ತಕ್ಷಣ ಮುಖದ ಕಾಂತಿ ಹೆಚ್ಚಿಸಲು, ಹರ್ಬಲ್ ಫೇಸ್ ಪ್ಯಾಕ್

By: Arshad
Subscribe to Boldsky

ಇಂದು ಮಾರುಕಟ್ಟೆಯಲ್ಲಿ ಸೌಂದರ್ಯ ಪ್ರಸಾಧನಗಳ ದಂಡೇ ಹರಿದು ಬರುತ್ತಿದೆ. ವಿವಿಧ ಚರ್ಮದ ಕ್ರೀಮ್, ಲೋಷನ್, ಜೆಲ್ ಎಂದೆಲ್ಲಾ ರೂಪದಿಂದ ಅಪಾಯಕಾರಿ ರಾಸಾಯನಿಕಗಳು ಸುಂದರ ಜಾಹೀರಾತಿನ ಸೆರಗಿನಡಿಯಲ್ಲಿ ಗಮನ ಸೆಳೆಯುತ್ತವೆ. ಇವು ತಕ್ಷಣಕ್ಕೆ ಒಳ್ಳೆಯ ಫಲಿತಾಂಶ ಒದಗಿಸಿದರೂ ದೀರ್ಘಕಾಲದ ಬಳಕೆಯಿಂದ ಇದು ಕೆಲವು ಶಾಶ್ವತ ಹಾನಿಯನ್ನೇ ಉಂಟುಮಾಡಬಹುದು.

ಅಲ್ಲದೇ ಇಂದು 'ಹರ್ಬಲ್' ಎಂಬ ಹಣೆಪಟ್ಟಿ ಹೊತ್ತು ಬಂದ ಕೆಲವು ಉತ್ಪನ್ನಗಳೂ ನಾಮಕಾವಸ್ತೆ ಕೊಂಚವೇ ಗಿಡಮೂಲಿಕೆಗಳನ್ನು ಹೊಂದಿದ್ದು ಉಳಿದಂತೆಲ್ಲಾ ಅಪಾಯಕಾರಿ ರಾಸಾಯನಿಕಗಳನ್ನೇ ಹೊಂದಿರುವ ಗೋಮುಖ ವ್ಯಾಘ್ರವಾಗಿದೆ. ಆದರೆ ನೂರಾರು ವರ್ಷಗಳ ಹಿಂದೆಯೇ ಆಯುರ್ವೇದ ಸೌಂದರ್ಯವೃದ್ಧಿಗಾಗಿ ಹಲವು ಗಿಡಮೂಲಿಕೆಗಳನ್ನು ಪ್ರಸ್ತುತಪಡಿಸಿದ್ದು ಇದರ ಪರಿಣಾಮ ಕೊಂಚ ನಿಧಾನ ಎಂಬ ಒಂದೇ ಒಂದು ಅಂಶವನ್ನು ಬದಿಗಿರಿಸಿದರೆ ಇನ್ನುಳಿದಂತೆ ಎಲ್ಲಾ ಉತ್ತಮ ಗುಣಗಳನ್ನೇ ಹೊಂದಿದೆ. ಇವುಗಳಲ್ಲಿ ಅಡ್ಡಪರಿಣಾಮಗಳೂ ಇಲ್ಲ ಹಾಗೂ ಸುಲಭವಾಗಿ ಮತ್ತು ಅಗ್ಗವಾಗಿಯೂ ದೊರಕುತ್ತದೆ. ಶ್!! ಇದು ಅಜ್ಜಿಯಿಂದ ಕಲಿತ ಸೌಂದರ್ಯ ರಹಸ್ಯ! ಪ್ರಯತ್ನಿಸಿ ನೋಡಿ

