳ್ಳಬೇಕು. ಇದು ಯಾವುದೇ ಹಾನಿಯನ್ನು ಉಂಟು ಮಾಡದರೆ ನಿಮಗೆ ನೈಸರ್ಗಿಕದತ್ತ ಕಾಂತಿ ನೀಡುವುದು. ಇಂದಿನ ದಿನಗಳಲ್ಲಿ ಆಯುರ್ವೇದದ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ. ಯಾಕೆಂದರೆ ಇದು ತುಂಬಾ ನಿಧಾನಗತಿಯ ಫಲಿತಾಂಶ ನೀಡುವುದು ಎನ್ನುವ ಕಾರಣಕ್ಕಾಗಿ. ಆದರೆ ಆಯುರ್ವೇದವು ತುಂಬಾ ನಿಧಾನವಾಗಿ ಫಲಿತಾಂಶ ನೀಡಿದರೂ ಅದು ಶಾಶ್ವತವಾಗಿ ಇರುವುದು ಎಂದು ಅರ್ಥ ಮಾಡಿಕೊಳ್ಳಬೇಕು.

ಮಾರುಕಟ್ಟೆಯಲ್ಲಿ ಸಿಗುವಂತಹ ಉತ್ಪನ್ನವು ಹಠಾತ್ ಕಾಂತಿ ನೀಡಿದರೂ ಅದರಿಂದ ಮುಂದೆ ತ್ವಚೆಗೆ ಹಾನಿ ಯಾಗುವುದು ಖಚಿತ. ಈ ಕಾರಣದಿಂದಾಗಿ ಆಯುರ್ವೇದವನ್ನು ಬಳಸಿಕೊಂಡು ನೀವು ತ್ವಚೆಯ ಆರೈಕೆ ಮಾಡಬೇಕು. ಇದು ಶಾಶ್ವತವಾಗಿ ನಿಮಗೆ ಕಾಂತಿ ನೀಡುವುದು. ನೈಸರ್ಗಿಕವಾಗಿ ದುಬಾರಿ ಖರ್ಚು ಮಾಡದೆ ಕಾಂತಿ ಪಡೆಯುವುದು ಹೇಗೆ ಎಂದು ನಿಮಗೆ ನಾವು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿಯಿರಿ.

ಕಡಲೆ ಹಿಟ್ಟು, ಮಸೂರ್ ದಾಲ್, ಅರಿಶಿನ ಹುಡಿ

ಕಡಲೆ ಹಿಟ್ಟು, ಮಸೂರ್ ದಾಲ್, ಅರಿಶಿನ ಹುಡಿ

ಕಡಲೆ ಹಿಟ್ಟು, ಮಸೂರ್ ದಾಲ್(ಕೆಂಪು ಬೇಳೆ), ಅರಿಶಿನ ಹುಡಿ ತೆಗೆದುಕೊಂಡು ಎಲ್ಲವನ್ನು ಸ್ವಲ್ಪ ಹಾಲಿನೊಂದಿಗೆ ಮಿಶ್ರಣ ಮಾಡಿಕೊಳ್ಳಿ. ದಪ್ಪಗಿನ ಪೇಸ್ಟ್ ಆದ ಬಳಿಕ ಇದನ್ನು ದೇಹ ಹಾಗೂ ಮುಖಕ್ಕೆ ಹಚ್ಚಿಕೊಂಡು, ಸುಮಾರು 30-60 ನಿಮಿಷ ಕಾಲ ಹಾಗೆ ಇರಿ. ಇದರ ಬಳಿಕ ನೀವು ಸ್ನಾನ ಮಾಡಿ. ಇದರಿಂದ ತ್ವಚೆಯು ಕಾಂತಿಯುತವಾಗುವುದು. ಇನ್ನೊಂದು ವಿಧಾನ ಬಿಸಿಲಿನಲ್ಲಿ ತಿರುಗಾಡಿಕೊಂಡು ಬಂದ ಬಳಿಕ ಮುಖದ ಮೇಲೆ ಕಪ್ಪು ಕಲೆಗಳು ಬಿದ್ದಿದೆಯಾ? ಹಾಗಾದರೆ ಕಡಲೆಹಿಟ್ಟಿನಿಂದ ಇದನ್ನು ನಿವಾರಿಸಬಹುದು. ಎರಡು ಚಮಚ ಕಡಲೆ ಹಿಟ್ಟಿಗೆ ಒಂದು ಹಿಡಿ ಅರಶಿನ, ಕೆಲವು ಹನಿ ನಿಂಬೆರಸ ಮತ್ತು ಮೊಸರು ಹಾಕಿಕೊಂಡು ಬೆರೆಸಿಕೊಳ್ಳಿ. ಇದನ್ನು ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಇದನ್ನು ಒಣಗಲು ಬಿಡಿ. ಕೆಲವು ದಿನಗಳ ಕಾಲ ಹೀಗೆ ಮಾಡಿ. ಕಲೆಗಳು ನಿಧಾನವಾಗಿ ಮಾಯವಾಗುವುದನ್ನು ಕಾಣಬಹುದು.

