For Quick Alerts
ALLOW NOTIFICATIONS  
For Daily Alerts

ಹುಣಸೆ ಹಣ್ಣಿನ ಫೇಸ್ ಪ್ಯಾಕ್ ಪ್ರಯತ್ನಿಸಿ-ಸುಂದರವಾಗಿ ಕಾಣುವಿರಿ

By Deepu
|

ಹುಣಸೆ ಮರದಲ್ಲಿ ದೆವ್ವ ಇರುತ್ತದೆ ಎಂಬ ಕಟ್ಟುಕಥೆ ನಂಬುವ ಜನ ಹುಣಸೆ ಮರದತ್ತ ಸುಳಿಯುವುದನ್ನು ನಿಲ್ಲಿಸುತ್ತಾರೆಯೇ ವಿನಃ ಹುಣಸೆಹಣ್ಣಿನ ಬಳಕೆಯನ್ನಲ್ಲ. ಏಕೆಂದರೆ ಭಾರತೀಯ ಅಡುಗೆಗಳಲ್ಲಿ ಹುಣಸೆ ಹಣ್ಣು ಪಾತ್ರ ಮಹತ್ವದ್ದಾಗಿದೆ. ಹುಣಸೆ ಹುಳಿ ಇಲ್ಲದ ಸಾಂಬಾರ್ ಅಥವಾ ಪಾನಿಪೂರಿ ಮೊದಲಾದ ತಿಂಡಿಗಳನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಹುಣಸೆ ಹಣ್ಣಿಗೆ ಹುಳಿಯಾದ ರುಚಿ ನೀಡಲು ಕಾರಣವಾದ ಟಾರ್ಟಾರಿಕ್ ಆಮ್ಲದ ಜೊತೆಗೇ ಹುಳಿಯಲ್ಲಿ ಹಲವು ವಿಟಮಿನ್‌ಗಳು, ಆಂಟ್ ಆಕ್ಸಿಡೆಂಟುಗಳು ಮತ್ತು ಖನಿಜಗಳಿವೆ.

ಈ ಪೋಷಕಾಂಶಗಳು ಆರೋಗ್ಯಕ್ಕೆ ಹೇಗೆ ಉತ್ತಮವೋ ಹಾಗೆಯೇ ದೇಹದ ಹೊರಗಿನಿಂದ ತ್ವಚೆಯ ಆರೈಕೆಗೂ ಉತ್ತಮವಾಗಿದೆ. ಅಡುಗೆ ಮನೆಯ ಅನಿವಾರ್ಯವಾದ ಈ ಸಾಂಬಾರ ಪದಾರ್ಥ ತ್ವಚೆಯ ಆರೈಕೆಯಲ್ಲಿ ವಿಶ್ವದಾದ್ಯಂತ ಹಲವಾರು ವರ್ಷಗಳಿಂದ ಬಳಕೆಯಲ್ಲಿದೆ. ತ್ವಚೆಗೆ ಹುಣಸೆ ಹಣ್ಣು ಹಲವು ರೀತಿಯಲ್ಲಿ ಫಲಕಾರಿಯಾಗಿದೆ. ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸಲು, ಕಾಂತಿ ಹೆಚ್ಚಿಸಲು, ನೆರಿಗೆಗಳನ್ನು ನಿವಾರಿಸಲು, ಕೂದಲುದುರುವುದನ್ನು ತಡೆಯಲು ಮುಂತಾದ ಹಲವು ರೀತಿಗಳಲ್ಲಿ ಉಪಯುಕ್ತವಾಗಿದೆ...

ತ್ವಚೆಯ ಬಣ್ಣ ಬಿಳಿಯಾಗಲು

ತ್ವಚೆಯ ಬಣ್ಣ ಬಿಳಿಯಾಗಲು

*ಹುಣಸೆ ಹಣ್ಣು

*ಬಿಸಿ ನೀರು

*ಅರಿಶಿನ ಪುಡಿ

ವಿಧಾನ

*ಎರಡು ಹುಣಸೆ ಹಣ್ಣನ್ನು ಬಿಸಿನೀರಿನಲ್ಲಿ ಹಾಕಿ, 15 ನಿಮಿಷ ನೆನೆಯಲು ಬಿಡಿ.

