ಬ್ಯೂಟಿ ಟಿಪ್ಸ್: ಮುಖದ ಗೌರವರ್ಣಕ್ಕೆ ಹಾಲಿನ ಫೇಸ್ ಪ್ಯಾಕ್

By: Arshad
Subscribe to Boldsky

ಹಾಲನ್ನು ಸೌಂದರ್ಯವರ್ಧಕವಾಗಿ ಶತಮಾನಗಳಿಂದ ಬಳಸಲಾಗುತ್ತಿದೆ. ಸೌಂದರ್ಯದ ರಾಣಿ ಎಂದೇ ಪ್ರಖ್ಯಾತಳಾದ ಪುರಾತನ ರಾಣಿ ಕ್ಲಿಯೋಪಾತ್ರಾ ಸಹಾ ತನ್ನ ಸೌಂದರ್ಯವನ್ನು ಉಳಿಸಿಕೊಳ್ಳಲು ಹಾಲಿನಿಂದ ಸ್ನಾನ ಮಾಡುತ್ತಿದ್ದಳು ಎಂದು ಇತಿಹಾಸದಲ್ಲಿ ಹೇಳಲಾಗಿದೆ. ಇದು ಪಕ್ಕಾ ನೈಸರ್ಗಿಕ ಫೇಸ್ ಪ್ಯಾಕ್! ಚಿಂತೆಯ ಅಗತ್ಯವೇ ಇಲ್ಲ!

ಇದಕ್ಕಾಗಿ ಆಕೆ ದಿನವೂ ಏಳುನೂರು ಕತ್ತೆಗಳ ಹಾಲನ್ನು ಬಳಸುತ್ತಿದ್ದಳಂತೆ. ಆದರೆ ಸೌಂದರ್ಯ ವರ್ಧಕವಾಗಿ ಹಸುವಿನ ಹಾಲೇನೂ ಕಡಿಮೆಯಿಲ್ಲ. ಇದನ್ನು ಹಾಗೇ ಬಳಸುವ ಬದಲು ದಪ್ಪನೆಯ ಲೇಪನದ ಮೂಲಕ ಬಳಸಿದರೆ ಗೌರವರ್ಣದ, ಕೋಮಲ, ತಾರುಣ್ಯಭರಿತ ಮತ್ತು ಕಾಂತಿಯುಕ್ತ ತ್ವಚೆ ಗಳಿಸಲು ಸಾಧ್ಯ.  ಹಾಲಿನ ಕೆನೆಯಂತಹ ತ್ವಚೆಯ ಸೌಂದರ್ಯ ನಿಮ್ಮದಾಗಿಸಿಕೊಳ್ಳಿ!

ಹಾಲಿನಲ್ಲಿರುವ ಕಣಗಳು ಚರ್ಮದ ಸೂಕ್ಷ್ಮರಂಧ್ರಗಳ ಒಳಗಿಳಿದು ಕಲ್ಮಶವನ್ನು ನಿವಾರಿಸಲು ಸಮರ್ಥವಾಗಿವೆ. ಅಲ್ಲದೇ ಕಲ್ಮಶದಿಂದ ತುಂಬಿಕೊಂಡಿದ್ದ ಸೂಕ್ಷ್ಮರಂಧ್ರಗಳನ್ನು ತೆರೆದು ಬ್ಕ್ಯಾಕ್ ಹೆಡ್, ಹಾಗೂ ವೈಟ್ ಹೆಡ್ ಗಳಾಗದಂತೆ, ಮೊಡವೆಗಳು ಮೂಡದಂತೆ ತಡೆಯುತ್ತದೆ. ಎಣ್ಣೆಯುಕ್ತ ತ್ವಚೆ ಇರುವವರಲ್ಲಿ ಹೆಚ್ಚಿನ ಎಣ್ಣೆಯ ಅಂಶವನ್ನು ನಿವಾರಿಸಿ ಆರ್ದ್ರತೆ ನೀಡುವ ಮೂಲಕ ಅಗತ್ಯವಾದ ಪೋಷಣೆಯನ್ನೂ ನೀಡುತ್ತದೆ......   

