For Quick Alerts
ALLOW NOTIFICATIONS  
For Daily Alerts

  ರಾತ್ರಿ ಮಲಗುವ ಮುನ್ನ 'ಗ್ರೀನ್ ಟೀ' ಕುಡಿದರೆ ದುಪ್ಪಟ್ಟು ಲಾಭ!

  By Manu
  |

  ಇಂದು ಸುಮಾರು ಹತ್ತಾರು ಬಗೆಯ ಟೀಪುಡಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದರಲ್ಲೂ ಟೀ ಆಯ್ಕೆಯಲ್ಲಿ ಪೈಪೋಟಿ ನೀಡುವ ಗ್ರೀನ್ ಟೀ ಶೀಘ್ರ ಸಮಯದಲ್ಲಿಯೇ ಮನೆಮಾತಾಗಿದೆ. ಇದರ ಸ್ವಾದಭರಿತ ಸುವಾಸನೆ ಕೇವಲ ಕುಡಿಯಲು ಮಾತ್ರವಲ್ಲ, ಆರೋಗ್ಯದ ಸಮಸ್ಯೆಗೆ, ಸೌಂದರ್ಯ ವೃದ್ಧಿಗೆ, ಹೀಗೆ ನಾನಾ ಸಮಸ್ಯೆಗಳಿಗೆ ತ್ವರಿತವಾಗಿ ಕಾರ್ಯನಿರ್ವಹಿಸುವುದರಿಂದ ಇದು ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಬೆಳೆಯತೊಡಗಿದೆ. ತುಳಸಿ-ಗ್ರೀನ್ ಟೀಯ ಜೋಡಿ-ಮಾಡಲಿದೆ ಕಮಾಲಿನ ಮೋಡಿ

  ಇತ್ತೀಚಿನವರೆಗೂ ನಮಗೆ ಅಪರಿಚಿತವಾಗಿದ್ದ ಹಸಿರು ಟೀ ಅಥವಾ ಗ್ರೀನ್ ಟೀ ಈಗ ಎಲ್ಲೆಡೆ ಲಭ್ಯವಾಗುತ್ತಿದೆ. ಇದಕ್ಕೆ ಇದರ ಆರೋಗ್ಯಕರ ಗುಣಗಳೇ ಕಾರಣ. ಚೀನಾದಲ್ಲಿ ಸಾವಿರಾರು ವರ್ಷಗಳಿಂದ ಕುಡಿಯುತ್ತಾ ಬಂದಿರುವ ಚೀನೀಯರ ಆರೋಗ್ಯದ ಗುಟ್ಟು ಈಗ ಎಲ್ಲರಿಗೂ ಗೊತ್ತಾಗುತ್ತಿದೆ. ಇದರ ಪೋಷಕಾಂಶಗಳು, ಅಂಟಿ ಆಕ್ಸಿಡೆಂಟ್‌ಗಳು (ಉತ್ಕರ್ಷಣ ನಿರೋಧಕ) ಮತ್ತು ಇತರ ಖನಿಜಗಳ ಪ್ರಮಾಣವನ್ನು ಪರಿಗಣಿಸಿದರೆ ಇದೊಂದು ಆರೋಗ್ಯಕ್ಕೆ ಅತ್ಯುತ್ತಮವಾದ ಚಹಾ ಎನ್ನುವುದರಲ್ಲಿ ಎರಡು ಮಾತಿಲ್ಲ.  ಗೌರವರ್ಣದ ತ್ವಚೆಗಾಗಿ ಗ್ರೀನ್ ಟೀ- ಜೇನಿನ ಫೇಸ್‌ಪ್ಯಾಕ್

  ಅಧ್ಯಯನಗಳಿಂದಲೂ ಗ್ರೀನ್ ಟೀ ಕುಡಿಯುವುದರಿಂದ ಹಲವಾರು ಆರೋಗ್ಯ ಲಾಭಗಳಿವೆ ಎಂದು ತಿಳಿದುಬಂದಿದೆ. ಬನ್ನಿ ಇಷ್ಟೆಲ್ಲಾ ಅನುಕೂಲಗಳಿರುವ ಗ್ರೀನ್ ಟೀಯನ್ನು ಮಲಗುವ ಮೊದಲು ಕುಡಿದರೆ ಆರೋಗ್ಯಕ್ಕೆ ಯಾವ್ಯಾವ ಲಾಭಗಳು ಆಗಲಿದೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ, ಮುಂದೆ ಓದಿ...