*ಒಂದು ಟೇಬಲ್ ಚಮಚದಷ್ಟು ತಿರುಳನ್ನು ತೆಗೆದುಕೊಳ್ಳಿ.

*ಸಣ್ಣ ಚಿಟಿಕೆಯಷ್ಟು ಅರಿಶಿನವನ್ನು ಹುಣಸೆ ಹಣ್ಣಿನ ತಿರುಳಿಗೆ ಸೇರಿಸಿ, ಫೇಸ್ ಪ್ಯಾಕ್ ಹದಕ್ಕೆ ಕಲಸಿಕೊಳ್ಳಿ.

*ಮುಖದ ಮೇಲೆ ಅನ್ವಯಿಸಿ.

*ಅರ್ಧ ಗಂಟೆಯ ಬಳಿಕ ನೀರಿನಿಂದ ತೊಳೆಯಿರಿ.

ಸ್ಕ್ರಬ್ಬರ್ ಆಗಿ ಹುಣಸೆ ಹಣ್ಣು

ಸ್ಕ್ರಬ್ಬರ್ ಆಗಿ ಹುಣಸೆ ಹಣ್ಣು

ಹುಣಸೆ ಹಣ್ಣು

ಬಿಸಿ ನೀರು

ಮೊಸರು ಕಲ್ಲುಪ್ಪು

ವಿಧಾನ

*ಎರಡು ಹುಣಸೆ ಹಣ್ಣನ್ನು ಬಿಸಿನೀರಿನಲ್ಲಿ ಹಾಕಿ, 15 ನಿಮಿಷ ನೆನೆಯಲು ಬಿಡಿ. ಒಂದು ಟೇಬಲ್ ಚಮಚದಷ್ಟು ತಿರುಳನ್ನು ತೆಗೆದುಕೊಳ್ಳಿ. ಅರ್ಧ ಟೇಬಲ್ ಚಮಚ ಹಂಗ್ ಮೊಸರನ್ನು ಹುಣಸೆ ರಸಕ್ಕೆ ಸೇರಿಸಿ, ಮಿಶ್ರಗೊಳಿಸಿ.

*ಮೊಸರು ಮತ್ತು ಹುಣಸೆ ಮಿಶ್ರಣಕ್ಕೆ ಒಂದು ಚಿಟಕಿ ಕಲ್ಲುಪ್ಪನ್ನು ಸೇರಿಸಿ. ಮಿಶ್ರಣವನ್ನು ತ್ವಚೆಯ ಮೇಲೆ ಅನ್ವಯಿಸಿ, 10 ನಿಮಿಷಗಳ ಕಾಲ ಮಸಾಜ್ ಮಾಡಿ. ಬೆಚ್ಚಗಿರುವ ನೀರಿನಿಂದ ಮುಖವನ್ನು ತೊಳೆಯಿರಿ.

ಮೊಡವೆಯ ಸಮಸ್ಯೆ ಇದ್ದರೆ

ಮೊಡವೆಯ ಸಮಸ್ಯೆ ಇದ್ದರೆ

ಸಾಮಾಗ್ರಿಗಳು

ಹುಣಸೆ ಹಣ್ಣು

ಬಿಸಿ ನೀರು

ನಿಂಬೆ ರಸ

ಸಕ್ಕರೆ

ಅಡುಗೆ ಸೋಡಾ

ವಿಧಾನ:

3-5 ಹುಣಸೆ ಹಣ್ಣನ್ನು ಬಿಸಿನೀರಿನಲ್ಲಿ ಹಾಕಿ, 15 ನಿಮಿಷ ನೆನೆಯಲು ಬಿಡಿ.

