ತುಂಬಾನೇ ಸರಳವಾದ ಸೌಂದರ್ಯ ಟಿಪ್ಸ್, ಸದಾ ನೆನಪಿಟ್ಟುಕೊಳ್ಳಿ

By: manu
Subscribe to Boldsky

ನಿಮ್ಮ ಬಳಿ ಎಷ್ಟೇ ವೈಭವೋಪೇತ ಆಭರಣಗಳಿದ್ದರೂ ಸೌಂದರ್ಯವೆಂವ ಆಭರಣಕ್ಕೆ ಇದ್ಯಾವುದೂ ಸಮವಲ್ಲ. ಕಳೆಗುಂದಿದ, ಕಲೆಗಳುಳ್ಳ, ಮೊಡವೆಯಿಂದ ಕೂಡಿರುವ ಮುಖದ ಸೌಂದರ್ಯ ನಿಮ್ಮದಾಗಿದ್ದಲ್ಲಿ ಅದು ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುವುದರ ಜೊತೆಗೆ, ನಿಮ್ಮನ್ನು ಇತರರ ಮುಂದೆ ಕೀಳಾಗಿಸಲೂಬಹುದು!  ಬ್ಯೂಟಿ ಟಿಪ್ಸ್: ಮುಖದ ಗೌರವರ್ಣಕ್ಕೆ ಹಾಲಿನ ಫೇಸ್ ಪ್ಯಾಕ್

ಅದರೆ ಈ ಸಮಸ್ಯೆ ಪರಿಹಾರವೇ ಇಲ್ಲದೇ ಇರುವಂತಹದ್ದು ಏನೂ ಅಲ್ಲ. ಕೆಲವೊಂದು ನೈಸರ್ಗಿಕ ಚಿಕಿತ್ಸೆಗಳನ್ನು ನೀವು ಪ್ರತೀದಿನವೂ ಬಳಸಿಕೊಳ್ಳುವುದರಿಂದ ಸೌಂದರ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ಹೌದು ನಿಮ್ಮ ಮನೆಯಲ್ಲೇ ಇರುವ ಕೆಲವೊಂದು ಸಾಮಾಗ್ರಿಗಳನ್ನು ಬಳಸಿಕೊಂಡು ಸೌಂದರ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ಮುಖದ ಸೌಂದರ್ಯಕ್ಕೆ ಅನಾನಸ್ ಹಣ್ಣಿನ ಫೇಸ್ ಪ್ಯಾಕ್!

ಇದಕ್ಕಾಗಿ ನಿಮ್ಮ ಸ್ವಲ್ಪ ಸಮಯವನ್ನು ವಿನಿಯೋಗಿಸಿಕೊಳ್ಳಬೇಕಾಗುತ್ತದೆ. ಆದರೆ ನಿಮ್ಮ ಈ ಸ್ವಲ್ಪ ಸಮಯದಿಂದ ಮುಖದ ಸೌಂದರ್ಯದಲ್ಲಿ ಅದ್ಭುತ ಪರಿಣಾಮವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಬನ್ನಿ ಇಂದಿನ ಲೇಖನದಲ್ಲಿ ಅಂತಹ ಅದ್ಭುತ ಸಲಹೆಗಳೇನು ಎಂಬುದನ್ನು ತಿಳಿದುಕೊಳ್ಳೋಣ....  

ಚರ್ಮದ ಕಾಂತಿ ಹೆಚ್ಚಿಸಲು

ಚರ್ಮದ ಕಾಂತಿ ಹೆಚ್ಚಿಸಲು

ಸಮಪ್ರಮಾಣದಲ್ಲಿ ಅರಿಶಿನ (ಕೊಂಬು ತೇದಿ ತೆಗೆದ), ಹಸಿ ಹಾಲು ಮತ್ತು ಚಂದನ (ಕೊರಡು ತೇದಿ ತೆಗೆದ) ಗಳನ್ನು ಬೆರೆಸಿ ಲೇಪನ ತಯಾರಿಸಿ. ಈ ಲೇಪನವನ್ನು ಮುಖಕ್ಕೆ ಹಚ್ಚಿ ಕೆಲವು ನಿಮಿಷಗಳ ಕಾಲ ಒಣಗಲು ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಚರ್ಮದ ಕಾಂತಿ ತಕ್ಷಣವೇ ಹೆಚ್ಚುವುದನ್ನು ಗಮನಿಸಿ.

ಹಸಿರು ಟೀ ಕುದಿಸಿ ಸೋಸಿದ ನೀರು

ಹಸಿರು ಟೀ ಕುದಿಸಿ ಸೋಸಿದ ನೀರು

ಒಂದು ಚಿಕ್ಕಚಮಚ ಮೊಸರಿಗೆ ಒಂದು ಚಿಕ್ಕಚಮಚ ಲಿಂಬೆಹಣ್ಣಿನ ರಸ ಸೇರಿಸಿ. (ಈಗ ತಾನೇ ಹಿಂಡಿದ ಲಿಂಬೆರಸ). ಇದಕ್ಕೆ ಒಂದರಿಂದ ಎರಡು ಚಿಕ್ಕ ಚಮಚ ಹಸಿರು ಟೀ ಕುದಿಸಿ ಸೋಸಿದ ನೀರನ್ನು ಬೆರೆಸಿ. ಈ ಲೇಪನವನ್ನು ಮುಖದ ಮೇಲೆ ನಯವಾಗಿ ಒಮ್ಮುಖವಾಗಿ ಹಚ್ಚಿರಿ. ಸುಮಾರು ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ. ತ್ವಚೆಯ ಕಾಂತಿ ಹೆಚ್ಚಿಸಲು ಬಳಸಿ ಗ್ರೀನ್ ಟೀ ಫೇಸ್ ಪ್ಯಾಕ್!

