ಸಾಸಿವೆ ಎಣ್ಣೆ- ಆರೋಗ್ಯಕ್ಕೂ ಸೈ, ಅಡುಗೆಗೂ ಜೈ

By: manu
Subscribe to Boldsky

ಕೆಲವರಿಗೆ ಅಡುಗೆಯಲ್ಲಿ ಹೆಚ್ಚಿನ ಎಣ್ಣೆ ತೇಲುತ್ತಿದ್ದರೇ ಅದು ರುಚಿಕರ, ಆರೋಗ್ಯಕರ ಎಂಬ ಭಾವನೆಯಿದೆ. ಆದರೆ ಆರೋಗ್ಯಕ್ಕೆ ಉಪ್ಪು ಮತ್ತು ಎಣ್ಣೆ ಇವೆರಡೂ ಮಿತಿಯಲ್ಲಿದ್ದಷ್ಟೂ ಉತ್ತಮ. ಜಾಣತನವೆಂದರೆ ಅರೋಗ್ಯಕ್ಕೆ ಪೂರಕವಾದ ಎಣ್ಣೆಗಳನ್ನು ಆರಿಸಿಕೊಳ್ಳುವುದು. ಮಾರುಕಟ್ಟೆಯಲ್ಲಂತೂ ಹತ್ತು ಹಲವು ತರಹದ ಅಡುಗೆ ಎಣ್ಣೆಗಳ ಆಯ್ಕೆ ಗೊಂದಲ ಮೂಡಿಸುತ್ತದೆ. ನೆಲಗಡಲೆ, ಸೂರ್ಯಕಾಂತಿ, ಕ್ಯಾನೋಲಾ, ವೆಜೆಟೆಬಲ್, ಪಾಮ್, ಸಾಸಿವೆ, ಇತ್ಯಾದಿಗಳಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ?

ಆಹಾರತಜ್ಞರ ಪ್ರಕಾರ ಆಲಿವ್, ಮೆಕ್ಕೆಜೋಳ, ಸೂರ್ಯಕಾಂತಿ, ಕ್ಯಾನೋಲಾ, ಸಾಸಿವೆ ಎಣ್ಣೆಗಳ ಆಯ್ಕೆ ಉತ್ತಮ. ಆದರೆ ವೆಜಿಟೇಬಲ್, ಪಾಮ್, ವನಸ್ಪತಿ, ಡಾಲ್ಡಾ ಮೊದಲಾದವುಗಳು ಆರೋಗ್ಯಕ್ಕೆ ಮಾರಕವಾಗಿರುವುದರಿಂದ ಅವುಗಳ ತಂಟೆಗೆ ಹೋಗದಿರುವುದೇ ವಾಸಿ. ಆದರೆ ಆಲಿವ್, ಕ್ಯಾನೋಲಾ, ಮೆಕ್ಕೆಜೋಳದ ಎಣ್ಣೆಗಳು ಕೊಂಚ ದುಬಾರಿಯಾದುದರಿಂದ ಜನಸಾಮಾನ್ಯರು ಕೊಂಚ ಹಿಂದೇಟು ಹಾಕುತ್ತಾರೆ. ಆರೋಗ್ಯಕ್ಕೂ ಉತ್ತಮ, ಬೆಲೆಯೂ ಕಡಿಮೆ ಆಗಿರಬೇಕು ಎಂಬ ಇರಾದೆಯವರಿಗೆ ಸಾಸಿವೆ ಎಣ್ಣೆ ಅತ್ಯುತ್ತಮವಾದ ಆಯ್ಕೆಯಾಗಿದೆ. ಕೂದಲು ಮತ್ತು ತ್ವಚೆ ಸೌಂದರ್ಯಕ್ಕೆ-ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆಯ ಕುರಿತಾದ ಇತ್ತೀಚಿನ ಸಂಶೋಧನೆಗಳಿಂದ ಇದರಲ್ಲಿರುವ ಪೋಷಕಾಂಶಗಳು ಹೃದಯಕ್ಕೆ ಉತ್ತಮ ಎಂದು ತಿಳಿದುಬಂದಿದೆ. ಜೀರ್ಣಶಕ್ತಿಯನ್ನು ಹೆಚ್ಚಿಸುವ, ಹೆಚ್ಚು ಕೊಬ್ಬನ್ನು ಬಳಸುವ ಮೂಲಕ ತೂಕ ಕಡಿಮೆಮಾಡುವ ಗುಣಗಳು ಈ ಎಣ್ಣೆಯಲ್ಲಿವೆ. ಆದರೆ ಇದರ ಕಮಟು ವಾಸನೆಯೊಂದೇ ಈ ಎಣ್ಣೆಯನ್ನು ಜನರು ಉಪಯೋಗಿಸಲು ಹಿಂದೇಟು ಹಾಕಲು ಕಾರಣವಾಗಿದೆ. ಸಾಸಿವೆ ಎಣ್ಣೆ: ಕೂದಲಿನ ಸಮಸ್ಯೆಗಳಿಗೆ ಹೇಳಿ ಮಾಡಿಸಿದ ಮನೆಮದ್ದು