ಎರಡು ಟೇಬಲ್ ಚಮಚದಷ್ಟು ತಿರುಳನ್ನು ತೆಗೆದುಕೊಳ್ಳಿ, ಒಂದು ಟೀ ಚಮಚ ನಿಂಬೆ ರಸ ಮತ್ತು ಅಡುಗೆ ಸೋಡಾವನ್ನು ಸೇರಿಸಿ.

ಮೂರು ಘಟಕಾಂಶಗಳನ್ನು ಮಿಶ್ರಗೊಳಿಸಿ.

ಒಂದು ಟೀ ಚಮಚ ಸಕ್ಕರೆಯನ್ನು ಹುಣಸೆ ಹಣ್ಣಿನ ಮಿಶ್ರಣಕ್ಕೆ ಸೇರಿಸಿ.

ಮೊಡವೆಯನ್ನು ಬಿಟ್ಟು ಉಳಿದ ತ್ವಚೆಯ ಭಾಗಕ್ಕೆ ಅನ್ವಯಿಸಿ. 15-20 ನಿಮಿಷದ ಬಳಿಕ ತಣ್ಣೀರಿನಲ್ಲಿ ತೊಳೆಯಿರಿ.

ಈ ವಿಧಾನವನ್ನು ವಾರದಲ್ಲಿ ಮೂರು ಬಾರಿ ಅನ್ವಯಿಸಿದರೆ ಉತ್ತಮ ಪರಿಣಾಮ ದೊರೆಯುವುದು.

ಹೊಳೆಯುವ ತ್ವಚೆಗಾಗಿ

ಹೊಳೆಯುವ ತ್ವಚೆಗಾಗಿ

ಸಾಮಾಗ್ರಿಗಳು

ಹುಣಸೆ ಹಣ್ಣು

ಮುಲ್ತಾನಿ ಮಿಟ್ಟಿ/ಮಣ್ಣು

ಶ್ರೀಗಂಧದ ಪುಡಿ

ಮೊಸರು ಅಥವಾ ಹಾಲು

ಗುಲಾಬಿ ನೀರು

ವಿಧಾನ

*ಹತ್ತು ಹುಣಸೆ ಹಣ್ಣನ್ನು ಬಿಸಿನೀರಿನಲ್ಲಿ ಹಾಕಿ, 15 ನಿಮಿಷ ನೆನೆಯಲು ಬಿಡಿ. 3 ಟೇಬಲ್ ಚಮಚದಷ್ಟು ತಿರುಳನ್ನು ತೆಗೆದುಕೊಳ್ಳಿ. ಹುಣಸೆ ಹಣ್ಣಿನ ತಿರುಳಿಗೆ

ಒಂದು ಟೀ ಚಮಚ ಹಾಲು ಅಥವಾ ಮೊಸರನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಸಿ

*ಒಂದು ಟೀ ಚಮಚ ಶ್ರೀಗಂಧದ ಪುಡಿ ಮತ್ತು ಒಂದು ಟೀ ಚಮಚ ಮುಲ್ತಾನಿ ಮಣ್ಣನ್ನು ಸರಿಸಿ. ಹುಣಸೆ ಹಣ್ಣಿನ ತಿರುಳಿಗೆ ಪುಡಿಗಳನ್ನು ಸೇರಿಸಿದ ನಂತರ ಅದು

ಗಟ್ಟಿಯಾದ ಮಿಶ್ರಣವಾಗುತ್ತದೆ. ಆಗ ನಿಧಾನವಾಗಿ 5-10 ಹನಿ ಗುಲಾಬಿ ನೀರನ್ನು ಸೇರಿಸುತ್ತಾ ಬನ್ನಿ.

*ಆಗ ಅದು ಫೇಸ್ ಪ್ಯಾಕ್ ಹದಕ್ಕೆ ಬರುವುದು. ನಂತರ ಮಿಶ್ರಣವನ್ನು ತ್ವಚೆಯ ಮೇಲೆ ಅನ್ವಯಿಸಿ. 45 ನಿಮಿಷದ ಬಳಿಕ ಬೆಚ್ಚಗಿನ ನೀರಿನಿಂದ ತೊಳೆದು, ಸ್ನಾನ

ಮಾಡಿ.

