ಬ್ಯೂಟಿ ಟಿಪ್ಸ್: ಟೀ ಕುಡಿದ ಮೇಲೆ 'ಟೀ ಬ್ಯಾಗ್' ಮಾತ್ರ ಬಿಸಾಡಬೇಡಿ!!

By: Jaya subramanya
Subscribe to Boldsky

ಟೀ ಕುಡಿಯುವುದು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲದ ಮಾತು ಹೇಳಿ? ಕೆಲಸದ ಒತ್ತಡ ಇಲ್ಲವೇ ಕೊಂಚ ನಿರಾಳತೆಗಾಗಿ ಟೀ ಹೀರುವುದು ಇಂದಿನ ಜನಾಂಗದಲ್ಲಿ ಸರ್ವೇ ಸಾಮಾನ್ಯವಾಗಿದೆ. ಅಷ್ಟೇ ಏಕೆ ಬಿಡಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಕೂಡ 'ಚಾಯ್ ಪರ್ ಚರ್ಚಾ' ಎಂಬ ವಿಚಾರ ಸಂಕೀರ್ಣವನ್ನೇ ಹಮ್ಮಿಕೊಂಡು ದೇಶದ ಸಮಸ್ಯೆಗಳನ್ನು ಚರ್ಚಿಸಲು, ಪರಿಹಾರಗಳನ್ನು ಕಂಡುಕೊಳ್ಳಲು ಚಹಾವನ್ನು ವೇದಿಕೆಯನ್ನಾಗಿ ರೂಪಿಸಿಕೊಂಡಿದ್ದು ಎಲ್ಲರಿಗೂ ತಿಳಿದಿರುವ ವಿಚಾರವೇ.  ರಾತ್ರಿ ಮಲಗುವ ಮುನ್ನ 'ಗ್ರೀನ್ ಟೀ' ಕುಡಿದರೆ ದುಪ್ಪಟ್ಟು ಲಾಭ!

 

ಇಂದು ಸುಮಾರು ಹತ್ತಾರು ಬಗೆಯ ಟೀಪುಡಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದರಲ್ಲೂ ಟೀ ಆಯ್ಕೆಯಲ್ಲಿ ಪೈಪೋಟಿ ನೀಡುವ ಗ್ರೀನ್ ಟೀ ಶೀಘ್ರ ಸಮಯದಲ್ಲಿಯೇ ಮನೆಮಾತಾಗಿದೆ. ಇದರ ಸ್ವಾದಭರಿತ ಸುವಾಸನೆ ಕೇವಲ ಕುಡಿಯಲು ಮಾತ್ರವಲ್ಲ, ಆರೋಗ್ಯದ ಸಮಸ್ಯೆಗೆ, ಸೌಂದರ್ಯ ವೃದ್ಧಿಗೆ, ಹೀಗೆ ನಾನಾ ಸಮಸ್ಯೆಗಳಿಗೆ ತ್ವರಿತವಾಗಿ ಕಾರ್ಯನಿರ್ವಹಿಸುವುದರಿಂದ ಇದು ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಬೆಳೆಯತೊಡಗಿದೆ... ಅಲ್ಲದೆ ಇನ್ನೊಂದು ಸಿಹಿ ಸುದ್ದಿ ಏನಪ್ಪಾ ಅಂದರೆ ಗ್ರೀನ್ ಟೀ ಹೇಗೆ ಆರೋಗ್ಯಕ್ಕೆ ಸಹಕಾರಿಯೋ ಅಂತೆಯೇ ಬಳಸಿದ ಗ್ರೀನ್ ಟೀ ಬ್ಯಾಗ್‌ನಿಂದ ಬಹಳಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.  ತ್ವಚೆಯ ಕಾಂತಿ ಹೆಚ್ಚಿಸಲು ಬಳಸಿ ಗ್ರೀನ್ ಟೀ ಫೇಸ್ ಪ್ಯಾಕ್!

ಸಾಮಾನ್ಯವಾಗಿ ಕಚೇರಿ ಮತ್ತು ಮನೆಗಳಲ್ಲಿ ಗ್ರೀನ್ ಟೀ ಅಥವಾ ಬ್ಲ್ಯಾಕ್ ಟೀ ಬ್ಯಾಗ್‌ಗಳನ್ನು ಬಳಸಿ ನಂತರ ಅದನ್ನು ಕಸದ ಡಬ್ಬಿಗೆ ಹಾಕುತ್ತೀರಿ ತಾನೇ. ಆದರೆ ಇದನ್ನು ಹಾಗೆ ಮಾಡದೇ ನಿಮ್ಮ ಸೌಂದರ್ಯ ಚಿಕಿತ್ಸಕವಾಗಿ ಹೇಗೆ ಬಳಸಿಕೊಳ್ಳುವುದು ಎಂಬುದರ ಸುಳಿವು ಇಂದಿಲ್ಲಿ ನೀಡುತ್ತಿದ್ದೇವೆ... ಮುಂದೆ ಓದಿ....       

