For Quick Alerts
ALLOW NOTIFICATIONS  
For Daily Alerts

ಈ ಬ್ಯೂಟಿ ಟಿಪ್ಸ್ ಅನುಸರಿಸಿ-ಇನ್ನಷ್ಟು ಸುಂದರವಾಗಿ ಕಾಣುವಿರಿ!

ಅತಿಯಾಗಿ ಕ್ರೀಮ್-ಮೇಕಪ್ ಬಳಕೆ ಮಾಡುವವರ ಮುಖದ ಕಾಂತಿಯು ಕಡಿಮೆಯಾಗಿ ವಯಸ್ಸಾದವರಂತೆ ಕಾಣುವುದರಲ್ಲಿ ಸಂಶಯವೇ ಇಲ್ಲ. ಆದರೆ ನಮ್ಮ ಹಿರಿಯರು ಬಳಕೆ ಮಾಡಿಕೊಂಡು ಬಂದಿರುವ ಕೆಲವೊಂದು ಸೌಂದರ್ಯ ವರ್ಧಕಗಳನ್ನು ಬಳಸಿದರೆ ಯಾವುದೇ ಅಡ್ಡಪರಿಣಾಮಗಳಿಲ್ಲ

By Hemanth
|

ಪ್ರತಿಯೊಬ್ಬ ಮಹಿಳೆಯ ಮನಸ್ಸಿನಲ್ಲಿರುವಂತಹ ಬಹುದೊಡ್ಡ ಆಸೆಯೆಂದರೆ ತಾನು ಇನ್ನೊಬ್ಬಳಿಗಿಂತ ಸುಂದರವಾಗಿ ಕಾಣಿಸಬೇಕೆಂದು. ಇದಕ್ಕಾಗಿ ಆಕೆ ಏನೇ ಮಾಡಲು ತಯಾರಿರುತ್ತಾಳೆ. ಮಹಿಳೆಯರು ಮರುಳಾಗುವುದು ಕೂಡ ಬೇಗ ಎನ್ನುವ ಕಾರಣಕ್ಕಾಗಿಯೇ ಸೌಂದರ್ಯವರ್ಧಕ ಕಂಪನಿಗಳು ಕೂಡ ಇದರ ಲಾಭ ಪಡೆಯಲು ಪ್ರಯತ್ನಿಸುತ್ತಾ ಇವೆ. ಹೀಗಾಗಿ ಪ್ರತಿಯೊಬ್ಬ ಮಹಿಳೆ ಕೂಡ ತನ್ನ ಸೌಂದರ್ಯ ಹೆಚ್ಚಿಸಲು ಯಾವುದಾದರೊಂದು ಕ್ರೀಮ್ ಬಳಸುವುದು ಸಹಜವಾಗಿದೆ. ತಕ್ಷಣ ಮುಖದ ಕಾಂತಿ ಹೆಚ್ಚಿಸಲು, ಹರ್ಬಲ್ ಫೇಸ್ ಪ್ಯಾಕ್

ಹೀಗೆ ಕ್ರೀಮ್ ಬಳಸಿಕೊಂಡು ದೇಹದ ಬಣ್ಣವನ್ನು ಬಿಳಿಯಾಗಿಸಬಹುದು ಎನ್ನುವ ಕನಸು ಕಾಣುತ್ತಿರುವ ಮಹಿಳೆಯರು ಇದ್ದ ಕ್ರೀಮ್ ಗಳನ್ನೆಲ್ಲಾ ಕ್ರೀಮ್ ಗಳಿಗೆ ತಮ್ಮ ಹಣವನ್ನು ವೆಚ್ಚ ಮಾಡುತ್ತಾರೆ. ಆದರೆ ಇದರ ಫಲಿತಾಂಶ ಮಾತ್ರ ಶೂನ್ಯ. ಯಾಕೆಂದರೆ ಕ್ರೀಮ್ ಗಳಲ್ಲಿ ಇರುವಂತಹ ರಾಸಾಯನಿಕಗಳು ಚರ್ಮದ ಆರೋಗ್ಯವನ್ನು ಕೆಡಿಸುತ್ತದೆ. ಇದರಿಂದ ಚರ್ಮ ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತದೆ. ಶ್!! ಇದು ಅಜ್ಜಿಯಿಂದ ಕಲಿತ ಸೌಂದರ್ಯ ರಹಸ್ಯ! ಪ್ರಯತ್ನಿಸಿ ನೋಡಿ