  ಉಲ್ಲಾಸಿತವಾಗಿಸಿರುತ್ತದೆ

  ಉಲ್ಲಾಸಿತವಾಗಿಸಿರುತ್ತದೆ

  ಮಲಗುವ ಮೊದಲು ಗ್ರೀನ್ ಟೀ ಕುಡಿದರೆ ಆಗುವ ಮೊದಲ ಲಾಭವಿದು. ಇದರಲ್ಲಿನ ಕೆಫಿನ್ ಅಂಶವು ಮೆದುಳಿನ ಕ್ರಿಯೆಯನ್ನು ಸುಧಾರಿಸುತ್ತದೆ. ಆಮಿನೊ ಆ್ಯಸಿಡ್, ಲ್ಯಾಥನೈನ್ ಉದ್ವೇಗವನ್ನು ತಡೆಯುವುದು ಮತ್ತು ನಿಮ್ಮನ್ನು ಉಲ್ಲಾಸಿತವಾಗಿರಿಸುತ್ತದೆ.

  ಸಾಮಾನ್ಯ ಶೀತದ ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದು

  ಸಾಮಾನ್ಯ ಶೀತದ ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದು

  ಉರಿಯೂತ ಶಮನಕಾರಿಯಲ್ಲಿ ಕ್ಯಾಟಚಿನ್ ಅತ್ಯಂತ ಪರಿಣಾಮಕಾರಿಯೆಂದು ಪರಿಗಣಿಸಲಾಗಿದೆ. ಇದನ್ನು ಸುಲಭವಾಗಿ ಪಡೆಯಲು ಗ್ರೀನ್ ಟೀ ಕುಡಿಯಬೇಕು. ಸಾಮಾನ್ಯ ಶೀತ ಮತ್ತು ಜ್ವರದಿಂದ ಬಳಲುತ್ತಿದ್ದರೆ ಒಂದು ಕಪ್ ಗ್ರೀನ್ ಟೀ ಕುಡಿಯಿರಿ. ಇದು ಔಷಧಿಯಾಗಿ ಪರಿಣಾಮಕಾರಿ ಮತ್ತು ಕಫ ಹಾಗೂ ಶೀತದ ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದು.

  ಚಯಾಪಚಯ ಕ್ರಿಯೆ ಸುಧಾರಿಸುವುದು

  ಚಯಾಪಚಯ ಕ್ರಿಯೆ ಸುಧಾರಿಸುವುದು

  ಯಾವುದೇ ಅಡೆತಡೆಯಿಲ್ಲದೆ ಸುಖನಿದ್ರೆ ಮಾಡಿದರೆ ಚಯಾಪಚಾಯ ಕ್ರಿಯೆಯು ಉತ್ತಮವಾಗುವುದು ಎಂದು ಅಧ್ಯಯನಗಳು ಹೇಳಿವೆ. ಚಯಾಪಚಯ ಕ್ರಿಯೆ ಸರಿಯಾಗಿದ್ದರೆ ಆಗ ದೇಹ ಸದೃಢವಾಗಿ ಚರ್ಮವು ಕಾಂತಿ ಹೊಂದಿರುವುದು. ಗ್ರೀನ್ ಟೀ ಕುಡಿದರೆ ಚಯಾಪಚಾಯ ಕ್ರಿಯೆ ಸರಿಯಾಗಿರುವುದು.

