ಶ್!! ಇದು ಅಜ್ಜಿಯಿಂದ ಕಲಿತ ಸೌಂದರ್ಯ ರಹಸ್ಯ! ಪ್ರಯತ್ನಿಸಿ ನೋಡಿ

By: Arshad
Subscribe to Boldsky

ಚರ್ಮದ ಆರೈಕೆಯ ವಿಷಯ ಬಂದಾಗ ನಮ್ಮ ಹಿರಿಯರಿಗೆ ಗೊತ್ತಿರುವ ಮಾಹಿತಿಯನ್ನು ಸರಿಗಟ್ಟಲು ಸಾಧ್ಯವೇ ಇಲ್ಲ. ಈ ವಿಧಾನಗಳನ್ನು ಅವರು ಸಮಯದ ನೆರವಿನಿಂದ ಒರೆಹಚ್ಚಿಕೊಂಡು ಫಲಿತಾಂಶವನ್ನು ಖಚಿತಪಡಿಸಿರುವ ಕಾರಣ ಇವರ ಸಲಹೆಗಳನ್ನು ಎಂದಿಗೂ ನಿರ್ಲಕ್ಷಿಸಬಾರದು.   ಜಾಹೀರಾತಿಗೆ ಮರುಳಾಗಿ ಸೌಂದರ್ಯ ಕಳೆದುಕೊಳ್ಳಬೇಡಿ!

ಸಾಮಾನ್ಯವಾಗಿ ಕಾಡುವ ಮೊಡವೆ ಕುರು, ಇವು ಒಣಗಿದ ಬಳಿಕ ಉಳಿಸಿ ಹೋಗುವ ಕಲೆಗಳು, ಕುಳಿಗಳು ಮೊದಲಾದವುಗಳಿಗೆ ನಿಸರ್ಗ ನೀಡುವ ಆರೈಕೆಯನ್ನು ನಮ್ಮ ಹಿರಿಯರು ಶತಮಾನಗಳಿಂದ ಬಳಸುತ್ತಾ ಬಂದಿದ್ದಾರೆ. ತೊಂದರೆ ಯಾವುದೇ ಇರಲಿ, ಇವರಲ್ಲಿ ಇದಕ್ಕೊಂದು ಪರಿಹಾರವಿದ್ದೇ ಇರುತ್ತದೆ.  ಬ್ಯೂಟಿ ಟಿಪ್ಸ್: ಮೂವತ್ತರ ಪ್ರಾಯದಲ್ಲೂ 16ರ ಸೌಂದರ್ಯ!

ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರಸಾಧನಗಳು ಜಾಹೀರಾತಿಗೆ ನೀಡುವ ಭಾರೀ ಬೆಲೆಯ ಒಂದಂಶವನ್ನು ಹೊತ್ತೇ ಬರುವ ಕಾರಣ ಬಲು ದುಬಾರಿಯಾಗಿದ್ದು ಇವು ತಕ್ಷಣದ ಪೋಷಣೆಯನ್ನು ನೀಡಿದಂತೆ ಕಂಡುಬಂದರೂ ಕೆಲವು ಅಡ್ಡಪರಿಣಾಮಗಳನ್ನೂ ನೀಡುತ್ತವೆ. ಆದರೆ ನಮ್ಮ ಅಜ್ಜಿಯರು ದೃಢೀಕರಿಸಿದ ನೈಸರ್ಗಿಕ ವಿಧಾನಗಳು ಸುರಕ್ಷಿತ, ಪರಿಣಾಮಕಾರಿ, ಸುಲಭವಾಗಿ ಸಿಗುವಂತಹದ್ದು ಆಗಿದ್ದು ಅಗ್ಗವೂ ಆಗಿವೆ. ಬನ್ನಿ, ಇವರು ಸಾಮಾನ್ಯ ಚರ್ಮವ್ಯಾಧಿಗಳಿಗೆ ಯಾವ ಸಲಹೆ ನೀಡುತ್ತಾರೆ ನೋಡೋಣ....  

ಬಳಲಿದ, ನಿಸ್ತೇಜ ಚರ್ಮಕ್ಕೆ

ಬಳಲಿದ, ನಿಸ್ತೇಜ ಚರ್ಮಕ್ಕೆ

ಕೊಂಚ ಹಾಲಿಗೆ ಚಿಟಿಕೆಯಷ್ಟು ಅರಿಶಿನ ಪುಡಿ ಬೆರೆಸಿ ಇದಕ್ಕೆ ಕೊಂಚವೇ ಕರಗಿದ ಕೊಬ್ಬರಿ ಎಣ್ಣೆಯನ್ನು ಸೇರಿಸಿ ಮಿಶ್ರಣ ಮಾಡಿ. ಈ ಲೇಪನವನ್ನು ಈಗತಾನೇ ತೊಳೆದುಕೊಂಡ ಮುಖ ಮತ್ತು ಬಿಳಿಚಿದ ಚರ್ಮಕ್ಕೆ ಹಚ್ಚಿ ಸುಮಾರು ಇಪ್ಪತ್ತರಿಂದ ಮೂವತ್ತು ನಿಮಿಷ ಒಣಗಲು ಬಿಡಿ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಚರ್ಮ ಕಾಂತಿಯುಕ್ತ ಹಾಗೂ ತೇಜಸ್ಸಿನಿಂದ ಕೂಡಿರುತ್ತದೆ.