ಅತಿಯಾಗಿ ಕ್ರೀಮ್ ಹಾಗೂ ಮೇಕಪ್ ಬಳಕೆ ಮಾಡುವವರ ಮುಖದ ಕಾಂತಿಯು ಕಡಿಮೆಯಾಗಿ ವಯಸ್ಸಾದವರಂತೆ ಕಾಣುವುದರಲ್ಲಿ ಸಂಶಯವೇ ಇಲ್ಲ. ಆದರೆ ಹಿಂದಿನಿಂದಲೂ ನಮ್ಮ ಹಿರಿಯರು ಬಳಕೆ ಮಾಡಿಕೊಂಡು ಬಂದಿರುವ ಕೆಲವೊಂದು ಸೌಂದರ್ಯ ವರ್ಧಕಗಳನ್ನು ಬಳಸಿದರೆ ಅದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಕಾಣಿಸುವುದಿಲ್ಲ ಮತ್ತು ಸೌಂದರ್ಯವು ದೀರ್ಘಕಾಲದ ತನಕ ಉಳಿಯುತ್ತದೆ. ಇಂತಹ ಸೌಂದರ್ಯವರ್ಧಕದ ಬಗ್ಗೆ ನಾವಿಂದು ನಿಮಗೆ ಹೇಳಿಕೊಡಲಿದ್ದೇವೆ....

ಹಾಲು, ಲಿಂಬೆ ರಸ ಮತ್ತು ಜೇನುತುಪ್ಪ

ಹಾಲು, ಲಿಂಬೆ ರಸ ಮತ್ತು ಜೇನುತುಪ್ಪ

ಈ ಎಲ್ಲವೂ ನಿಮ್ಮ ಮುಖದ ಮೇಲೆ ಅದ್ಭುತವಾಗಿ ಕೆಲಸ ಮಾಡಲಿದೆ ಮತ್ತು ಕಾಂತಿಯನ್ನು ಹೆಚ್ಚಿಸಲಿದೆ. ಒಂದು ಚಮಚ ಹಾಲು ಮತ್ತು ಒಂದು ಚಮಚ ಲಿಂಬೆರಸವನ್ನು ಬೆರೆಸಿಕೊಳ್ಳಿ. ಇದಕ್ಕೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿಕೊಳ್ಳಿ. ಇದು ಮಾಯಿಶ್ಚರೈಸರ್ ನಂತೆ ಕೆಲಸ ಮಾಡುತ್ತದೆ. ಇದನ್ನು ನಿಯಮಿತವಾಗಿ ಬಳಸುವುದರಿಂದ ಕಾಂತಿಯುತ ತ್ವಚೆಯು ನಿಮ್ಮದಾಗುವುದರಲ್ಲಿ ಸಂಶಯವಿಲ್ಲ. ಊಹೆಗೂ ನಿಲುಕದ ನಿಂಬೆಯ ಸೌಂದರ್ಯವರ್ಧಕ ಗುಣಗಳು

ಓಟ್ಸ್ ಮತ್ತು ಮೊಸರು

ಓಟ್ಸ್ ಮತ್ತು ಮೊಸರು

ಓಟ್ಸ್ ಮತ್ತು ಮೊಸರಿನ ಮಿಶ್ರಣವು ಮುಖದ ಬಣ್ಣವನ್ನು ಬಿಳಿ ಮಾಡಲು ಅತ್ಯಂತ ಸುಲಭ ನೈಸರ್ಗಿಕ ವಿಧಾನವಾಗಿದೆ. ಇದು ಕಪ್ಪುಕಲೆ, ಮೊಡವೆಯಿಂದ ಆದ ಕಲೆ ಮತ್ತು ಇತರ ಕಲೆಗಳನ್ನು ತುಂಬಾ ವೇಗವಾಗಿ ತೆಗೆದುಹಾಕುವುದು. ಓಟ್ ಮೀಲ್ ನ್ನು ರಾತ್ರಿ ವೇಳೆ ನೆನೆಸಲು ಹಾಕಿ. ಬೆಳಿಗ್ಗೆ ಅದನ್ನು ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಅದಕ್ಕೆ ಮೊಸರು ಸೇರಿಸಿ. ಪ್ರತೀ ದಿನ ನೀವು ಇದನ್ನು ಹಚ್ಚಿಕೊಳ್ಳುವುದರಿಂದ ಪರಿಣಾಮಕಾರಿ ಫಲಿತಾಂಶವನ್ನು ಪಡೆಯಬಹುದು. ಮೊಸರಿನ ಫೇಸ್ ಮಾಸ್ಕ್: ಕಡಿಮೆ ಖರ್ಚು ಅಧಿಕ ಲಾಭ...