ಚರ್ಮದ ಗುಳಿಗಳನ್ನು ನಿವಾರಿಸಲು (Cellulite)

ಚರ್ಮದ ಗುಳಿಗಳನ್ನು ನಿವಾರಿಸಲು (Cellulite)

ಸಾಮಾನ್ಯವಾಗಿ ನಡುವಯಸ್ಸಿಗೆ ಬರುತ್ತಿದ್ದಂತೆಯೇ ಮಹಿಳೆಯರ ಸೊಂಟದ ಮತ್ತು ತೊಡೆಗಳಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬು ಶೇಖರವಾಗತೊಡಗುತ್ತದೆ. ಕೆಲವು ಕಾರಣಗಳಿಂದ ವಿಶೇಷವಾಗಿ ತೊಡೆ ಮತ್ತು ನಿತಂಬಗಳ ಭಾಗದಲ್ಲಿ ಚಿಕ್ಕ ಚಿಕ್ಕ ಕುಳಿಗಳು ಬೀಳತೊಡಗುತ್ತವೆ. ಕೆನ್ನೆಯ ಮೇಲೆ ಬಿದ್ದಿದ್ದರೆ ಸಂತೋಷಪಡುತ್ತಿದ್ದ ಮಹಿಳೆಯರಿಗೆ ಈ ಕುಳಿಗಳು (Cellulite) ಚಿಂತೆ ಮೂಡಿಸುತ್ತವೆ. ಆದರೆ ಹುಣಸೆ ಹುಳಿಯ ಬಳಕೆಯಿಂದ ಇದನ್ನು ನಿವಾರಿಸಲು ಸಾಧ್ಯವಿದೆ. ಸುಮಾರು ಲಿಂಬೆ ಗಾತ್ರದ ಹುಣಸೆ ಹುಳಿಯನ್ನು ನೀರಿನಲ್ಲಿ ನೆನೆಸಿದ ಬಳಿಕ ಕಿವುಚಿ. ಇದಕ್ಕೆ ಒಂದು ಚಿಕ್ಕ ಚಮಚ ಲಿಂಬೆರಸ, ಒಂದು ಚಿಕ್ಕ ಚಮಚ ಸಕ್ಕರೆ ಮತ್ತು ಒಂದು ಚಿಟಿಕೆ ಅಡುಗೆ ಸೋಡಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ದ್ರವದಲ್ಲಿ ಅದ್ದಿದ ಹತ್ತಿಯುಂಡೆಯನ್ನು ಗುಳಿಗಳಿರುವ ಸ್ಥಳಕ್ಕೆ ತೆಳುವಾಗಿ ಹೆಚ್ಚಿ ಒಣಗಲು ಬಿಡಿ. ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ಸ್ನಾನ ಮಾಡಿ.