ಈ ಮೂಲಿಕೆಗಳನ್ನು ಉಪಯೋಗಿಸಿ ಮುಖಲೇಪಗಳನ್ನು ಮನೆಯಲ್ಲಿಯೇ ತಯಾರಿಸಬಹುದಾಗಿದ್ದು ನಿಯಮಿತ ಬಳಸುವ ಮೂಲಕ ಕೆಲವೇ ದಿನಗಳಲ್ಲಿ ಕಲೆಯಿಲ್ಲದ, ನುಣುಪಾದ ಹಾಗೂ ಕಾಂತಿಯುಕ್ತ ತ್ವಚೆಯನ್ನುಪಡೆಯಬಹುದು. ಈ ನಿಟ್ಟಿನಲ್ಲಿ ಅತ್ಯಂತ ಉಪಯುಕ್ತವಾದ ಮೂರು ಮುಖಲೇಪಗಳನ್ನು ಇಂದು ಪ್ರಸ್ತುತಪಡಿಸಲಾಗುತ್ತಿದೆ... 

Tulasi face pack
 

ತಕ್ಷಣದ ಕಾಂತಿಗಾಗಿ ತುಳಸಿ ಮುಖಲೇಪ

* ಒಂದು ಚಿಕ್ಕಚಮಚ ತುಳಸಿಪುಡಿಯನ್ನು ಎರಡು ಚಿಕ್ಕಚಮಚ ಬೇವಿನ ಪುಡಿಯೊಂದಿಗೆ ಬೆರೆಸಿ

* ಇದಕ್ಕೆ ಎರಡು ಚಿಕ್ಕ ಚಮಚ ಮುಲ್ತಾನಿ ಮಿಟ್ಟಿಯನ್ನು ಹಾಕಿ ಕೆಲವು ಹನಿ ಗುಲಾಬಿ ನೀರು ಹಾಗೂ ಅರ್ಧ ಚಿಕ್ಕ ಚಮಚ ಲಿಂಬೆರಸದೊಂದಿಗೆ ಮಿಶ್ರಣ ಮಾಡಿ.

* ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಲೇಪನ ತಯಾರಿಸಿ. ಈ ಲೇಪನ ಮುಖದ ಮೇಲೆ ಹಚ್ಚಿದಾಗ ಇಳಿಯದಷ್ಟು ಗಾಢವಾಗಿರಬೇಕು. ಒಂದು ವೇಳೆ ನಿಮ್ಮ ಚರ್ಮ ಒಣಚರ್ಮವಾಗಿದ್ದರೆ ಇದಕ್ಕೆ ಕೆಲವು ಹನಿ ಆಲಿವ್ ಎಣ್ಣೆಯನ್ನು ಬೆರೆಸಲು ಮರೆಯದಿರಿ. ಇದರಿಂದ ಒಣಚರ್ಮದವರಲ್ಲಿ ಕೊರತೆಯಿದ್ದ ಆರ್ದ್ರತೆ ಪೂರೈಸಿದಂತಾಗುತ್ತದೆ.

* ಈ ಲೇಪನವನ್ನು ಹಚ್ಚಿಕೊಳ್ಳುವ ಮುನ್ನ ಮೊದಲು ತಣ್ಣೀರಿನಲ್ಲಿ ಮುಖವನ್ನು ತೊಳೆದುಕೊಂಡ ಬಳಿಕ ಹಬೆಯಲ್ಲಿ ಸುಮಾರು ಮೂರು ನಿಮಿಷದಷ್ಟು ಕಾಲು ಮುಖವನ್ನು ಒಡ್ಡಬೇಕು. ಇದರಿಂದ ಚರ್ಮದ ಸೂಕ್ಷ್ಮ ರಂಧ್ರಗಳು ತೆರೆದು ಈ ಮುಖಲೇಪದ ಪೋಷಕಾಂಶಗಳು ಚರ್ಮದ ಆಳಕ್ಕೆ ಇಳಿಯಲು ಸಾಧ್ಯವಾಗುತ್ತದೆ.

