For Quick Alerts
ALLOW NOTIFICATIONS  
For Daily Alerts

ಮೊಡವೆ ಸಮಸ್ಯೆಗೆ ಯಾಕೆ ಚಿಂತೆ? ಮನೆಯಲ್ಲಿಯೇ ಇದೆ ಪರಿಹಾರ!

ಮೊಡವೆಗಳ ನಿವಾರಣೆ ಮಾಡಲು ಮನೆಯಲ್ಲೇ ಸಿಗುವಂತಹ ಕೆಲವೊಂದು ಸಾಮಗ್ರಿಗಳನ್ನು ಬಳಸಿಕೊಳ್ಳಿ. ಅದು ಹೇಗೆಂದು ತಿಳಿಯಲು ಮುಂದಕ್ಕೆ ಓದಿಕೊಳ್ಳಿ....

By Manu
|

ಮನೆಯಿಂದ ಹೊರಗಡೆ ಹೋದರೆ ಸಾಕು ಧೂಳು ಹಾಗೂ ವಾಹನಗಳ ಹೊಗೆ ದೇಹಕ್ಕೆ ಬಂದು ಅಂಟಿಕೊಳ್ಳುವುದು. ಅತಿಯಾದ ವಾಹನ ದಟ್ಟನೆ ಹಾಗೂ ಕೈಗಾರಿಕೆಗಳಿಂದಾಗಿ ವಾತಾವರಣವೂ ಕಲುಷಿತವಾಗಿದೆ. ಹೊರಗಡೆ ಹೋದರೆ ದೊಡ್ಡ ಚಿಂತೆಯಾಗುವುದು ಚರ್ಮದ ಆರೋಗ್ಯದ ಬಗ್ಗೆ ಚರ್ಮವು ಈ ಕಲುಷಿತ ವಾತಾವರಣದಲ್ಲಿ ಕೆಡಿಸಿಕೊಳ್ಳುತ್ತದೆ. ಸಿಂಪಲ್ ಮನೆಮದ್ದು, ಮೊಡವೆ ಕಲೆಗೆ ತ್ವರಿತ ಪರಿಹಾರ

ಇದರಿಂದ ಮುಖದಲ್ಲಿ ಮೊಡವೆಗಳು, ಕಲೆಗಳು ಹಾಗೂ ಬೊಕ್ಕೆಗಳು ಮೂಡುತ್ತದೆ. ಮೊಡವೆಗಳು ಮಹಿಳೆಯರು ಹಾಗೂ ಪುರುಷರಲ್ಲಿ ಸಾಮಾನ್ಯವೆನ್ನುವಂತಾಗಿದೆ. ಅದರಲ್ಲೂ ಎಣ್ಣೆಯಂಶವಿರುವ ಚರ್ಮವನ್ನು ಹೊಂದಿರುವವರಲ್ಲಿ ಈ ಸಮಸ್ಯೆಯು ತುಂಬಾ ದೀರ್ಘವಾಗಿರುತ್ತದೆ. ಮೊಡವೆ ಸಮಸ್ಯೆಗೆ ಅಂಗೈಯಲ್ಲಿಯೇ ಇದೆ ಪರಿಹಾರ!

ಚರ್ಮದ ರಂಧ್ರಗಳ ಒಳಗಡೆ ಎಣ್ಣೆಯಂಶವು ಸೇರಿಕೊಂಡು ಸಮಸ್ಯೆಯನ್ನು ಉಂಟುಮಾಡುತ್ತದೆ. ಮೊಡವೆಗಳು ಮುಖದಲ್ಲಿ ಮೂಡಿದರೆ ಅದರ ನೋವು ತೀವ್ರವಾಗಿರುತ್ತದೆ ಮತ್ತು ಮುಖದ ಸೌಂದರ್ಯವನ್ನು ಕೂಡ ಇದು ಕೆಡಿಸುತ್ತದೆ. ಮುಖದ ತುಂಬಾ ಮೊಡವೆಗಳಿದ್ದರೆ ಯಾವುದೇ ಕಾರ್ಯಕ್ರಮಕ್ಕೆ ಹೋಗಲು ಹಿಂಜರಿಕೆಯಾಗುತ್ತದೆ. ಮೊಡವೆ ಸಮಸ್ಯೆಗೆ ಸಾಮಾನ್ಯವಾದ ಆರು ಕಾರಣ