ಸತ್ತ ಚರ್ಮದ ಜೀವಕೋಶಗಳನ್ನು ನಿವಾರಿಸಲು

ಸತ್ತ ಚರ್ಮದ ಜೀವಕೋಶಗಳನ್ನು ನಿವಾರಿಸಲು

ಸಾಮಾನ್ಯವಾಗಿ ನಿತ್ಯವೂ ನಮ್ಮ ಚರ್ಮದ ಜೀವಕೋಶಗಳು ಸತ್ತು ಆ ಜಾಗದಲ್ಲಿ ಹೊಸ ಜೀವಕೋಶಗಳು ಹುಟ್ಟುತ್ತವೆ. ಇವು ಹೊರಚರ್ಮಕ್ಕೆ ತೆಳುವಾಗಿ ಅಂಟಿಕೊಂಡಿರುತ್ತವೆ. ಆದರೆ ಬೆವರು ಮತ್ತು ಇತರ ಕಾರಣಗಳಿಂದ ಚರ್ಮಕ್ಕೆ ಅಂಟಿಕೊಂಡೇ ಇರುತ್ತದೆ. ಇದನ್ನು ನಿವಾರಿಸುವುದು ಅಷ್ಟು ಸುಲಭವಲ್ಲ. ಆದರೆ ಹುಣಸೆಹುಳಿಯಲ್ಲಿರುವ ಆಲ್ಫಾ-ಹೈಡ್ರಾಕ್ಸಿ-ಆಮ್ಲ ಈ ಪದರವನ್ನು ಸಡಿಲಗೊಳಿಸುವ ಕ್ಷಮತೆ ಹೊಂದಿದೆ. ಇದಕ್ಕಾಗಿ ತಣ್ಣೀರಿನಲ್ಲಿ ನೆನೆಸಿ ಹಿಚುಕಿದ ಕೊಂಚ ಹುಣಸೆ ಹುಳಿ, ಒಂದು ಚಕ್ಕ ಚಮಚ ಮೊಸರು ಮತ್ತು ಒಂದು ಚಮದ ಕಲ್ಲುಪ್ಪು ಸೇರಿಸಿ ಚೆನ್ನಾಗಿ ಕಲಕಿ. ಈ ದ್ರವವನ್ನು ತೆಳುವಾಗಿ ಮುಖದ ಮೇಲೆ ಹಚ್ಚಿ ನಯವಾಗಿ ಮಸಾಜ್ ಮಾಡಿ. ಕೆಲವು ನಿಮಿಷಗಳ ಬಳಿಕ ಎಲ್ಲಾ ಸತ್ತ ಜೀವಕೋಶಗಳು ಮತ್ತು ಸೂಕ್ಷ್ಮರಂಧ್ರಗಳ ಒಳಗಿದ್ದ ಕೊಳೆ ಸಹಾ ಕರಗಿ ಹೊರಬರುತ್ತದೆ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಚರ್ಮ ಬಿಳಿಚಿಸಲು

ಚರ್ಮ ಬಿಳಿಚಿಸಲು

ಬಿಸಿಲು ಮತ್ತಿತರ ಕಾರಣಗಳಿಂದ ಚರ್ಮ ಸಹಜವರ್ಣದಿಂದ ದೂರವಾಗಿದ್ದರೆ ಇದನ್ನು ಸುಲಭವಾಗಿ ಬಿಳಿಚಿಸಬಹುದು. ಇದಕ್ಕಾಗಿ ಸಮಪ್ರಮಾಣದಲ್ಲಿ ಹುಣಸೆ ಹುಳಿಯನ್ನು ಹಿಚುಕಿ ತೆಗೆದ ತಿರುಳು, ಲಿಂಬೆರಸ ಮತ್ತು ಜೇನುತುಪ್ಪ ಸೇರಿಸಿ ಮಿಶ್ರಣ ಮಾಡಿ. ಇದನ್ನು ಮುಖ ಮತ್ತು ಬಿಸಿಲಿಗೆ ಕಪ್ಪಗಾಗಿರುವ ಇತರ ಭಾಗಗಳಿಗೆ ತೆಳುವಾಗಿ ಹಚ್ಚಿ ಸುಮಾರು ಹನ್ನೆರಡು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆಯಿರಿ. ಶೀಘ್ರವೇ ನಿಮ್ಮ ಚರ್ಮ ಸಹಜವರ್ಣ ಪಡೆಯುತ್ತದೆ.