  ಜ್ವರ ತಡೆಯುವುದು

  ಜ್ವರ ತಡೆಯುವುದು

  ರಾತ್ರಿ ಮಲಗುವ ಮೊದಲು ಗ್ರೀನ್ ಟೀ ಕುಡಿಯುವ ಪ್ರಮುಖ ಲಾಭವೆಂದರೆ ಜ್ವರ ತಡೆಯುವುದು. ಹವಾಮಾನ ಬದಲಾವಣೆ ವೇಳೆ ಸಾಮಾನ್ಯವಾಗಿ ಜ್ವರ ಕಾಣಿಸಿಕೊಳ್ಳುತ್ತದೆ. ಗ್ರೀನ್ ಟೀಯಲ್ಲಿರುವ ಪೊಲ್ಯಫೆನೊಲ್ ವೈರಲ್ ದಾಳಿಯನ್ನು ತಡೆದು ಜ್ವರದಿಂದ ರಕ್ಷಿಸುತ್ತದೆ. ರಾತ್ರಿ ವೇಳೆ ಗ್ರೀನ್ ಟೀ ಕುಡಿದರೆ ಜ್ವರ ಬರುವ ಸಾಧ್ಯತೆ ಶೇ.75ರಷ್ಟು ಇರುವುದಿಲ್ಲ.

  ಕಲ್ಮಶಗಳನ್ನು ಹೊರಹಾಕುವುದು

  ಕಲ್ಮಶಗಳನ್ನು ಹೊರಹಾಕುವುದು

  ರಾತ್ರಿ ಮಲಗುವ ಮೊದಲು ಗ್ರೀನ್ ಟೀ ಕುಡಿದರೆ ಬೆಳಗ್ಗೆ ಕರುಳಿನ ಕ್ರಿಯೆಯು ದ್ವಿಗುಣಗೊಳ್ಳುವುದು ಮತ್ತು ದೇಹದಲ್ಲಿನ ಎಲ್ಲಾ ಕಲ್ಮಶವನ್ನು ಹೊರಹಾಕುವುದು. ಕಲ್ಮಶವು ದೇಹದೊಳಗೆ ಇದ್ದರೆ ವಿಷವು ಉತ್ಪತ್ತಿಯಾಗುವುದು, ಇದರಿಂದ ಹಲವಾರು ರೋಗ ಬರುವುದು. ರಾತ್ರಿ ಊಟದ ಬಳಿಕ ಗ್ರೀನ್ ಟೀ ಕುಡಿದ ಮೇಲೆ ಏನೂ ತಿನ್ನಬೇಡಿ.

  ಮೆದುಳಿನ ಚುರುಕುತನಕ್ಕೆ

  ಮೆದುಳಿನ ಚುರುಕುತನಕ್ಕೆ

  ಮಲಗುವ ಮೊದಲು ಗ್ರೀನ್ ಟೀ ಕುಡಿಯುವ ಲಾಭವೆಂದರೆ ಮೆದುಳಿನ ಕ್ರಿಯೆಯು ಸುಧಾರಣೆಯಾವುದು. ಇದರಿಂದಾಗಿ ದೇಹವು ಚುರುಕಾಗುತ್ತದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಇದರಿಂದ ನೀವು ಚುರುಕಾಗಿರಲು ರಾತ್ರಿ ಮಲಗುವ ಮೊದಲು ಗ್ರೀನ್ ಟೀ ಕುಡಿಯಲು ಮರೆಯಬೇಡಿ.

   

  English summary

  What Are The Benefits Of Drinking Green Tea Before Bed?

  All of you are quite aware of the benefits of having green tea. The health conscious people always prefer green tea without adding any sugar and milk, as it helps lose weight and is also good for several health issues. Green tea is rich in antioxidants that keep cholesterol level in check, thereby benefiting skin and hair to a great extent. According to several medical studies, it has been proved that green tea contains several health benefits have a look
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more