ಆದರೆ ಅಡುಗೆ ಮುಗಿಸಿದ ಬಳಿಕ ಈ ವಾಸನೆ ಸಾಕಷ್ಟು ಕಡಿಮೆಯಾಗುತ್ತದೆ. ಇದರ ಸದ್ಗುಣಗಳನ್ನು ತಿಳಿದ ಬಳಿಕ ಈ ಕಮಟು ವಾಸನೆಯನ್ನು ಮೀರಿ ಇದರ ಸ್ವಾದವನ್ನು ಆಸ್ವಾದಿಸಲು ಖಂಡಿತಾ ಮುಂದಾಗುತ್ತೀರಿ ಎನ್ನುತ್ತದೆ ಕೆಳಗಿನ ಸ್ಲೈಡ್ ಶೋ ನಲ್ಲಿರುವ ವಿವರಗಳು..

ದೇಹದ ಹಳೆಯ ನೋವುಗಳನ್ನು ನಿವಾರಿಸುತ್ತದೆ

ದೇಹದ ಹಳೆಯ ನೋವುಗಳನ್ನು ನಿವಾರಿಸುತ್ತದೆ

ಕೆಲವೊಮ್ಮೆ ಸಂಧಿನೋವು, ಆರ್ಥೈಟಿಸ್, ರೂಮ್ಹಾಟಿಕ್ ನೋವು (ಸಂಧಿವಾತ) ಮೊದಲಾದವು ವರ್ಷಗಟ್ಟಲೇ ಸತಾಯಿಸುತ್ತವೆ. ಯಾವುದೇ ಔಷಧಿಗೂ ಬಗ್ಗದೇ ಜೀವನಸಂಗಾತಿಗಳಾಗುತ್ತವೆ. ಆದರೆ ಇವುಗಳಿಗೆ ಸೋಡಾಚೀಟಿ ಕೊಡಲು ಸಾಸಿವೆ ಎಣ್ಣೆ ಶಕ್ತವಾಗಿದೆ.

ದೇಹದ ಹಳೆಯ ನೋವುಗಳನ್ನು ನಿವಾರಿಸುತ್ತದೆ

ದೇಹದ ಹಳೆಯ ನೋವುಗಳನ್ನು ನಿವಾರಿಸುತ್ತದೆ

ಇದಕ್ಕೆ ಹೆಚ್ಚೇನೂ ಮಾಡಬೇಕಾಗಿಲ್ಲ. ನಿಮ್ಮ ನಿತ್ಯದ ಅಡುಗೆಯಲ್ಲಿ ಎಣ್ಣೆ ಬಳಸುವಲ್ಲೆಲ್ಲಾ ಸಾಸಿವೆ ಎಣ್ಣೆ ಬಳಸಿದರಾಯಿತು ಅಷ್ಟೇ. ಒಂದೆರಡು ದಿನಗಳಲ್ಲಿಯೇ ಇದರ ಪರಿಣಾಮ ತಿಳಿಯಲು ಆರಂಭವಾಗುತ್ತದೆ. ಸಾಸಿವೆ ಎಣ್ಣೆ ಒಂದು ಪ್ರಬಲ ಉರಿಯೂತ ನಿವಾರಕವಾಗಿದ್ದು ದೇಹದ ಹಳೆಯ ನೋವುಗಳನ್ನೆಲ್ಲಾ ನಿವಾರಿಸುವ ಗುಣ ಹೊಂದಿದೆ.

ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

ನಾವು ಸೇವಿಸುವ ಆಹಾರದಲ್ಲಿ ಅತಿ ಕಷ್ಟದಲ್ಲಿ ಜೀರ್ಣವಾಗುವ ಆಹಾರಗಳೆಂದರೆ ಎಣ್ಣೆ ಮತ್ತು ಉಪ್ಪು. ಸಾಸಿವೆ ಎಣ್ಣೆ ಹೊಟ್ಟೆಯಲ್ಲಿ ಕೊಂಚ ಪ್ರಚೋದನೆ ನೀಡುತ್ತದೆ. ಇದರಿಂದಾಗಿ ಜಠರರಸದ ಉತ್ಪತ್ತಿಯಲ್ಲಿ ಹೆಚ್ಚಳವಾಗಿ ಆಹಾರವನ್ನು ಚೆನ್ನಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತದೆ.

ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

ಇದಕ್ಕೆ ಪೂರಕವಾಗಿ ಪಿತ್ತರಸವೂ ಉತ್ತಮ ಪ್ರಮಾಣದಲ್ಲಿ ಸ್ರಾವವಾಗಿ ಜೀರ್ಣಕ್ರಿಯೆಯನ್ನು ಚುರುಕುಗೊಳಿಸುವುದರಿಂದ ಕರುಳುಗಳು ಆಹಾರದಿಂದ ಪೋಷಕಾಂಶಗಳು ಸುಲಭವಾಗಿ ಹೀರಲು ಸಾಧ್ಯವಾಗುತ್ತದೆ. ತನ್ಮೂಲಕ ಸರಿಯಾಗಿ ಜೀರ್ಣವಾಗದೇ ಉದ್ಭವವಾಗುವ ತೊಂದರೆಗಳಿಂದ ಮುಕ್ತಿ ನೀಡುತ್ತದೆ.

ಚರ್ಮದ ಕಾಂತಿ ಹೆಚ್ಚುತ್ತದೆ

ಚರ್ಮದ ಕಾಂತಿ ಹೆಚ್ಚುತ್ತದೆ

ಸಾಸಿವೆ ಎಣ್ಣೆಯ ಸೇವನೆ ಚರ್ಮಕ್ಕೆ ಒಳಗಿನಿಂದ ಪೋಷಣೆ ನೀಡುವ ಮೂಲಕ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ತ್ವಚೆಯ ಚರ್ಮದ ಕಲೆಗಳನ್ನು ನಿವಾರಿಸಲು ಮತ್ತು ಸೆಳೆತವನ್ನು ಹೆಚ್ಚಿಸಲು ನೆರವಾಗುತ್ತದೆ. ಈ ಮೂಲಕ ಮುಪ್ಪನ್ನು ಮುಂದೂಡಲು ನೆರವಾಗುತ್ತದೆ.

ಬ್ಯಾಕ್ಟೀರಿಯಾ ನಿವಾರಕ ಗುಣ

ಬ್ಯಾಕ್ಟೀರಿಯಾ ನಿವಾರಕ ಗುಣ

ಸಾಸಿವೆ ಎಣ್ಣೆಯಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ದೇಹಕ್ಕೆ ಮಾರಕವಾದ ಬಹಳಷ್ಟು ಬ್ಯಾಕ್ಟೀರಿಯಾಗಳನ್ನು ತೊಲಗಿಸುತ್ತದೆ. ವಿಶೇಷವಾಗಿ ಹೊಟ್ಟೆ, ಮೂತ್ರಕೋಶ, ಮೂತ್ರನಾಳಗಳಲ್ಲಿ ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾಗಳಿಗೆ ಸಾಸಿವೆ ಎಣ್ಣೆ ಸಿಂಹಸ್ವಪ್ನವಾಗಿದೆ.

ಹೃದಯಕ್ಕೂ ಉತ್ತಮ

ಹೃದಯಕ್ಕೂ ಉತ್ತಮ

ಹೃದಯಕ್ಕೆ ಅತ್ಯುತ್ತಮವಾದ ಎಣ್ಣೆಗಳ ಪಟ್ಟಿಯಲ್ಲಿ ಸಾಸಿವೆ ಎಣ್ಣೆ ಮೇಲಿನ ಸ್ಥಾನದಲ್ಲಿ ನಿಲ್ಲುತ್ತದೆ. ಇದರಲ್ಲಿರುವ mono-saturated oil ಎಂಬ ಎಣ್ಣೆಕಣಗಳು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಣಗಳನ್ನು ನಿವಾರಿಸಿ ಉತ್ತಮ ಕೊಲೆಸ್ಟ್ರಾಲ್ ಪ್ರಮಾಣವನ್ನು ಆರೋಗ್ಯಕರ ಮಟ್ಟದಲ್ಲಿರಿಸುವ ಮೂಲಕ ಹೃದಯಕ್ಕೆ ಹೆಚ್ಚಿನ ಒತ್ತಡ ಬೀಳದಂತೆ ಸಹಕರಿಸುತ್ತದೆ. ಇದು ಹೃದಯಕ್ಕೆ ಎದುರಾಗುವ ಹಲವು ತೊಂದರೆಗಳಿಂದ ಕಾಪಾಡುತ್ತದೆ.

