For Quick Alerts
ALLOW NOTIFICATIONS  
For Daily Alerts

ಇದು ಪಕ್ಕಾ ನೈಸರ್ಗಿಕ ಫೇಸ್ ಪ್ಯಾಕ್! ಚಿಂತೆಯ ಅಗತ್ಯವೇ ಇಲ್ಲ!

ತ್ವಚೆಯನ್ನು ಸುಂದರವಾಗಿಡಲು ಕೆಲವೊಂದು ನೈಸರ್ಗಿಕವಾದ ಮಾಸ್ಕ್ ನ್ನು ಬಳಸಿದರೆ ಒಳ್ಳೆಯದು. ಈ ಮಾಸ್ಕ್‌ಗಳು ಬೇಗನೆ ಫಲಿತಾಂಶವನ್ನು ನೀಡುವುದು.

By Hemanth
|

ನಾವು ಸುಂದರವಾಗಿ ಕಾಣಬೇಕಾದರೆ ತ್ವಚೆಯು ಕಾಂತಿ ಹಾಗೂ ಆರೋಗ್ಯದಿಂದ ಇರಬೇಕು. ಇದರ ಆರೈಕೆಗಾಗಿ ನಾವು ದುಡಿಯುವ ಕಾಲು ಭಾಗದಷ್ಟು ಹಣವನ್ನು ವ್ಯಯಿಸುತ್ತೇವೆ. ತಿಂಗಳಿಗೊಮ್ಮೆ ಫೇಶಿಯಲ್ ಮಾಡಿಕೊಳ್ಳುತ್ತೇವೆ. ಮೂರು ತಿಂಗಳಿಗೆ ಒಮ್ಮೆಯಾದರೂ ಸ್ಪಾಗೆ ಹೋಗುತ್ತೇವೆ. ಏನಾದರೂ ಮಾಡಿ ತ್ವಚೆಯನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಕ್ರೀಮ್ ಹಾಗೂ ಮಾಯಿಶ್ಚರೈಸರ್‌ಗಳನ್ನು ತಂದು ಹಚ್ಚಿಕೊಳ್ಳುತ್ತೇವೆ.

Face pack ingredients

ಏನೇ ಮಾಡಿದರೂ ನಮ್ಮ ತ್ವಚೆ ಮಾತ್ರ ಹಾಗೆ ಉಳಿದುಬಿಡುತ್ತದೆ. ಸುಕ್ಕುಕಟ್ಟಿದಂತೆ, ಜೋತು ಬಿದ್ದ ಚರ್ಮ ಹಾಗೂ ಮೊಡವೆಗಳು ಕಾಣಿಸಿಕೊಳ್ಳುತ್ತದೆ. ಮನೆಯಿಂದ ಹೊರಗಡೆ ಹೋದರೆ ಮುಖದ ತುಂಬೆಲ್ಲಾ ತುಂಬಿಕೊಳ್ಳುವಂತಹ ಧೂಳು ಹಾಗೂ ಇತರ ಕಲ್ಮಶಗಳು ಮೊಡವೆಗಳು ಮೂಡಲು ಪ್ರಮುಖ ಕಾರಣವಾಗಿದೆ.

ತ್ವಚೆಯನ್ನು ಸುಂದರವಾಗಿಡಲು ಕೆಲವೊಂದು ನೈಸರ್ಗಿಕವಾದ ಮಾಸ್ಕ್ ನ್ನು ಬಳಸಿದರೆ ಒಳ್ಳೆಯದು. ಈ ಮಾಸ್ಕ್‌ಗಳು ಬೇಗನೆ ಫಲಿತಾಂಶವನ್ನು ನೀಡುವುದು. ಇದರ ಬಗ್ಗೆ ಈ ಲೇಖನದಲ್ಲಿ ತಿಳಿಯಿರಿ.