ಕೂದಲುದುರುವಿಕೆಯನ್ನು ತಡೆಯಲು

ಕೂದಲುದುರುವಿಕೆಯನ್ನು ತಡೆಯಲು

ಕೂದಲ ಉದುರುವಿಕೆಗೆ ಕೂದಲ ಬುಡ ಶಿಥಿಲವಾಗುವುದೇ ಪ್ರಮುಖ ಕಾರಣ. ಇದನ್ನು ಗಟ್ಟಿಗೊಳಿಸಲು ಹುಣಸೆ ಹುಳಿಯ ತಿರುಳಿನಿಂದ ತಲೆಗೂದಲ ಬುಡವನ್ನು ನಯವಾಗಿ ಮಸಾಜ್ ಮಾಡಿ ಬಳಿಕ ಬಿಸಿನೀರಿನಲ್ಲಿ ಅದ್ದಿರುವ ಸ್ವಚ್ಛ ಟವೆಲ್ ಅಥವಾ ದಪ್ಪನಾದ ಬಣ್ಣೆಯನ್ನು ಸುತ್ತಿ. ಸುಮಾರು ಹದಿನೈದು ನಿಮಿಷಗಳ ಬಳಿಕ ಸೌಮ್ಯ ಶಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿರಿ.

ಕುತ್ತಿಗೆಯ ಸುತ್ತ ಕಪ್ಪಗಾಗಿದ್ದರೆ

ಕುತ್ತಿಗೆಯ ಸುತ್ತ ಕಪ್ಪಗಾಗಿದ್ದರೆ

ಕೆಲವರಿಗೆ ಕುತ್ತಿಗೆಯ ಕೆಳಭಾಗ ಮತ್ತು ಭುಜದ ಮೇಲ್ಭಾಗದಲ್ಲಿ ಕೊಂಚ ಕಪ್ಪಗಾಗಿರುತ್ತದೆ. ಇದನ್ನು ನಿವಾರಿಸಲು ಸಮಪ್ರಮಾಣದಲ್ಲಿ ಗುಲಾಬಿ ನೀರು ಮತು ಜೇನುತುಪ್ಪ ಮತ್ತು ಹುಣಸೆಹಣ್ಣು ಕಿವುಚಿದ ತಿರುಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಕಪ್ಪಗಾಗಿರುವ ಭಾಗದ ಮೇಲೆ ದಪ್ಪನಾಗಿ ಹಚ್ಚಿ ಸುಮಾರು ಹದಿನೈದು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಚರ್ಮದ ನೆರಿಗೆ ನಿವಾರಿಸಲು

ಚರ್ಮದ ನೆರಿಗೆ ನಿವಾರಿಸಲು

ಹುಳಿಯಲ್ಲಿರುವ ವಿಟಮಿನ್, ಕರಗದ ನಾರು, ಟಾರ್ಟಾರಿಕ್ ಆಮ್ಲ, ಮತ್ತು ಇತರ ಆಂಟಿ ಆಕ್ಸಿಡೆಂಟುಗಳು ಚರ್ಮಕ್ಕೆ ವಿಶೇಷವಾದ ಆರೈಕೆ ನೀಡುತ್ತದೆ ಹಾಗೂ ವೃದ್ಧಾಪ್ಯದಿಂದ ದೂರವಿರಿಸುತ್ತದೆ.ಇದಕ್ಕಾಗಿ ಸಮಪ್ರಮಾಣದಲ್ಲಿ ಹುಣಸೆಹಣ್ಣು ಕಿವುಚಿದ ತಿರುಳು, ಜೇನುತುಪ್ಪ ಮತ್ತು ಕಡಲೆಹಿಟ್ಟನ್ನು ಸೇರಿಸಿ ಮಿಶ್ರಣ ಮಾಡಿ. ಪ್ರತಿದಿನ ರಾತ್ರಿ ನೆರಿಗೆಗಳಿರುವಲ್ಲಿ ತೆಳುವಾಗಿ ಹಚ್ಚುವ ಮೂಲಕ ನೆರಿಗೆಗಳು ದೂರವಾಗುತ್ತವೆ. ಪರಿಣಾಮವಾಗಿ ವೃದ್ಧಾಪ್ಯವೂ ದೂರವೇ ಉಳಿಯುತ್ತದೆ.

English summary

Simple Tamarind Face Mask For Bright and Glowing Skin

Tamarind is beneficial for your skin and the best part is, you don't have to consume it to enjoy its benefits. The taste of tamarind is not really appealing and thus applying it on the skin is a better option.
X
Desktop Bottom Promotion