Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಬ್ಯೂಟಿ ಟಿಪ್ಸ್: ತ್ವಚೆಯ ಅಂದ-ಚಂದ ಹೆಚ್ಚಿಸುವ 'ಸಾಸಿವೆ ಎಣ್ಣೆ'
ಹಿತ್ತಲ ಗಿಡ ಮದ್ದು ಎಂಬ ಗಾದೆ ಮಾತಿನಂತೆ ನಿಮ್ಮ ಸೌಂದರ್ಯದ ಸರ್ವ ಸಮಸ್ಯೆಗಳಿಗೆ ಅಡುಗೆ ಮನೆ ಉತ್ತಮ ಔಷಧವೆಂಬುದು ನಿಮಗೆ ತಿಳಿದಿದೆಯೇ? ಹೌದು ಓದುಗರೇ, ನಿಮ್ಮ ಸೌಂದರ್ಯದ ಯಾವುದೇ ಸಮಸ್ಯೆಗಳಿಗೆ ವೈದ್ಯರನ್ನು ಕಾಣುವ ಮುನ್ನ ನಿಮ್ಮ ಪಾಕಶಾಲೆಯಲ್ಲೊಮ್ಮೆ ಚಿತ್ತ ಹಾಯಿಸಿ. ಇದರಿಂದ ನಿಮ್ಮ ಸಮಯ, ದುಡ್ಡು ಉಳಿತಾವಾಗುವುದರ ಜೊತೆಗೆ ಸಮಸ್ಯೆ ಪರಿಹಾರವಾಗಿ ಇನ್ನಷ್ಟು ವರ್ಧಿತ ಸೊಬಗನ್ನು ನೀವು ಪಡೆದುಕೊಳ್ಳುವುದಂತೂ ಗ್ಯಾರಂಟಿ. ಸಾಸಿವೆ ಎಣ್ಣೆ- ಆರೋಗ್ಯಕ್ಕೂ ಸೈ, ಅಡುಗೆಗೂ ಜೈ
ಅಡುಗೆ ಮನೆಯಲ್ಲಿ ಬಳಕೆಯಾಗುವ ಸಾಸಿವೆ ಎಣ್ಣೆ ನಿಮ್ಮ ಮುಖದ ಕಾಂತಿಯನ್ನು ಹೇಗೆ ದ್ವಿಗುಣಗೊಳಿಸಬಲ್ಲುದು ಅಂತೆಯೇ ಚರ್ಮದ ಆರೈಕೆಯನ್ನು ಎಷ್ಟು ಅಸ್ಥೆಯಿಂದ ಮಾಡುತ್ತದೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸಲಿದ್ದೇವೆ. ಸಾಸಿವೆ ಎಣ್ಣೆ: ಕೂದಲಿನ ಸಮಸ್ಯೆಗಳಿಗೆ ಹೇಳಿ ಮಾಡಿಸಿದ ಮನೆಮದ್ದು
ಹೆಚ್ಚು ವೈವಿಧ್ಯಮಯವಾಗಿರುವ ಅಂಶಗಳನ್ನು ತನ್ನಲ್ಲಿ ಹುದುಗಿಸಿಟ್ಟುಕೊಂಡಿರುವ ಸಾಸಿವೆ ಎಣ್ಣೆಯ ಅದ್ಭುತ ಕರಾಮತ್ತಿಗೆ ನೀವು ತಲೆದೂಗಲೇಬೇಕು. ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಅಂಶಗಳನ್ನು ಒಳಗೊಂಡಿದ್ದು ನಿಮ್ಮ ತ್ವಚೆಯ ಯಾವುದೇ ಸಮಸ್ಯೆಗಳಿಗೆ ಉತ್ತಮ ಔಷಧ ಎಂದೆನಿಸಿದೆ. ಹಾಗಿದ್ದರೆ ಈ ಕೆಳಗಿನ ಅಂಶಗಳ ಮೂಲಕ ಸಾಸಿವೆ ಎಣ್ಣೆಯ ಮಹತ್ವವೇನು ಎಂಬುದನ್ನು ಅರಿತುಕೊಳ್ಳೋಣ....