ಮೊಡವೆಗಳನ್ನು ಹೋಗಲಾಡಿಸಲು

ಮೊಡವೆಗಳನ್ನು ಹೋಗಲಾಡಿಸಲು

ನೀವು ಯಾವುದೇ ಸಮಾರಂಭಗಳಿಗೆ ಹೋಗುತ್ತಿದ್ದೀರಿ ಎಂದಾದಲ್ಲಿ ನಿಮ್ಮ ಮುಖದ ಮೊಡವೆ ತೊಡಕನ್ನು ಉಂಟು ಮಾಡುತ್ತಿದೆ ಅಲ್ಲವೇ? ಇದಕ್ಕಾಗಿ ನೀವೇನೂ ಕಷ್ಟಕರವಾದುದನ್ನು ಮಾಡಬೇಕಾಗಿಲ್ಲ. ಟೂತ್‌ಪೇಸ್ಟ್ ಅನ್ನು ಮೊಡವೆಯ ಮೇಲೆ ಹಚ್ಚಿಕೊಳ್ಳಿ.ಮನೆಮದ್ದಿನ ಮಾಯಾ ಜಾದೂಗೆ ಮೊಡವೆ ಮಂಗಮಾಯ!

ಲಿಪ್‌ಸ್ಟಿಕ್ ಬಳಕೆ

ಲಿಪ್‌ಸ್ಟಿಕ್ ಬಳಕೆ

ಮುಖದ ಕಲೆಗಳನ್ನು ಮೇಕಪ್‌ನಿಂದ ಮುಚ್ಚಿಹಾಕಬಹುದಾಗಿದೆ. ನಿಮ್ಮ ತುಟಿಗಳಿಗೆ ಗಾಢ ವರ್ಣದ ಲಿಪ್‌ಸ್ಟಿಕ್ ಬಳಸಿ. ಇದರಿಂದ ಪಿಗ್ಮೆಂಟೇಶನ್ ಉಳ್ಳ ಮುಖದಿಂದ ಜನರ ಗಮನವನ್ನು ತುಟಿಗಳೆಡೆಗೆ ಸರಿಯುವಂತೆ ಲಿಪ್‌ಸ್ಟಿಕ್ ಮಾಡುತ್ತದೆ.

ಎಣ್ಣೆ ತ್ವಚೆಗೆ ಮೇಕಪ್

ಎಣ್ಣೆ ತ್ವಚೆಗೆ ಮೇಕಪ್

ಎಣ್ಣೆ ತ್ವಚೆಗೆ ಮೇಕಪ್ ಹಚ್ಚಿಕೊಳ್ಳುವುದು ಕೊಂಚ ಕಷ್ಟಕರ ಕೆಲಸವೇ ಆಗಿದೆ. ಇದಕ್ಕಾಗಿ ಮೇಕಪ್ ಮಾಡಿಕೊಳ್ಳುವ ಮುನ್ನ ಹತ್ತಿಯ ಉಂಡೆಯಿಂದ ಮುಖವನ್ನು ಒರೆಸಿ ನಂತರ ಮೇಕಪ್ ಮಾಡಿಕೊಳ್ಳಿ.

ಕಪ್ಪು ಕಲೆಗಳ ನಿವಾರಣೆಗೆ

ಕಪ್ಪು ಕಲೆಗಳ ನಿವಾರಣೆಗೆ

ಮೊಟ್ಟೆಯ ಬಿಳಿ ಭಾಗವನ್ನು ಮೂರು ಚಮಚಗಳಷ್ಟು ಲಿಂಬೆ ರಸದೊಂದಿಗೆ ಮಿಶ್ರ ಮಾಡಿ. ನಿಮ್ಮ ಮುಖ ಅದರಲ್ಲೂ ಕಪ್ಪು ಕಲೆಗಳು ಇರುವ ಭಾಗಕ್ಕೆ ಇದನ್ನು ಹಚ್ಚಿ. 15 ನಿಮಿಷ ಹಾಗೆಯೇ ಬಿಟ್ಟು ನಂತರ ಅದನ್ನು ತೊಳೆದುಕೊಳ್ಳಿ.

 
English summary

Quick Tips Get Glowing And Beautiful Skin

Do you know that you can get a beautiful skin with some quick ways? There are also some make-up tricks by which you can get a perfect skin with out the need of any make-up professionals. Have a look at some quick tips to get beautiful skin.
Please Wait while comments are loading...
Subscribe Newsletter