Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ತೆಂಗಿನ ಎಣ್ಣೆ+ಲಿಂಬೆರಸ, ಬಿಳಿ ಕೂದಲಿನ ಸಮಸ್ಯೆಗೆ ರಾಮಬಾಣ
ತೆಂಗಿನೆಣ್ಣೆ ಮತ್ತು ಲಿಂಬೆರಸವನ್ನು ಬಳಸಿಕೊಂಡು ನರೆಗೂದಲಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಮುಂದೆ ಓದಿ....
ಹಲವಾರು ಕಾರಣಗಳಿಂದ ಅಕಾಲಿಕವಾಗಿ ಕೂದಲುಬಿಳಿಯಾಗುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ. ಕಲುಷಿತ ವಾತಾವರಣ, ಹಾರ್ಮೋನು ಅಸಮತೋಲನ, ಪೋಷಕಾಂಶಗಳ ಕೊರತೆ ಮತ್ತು ವಂಶವಾಹಿನಿ ಮೊದಲಾದವುಗಳು ಇದಕ್ಕೆ ಪ್ರಮುಖ ಕಾರಣವಾಗಿದೆ. ಅಕಾಲಿಕವಾಗಿ ಕೂದಲು ಬಿಳಿಯಾಗುವುದನ್ನು ಕಪ್ಪು ಮಾಡಲು ರಾಸಾಯನಿಕಯುಕ್ತ ಹೇರ್ ಡೈಗಳನ್ನು ಬಳಸುತ್ತೇವೆ.
ಇದರಿಂದ ಹಲವಾರು ರೀತಿಯ ಅಡ್ಡ ಪರಿಣಾಮಗಳು ಆಗುವುದು. ಕೆಲವರಿಗೆ ರಾಸಾಯನಿಕಯುಕ್ತ ಹೇರ್ ಡೈ ನಿಂದ ಅಲರ್ಜಿಯಾಗುವುದು. ಕೆಲವೊಂದು ಮನೆಮದ್ದನ್ನು ಬಳಸಿಕೊಂಡು ಕೂದಲು ಕಪ್ಪಾಗಿಸಬಹುದು ಮತ್ತು ಪೋಷಕಾಂಶಯುಕ್ತ ಆಹಾರವನ್ನು ಸೇವನೆ ಮಾಡಬೇಕು. ಈ ಲೇಖನದಲ್ಲಿ ಕೂದಲನ್ನು ಬಿಳಿಯಾಗಿಸುವ ಕೆಲವೊಂದು ಮನೆಮದ್ದುಗಳನ್ನು ಸೂಚಿಸಲಾಗಿದೆ. ಇದನ್ನು ತಿಳಿಯಿರಿ. ಬಿಳಿಕೂದಲಿನ ಸಮಸ್ಯೆಯ ಕಿರಿಕಿರಿ, ಮನೆಮದ್ದೇ ಸರಿ!

ತೆಂಗಿನ ಎಣ್ಣೆ ಮತ್ತು ಲಿಂಬೆ
ಲೌರಿಕ್ ಆಮ್ಲ, ಸೂಕ್ಷ್ಮಾಣುಜೀವಿ ವಿರೋಧಿ ಗುಣ ಹಾಗೂ ಮಧ್ಯಮ ಮಟ್ಟದ ಕೊಬ್ಬಿನಾಮ್ಲವು ತಲೆಬುರುಡೆಗೆ ತೇವಾಂಶ ನೀಡಿ, ಕೂದಲನ್ನು ಬಲಗೊಳಿಸಿ ಕೂದಲು ಬೆಳೆಯಲು ನೆರವಾಗುವುದು. ಹಾನಿಗೊಂಡಿರುವ ಮತ್ತು ಹಾನಿಗೊಳ್ಳದೆ ಇರುವ ಕೂದಲಿನಲ್ಲಿ ಉಂಟಾಗುವ ಪ್ರೋಟೀನ್‌ನ ಕೊರತೆಯನ್ನು ಇದು ನೀಗಿಸುವುದು.