ನೈಸರ್ಗಿಕ ಕ್ಲೆನ್ಸರ್
ನೀವು ನಿಯಮಿತವಾಗಿ ಸಾಸಿವೆ ಎಣ್ಣೆಯನ್ನು ಬಳಸಿದಲ್ಲಿ ನಿಮಗೆ ಈ ಅಂಶ ಮನದಟ್ಟಾಗುವುದುಖಂಡಿತ. ನಿಮ್ಮ ತ್ವಚೆಗೆ ಇದು ನೈಸರ್ಗಿಕ ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸಲಿದೆ. ನೀವು ದಟ್ಟವಾದ ಮೇಕಪ್ ಮಾಡಿಕೊಂಡು ಅದನ್ನು ಹೋಗಲಾಡಿಸುವಲ್ಲಿ ಕಷ್ಟಪಡುತ್ತೀರಿ ಎಂದಾದಲ್ಲಿ ಸಾಸಿವೆ ಎಣ್ಣೆ ನಿಮಗೆ ಉಪಯೋಗಕಾರಿ ಎಂದೆನಿಸಲಿದೆ.

ನೆರಿಗೆಗಳ ನಿವಾರಿಸುತ್ತದೆ
ವಿಟಮಿನ್ ಇ ಅಂಶವನ್ನು ಸಾಸಿವೆ ಎಣ್ಣೆ ಪಡೆದುಕೊಂಡಿದ್ದು ಸಣ್ಣಗೆರೆಗಳು ಮತ್ತು ನೆರಿಗೆಗಳನ್ನು ಹೋಗಲಾಡಿಸಲು ಸ್ವಲ್ಪ ಎಣ್ಣೆಯಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ. ಅಂತೆಯೇ ನವಜಾತ ಶಿಶುವಿಗೆ ಈ ಎಣ್ಣೆಯಿಂದ ಮಸಾಜ್ ಮಾಡುವುದು ಕೂಡ ಉತ್ತಮ ಆರೋಗ್ಯದ ಗುಟ್ಟಾಗಿದೆ.

ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ
ಇದೊಂದು ಉತ್ತಮ ಸನ್‌ಸ್ಕ್ರೀನ್ ಲೋಶನ್‌ನಂತೆ ಕಾರ್ಯನಿರ್ವಹಿಸುತ್ತದೆ. ನಿಮ್ಮದು ಎಣ್ಣೆಯುಕ್ತ ತ್ವಚೆಯಾದಲ್ಲಿ ಸಾಸಿವೆ ಎಣ್ಣೆ ಕಿರಿಕಿರಿಯನ್ನುಂಟು ಮಾಡಬಹುದು ಇದಕ್ಕಾಗಿ ಸಮ ಪ್ರಮಾಣದಲ್ಲಿ ತೆಂಗಿನೆಣ್ಣೆಯನ್ನು ಸೇರಿಸಿ ನಂತರ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ. ಸೂರ್ಯನ ಅತಿ ಪ್ರಬಲ ಕಿರಣಗಳಿಂದ ಸಾಸಿವೆ ಎಣ್ಣೆ ನಿಮ್ಮ ಮುಖ ಕಾಂತಿಯನ್ನು ರಕ್ಷಿಸಲಿದೆ. ಇದರಲ್ಲಿ ವಿಟಮಿನ್ ಇ ಅಂಶ ಇರುವುದರಿಂದ ಸೂರ್ಯನ ಹಾನಿಕಾರಕ ಕಿರಣಗಳಿಂದ ತ್ವಚೆಯನ್ನು ಸಂರಕ್ಷಿಸುತ್ತದೆ.

