ಮೊಡವೆ ಸಮಸ್ಯೆಗೆ ಅಂಗೈಯಲ್ಲಿಯೇ ಇದೆ ಪರಿಹಾರ!

By: Hemanth
Subscribe to Boldsky

ಹದಿಹರೆಯದವರನ್ನು ಸಾಮಾನ್ಯವಾಗಿ ಕಾಡುವಂತಹ ಸಮಸ್ಯೆಯೆಂದರೆ ಅದು ಮೊಡವೆಗಳು ಮೂಡುವುದು. ಮೊಡವೆಗಳಿಂದಾಗಿ ಮುಖದ ಸೌಂದರ್ಯವೇ ಹಾಳಾಗುತ್ತದೆ. ಮನೆಮದ್ದಿನ ಮಾಯಾ ಜಾದೂಗೆ ಮೊಡವೆ ಮಂಗಮಾಯ!

ಮೊಡವೆಗಳ ನಿವಾರಣೆಗೆ ಟಿವಿಯಲ್ಲಿ ಬರುವಂತಹ ಜಾಹೀರಾತಿಗೆ ಮರುಳಾಗಿ ಹಲವಾರು ರೀತಿಯ ಕ್ರೀಮ್ ಗಳನ್ನು ಬಳಸಿದ ಬಳಿಕವೂ ಯಾವುದೇ ಫಲಿತಾಂಶ ಮಾತ್ರ ಬರುವುದೇ ಇಲ್ಲ. ಅಯ್ಯೋ ದೇವರೆ, ಮೂಗಿನಲ್ಲಿ ಮೊಡವೆ ಏನು ಮಾಡ್ಲಿ..?

ಮೊಡವೆಗಳು ಮುಖದ ಮೇಲಿದ್ದರೆ ಅದು ಕಿರಿಕಿರಿಯನ್ನು ಉಂಟು ಮಾಡುತ್ತದೆ. ಇಂತಹ ಮೊಡವೆಗಳಿಂದ ಪರಿಹಾರ ಪಡೆಯಲು ಹಲವಾರು ರೀತಿಯ ಉಪಾಯಗಳು ಇವೆ. ಇವುಗಳನ್ನು ಬಳಸಿದರೆ ಮೊಡವೆಗಳು ನಿವಾರಣೆಯಾಗಿ ಮುಖದ ಸೌಂದರ್ಯವು ಹೆಚ್ಚುವುದು. ಮೊಡವೆಯಿಂದ ಉಂಟಾಗುವಂತಹ ಕಪ್ಪು ಕಲೆಗಳು ಕೂಡ ನಿವಾರಣೆಯಾಗುವುದು. ಇದು ಹೇಗೆಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. 

 ಟೊಮೇಟೊ ಜ್ಯೂಸ್

ಟೊಮೇಟೊ ಜ್ಯೂಸ್

ಒಂದು ಚಿಕ್ಕ ಬೋಗುಣಿಯಲ್ಲಿ ಎರಡು ದೊಡ್ಡ ಚಮಚ ಟೊಮೇಟೊ ಜ್ಯೂಸ್ (ಸಿಪ್ಪೆ ಮತ್ತು ಬೀಜ ತೆಗೆದ ತಿರುಳನ್ನು ಮಿಕ್ಸಿಯಲ್ಲಿ ಕಡೆಯುವ ಮೂಲಕ ಪಡೆದ ರಸ), ಒಂದು ದೊಡ್ಡಚಮಚ ಜೇನು ಮತ್ತು ಅರ್ಧ ಚಿಕ್ಕಚಮಚ ಅಡುಗೆಸೋಡಾ ಬೆರೆಸಿ ಮಿಶ್ರಣ ಮಾಡಿ. ಇನ್ನು ಈ ಮಿಶ್ರಣವನ್ನು ಈಗ ತಾನೇ ತಣ್ಣೀರಿನಿಂದ ತೊಳೆದುಕೊಂಡ ಮೊಡವೆಯ ಮೇಲೆ ನೇರವಾಗಿ, ದಪ್ಪನಾಗಿ ಹಚ್ಚಿ. ಹತ್ತು ನಿಮಿಷ ಬಿಟ್ಟು ಈ ಮಿಶ್ರಣವನ್ನು ತಣ್ಣಗಿನ ಹಾಲು ಉಪಯೋಗಿಸಿ ತೂಳೆದುಕೊಳ್ಳಿ. ದಿನಕ್ಕೆರಡು ಬಾರಿಯಂತೆ ಒಂದು ವಾರ ಈ ವಿಧಾನವನ್ನು ಅನುಸರಿಸಿದರೆ ಮೊಡವೆಗಳು ಪೂರ್ಣವಾಗಿ ಮಾಯವಾಗುತ್ತವೆ. ಟೊಮೇಟೊ ಜ್ಯೂಸ್ ಮಿಸ್ ಮಾಡದೇ ದಿನಾ ಸೇವಿಸಿ!