ಆ್ಯಂಟಿ ಆಕ್ಸಿಡೆಂಟ್‌ನಿಂದ ಸಮೃದ್ಧವಾಗಿರುವ ಇದನ್ನು ದೀರ್ಘಕಾಲದ ತನಕ ಬಳಸಿದರೆ ಕೂದಲು ಬಿಳಿಯಾಗುವುದನ್ನು ತಡೆಯಬಹುದು. ಕೂದಲು ಬಿಳಿಯಾಗುವುದನ್ನು ತಡೆಯಲು ವೈದ್ಯರು ಲಿಂಬೆಯನ್ನು ಸೂಚಿಸುತ್ತಾರೆ. ಲಿಂಬೆಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ ಮತ್ತು ಪೋಸ್ಪರಸ್ ಇದೆ. ಇದು ಕೂದಲಿಗೆ ಪೋಷಕಾಂಶವನ್ನು ನೀಡಿ ಬಿಳಿ ಕೂದಲನ್ನು ತೆಗೆಯುವುದು. ಬಿಳಿ ಕೂದಲಿನ ಬಗ್ಗೆ, ತಿಳಿಯಬೇಕಾದ ಒಂದಿಷ್ಟು ಸಂಗತಿ
ಬೇಕಾಗುವ ಸಾಮಗ್ರಿಗಳು
*ತೆಂಗಿನ ಎಣ್ಣೆ
*ಮೂರು ಚಮಚ ಲಿಂಬೆರಸ
ತಯಾರಿಸುವ ವಿಧಾನ
ತೆಂಗಿನ ಎಣ್ಣೆಯಲ್ಲಿ ಮೂರು ಚಮಚ ಲಿಂಬೆರಸವನ್ನು ಮಿಶ್ರಣ ಮಾಡಿಕೊಳ್ಳಿ. ತಲೆಬುರುಡೆಗೆ ಇದನ್ನು ಹಚ್ಚಿಕೊಂಡು ಸರಿಯಾಗಿ ಮಸಾಜ್ ಮಾಡಿಕೊಳ್ಳಿ. ಒಂದು ಗಂಟೆ ಕಾಲ ಇದು ಕೂದಲಿನಲ್ಲಿ ಹಾಗೆ ಇರಲಿ. ಕೂದಲನ್ನು ಶಾಂಪೂ ಹಾಕಿಕೊಂಡು ತೊಳೆದು ಸ್ವಚ್ಛಗೊಳಿಸಿ.
ವಾರದಲ್ಲಿ ಒಂದು ಸಲ ಹೀಗೆ ಮಾಡಿಕೊಳ್ಳಿ. ತೆಂಗಿನ ಎಣ್ಣೆಯನ್ನು ನಿಯಮಿತವಾಗಿ ಬಳಸಿದರೆ ತಲೆಹೊಟ್ಟನ್ನು ನಿವಾರಿಸಬಹುದು. ತೆಂಗಿನ ಎಣ್ಣೆ, ಹರಳೆಣ್ಣೆ ಮತ್ತು ಉಗುರುಬೆಚ್ಚಗಿನ ನೀರು ತಲೆಹೊಟ್ಟಿಗೆ ತುಂಬಾ ಒಳ್ಳೆಯದು. ತಲೆಬುರುಡೆಯನ್ನು ಸರಿಯಾಗಿ ಮಸಾಜ್ ಮಾಡಿಕೊಂಡು ಅತ್ಯುತ್ತಮ ಫಲಿತಾಂಶ ಪಡೆಯಿರಿ. ಬಿಳಿಕೂದಲಿನ ಸಮಸ್ಯೆ- ಕಾರಣ ತಿಳಿದು, ಆರೈಕೆ ಶುರುಮಾಡಿ!



Click it and Unblock the Notifications