ಇಂತಹ ಸಮಯದಲ್ಲಿ ಯಾವುದಾದರೂ ಕ್ರೀಮ್ ಅಥವಾ ಮೊಡವೆ ನಿವಾರಕ ಔಷಧಿಗಳನ್ನು ಬಳಸುತ್ತೇವೆ. ಆದರೆ ಒಂದು ವಾರಕ್ಕಿಂತ ಹೆಚ್ಚು ಸಮಯ ಇದನ್ನು ಬಳಸಿದರೆ ಅದರಿಂದ ಅಡ್ಡಪರಿಣಾಮಗಳು ಇರುತ್ತದೆ. ಮೊಡವೆಗಳ ನಿವಾರಣೆ ಮಾಡಲು ಮನೆಯಲ್ಲೇ ಸಿಗುವಂತಹ ಕೆಲವೊಂದು ಸಾಮಗ್ರಿಗಳನ್ನು ಬಳಸಿಕೊಳ್ಳಿ. ಅದು ಹೇಗೆಂದು ತಿಳಿಯಲು ಮುಂದಕ್ಕೆ ಓದಿಕೊಳ್ಳಿ....

ಸಾಸಿವೆ ಮತ್ತು ಜೇನುತುಪ್ಪ

ಸಾಸಿವೆ ಮತ್ತು ಜೇನುತುಪ್ಪ

ಸಾಸಿವೆಯಲ್ಲಿ ಸಲಿಸ್ಯಲಿಕ್ ಎನ್ನುವ ಆಮ್ಲವು ಇರುವ ಕಾರಣದಿಂದಾಗಿ ಇದು ಸೋಂಕು ಹಾಗೂ ಮೊಡವೆಗಳನ್ನು ನಿವಾರಣೆ ಮಾಡುತ್ತದೆ. ಸಾಸಿವೆಯು ಮೊಡವೆಗಳಿಗೆ ಅತ್ಯುತ್ತಮ ಔಷಧಿಯಾಗಿದೆ. ¼ ಚಮಚ ಸಾಸಿವೆ ಹುಡಿ ಮತ್ತು ಒಂದು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಇದನ್ನು 15 ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ. ಸಾಸಿವೆ ಎಣ್ಣೆ- ಆರೋಗ್ಯಕ್ಕೂ ಸೈ, ಅಡುಗೆಗೂ ಜೈ

ಬೆಳ್ಳುಳ್ಳಿ ರಸ

ಬೆಳ್ಳುಳ್ಳಿ ರಸ

ಮೊಡವೆಗಳನ್ನು ಉಂಟು ಮಾಡುವ ಚರ್ಮದ ಸೋಂಕನ್ನು ಬೆಳ್ಳುಳ್ಳಿ ರಸವು ಬೇಗನೆ ನಿವಾರಿಸುವುದು. ಬೆಳ್ಳುಳ್ಳಿಯಲ್ಲಿ ಶಮನಕಾರಿ ಗುಣಗಳು ಇವೆ. ಬೆಳ್ಳುಳ್ಳಿ ರಸವನ್ನು ಮೊಡವೆಗಳ ಮೇಲೆ ಹಚ್ಚಿಕೊಂಡು ಸಾಧ್ಯವಾದಷ್ಟು ಸಮಯ ಹಾಗೆ ಬಿಡಿ. ಇದು ಮೊಡವೆಗೆ ತುಂಬಾ ಪರಿಣಾಮಕಾರಿ ಮದ್ದಾಗಿದೆ. ಉಪಹಾರಕ್ಕಿಂತ ಮುಂಚೆಯೇ ಬೆಳ್ಳುಳ್ಳಿ ಸೇವಿಸಿ, ಆರೋಗ್ಯವೃದ್ಧಿಸಿ!

ಮೊಟ್ಟೆಯ ಲೋಳೆಯ ಮಾಸ್ಕ್

ಮೊಟ್ಟೆಯ ಲೋಳೆಯ ಮಾಸ್ಕ್

ಮೊಟ್ಟೆಯಲ್ಲಿ ಒಂದು ಬೆರಳು ಹೋಗುವಷ್ಟು ಜಾಗ ಮಾಡಿಕೊಂಡು ಅದರೊಳಗೆ ಬೆರಳು ಹಾಕಿ. ಬೆರಳಿನಲ್ಲಿ ಬರುವಂತಹ ಮೊಟ್ಟೆಯ ಬಿಳಿ ಲೋಳೆಯನ್ನು ಮೊಡವೆಗಳಿಗೆ ಹಚ್ಚಿಕೊಳ್ಳಿ. ಇದನ್ನು 20 ನಿಮಿಷ ಕಾಲ ಹಾಗೆ ಬಿಟ್ಟು ಬಿಡಿ. ಮೊಟ್ಟೆಯ ಬಿಳಿ ಲೋಳೆ ಹಚ್ಚಿಕೊಳ್ಳುವ ಮೊದಲು ಮೊಡವೆಗಳಿಗೆ ಲಿಂಬೆರಸವನ್ನು ಹಾಕಿಕೊಳ್ಳಿ. ಇದು ಒಳ್ಳೆಯ ಶಮನಕಾರಿ ಗುಣವನ್ನು ಹೊಂದಿದೆ.