ಗ್ರೀನ್ ಟೀ ಫೇಸ್ ಪ್ಯಾಕ್

ಗ್ರೀನ್ ಟೀ ಫೇಸ್ ಪ್ಯಾಕ್

ಬಳಸಿದ ಎರಡು ಗ್ರೀನ್ ಟೀ ಬ್ಯಾಗ್‌ಗಳು ನಿಮ್ಮಲ್ಲಿರಬೇಕು. ಬ್ಯಾಗ್ ಅನ್ನು ತೆರೆದು ಟೀ ಪುಡಿಯನ್ನು ಬೌಲ್‌ಗೆ ಹಾಕಿ. ಇದಕ್ಕೆ 2 ಚಮಚ ಜೇನು, 1/2 ಚಮಚ ಮೊಸರು ಮತ್ತು ಲಿಂಬೆ ರಸವನ್ನು ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ ಇದನ್ನು ಹಚ್ಚಿಕೊಂಡು 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಶುದ್ಧ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಗೌರವರ್ಣದ ತ್ವಚೆಗಾಗಿ ಗ್ರೀನ್ ಟೀ- ಜೇನಿನ ಫೇಸ್‌ಪ್ಯಾಕ್

 ಗ್ರೀನ್ ಟೀ ಟೋನರ್

ಗ್ರೀನ್ ಟೀ ಟೋನರ್

ಗ್ರೀನ್ ಟೀಯನ್ನು ಕುದಿಸಿಕೊಳ್ಳಿ ಮತ್ತು ಆರಿಸಿ ತಣ್ಣಗೆ ಮಾಡಿ. ಇದು ಕೊಠಡಿಯ ವಾತಾವರಣಕ್ಕೆ ಬಂದ ನಂತರ ನಿಮ್ಮ ಮುಖಕ್ಕೆ ಚಿಮುಕಿಸಿಕೊಳ್ಳಿ. ಇದನ್ನು ಹೀಗೆ ಮಾಡುವುದರಿಂದ ಇದು ಮುಖದ ಸ್ನಾಯುಗಳನ್ನು ಬಿಗಿಗೊಳಿಸುತ್ತದೆ ಮತ್ತು ರಕ್ತಪ್ರಸಾರವನ್ನು ಮುಖಕ್ಕೆ ಉತ್ತಮವಾಗಿ ಮಾಡುತ್ತದೆ.

ಕಣ್ಣುಗಳ ಊತವನ್ನು ನಿವಾರಿಸಲು

ಕಣ್ಣುಗಳ ಊತವನ್ನು ನಿವಾರಿಸಲು

ಬ್ಲ್ಯಾಕ್ ಅಥವಾ ಗ್ರೀನ್ ಟೀ ಬ್ಯಾಗ್‌ಗಳನ್ನು ನೀವು ಇದಕ್ಕಾಗಿ ಹೊಂದಿರಬೇಕು. ಉಗುರು ಬೆಚ್ಚನೆಯ ನೀರಿನಲ್ಲಿ ಈ ಟೀ ಬ್ಯಾಗ್‌ಗಳನ್ನು ಇರಿಸಿ 30 ಸೆಕೆಂಡ್ ಹಾಗೆಯೇ ಇಡಿ. ಉಳಿದ ನೀರನ್ನು ಹೊರತೆಗೆಯಿರಿ ಮತ್ತು ನಿಮ್ಮ ಕಣ್ಣುಗಳ ಸುತ್ತ 15 ನಿಮಿಷಗಳ ಕಾಲ ಬ್ಯಾಗ್ ಅನ್ನು ಇರಿಸಿ. ಇದು ಹೆಚ್ಚು ಉತ್ಕರ್ಷಣ ಅಂಶಗಳನ್ನು ಪಡೆದುಕೊಂಡಿರುವುದರಿಂದ ಕಣ್ಣುಗಳ ಸುತ್ತಲಿರುವ ವರ್ತುಲಗಳು ಮತ್ತು ಊತವನ್ನು ನಿವಾರಿಸುತ್ತದೆ.