ಅಲೋವೆರಾ (ಲೋಳೆಸರ)
ಆ್ಯಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಇ ಯಿಂದ ಸಮೃದ್ಧವಾಗಿರುವ ಅಲೋವೆರಾವು ಚರ್ಮವನ್ನು ಶಮನಗೊಳಿಸಿ, ತೇವಾಂಶ ನೀಡಿ ಅದರ ಕೋಶಗಳನ್ನು ಸರಿಪಡಿಸುತ್ತದೆ. ಅಲೋವೆರಾದ ಎಲೆಯನ್ನು ತೆಗೆದುಕೊಂಡು ಅದರ ಜೆಲ್ ಅನ್ನು ಹೊರಗೆ ತೆಗೆಯಿರಿ. ಬಹುಪಯೋಗಿ ಲೋಳೆಸರದ ಲಾಭಗಳು ಒಂದೇ, ಎರಡೇ?

15 ನಿಮಿಷಗಳ ಕಾಲ ಇದನ್ನು ಪ್ರಿಡ್ಜ್ ನಲ್ಲಿ ಇಟ್ಟು ತಂಪಾಗಿಸಿ. ಹೊರಗೆ ತೆಗೆದು ಒಂದು ಚಮಚದಲ್ಲಿ ಇದನ್ನು ಸರಿಯಾಗಿ ಹುಡಿ ಮಾಡಿ ಮೊದಲಿನಂತೆ ಮೃಧುವಾಗಿಸಿ. ಐದು ಹನಿ ಗುಲಾಬಿ ಎಣ್ಣೆಯನ್ನು ಇದಕ್ಕೆ ಹಾಕಿಕೊಳ್ಳಿ. ಚರ್ಮದ ಮೇಳೆ ಸರಿಯಾಗಿ ಮಸಾಜ್ ಮಾಡಿ. ರಾತ್ರಿಯಿಡಿ ಹಾಗೆ ಇಡಿ. ಬೆಳಿಗ್ಗೆ ಮುಖ ತೊಳೆದಾಗ ಮೃಧು ಹಾಗೂ ಕಾಂತಿಯುತ ಚರ್ಮವು ನಿಮ್ಮದಾಗುತ್ತದೆ.

ಮೊಟ್ಟೆ
ಮೊಟ್ಟೆಯಲ್ಲಿ ಪ್ರೋಟೀನ್ ಅಧಿಕಮಟ್ಟದಲ್ಲಿದೆ. ಇದು ನಿಮ್ಮ ಚರ್ಮಕ್ಕೆ ಕಾಂತಿಯನ್ನು ಉಂಟುಮಾಡಿ ವಯಸ್ಸಾಗುವ ಲಕ್ಷಣವನ್ನು ತಡೆಯುವುದು. ಒಂದು ಮೊಟ್ಟೆಯಲ್ಲಿ ಸಣ್ಣ ಪಿಂಗಾಣಿಗೆ ಹಾಕಿಕೊಂಡು ಅದಕ್ಕೆ ಕೆಲವು ಹನಿ ನಿಂಬೆರಸವನ್ನು ಹಾಕಿಕೊಳ್ಳಿ. ಪೇಸ್ಟ್ ರೂಪಕ್ಕೆ ಬರುವ ತನಕ ಅದನ್ನು ಸರಿಯಾಗಿ ಕಲಸಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹೆಚ್ಚಿಕೊಳ್ಳಿ. ಚರ್ಮಚು ಹಿಗ್ಗುವ ತನಕ ಹಾಗೆ ಕುಳಿತುಕೊಳ್ಳಿ. ಬಳಿಕ ನೀರಿನಿಂದ ತೊಳೆಯಿರಿ. ಮೊಟ್ಟೆಯಲ್ಲಿ ಅಡಗಿದೆ ಕೂದಲಿನ ಸಕಲ ಸೌಂದರ್ಯದ ರಹಸ್ಯ!