ಅಲೋವೆರಾ ಲೋಳೆ

ಅಲೋವೆರಾ ಲೋಳೆ

ಮೊಡವೆಗಳು ಉರಿ ಹಾಗೂ ನೋವನ್ನು ಉಂಟು ಮಾಡುತ್ತದೆ. ಇದರಿಂದ ಅವುಗಳನ್ನು ಕಿವುಚಿ ಹಾಕಬೇಕೆಂಬ ಮನಸ್ಸು ಬರುವುದು ಸಹಜ. ಅಲೋವೆರಾ ಲೋಳೆಯು ಮೊಡವೆಯ ನೋವನ್ನು ಕಡಿಮೆ ಮಾಡುತ್ತದೆ. 'ಅಲೋವೆರಾ'ದ ಫೇಸ್ ಪ್ಯಾಕ್-ಸೌಂದರ್ಯದ ಕೀಲಿಕೈ!

ಆಹಾರ ಪಥ್ಯ

ಆಹಾರ ಪಥ್ಯ

ಆಹಾರ ಕ್ರಮದ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು ಮತ್ತು ಅದನ್ನು ಗಮನಿಸುತ್ತಾ ಇರಬೇಕು. ಕೆಲವು ಮಂದಿಗೆ ಒಂದೊಂದು ಆಹಾರಗಳು ಮೊಡವೆಗಳನ್ನು ಉಂಟು ಮಾಡುತ್ತವೆ. ಇದರ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು.

ಮಂಜುಗಡ್ಡೆ

ಮಂಜುಗಡ್ಡೆ

ಮೊಡವೆಗಳ ನೋವನ್ನು ಕಡಿಮೆ ಮಾಡುವ ಮತ್ತೊಂದು ವಿಧಾನವೆಂದರೆ ಅದು ಮಂಜುಗಡ್ಡೆ. ಸ್ವಲ್ಪ ಮಂಜುಗಡ್ಡೆಯನ್ನು ತೆಗೆದುಕೊಂಡು ಮೊಡವೆಗಳ ಮೇಲೆ ಉಜ್ಜಿಕೊಳ್ಳಿ. ಇದರಿಂದ ಉರಿಯೂತ ಕಡಿಮೆಯಾಗುವುದು.

ಟೂಥ್ ಪೇಸ್ಟ್

ಟೂಥ್ ಪೇಸ್ಟ್

ಹಲ್ಲುಜ್ಜುವ ಟೂಥ್ ಪೇಸ್ಟ್ ನ್ನು ಯಾರಾದರೂ ಬಳಸುತ್ತಾರೆಯಾ ಎಂದು ನೀವು ಕೇಳಬಹುದು. ಆದರೆ ಟೂಥ್ ಪೇಸ್ಟ್ ಮೊಡವೆಗಳಿಂದ ಬೇಗನೆ ಪರಿಹಾರವನ್ನು ನೀಡುತ್ತದೆ. ರಾತ್ರಿ ವೇಳೆ ಮೊಡವೆಗಳ ಮೇಲೆ ಟೂಥ್ ಪೇಸ್ಟ್ ಹಚ್ಚಿಕೊಳ್ಳಿ. ಮರುದಿನ ಬೆಳಿಗ್ಗೆ ಎದ್ದಾಗ ನಿಮ್ಮ ಮೊಡವೆಗಳು ಮಾಯವಾಗಿರುತ್ತವೆ.

ನೀರು

ನೀರು

ಸಾಧ್ಯವಾದಷ್ಟು ನೀರನ್ನು ಕುಡಿದರೆ ದೇಹದಲ್ಲಿರುವ ವಿಷಕಾರಿ ಅಂಶಗಳು ಹೊರಹೋಗುತ್ತವೆ. ಪ್ರತೀ ದಿನ ಒಂದು ಲೀಟರ್ ನಷ್ಟು ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.

ಮುಖ ತೊಳೆದ ಬಳಿಕ ಟೋನರ್ ಬಳಸಿ

ಮುಖ ತೊಳೆದ ಬಳಿಕ ಟೋನರ್ ಬಳಸಿ

ಮುಖವನ್ನು ತೊಳೆದುಕೊಂಡ ಬಳಿಕ ನೀವು ಟೋನರ್ ಬಳಸಿದರೆ ಒಳ್ಳೆಯದು. ಫೇಸ್ ವಾಶ್ ನಲ್ಲಿರುವ ಕೆಲವೊಂದು ಅಂಶಗಳು ಮೊಡವೆಗಳನ್ನು ಉಂಟು ಮಾಡಬಹುದು. ಟೋನರ್ ನಿಂದ ಪಿಎಚ್ ಮಟ್ಟವನ್ನು ಕಾಪಾಡಿಕೊಳ್ಳಬಹುದು. ಟೋನರ್ ನ್ನು ಬಳಸಿದರೆ ಮೊಡವೆಗಳನ್ನು ಸರಿಯಾಗಿ ತೆಗೆದುಹಾಕಬಹುದು.

 
English summary

How To Actually Get Rid Of Pimples

Pimples often lead to black spots, so we will tell you how to make sure your pimple goes away without leaving any black spot. Some of these are very general tips, while some are fixes you can do to get rid of the pimples for good. Here's how you can actually get rid of pimples...
Subscribe Newsletter