ಡಾರ್ಕ್ ಸ್ಪಾಟ್ಸ್ ನಿವಾರಿಸುತ್ತದೆ
ನಿಮ್ಮ ಮುಖಕಾಂತಿಯನ್ನು ಆರೋಗ್ಯಪೂರ್ಣವಾಗಿ ನಳನಳಿಸುವಂತೆ ಮಾಡುವಲ್ಲಿ ಸಾಸಿವೆ ಎಣ್ಣೆ ಅತ್ಯದ್ಭುತ ಎಂದೆನಿಸಿದೆ. ಡಾರ್ಕ್ ಸ್ಪಾಟ್‌ಗಳ ನಿವಾರಣೆಯನ್ನು ಮಾಡುವಲ್ಲಿ ಸಾಸಿವೆ ಎಣ್ಣೆ ಸಿದ್ಧ ಹಸ್ತ ಎಂದೆನಿಸಿದೆ. ಬ್ಯೂಟಿ ಟಿಪ್ಸ್: ಸೌಂದರ್ಯದ ವಿಷಯದಲ್ಲಿ 'ಸಾಸಿವೆ ಎಣ್ಣೆ' ಎತ್ತಿದ ಕೈ!

ಒಣ ತ್ವಚೆಯನ್ನು ಮಾಯಿಶ್ಚರೈಸ್ ಮಾಡುತ್ತದೆ
ಚಳಿಗಾಲದಲ್ಲಿ ನಿಮ್ಮ ತ್ವಚೆ ಒಣಗಿರುತ್ತದೆ ಮತ್ತು ತೇವಾಂಶದ ಅಗತ್ಯತೆ ಮುಖಕ್ಕೆ ಬೇಕಾಗಿರುತ್ತದೆ. ಸಾಸಿವೆ ಎಣ್ಣೆಯಿಂದ ನಯವಾಗಿ ಮಸಾಜ್ ಮಾಡುವುದು ಚಳಿಗಾಲದ ಒಣತ್ವವನ್ನು ದೂರಮಾಡುತ್ತದೆ.

ಟ್ಯಾನ್ ನಿವಾರಣೆಯಲ್ಲಿ ಸಿದ್ಧಹಸ್ತ
ಟ್ಯಾನ್ ನಿವಾರಿಸಲು ಸ್ವಲ್ಪ ಮೊಸರು, ಒಂದೆರಡು ಬೊಟ್ಟು ಸಾಸಿವೆ ಎಣ್ಣೆ ಮತ್ತು ಲಿಂಬೆ ರಸವನ್ನು ಬಳಸಿಕೊಳ್ಳಿ. ನಿಮ್ಮ ಕುತ್ತಿಗೆ ಮತ್ತು ಮುಖಕ್ಕೆ ಈ ಮಿಶ್ರಣವನ್ನು ಹಚ್ಚಿಕೊಳ್ಳಿ. ಹದಿನೈದು ನಿಮಿಷಗಳ ತರುವಾಯ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ.

ಹೊಳೆಯುವ ಕಾಂತಿಗಾಗಿ
ಒಂದು ಬೌಲ್‌ನಲ್ಲಿ ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ ಕಡಲೆಹಿಟ್ಟನ್ನು ಸೇರಿಸಿ. ಇದಕ್ಕೆ ಸ್ವಲ್ಪ ಹನಿ ನಿಂಬೆ ರಸವನ್ನು ಹಿಂಡಿಕೊಳ್ಳಲು ಮರೆಯದಿರಿ. ಹಚ್ಚಿಕೊಂಡು ಇಪ್ಪತ್ತು ನಿಮಿಷಗಳ ತರುವಾಯ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಆರೋಗ್ಯ ಟಿಪ್ಸ್: ಸಾಸಿವೆ ಎಣ್ಣೆಯ ತಾಕತ್ತಿಗೆ, ತಲೆಬಾಗಲೇಬೇಕು!



Click it and Unblock the Notifications