ಹಾಲಿನ ಕೆನೆ
ಹಾಲಿನಲ್ಲಿರುವ ಲ್ಯಾಕ್ಟಿಕ್ ಆ್ಯಸಿಡ್ ಒಣ ಚರ್ಮವನ್ನು ಪುನಶ್ಚೇತಗೊಳಿಸುತ್ತದೆ ಮತ್ತು ಚರ್ಮಕ್ಕೆ ಕಾಂತಿಯನ್ನು ನೀಡುತ್ತದೆ. ಒಂದು ಚಮಚ ಹಾಲಿನ ಕೆನೆಗೆ ಸ್ವಲ್ಪ ಅರಶಿನ ಮತ್ತು ಕೆಲವು ಹನಿ ಬಾದಾಮಿ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಿ. ಇದನ್ನು ಚರ್ಮಕ್ಕೆ ಹಚ್ಚಿಕೊಳ್ಳಿ. 30 ನಿಮಿಷ ಹಾಗೆ ಬಿಡಿ. ಸ್ಕ್ರಬ್ ಮಾಡಿದ ಬಳಿಕ ನೀರಿನಿಂದ ತೊಳೆಯಿರಿ. ಹಾಲಿನ ಕೆನೆಯಂತಹ ತ್ವಚೆಯ ಸೌಂದರ್ಯ ನಿಮ್ಮದಾಗಿಸಿಕೊಳ್ಳಿ!

ಉಪ್ಪು ಮತ್ತು ನಿಂಬೆರಸ
ನಿಂಬೆಯು ಒಂದು ಉತ್ತಮವಾದ ಒಣಗಿಸುವ ಅಂಶಗಳನ್ನು ತನ್ನಲ್ಲಿ ಒಳಗೊಂಡಿದೆ. ಒಂದು ವೇಳೆ ನಿಮಗೆ ಮತ್ತಷ್ಟು ಒಣಗಿಸುವ ಇಚ್ಛೆಯಿದ್ದಲ್ಲಿ ಎರಡು ಚಮಚ ನಿಂಬೆರಸಕ್ಕೆ ಅರ್ಧ ಚಮಚ ಉಪ್ಪನ್ನು ಬೆರೆಸಿ. ಅದನ್ನು ಮೊಡವೆ ಇರುವ ಭಾಗದಲ್ಲಿ ಉಜ್ಜಿ ಸುಮಾರು 20-30 ನಿಮಿಷ ಬಿಡಿ. ಆದರೆ ಒಂದು ವಿಚಾರ ನೆನಪಿನಲ್ಲಿಡಿ, ಈ ಮಿಶ್ರಣವನ್ನು ಹಚ್ಚಿದಾಗ ಯಾವುದೇ ಕಾರಣಕ್ಕು ಬಿಸಿಲಿನಲ್ಲಿ ಹೊರಗೆ ಹೋಗಬೇಡಿ. ಏಕೆಂದರೆ ನಿಂಬೆರಸಕ್ಕೆ ಬ್ಲೀಚಿಂಗ್ ಗುಣಗಳು ಇರುತ್ತವೆ. ಇದು ತನ್ನ ಸೂಕ್ಷ್ಮತೆಯಿಂದ ನಿಮಗೆ ಕಿರಿಕಿರಿಯನ್ನು ಅಥವಾ ಉರಿಯನ್ನು ತರಬಹುದು.