ಶಿಲೀಂದ್ರನಾಶಕ ಗುಣಗಳು

ಶಿಲೀಂದ್ರನಾಶಕ ಗುಣಗಳು

ಸಾಮಾನ್ಯವಾಗಿ ತೇವಗೊಂಡಿರುವ ಭಾಗದಲ್ಲಿ ಸುಲಭವಾಗಿ ಆವರಿಸುವ ಶಿಲೀಂಧ್ರಗಳು ಬೇಗನೇ ಬೆಳೆದು ದೇಹವನ್ನು ಆವರಿಸಿಕೊಳ್ಳುತ್ತವೆ. ಪರಿಣಾಮವಾಗಿ ಶೀತ, ಕೆಮ್ಮು, ಕಫ, ತಲೆನೋವು, ತಲೆಸಿಡಿತ, ಜ್ವರ ಮೊದಲಾದ ಹಲವು ತೊಂದರೆಗಳು ಎದುರಾಗುತ್ತವೆ. ಸಾಸಿವೆ ಎಣ್ಣೆಯನ್ನು ಅಡುಗೆಯ ಮೂಲಕ ನಿತ್ಯವೂ ಸೇವಿಸುತ್ತಾ ಬಂದರೆ ಶಿಲೀಂಧ್ರಗಳನ್ನು ಹತ್ತಿರ ಬರಲು ಬಿಡದ ಇದರ ಶಿಲೀಂದ್ರನಾಶಕ ಗುಣ ಈ ಎಲ್ಲಾ ತೊಂದರೆಗಳಿಂದ ಕಾಪಾಡುತ್ತದೆ.

ಮಸಾಜ್‪ಗೂ ಉತ್ತಮ

ಮಸಾಜ್‪ಗೂ ಉತ್ತಮ

ವಿವಿಧ ಮೂಳೆಸಂಧಿಗಳ ನೋವನ್ನು ಒಳಗಿನಿಂದ ಕಡಿಮೆಗೊಳಿಸುವ ಸಾಸಿವೆ ಎಣ್ಣೆ ಹೊರಗಿನಿಂದಲೂ ಉತ್ತಮ ಪೋಷಣೆ ನೀಡುತ್ತದೆ. ಇದಕ್ಕಾಗಿ ನೋವಿರುವ ಸ್ಥಲದಲ್ಲಿ ನಯವಾಗಿ ದಿನಕ್ಕೆರಡು ಬಾರಿ ಮಸಾಜ್ ಮಾಡಿದರೆ ಸಾಕು. ಇಡಿಯ ಮೈಗೂ ಮಸಾಜ್ ಮಾಡಬಹುದು, ಆದರೆ ಕೊಂಚ ಉರಿಯಾಗುವುದರಿಂದ ಹೆಚ್ಚು ಸಮಯ ಬಿಡದೇ ಸ್ನಾನಮಾಡಬೇಕು.

ಕೂದಲು ಉದುರುವುದನ್ನು ನಿಲ್ಲಿಸುತ್ತದೆ

ಕೂದಲು ಉದುರುವುದನ್ನು ನಿಲ್ಲಿಸುತ್ತದೆ

ಸಾಸಿವೆ ಎಣ್ಣೆಯನ್ನು ತಲೆಗೆ ಹಾಕಿ ಮಸಾಜ್ ಮಾಡುವುದರಿಂದ ತಲೆಗೂದಲು ಉದುರುವುದನ್ನೂ ಬಹಳಷ್ಟು ಮಟ್ಟಿಗೆ ನಿಲ್ಲಿಸಬಹುದು.

English summary

Guys, It's Time To Cook With Mustard Oil

Which oil would you prefer using for better health - vegetable oil, olive oil or mustard oil? According to the latest research it is said that using the latter is much more healthier. The reason being, mustard oil has benefits which is good for heart health, it aids in better digestion when you add it to non-vegetarian meals and most all mustard oil helps with weight loss.
Please Wait while comments are loading...
Subscribe Newsletter