ಲಿಂಬೆರಸ

ಲಿಂಬೆರಸ

ಮಲಗುವ ಮೊದಲು ಸ್ವಲ್ಪ ಲಿಂಬೆರಸವನ್ನು ಹತ್ತಿ ಉಂಡೆಯಿಂದ ಮೊಡವೆಗಳ ಮೇಲೆ ಹಚ್ಚಿಕೊಳ್ಳಿ. ರಾತ್ರಿಯಿಡಿ ಹಾಗೆ ಬಿಡಿ. ಬೆಳಿಗ್ಗೆ ಎದ್ದಾಗ ಮೊಡವೆಗಳು ಒಣಗಿರುತ್ತದೆ ಮತ್ತು ಬಿದ್ದು ಹೋಗುತ್ತದೆ.

ಅರಿಶಿನ

ಅರಿಶಿನ

ಅನಾದಿ ಕಾಲದಿಂದಲೂ ಮೊಡವೆ ಮತ್ತು ಕಲೆಗಳನ್ನು ಹೋಗಲಾಡಿಸಲು ಈ ಔಷಧವನ್ನು ಬಳಸಿಕೊಳ್ಳಲಾಗುತ್ತಿದೆ. ಹಾಲು ಮತ್ತು ಅರಿಶಿನವನ್ನು ಸೇರಿಸಿ ದಪ್ಪನೆಯ ಪೇಸ್ಟ್ ತಯಾರಿಸಿಕೊಳ್ಳಿ. ನಂತರ ಮೊಡವೆ ಇರುವ ಭಾಗಕ್ಕೆ ಇದನ್ನು ಹಚ್ಚಿಕೊಂಡು ಒಣಗಲು ಬಿಡಿ. ನಂತರ ತೊಳೆದುಕೊಳ್ಳಿ. ಆಗಾಗ್ಗೆ ಈ ಮದ್ದನ್ನು ಮಾಡಿಕೊಂಡು ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಿ.

ಕಾಫಿ

ಕಾಫಿ

ಒಂದು ಪಾತ್ರೆಗೆ ಸ್ವಲ್ಪ ಕಾಫಿ ಹುಡಿಯನ್ನು ಹಾಕಿ. ಇದಕ್ಕೆ ಬೇಕಾದಷ್ಟು ನೀರು ಸೇರಿಸಿ ದಪ್ಪನೆಯ ಪೇಸ್ಟ್ ತಯಾರಿಸಿಕೊಳ್ಳಿ. ಮುಖದಲ್ಲಿ ಮೂಡಿರುವ ಮೊಡವೆ ಕಲೆಗಳ ಮೇಲೆ ಈ ಪೇಸ್ಟ್ ಅನ್ನು ಹಚ್ಚಿಕೊಂಡು, ಸುಮಾರು 15 ನಿಮಿಷ ಇದನ್ನು ಒಣಗಲು ಬಿಡಿ ನಂತರ ತಣ್ಣಗಿನ ನೀರಿನಿಂದ ಮುಖ ತೊಳೆದುಕೊಳ್ಳಿ. ಅಡುಗೆ ಮನೆಯ ಸಾಮಾಗ್ರಿ ನಿಮ್ಮ ತ್ವಚೆಯ ಸಮಸ್ಯೆಗೆ ಉತ್ತಮ ಪರಿಹಾರಕವಾಗಿ ಬಂದೊದಗಿದ್ದನ್ನು ನೀವೇ ನೋಡಿ....

English summary

Kitchen Remedies To Remove Pimples In Just One Day

Pimples and acne are a common concern for most girls and women too. Even some men may also suffer from this problem. They mask the beauty of your face, making it look red and somewhat scary to look at. It is the need of the hour to remove these embarrassing marks from your face and boost your self confidence. Oily face can be more prone to pimples and acne...
Story first published: Wednesday, April 12, 2017, 20:20 [IST]
X
Desktop Bottom Promotion