ಹಾಲನ್ನು ಬಳಸುವುದು ಹೇಗೆ?

ಹಾಲನ್ನು ಬಳಸುವುದು ಹೇಗೆ?

ಹತ್ತಿಯುಂಡೆಯೊಂದನ್ನು ಹಸಿ ಹಾಲಿನಲ್ಲಿ ಮುಳುಗಿಸಿ ಈ ಉಂಡೆಯನ್ನು ವೃತ್ತಾಕಾರಗಳಲ್ಲಿ ಹೆಚ್ಚಿನ ಒತ್ತಡವಿಲ್ಲದೇ ಒರೆಸುತ್ತಿರಿ. ಸುಮಾರು ಐದು ನಿಮಿಷಗಳವರೆಗೆ ಹಸಿ ಹಾಲನ್ನು ಆಗಾಗ ಹಿಂಡಿಕೊಳ್ಳುತ್ತಾ ಮುಖ, ಕುತ್ತಿಗೆ ಕುತ್ತಿಗೆಯ ಭಾಗಗಳನ್ನು ಒರೆಸಿಕೊಳ್ಳಿ. ಬಳಿಕ ಉಗುರು ಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಈ ವಿಧಾನದ ಉಪಯೋಗಗಳೇನು?

ಈ ವಿಧಾನದ ಉಪಯೋಗಗಳೇನು?

ಒಣಚರ್ಮ ಮತ್ತು ಪಕಳೆ ಏಳುವ ತೊಂದರೆ ಇರುವ ಚರ್ಮದವರಿಗೆ ಹಸಿಹಾಲು ಅಮೃತಸಮಾನವಾಗಿದೆ. ಚರ್ಮದ ಹೊರಪದರ ಒಣಗಿ ಪಕಳೆ ಏಳಲು ಚರ್ಮದ ಅಡಿಯಲ್ಲಿರುವ ನೈಸರ್ಗಿಕ ತೈಲಗಳ ಕೊರತೆಯೇ ಕಾರಣ. ಹಾಲು ಆರ್ದ್ರತೆಯನ್ನು ಒದಗಿಸುವ ಮೂಲಕ ಚರ್ಮ ಕಳೆದುಕೊಂಡಿದ್ದ ಈ ತೈಲಗಳನ್ನು ಉಳಿಸಿಕೊಳ್ಳಲು ಮತ್ತು ಚರ್ಮ ಪುನರ್ಜೀವನ ಪಡೆಯಲು ನೆರವಾಗುತ್ತದೆ.

ಒಣಚರ್ಮದ ಆರೈಕೆಗೆ ಹಾಲಿನ ಬಳಕೆ....

ಒಣಚರ್ಮದ ಆರೈಕೆಗೆ ಹಾಲಿನ ಬಳಕೆ....

ಒಂದು ವೇಳೆ ಚರ್ಮ ತೀರಾ ಒಣಗಿದ್ದರೆ, ಚರ್ಮ ಪಕಳೆ ಎದ್ದಿದ್ದರೆ, ಬಿರುಕುಬಿಟ್ಟಿದ್ದರೆ ಒಂದು ದೊಡ್ಡ ಹತ್ತಿಯುಂಡೆಯನ್ನು ಹಸಿಹಾಲಿನಲ್ಲಿ ಮುಳುಗಿಸಿ ಹೆಚ್ಚಿನ ಒತ್ತಡವಿಲ್ಲದೇ ನಯವಾಗಿ ವೃತ್ತಾಕಾರದಲ್ಲಿ ಇಡಿಯ ಮುಖಕ್ಕೆ ಹಚ್ಚಿ ಒಣಗಲು ಬಿಡಿ. ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ....

ಒಣಚರ್ಮದ ಆರೈಕೆಗೆ ಹಾಲಿನ ಬಳಕೆ....

ಒಣಚರ್ಮದ ಆರೈಕೆಗೆ ಹಾಲಿನ ಬಳಕೆ....