ಮೊಡವೆ ಕ್ಲೆನ್ಸರ್

ಮೊಡವೆ ಕ್ಲೆನ್ಸರ್

ಮೊದಲೇ ಕುದಿಸಿ ಆರಿಸಿಕೊಂಡ ಬ್ಲ್ಯಾಕ್ ಟೀಯ ಹನಿಯನ್ನು ನಿಮ್ಮ ಮೆಚ್ಚಿನ ಎಣ್ಣೆಗೆ ಸೇರಿಸಿ. ಟಿ ತಣ್ಣಗಾದ ನಂತರ ಬ್ಲ್ಯಾಕ್ ಟಿಯೊಂದಿಗೆ ಎಣ್ಣೆಯನ್ನು ಮಿಶ್ರ ಮಾಡಿ ಮತ್ತು ಒಂದು ಬಾಟಲಿಯಲ್ಲಿ ಇದನ್ನು ತೆಗೆದಿಡಿ. ಹತ್ತಿಯ ಉಂಡೆಯನ್ನು ತೆಗೆದುಕೊಂಡು ಮೊಡವೆ ಇರುವ ಭಾಗದಲ್ಲಿ 10 ನಿಮಿಷಗಳ ಕಾಲ ಇರಿಸಿ. ತೊಳೆಯುವ ಮುನ್ನ ಮಾಯಿಶ್ಚರೈಸರ್ ಅನ್ನು ಹಚ್ಚಿಕೊಳ್ಳಲು ಮರೆಯದಿರಿ. ಕ್ಲೆನ್ಸರ್ ಹೆಚ್ಚುವರಿ ಎಣ್ಣೆಯನ್ನು ಮುಖದಿಂದ ನಿವಾರಿಸುತ್ತದೆ ಮತ್ತು ಮೊಡವೆಗಳಲ್ಲಿರುವ ಬ್ಯಾಕ್ಟೀರಿಯಾವನ್ನು ಹೊರಹಾಕುತ್ತದೆ.

ಗ್ರೀನ್ ಟೀ ಸ್ಟೀಮ್ ಫೇಶಿಯಲ್

ಗ್ರೀನ್ ಟೀ ಸ್ಟೀಮ್ ಫೇಶಿಯಲ್

ಇದಕ್ಕಾಗಿ ನಿಮಗೆ ಬೇಕಾಗಿರುವುದು 3-4 ಗ್ರೀನ್ ಚಹಾವಾಗಿದೆ. ದೊಡ್ಡ ಪಾತ್ರೆಯಲ್ಲಿ ಗ್ರೀನ್ ಟಿಯನ್ನು ಕುದಿಸಿಕೊಳ್ಳಿ. ಪಾತ್ರೆಯಿಂದ ಕೊಂಚ ದೂರಕ್ಕೆ ನಿಮ್ಮ ತಲೆಯನ್ನು ಇರಿಸಿಕೊಳ್ಳಿ ಮತ್ತು ಹಣೆಗೆ ಬಟ್ಟೆಯನ್ನು ಕಟ್ಟಿಕೊಳ್ಳಿ. 5 ನಿಮಿಷಗಳ ಕಾಲ ಸ್ಟೀಮ್‌ನ ನೇರ ಸಂಪರ್ಕದಲ್ಲಿರಿ. ಒಂದು ಬಾರಿಗೆ ಮೂರು ನಾಲ್ಕು ಸಲ ಇದನ್ನು ನಿಮಗೆ ಮಾಡಬಹುದಾಗಿದೆ. ಇದು ರಂಧ್ರಗಳನ್ನು ಸ್ವಚ್ಛಮಾಡುತ್ತದೆ ಮತ್ತು ತ್ವಚೆಯ ಪಿಎಚ್ ಅನ್ನು ನಿಯಂತ್ರಣ ಮಾಡುತ್ತದೆ. ಗ್ರೀನ್ ಟಿ ಸ್ಟೀಮ್ ನಿಮ್ಮ ಮುಖದ ರಂಧ್ರಗಳನ್ನು ಕುಗ್ಗಿಸುತ್ತದೆ ಇದರಿಂದ ತ್ವಚೆಗೆ ತೀವ್ರ ಹಾನಿಯುಂಟಾಗುವುದಿಲ್ಲ.

English summary

Ways To Use Tea bags For A Prettier Skin

When it comes to using tea leaves topically, many experiments aren't done. It is mainly because, we, Indians, drink milk tea and add milk to our tea while it is boiling.If you want to use used tea leaves for home remedies for a healthier skin, make sure that it is either the used green tea or black tea leaves.
Story first published: Monday, May 8, 2017, 23:32 [IST]
Subscribe Newsletter