ಬಿಸಿಲಿನಿಂದ ಕಪ್ಪಗಾಗಿದ್ದ ಚರ್ಮಕ್ಕೆ

ಬಿಸಿಲಿನಿಂದ ಕಪ್ಪಗಾಗಿದ್ದ ಚರ್ಮಕ್ಕೆ

ಒಂದು ಟೊಮೆಟೋ ಹಣ್ಣಿನ ತಿರುಳನ್ನು ಸಮಪ್ರಮಾಣದ ಮೊಸರಿಗೆ ಬೆರೆಸಿ ಮಿಶ್ರಣ ಮಾಡಿ. ಈ ಲೇಪನವನ್ನು ಮುಖಕ್ಕೆ ಹಚ್ಚಿ ಸುಮಾರು ಅರ್ಧ ಗಂಟೆ ಒಣಗಲು ಬಿಡಿ. ಟೊಮೆಟೋದಲ್ಲಿರುವ ಪೋಷಕಾಂಶಗಳಲ್ಲಿ ಬಿಳಿಚುಕಾರಕ ಗುಣವಿದ್ದು ಶೀಘ್ರವೇ ಸಹಜವರ್ಣ ಪಡೆಯಲು ನೆರವಾಗುತ್ತವೆ.

ಮುಖದ ಮೇಲಿನ ಚರ್ಮಕ್ಕೆ

ಮುಖದ ಮೇಲಿನ ಚರ್ಮಕ್ಕೆ

ಒಂದು ಪಪ್ಪಾಯಿ ಹಣ್ಣಿನ ತಿರುಳನ್ನು ಕೊಂಚ ಅರಿಶಿನ ಸೇರಿಸಿ ಮಿಶ್ರಣ ಮಾಡಿ ಇದನ್ನು ಕೂದಲು ಬೆಳೆಯುತ್ತಿರುವ ದಿಕ್ಕಿಗೆ ವಿರುದ್ಧ ದಿಕ್ಕಿನಲ್ಲಿ ಉಜ್ಜಿಕೊಳ್ಳಿ. ಪಪ್ಪಾಯಿಯಲ್ಲಿರುವ ಕಿಣ್ವಗಳು ಕೂದಲ ಬುಡವನ್ನು ಶಿಥಿಲಗೊಳಿಸಿ ಇಲ್ಲಿ ಮತ್ತೆ ಕೂದಲು ಬೆಳೆಯದಂತೆ ಮಾಡುತ್ತದೆ.

ಒಣ ಚರ್ಮಕ್ಕಾಗಿ

ಒಣ ಚರ್ಮಕ್ಕಾಗಿ

ಅಜ್ಜಿ ತಿಳಿಸುವ ಈ ವಿಧಾನ ಅತ್ಯಂತ ಫಲಪ್ರದವಾಗಿದ್ದು ಇಂದಿಗೂ ಪ್ರಸ್ತುತವಾಗಿದೆ. ಇದಕ್ಕೆ ಕೊಂಚವೇ ಮೊಸರನ್ನು ಮುಖಕ್ಕೆ ಹಚ್ಚಿ ನಯವಾಗಿ ಉಜ್ಜಿಕೊಂಡು ಕೊಂಚ ಕಾಲ ಬಿಟ್ಟು ಕೇವಲ ತಣ್ಣೀರಿನಿಂದ ತೊಳೆದುಕೊಂಡರೆ ಸಾಕು. ಎಷ್ಟು ಸುಲಭವಾಗಿ ಒಣಚರ್ಮ ಸುಂದರ, ಆರೋಗ್ಯಕರ ಮತ್ತು ಕೋಮಲವಾಗುತ್ತದೆ ಎಂದು ಗಮನಿಸಬಹುದು.