ಪಪ್ಪಾಯಿ ಹಣ್ಣಿನ ಪ್ಯಾಕ್
ನೀವು ಒಂದು ಹಣ್ಣು ಅನೇಕ ಹಣ್ಣುಗಳನ್ನು ಬಳಾಸಿ ಫೇಸ್ ಪ್ಯಾಕ್ ತಯಾರಿಸಬಹುದು. ಅವುಗಳ ಲಭ್ಯತೆಗಳಿಗನುಗುಣವಾಗಿ ಬಾಳೆಹಣ್ಣು, ಪಪ್ಪಾಯಿ, ಆವಕಾಡೊ, ಕಲ್ಲಂಗಡಿ ಮೊದಲಾದ ಹಣ್ಣುಗಳನ್ನು ಮುಖಕ್ಕೆ ಹಚ್ಚಲು ಆಯ್ದುಕೊಳ್ಳಬಹುದು. ಒಂದು ಅಥ್ಯವಾ ಎರಡು ಹಣ್ಣುಗಳನ್ನು ಮ್ಯಾಶ್ ಮಾಡಿ ಜೇನು ಮತ್ತು ಮೊಸರಿನ ಜೊತೆ ಮಿಶ್ರಣ ಮಾಡಿ. ಈ ಫೇಸ್ ಮಾಸ್ಕ್ ಮುಖಕ್ಕೆ ಹಚ್ಚಿ ಒಣಗಿದ ನಂತರ ತೊಳೆಯಿರಿ. ಪಪ್ಪಾಯಿ ಹಣ್ಣಿನಲ್ಲಿದೆ 'ಸೌಂದರ್ಯದ' ಮಾಂತ್ರಿಕ ಶಕ್ತಿ!

ಸೌತೆಕಾಯಿ ಫೇಸ್ ಮಾಸ್ಕ್
ಸೌತೆಕಾಯಿ ಸಾರಗಳು, ದೇಹದ ಶಾಖವನ್ನು ಕಾಯ್ದುಕೊಳ್ಳುವ ಮೂಲಕ, ಮೊಡವೆ ಮತ್ತು ಉರಿಯೂತದೊಂದಿಗೆ ಹೋರಾಡುವ ಸೂಕ್ತ ಫೇಸ್ ಪ್ಯಾಕ್ ಆಗಿದೆ. ಇದು ಮುಖದಲ್ಲಿನ ಮೊಡವೆ ಗುಳ್ಳೆಗಳನ್ನು ಕಡಿಮೆ ಮಾಡುವಲ್ಲಿಯೂ ಸಹಾಯಕಾರಿ. ಇದನ್ನು ಮಾಡುವ ಪ್ರಕ್ರಿಯೆ ಸಾಕಷ್ಟು ಸುಲಭ. ಸೌತೆಕಾಯಿಯನ್ನು ರಸ ತೆಗೆದು/ ತುರಿದು ಮುಖಕ್ಕೆ ಲೇಪಿಸುವುದಕ್ಕಿಂತ ಮೊದಲು ಸುಮಾರು 30-40 ನಿಮಿಷಗಳ ಕಾಲ ರೆಫ್ರೀಜರೇಟರ್ ನಲ್ಲಿ ಇಡಿ. ಇದು ಸಾಕಷ್ಟು ತಂಪಾದ ಸಂದರ್ಭದಲ್ಲಿ, ರಸದಲಿರುವ ತಿರುಳನ್ನು ಆಯ್ಕೆ ಮಾಡಿಕೊಂಡು ಮುಖಕ್ಕೆ ಹಚ್ಚಿ. ಮೊಡವೆ ಭಾಗಗಳಲ್ಲಿ ಸೌತೆಕಾಯಿ ತಿರುಳನ್ನು ಇಟ್ಟು ಕೈಯಾಡಿಸಿ. ಮತ್ತೆ ಮತ್ತೆ ಈ ಕ್ರಮವನ್ನು ಪುನರಾವರ್ತಿಸಿ. ಮುಖದ ಸೌಂದರ್ಯಕ್ಕೆ ಸೌತೆಕಾಯಿಯ ಫೇಸ್ ಪ್ಯಾಕ್

English summary

grandma-approved-masks-to-nail-that-dew-skin

We do a lot for our skin. From running to a spa for the monthly-never-miss-ritualistic-facial, spending 1/3rd of our meager salary on skin care products, to investing hours in every day skin care, that is a LOT of work! So here are some skin-brightening masks that show results!
Story first published: Wednesday, November 23, 2016, 10:19 [IST]
X
Desktop Bottom Promotion