ಮುಖದ ಸೌಂದರ್ಯಕ್ಕೆ ಅನಾನಸ್ ಹಣ್ಣಿನ ಫೇಸ್ ಪ್ಯಾಕ್!

By: Arshad
Subscribe to Boldsky

ಮುಖದ ತ್ವಚೆ ಅತಿ ಹೆಚ್ಚು ಸೂಕ್ಷ್ಮವಾಗಿದ್ದು ಇದಕ್ಕೆ ಹೆಚ್ಚಿನ ಆರೈಕೆ ಅಗತ್ಯ. ಈ ಅಗತ್ಯವನ್ನು ಪೂರೈಸಲು ಮಾರುಕಟ್ಟೆಯಲ್ಲಿ ನೂರಾರು ಪ್ರಸಾದನಗಳಿವೆ. ಆದರೆ ನಿಮಗೆ ನಿಜವಾಗಿಯೂ ಸುರಕ್ಷಿತವಾದ ಆರೈಕೆ ಬೇಕು ಎಂದಾದರೆ ನಿಸರ್ಗ ನೀಡಿರುವ ಪರಿಕರಗಳನ್ನು ಉಪಯೋಗಿಸುವುದೇ ಜಾಣತನ. ಹುಳಿ ಮಿಶ್ರಿತ ಸಿಹಿಯಾದ ಅನಾನಸ್‌ ಜ್ಯೂಸ್‌‌ನ‌ ಮಹತ್ವ ಅರಿಯಿರಿ!   

Pineapple
 

ಮುಖದ ಚರ್ಮಕ್ಕೆ ಅನಾನಸ್ ಹಣ್ಣಿನ ಮುಖಲೇಪ ಉತ್ತಮ ಆಯ್ಕೆಯಾಗಿದ್ದು ಇದು ಸುಲಭವಾಗಿ ತಯಾರಿಸಲು ಮತ್ತು ತಯಾರಿಸುವಾಗ ವಿನೋದಕರವೂ ಆಗಿದೆ. ಏಕೆಂದರೆ ಅನಾನಾಸು ಎದುರಿಗಿದ್ದಾಗ ನಮ್ಮ ಮನ ಇದನ್ನು ತಿನ್ನಲು ಪ್ರೇರೇಪಿಸುತ್ತಿದ್ದು ಇದನ್ನು ಹತ್ತಿಕ್ಕಿಕ್ಕೊಳ್ಳುವುದೇ ಒಂದು ವಿನೋದ. ಬನ್ನಿ, ಈ ಸಮರ್ಥವಾದ ಮುಖಲೇಪವನ್ನು ಹೇಗೆ ತಯಾರಿಸುವುದು ಎಂಬುದನ್ನು ನೋಡೋಣ:

ಅಗತ್ಯವಿರುವ ಸಾಮಾಗ್ರಿಗಳು:

*ಚೆನ್ನಾಗಿ ಹಣ್ಣಾದ ಅನಾನಸ್ ಹಣ್ಣಿನ ತಿರುಳು

*ಜೇನು

*ಆಲಿವ್ ಎಣ್ಣೆ                 ಅನಾನಸ್-ಮುಳ್ಳಿನಿಂದ ಕೂಡಿದ್ದರೂ ಆರೋಗ್ಯಕ್ಕೆ ಹಿತಕಾರಿ  

Olive Oil
 

ವಿಧಾನ:

* ಕೊಂಚ ಅನಾನಾಸಿನ ತಿರುಳನ್ನು ಒಂದು ಬೋಗುಣಿಯಲ್ಲಿ ಚೆನ್ನಾಗಿ ಜಜ್ಜಿ ನಯವಾಗಿಸಿ. ಎಲ್ಲಿಯೂ ದೊರಗಾಗಿ ಅಥವಾ ಗಂಟುಗಳಂತೆ ತಿರುಳು ಉಳಿಯಬಾರದು.

* ಇದಕ್ಕೆ ಸಮಪ್ರಮಾಣದಲ್ಲಿ ಜೇನು ಮತ್ತು ಆಲಿವ್ ಎಣ್ಣೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.

* ಈಗತಾನೇ ತಣ್ಣೀರಿನಲ್ಲಿ ತೊಳೆದುಕೊಂಡು (ಮೇಕಪ್ ಧರಿಸಿದ್ದರೆ ಇದನ್ನು ಪೂರ್ಣವಾಗಿ ನಿವಾರಿಸಿರುವುದು ಅಗತ್ಯ) ಟವೆಲ್ಲಿನಿಂದ ಒತ್ತಿಕೊಂಡು ಒರೆಸಿದ್ದ ಮುಖದ ಮೇಲೆ ಈ ಲೇಪನವನ್ನು ದಪ್ಪನಾಗಿ ಹಚ್ಚಿ ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

pineapple

* ಬಳಿಕ ನಿಮ್ಮ ನಿತ್ಯದ ಬಳಕೆಯ ಸೌಮ್ಯ ಮಾಯಿಶ್ಚರೈಸರ್ ಅಥವಾ ತೇವಕಾರಕವನ್ನು ಹಸ್ತಗಳಿಗೆ ಸವರಿ ಮುಖಕ್ಕೆ ನಯವಾಗಿ ಸವರಿಕೊಳ್ಳಿ. ನಿಮ್ಮ ಚರ್ಮ ಯಾವುದೇ ಬಗೆಯದ್ದಾಗಿದ್ದರೂ ಮಾಯಿಶ್ಚರೈಸರ್ ಬಳಸುವುದು ಅಗತ್ಯ.

* ವಾರಕ್ಕೆ ಒಂದು ಬಾರಿ ಈ ವಿಧಾನವನ್ನು ಅನುಸರಿಸುವ ಮೂಲಕ ಮುಖದ ಚರ್ಮದ ಕಾಂತಿ ಹೆಚ್ಚುತ್ತದೆ ಹಾಗೂ ಸಹಜವರ್ಣ ಪಡೆಯಲು ನೆರವಾಗುತ್ತದೆ.

English summary

Pineapple face packs, face masks for glowing beauty

Fruits are perfect for the skin. And here we have the recipe of this homemade pineapple face pack that will leave you glowing for sure...
Please Wait while comments are loading...
Subscribe Newsletter