* ಈ ಲೇಪವನ್ನು ಇಡಿಯ ಮುಖಕ್ಕೆ ತೆಳುವಾಗಿ ಹಚ್ಚಿ ಒಣಗಲು ಬಿಡಬೇಕು. ಚರ್ಮದ ಬಗೆಯನ್ನು ಅನುಸರಿಸಿ ಕೆಲವರಿಗೆ ಹೆಚ್ಚು ಸಮಯ ಹಿಡಿಯಬಹುದು. ಪೂರ್ಣ ಒಣಗಿದ ಬಳಿಕ ಈ ಲೇಪ ಒಂದು ಕಡೆಯಿಂದ ಬಿರುಕು ಬಿಡಲು ಪ್ರಾರಂಭಿಸುತ್ತದೆ. ಆಗ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಬೇಕು. ಈ ವಿಧಾನದಿಂದ ಚರ್ಮ ತಕ್ಷಣವೇ ಉತ್ತಮ ಕಾಂತಿ ಪಡೆಯುತ್ತದೆ.  ಮೊಡವೆಯ ಬಾಧೆಗೆ ತುಳಸಿಯ ನಲ್ಮೆಯ ಆರೈಕೆ   

Turmeric face pack
 

ಚರ್ಮ ಬಿಳಿಚಿಸಲು ಅರಿಶಿನದ ಮುಖಲೇಪ:

* ಎರಡು ಚಿಕ್ಕಚಮಚ ಕಡ್ಲೆಹಿಟ್ಟಿಗೆ ಒಂದು ಚಿಟಿಕೆ ಅರಿಶಿನ ಪುಡಿ ಬೆರೆಸಿ. ಇದಕ್ಕಿ ಒಂದು ಚಿಕ್ಕಚಮಚ ಗುಲಾಬಿ ನೀರು ಬೆರೆಸಿ ನಯವಾದ ಲೇಪನ ತಯಾರಿಸಿ

* ಈ ಲೇಪವನ್ನು ಈಗತಾನೇ ತೊಳೆದ ಮುಖಕ್ಕೆ ಹಚ್ಚಿ ಪೂರ್ಣವಾಗಿ ಒಣಗುವವರೆಗೆ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೆರಡು ಬಾರಿಯಂತೆ ಒಂದು ತಿಂಗಳಾದರೂ ಅನುಸರಿಸಿ. ಇದರಿಂದ ಬಿಸಿಲಿಗೆ ಕಪ್ಪಗಾಗಿದ್ದ ಚರ್ಮ ಸಹಜವರ್ಣ ಪಡೆಯುವುದು ಮಾತ್ರವಲ್ಲ, ಮೊಡವೆಯ ಕಲೆಗಳು, ಹಾಗೂ ಇತರ ಗುರುತುಗಳೂ ಇಲ್ಲವಾಗುತ್ತವೆ.  ಚಿನ್ನದ ದೇವತೆ 'ಅರಿಶಿನದ' ಸೌಂದರ್ಯ ಗುಣಗಳು     

Amla

ಕಲೆಯಿಲ್ಲದ ತ್ವಚೆಗಾಗಿ ನೆಲ್ಲಿಕಾಯಿ ಮುಖಲೇಪ

* ಎರಡು ಚಿಕ್ಕಚಮಚ ಮೊಸರು, ಒಂದು ಚಿಕ್ಕಚಮಚ ನೆಲ್ಲಿಕಾಯಿಯ ತಿರುಳಿನ ಪೇಸ್ಟ್ ಮತ್ತು ಅರ್ಧ ಚಿಕ್ಕ ಚಮಚ ಜೇನು ಬೆರೆಸಿ ಮಿಶ್ರಣ ಮಾಡಿ

* ಈ ಲೇಪನವನ್ನು ಇಡಿಯ ಮುಖಕ್ಕೆ ಹಚ್ಚಿ ಸುಮಾರು ಹದಿನೈದು ನಿಮಿಷ ಒಣಗಲು ಬಿಡಿ.

* ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.  ಮನೆಮದ್ದು: ಕೂದಲಿನ ಆರೈಕೆಗೆ ಬೆಟ್ಟದ ನೆಲ್ಲಿಕಾಯಿ!

English summary

Miracle Herbal Face Packs For Varied Uses

ost efficient. The homemade herbal face pack gives you clear, smooth and glowing skin with regular use. Check out our top herbal face packs...
Please Wait while comments are loading...
Subscribe Newsletter