ಆಲೂಗಡ್ಡೆ

ಆಲೂಗಡ್ಡೆ

ಆಲೂಗಡ್ಡೆಯನ್ನು ಕೇವಲ ಅಡುಗೆಯಲ್ಲಿ ಮಾತ್ರ ಬಳಸುವುದಲ್ಲ. ಇದರಲ್ಲಿ ಇರುವಂತಹ ಬ್ಲೀಚಿಂಗ್ ಅಂಶವು ಮುಖದ ಬಣ್ಣವನ್ನು ಹೆಚ್ಚು ಮಾಡಿ ಕಾಂತಿ ನೀಡುವುದು. ಒಂದು ಆಲೂಗಡ್ಡೆ ತೆಗೆದುಕೊಂಡು ಅದನ್ನು ಹುಡಿ ಮಾಡಿ ಇದರ ರಸ ಅಥವಾ ತಿರುಳನ್ನು ಮುಖದ ಮೇಲೆ ಹಚ್ಚಿಕೊಳ್ಳಿ. ಪರಿಣಾಮಕಾರಿ ಫಲಿತಾಂಶ ಬೇಕೆಂದರೆ ನಿಯಮಿತವಾಗಿ ಬಳಸಿ.ಆಲೂಗಡ್ಡೆ ಫೇಸ್ ಪ್ಯಾಕ್-ಬರೀ ಒಂದೇ ತಿಂಗಳಲ್ಲಿ ರಿಸಲ್ಟ್!

ಬಾಳೆಹಣ್ಣು ಮತ್ತು ಬಾದಾಮಿ ಎಣ್ಣೆ

ಬಾಳೆಹಣ್ಣು ಮತ್ತು ಬಾದಾಮಿ ಎಣ್ಣೆ

ಹಲವಾರು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬಾಳೆಹಣ್ಣು ಮತ್ತು ಬಾದಾಮಿ ಎಣ್ಣೆಯು ಮುಖದ ಬಣ್ಣ ಹಾಗೂ ಕಾಂತಿಯನ್ನು ಹೆಚ್ಚಿಸುವುದು. ಹಣ್ಣಾಗಿರುವ ಬಾಳೆಹಣ್ಣನ್ನು ತೆಗೆದುಕೊಂಡು ಅದನ್ನು ಸರಿಯಾಗಿ ಕಿವುಚಿ. ಇದು ತುಂಬಾ ನಯವಾದ ಬಳಿಕ ಅದಕ್ಕೆ ಒಂದು ಚಮಚ ಬಾದಾಮಿ ಎಣ್ಣೆ ಹಾಕಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ತೊಳೆಯಿರಿ.ಬಾಳೆಹಣ್ಣಿನ ಕರಾಮತ್ತಿನಲ್ಲಿದೆ ಶುಷ್ಕ ತ್ವಚೆ ಸಮಸ್ಯೆಗೆ ಪರಿಹಾರ!