ಹಾಲಿನ ಕೆನೆ

ಹಾಲಿನ ಕೆನೆ

ಹಾಲಿನಲ್ಲಿರುವ ಲ್ಯಾಕ್ಟಿಕ್ ಆ್ಯಸಿಡ್ ಒಣ ಚರ್ಮವನ್ನು ಪುನಶ್ಚೇತಗೊಳಿಸುತ್ತದೆ ಮತ್ತು ಚರ್ಮಕ್ಕೆ ಕಾಂತಿಯನ್ನು ನೀಡುತ್ತದೆ. ಒಂದು ಚಮಚ ಹಾಲಿನ ಕೆನೆಗೆ ಸ್ವಲ್ಪ ಅರಿಶಿನ ಮತ್ತು ಕೆಲವು ಹನಿ ಬಾದಾಮಿ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಿ. ಇದನ್ನು ಚರ್ಮಕ್ಕೆ ಹಚ್ಚಿಕೊಳ್ಳಿ. 30 ನಿಮಿಷ ಹಾಗೆ ಬಿಡಿ. ಸ್ಕ್ರಬ್ ಮಾಡಿದ ಬಳಿಕ ನೀರಿನಿಂದ ತೊಳೆಯಿರಿ.

ಮೊಟ್ಟೆ

ಮೊಟ್ಟೆ

ಮೊಟ್ಟೆಯಲ್ಲಿ ಪ್ರೋಟೀನ್ ಅಧಿಕಮಟ್ಟದಲ್ಲಿದೆ. ಇದು ನಿಮ್ಮ ಚರ್ಮಕ್ಕೆ ಕಾಂತಿಯನ್ನು ಉಂಟುಮಾಡಿ ವಯಸ್ಸಾಗುವ ಲಕ್ಷಣವನ್ನು ತಡೆಯುವುದು. ಒಂದು ಮೊಟ್ಟೆಯಲ್ಲಿ ಸಣ್ಣ ಪಿಂಗಾಣಿಗೆ ಹಾಕಿಕೊಂಡು ಅದಕ್ಕೆ ಕೆಲವು ಹನಿ ನಿಂಬೆರಸವನ್ನು ಹಾಕಿಕೊಳ್ಳಿ. ಪೇಸ್ಟ್ ರೂಪಕ್ಕೆ ಬರುವ ತನಕ ಅದನ್ನು ಸರಿಯಾಗಿ ಕಲಸಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹೆಚ್ಚಿಕೊಳ್ಳಿ. ಚರ್ಮಚು ಹಿಗ್ಗುವ ತನಕ ಹಾಗೆ ಕುಳಿತುಕೊಳ್ಳಿ. ಬಳಿಕ ನೀರಿನಿಂದ ತೊಳೆಯಿರಿ.

ಉಪ್ಪು ಮತ್ತು ನಿಂಬೆರಸ

ಉಪ್ಪು ಮತ್ತು ನಿಂಬೆರಸ

ನಿಂಬೆಯು ಒಂದು ಉತ್ತಮವಾದ ಒಣಗಿಸುವ ಅಂಶಗಳನ್ನು ತನ್ನಲ್ಲಿ ಒಳಗೊಂಡಿದೆ. ಒಂದು ವೇಳೆ ನಿಮಗೆ ಮತ್ತಷ್ಟು ಒಣಗಿಸುವ ಇಚ್ಛೆಯಿದ್ದಲ್ಲಿ ಎರಡು ಚಮಚ ನಿಂಬೆರಸಕ್ಕೆ ಅರ್ಧ ಚಮಚ ಉಪ್ಪನ್ನು ಬೆರೆಸಿ. ಅದನ್ನು ಮೊಡವೆ ಇರುವ ಭಾಗದಲ್ಲಿ ಉಜ್ಜಿ ಸುಮಾರು 20-30 ನಿಮಿಷ ಬಿಡಿ. ಆದರೆ ಒಂದು ವಿಚಾರ ನೆನಪಿನಲ್ಲಿಡಿ, ಈ ಮಿಶ್ರಣವನ್ನು ಹಚ್ಚಿದಾಗ ಯಾವುದೇ ಕಾರಣಕ್ಕು ಬಿಸಿಲಿನಲ್ಲಿ ಹೊರಗೆ ಹೋಗಬೇಡಿ. ಏಕೆಂದರೆ ನಿಂಬೆರಸಕ್ಕೆ ಬ್ಲೀಚಿಂಗ್ ಗುಣಗಳು ಇರುತ್ತವೆ. ಇದು ತನ್ನ ಸೂಕ್ಷ್ಮತೆಯಿಂದ ನಿಮಗೆ ಕಿರಿಕಿರಿಯನ್ನು ಅಥವಾ ಉರಿಯನ್ನು ತರಬಹುದು.

 
English summary

Grandma-Approved Skin Care Hacks For Common Skin Problems!

Why go and buy all sorts of expensive creams and treatments to heal your common skin care problems when all you need are your grandma's remedies? These are safe to use and don't cost too much at all. Here, we will be listing down some of the most common skin problems and their remedies
Please Wait while comments are loading...
Subscribe Newsletter