Most Read: ಕಡಲೆ ಹಿಟ್ಟು ಬಳಸಿ, ತ್ವಚೆಯ ಕಾಂತಿ ವೃದ್ಧಿಸಿ

ಪರಿಶುದ್ಧವಾಗಿರುವಂತಹ ತೆಂಗಿನ ಎಣ್ಣೆ

ಪರಿಶುದ್ಧವಾಗಿರುವಂತಹ ತೆಂಗಿನ ಎಣ್ಣೆ

ಒಡೆದ ಚರ್ಮದ ಹೊರಭಾಗದ ಜೀವಕೋಶಗಳು ಸತ್ತು ತೆಳುವಾದ ಪದರದಂತೆ ಅಂಟಿಕೊಂಡಿರುತ್ತದೆ. ಈ ಪದರ ಸ್ವಾಭಾವಿಕವಾಗಿ ಉದುರಬೇಕು. ಆದರೆ ಬೇಸಿಗೆಯಲ್ಲಿ ಒಣಗಿರುವ ಚರ್ಮದ ಕಾರಣ ಸುಲಭವಾಗಿ ಉದುರದೇ ಅಂಟಿಕೊಂಡೇ ಇರುತ್ತದೆ. ಇದನ್ನು ನಿವಾರಿಸಲು ಮೂರು ಚಮಚ ಸಕ್ಕರೆಗೆ ಒಂದು ಅಥವಾ ಎರಡು ಚಮಚ ಕೊಬ್ಬರಿ ಎಣ್ಣೆ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಚರ್ಮದ ಮೇಲೆ ಹಚ್ಚಿ ಉಜ್ಜಿಕೊಳ್ಳಿ. ಇದರಿಂದ ಸತ್ತ ಜೀವಕೋಶಗಳ ಪದರ ಸುಲಭವಾಗಿ ಹೊರಬರುತ್ತದೆ ಹಾಗೂ ಚರ್ಮದ ಕಾಂತಿ ಹೆಚ್ಚುತ್ತದೆ ಬಳಿಕ ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ. ಇನ್ನು ಕಾಲುಗಳನ್ನು ಶೇವ್ ಮಾಡಿಕೊಳ್ಳುವ ಮುನ್ನ ತೆಂಗಿನ ಎಣ್ಣೆಯನ್ನು ಸವರಿ. ಇದರಿಂದ ಕಾಲಿನ ಚರ್ಮ ಮೃದುವಾಗಿ, ತುರಿಕೆ ಬರದಂತೆ ಇದು ಕಾಪಾಡುತ್ತದೆ. ಜೊತೆಗೆ ತೆಂಗಿನ ಎಣ್ಣೆಯು ಶೇವ್ ಆದ ನಂತರ ತ್ವಚೆಯಲ್ಲಿ ಉರಿ ಬರದಂತೆ ಕಾಪಾಡುತ್ತದೆ.

Most Read: ತೆಂಗಿನ ಎಣ್ಣೆ+ಲಿಂಬೆರಸ, ಬಿಳಿ ಕೂದಲಿನ ಸಮಸ್ಯೆಗೆ ರಾಮಬಾಣ

ಅಲೋವೆರಾ

ಅಲೋವೆರಾ

ಚರ್ಮದ ಆರೋಗ್ಯಕ್ಕೆ ಅಲೋವೆರಾವು ತುಂಬಾ ಒಳ್ಳೆಯದು ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಮನೆಯಲ್ಲಿ ಅಲೋವೆರಾದ ಗಿಡವಿದ್ದರೆ ಆಗ ನೀವು ಇದರ ಒಂದು ಎಲೆ ತೆಗೆದುಕೊಂಡು, ಅದರ ಲೋಳೆ ತೆಗೆಯಿರಿ. ಇದನ್ನು ಮುಖ ಹಾಗೂ ದೇಹದ ಭಾಗಕ್ಕೆ ಸರಿಯಾಗಿ ಹಚ್ಚಿಕೊಳ್ಳಿ. ಇದು ನೈಸರ್ಗಿಕ ಮೊಶ್ಚಿರೈಸರ್ ಆಗಿ ಕೆಲಸ ಮಾಡುವುದು. ನೀವು ನಿಯಮಿತವಾಗಿ ಅಲೋವೆರಾ ಹಚ್ಚಿಕೊಂಡರೆ ಆಗ ಚರ್ಮಕ್ಕೆ ವಯಸ್ಸಾಗುವುದು ನಿಧಾನವಾಗುವುದು ಮತ್ತು ಕಾಂತಿಯು ಬರುವುದು.

Most Read:'ಅಲೋವೆರಾ'ದ ಫೇಸ್ ಪ್ಯಾಕ್-ಸೌಂದರ್ಯದ ಕೀಲಿಕೈ!

ಪ್ರತಿನಿತ್ಯ ಸಾಕಷ್ಟು ನೀರು ಕುಡಿಯಿರಿ

ಪ್ರತಿನಿತ್ಯ ಸಾಕಷ್ಟು ನೀರು ಕುಡಿಯಿರಿ

ಈ ಮೂರು ಸರಳ ಕ್ರಮಗಳನ್ನು ನೀವು ಮನೆಯಲ್ಲಿ ಪಾಲಿಸಿ ಕೊಂಡು ಹೋದರೆ ಆಗ ನಿಮಗೆ ಕಾಂತಿಯುತ ತ್ವಚೆಯು ಸಿಗುವುದು.ಇದರೊಂದಿಗೆ ನೀವು ಅತಿಯಾದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು. ಸರಿಯಾಗಿ ನಿದ್ರೆ ಮಾಡಬೇಕು, ಪ್ರತಿನಿತ್ಯ ಸಾಕಷ್ಟು ನೀರು ಕುಡಿಯಬೇಕು. ಇದೆಲ್ಲವೂ ಚರ್ಮಕ್ಕೆ ಕಾಂತಿ ನೀಡುವುದು ಮತ್ತು ಅದು ಆರೋಗ್ಯವಾಗಿ ಇರುವಂತೆ ಮಾಡುವುದು.

English summary

Three Ayurvedic DIY Tips To Make Your Skin Glow!

Naturally, with all the preparation that's being done, you'll want to look beautiful. You might have a list of treatments ready for the next visit to the parlor. But what if we tell you, there's a way to get beatiful skin, minus all the chemicals you're willing to make your skin suffer through?
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X