ಕಡಲೆಹಿಟ್ಟು ಮತ್ತು ಅರಿಶಿನ

ಕಡಲೆಹಿಟ್ಟು ಮತ್ತು ಅರಿಶಿನ

ಕಡಲೆ ಹಿಟ್ಟು ಮತ್ತು ಅರಿಶಿನವು ನಮ್ಮ ಅಡುಗೆ ಮನೆಗಳಲ್ಲಿ ತುಂಬಾ ಸುಲಭವಾಗಿ ಸಿಗುವಂತದ್ದಾಗಿದೆ. ಒಂದು ಚಮಚ ಕಡಲೆ ಹಿಟ್ಟು ಮತ್ತು ಒಂದು ಚಮಚ ಅರಿಶಿನವನ್ನು ಹಾಲು ಅಥವಾ ನೀರಿನೊಂದಿಗೆ ಸರಿಯಾಗಿ ಬೆರೆಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷ ಬಿಟ್ಟು ಮುಖ ತೊಳೆಯಿರಿ.ತ್ವಚೆಯ ಕೋಮಲತೆಗೆ 'ಅರಿಶಿನ' ಫೇಸ್ ಸ್ಕ್ರಬ್

ಪಪ್ಪಾಯಿ ಮತ್ತು ಜೇನುತುಪ್ಪ

ಪಪ್ಪಾಯಿ ಮತ್ತು ಜೇನುತುಪ್ಪ

ಪಪ್ಪಾಯಿಯಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು ಇವೆ. ಅದೇ ಪಪ್ಪಾಯಿಯಲ್ಲಿರುವ ಕೆಲವೊಂದು ಕಿಣ್ವಗಳು ಚರ್ಮದ ಮರುನಿರ್ಮಾಣಕ್ಕೆ ನೆರವಾಗುವುದು. ಪಪ್ಪಾಯಿಯು ನೈಸರ್ಗಿಕ ಸನ್ ಸ್ಕ್ರೀನ್ ಮತ್ತು ಸೂರ್ಯನ ಕಿರಣಗಳಿಂದ ತ್ವಚೆಯನ್ನು ರಕ್ಷಿಸುವುದು. ಅರ್ಧ ಕಪ್ ಪಪ್ಪಾಯಿ ತಿರುಳನ್ನು ಸರಿಯಾಗಿ ಕಿವುಚಿಕೊಂಡು ಅದಕ್ಕೆ ಒಂದು ಚಮಚ ಜೇನುತುಪ್ಪನ್ನು ಹಾಕಿಕೊಳ್ಳಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಕಾಲ ಹಾಗೆ ಬಿಡಿ. ನೀರಿನಿಂದ ತೊಳೆದ ಬಳಿಕ ಮುಖದಲ್ಲಿ ಕಾಂತಿಯನ್ನು ಕಾಣಬಹುದು.ಪಪ್ಪಾಯಿ ಹಣ್ಣಿನಲ್ಲಿದೆ 'ಸೌಂದರ್ಯದ' ಮಾಂತ್ರಿಕ ಶಕ್ತಿ!

ಟೊಮೆಟೊ ಮತ್ತು ಮೊಸರು

ಟೊಮೆಟೊ ಮತ್ತು ಮೊಸರು

ಮುಖದ ಬಣ್ಣವನ್ನು ಬಿಳಿಯಾಗಿಸಬೇಕಾದರೆ ತಾಜಾ ಟೊಮೆಟೊ ಜತೆಗೆ ಮೊಸರನ್ನು ಸೇರಿಸಿಕೊಳ್ಳಿ. ಟೊಮೆಟೊ ಮತ್ತು ಮೊಸರಿನಲ್ಲಿ ಬ್ಲೀಚಿಂಗ್ ಗುಣಗಳು ಇವೆ ಮತ್ತು ಇದು ಪರಿಣಾಮಕಾರಿಯಾಗಿ ಮುಖದ ಬಣ್ಣವನ್ನು ಬಿಳಿಯಾಗಿಸುವುದು. ಒಳ್ಳೆಯ ಫಲಿತಾಂಶ ಬೇಕೆಂದರೆ ಎರಡು ದಿನಕ್ಕೊಮ್ಮೆ ಇದನ್ನು ಬಳಸಿಕೊಳ್ಳಿ.ಮೊಡವೆ ಕಾಟಕ್ಕೆ, ಟೊಮೆಟೊ ಹಣ್ಣಿನ ಫೇಸ್ ಪ್ಯಾಕ್

English summary

Natural Beauty Tips For Face Whitening

Skin colour mainly depends on genetic factors, along with various other factors like physical exposure. Regular use of beauty or whitening products not only cause skin damage, but also make you look older. This is why we suggest natural beauty tips for face whitening.
X
Desktop Bottom Promotion