ಹಸಿ ಹಾಲು ಮುಖದ ಮೇಲೆ ಜಾರುವ ಕಾರಣ ಹಾಲಿನಲ್ಲಿ ಒಂದು ಬಾಳೆಹಣ್ಣಿನ ತಿರುಳನ್ನು ಚೆನ್ನಾಗಿ ಕಿವುಚಿ ದಪ್ಪನೆಯ ಲೇಪನವನ್ನಾಗಿಸಿ. ಈ ಲೇಪನ ಚರ್ಮದ ಮೇಲೆ ದಪ್ಪನಾಗಿ ಆವರಿಸುವಂತೆ ಮಾಡಿ ಮೂವತ್ತು ನಿಮಿಷದ ಬಳಿಕ ತೊಳೆದುಕೊಂಡರೆ ಅತ್ಯುತ್ತಮ ಆರೈಕೆ ಪಡೆಯಬಹುದು.

ಕಲೆಗಳನ್ನು ತಿಳಿಗೊಳಿಸಲು...

ಕಲೆಗಳನ್ನು ತಿಳಿಗೊಳಿಸಲು...

ಒಂದು ವೇಳೆ ನಿಮ್ಮ ಚರ್ಮದಲ್ಲಿ ಹಳೆಯ ಗಾಯ, ಮೊಡವೆಗಳ ಕಲೆಯಿದ್ದು ಇದರಿಂದ ಮುಕ್ತಿ ಪಡೆಯಬೇಕೆಂದರೆ ಹಾಲು ಅತ್ಯುತ್ತಮ ಆಯ್ಕೆಯಾಗಿದೆ. ಇದರಲ್ಲಿರುವ ಲ್ಯಾಕ್ಟಿಕ್ ಆಮ್ಲ ಚರ್ಮವನ್ನು ತಿಳಿಗೊಳಿಸುವ ಗುಣವನ್ನು ಹೊಂದಿದೆ.

ವಿಧಾನ...

ವಿಧಾನ...

ಸಮಪ್ರಮಾಣದಲ್ಲಿ ಹಸಿರು ಟೀ ಮತ್ತು ಹಾಲನ್ನು ಬೆರೆಸಿ. ಈ ಮಿಶ್ರಣದಲ್ಲಿ ದೊಡ್ಡ ಹತ್ತಿಯುಂಡೆಯೊಂದನ್ನು ಮುಳುಗಿಸಿ ಕಲೆ ಇದ್ದ ಚರ್ಮದ ಭಾಗದ ಮೇಲೆ ಹಚ್ಚಿ. ಕೊಂಚ ಒಣಗಿದ ಬಳಿಕ ಮತ್ತೊಮ್ಮೆ ಹಚ್ಚಿ.

ವಿಧಾನ...

ವಿಧಾನ...

ಹೀಗೇ ನಾಲ್ಕಾರು ಬಾರಿ ಹಚ್ಚಿ. ಸುಮಾರು ಹದಿನೈದು ನಿಮಿಷಗಳಾದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸ್ನಾನಕ್ಕೂ ಮುನ್ನ ಈ ವಿಧಾನವನ್ನು ವಾರಕ್ಕೆ ಮೂರು ದಿನಗಳ ಕಾಲ ಅನುಸರಿಸಿದರೆ ಶೀಘ್ರದಲ್ಲಿಯೇ ಉತ್ತಮ ಪರಿಣಾಮವನ್ನು ಪಡೆಯಬಹುದು.

 
English summary

Milk Face Packs for Fair and Glowing Skin

Milk contains a good amount of vitamins such as vitamin A, vitamin B3 and other vital nutrients that helps reduces skin damage, boost hydration, prevents sagging skin and promotes healthy, glowing skin.Today we will share some amazing milk face packs that will help you to get that fair, young and glowing complexion.
Story first published: Tuesday, January 17, 2017, 10:12 [IST]
Please Wait while comments are loading...
Subscribe Newsletter