For Quick Alerts
ALLOW NOTIFICATIONS  
For Daily Alerts

ಸಿಂಪಲ್ ಮನೆಮದ್ದು, ಮೊಡವೆ ಕಲೆಗೆ ತ್ವರಿತ ಪರಿಹಾರ

By Manu
|

ಇತ್ತೀಚಿನ ದಿನಗಳಲ್ಲಿ ಹಳೆಯ ಗಾದೆಯೊಂದನ್ನು ಪರಿಷ್ಕರಿಸಿ ಹೀಗೆ ಹೇಳಲಾಗುತ್ತಿದೆ. "ಆಡು ಮುಟ್ಟದ ಸೊಪ್ಪಿಲ್ಲ ಮೊಡವೆಯ ಕಲೆ ಇಲ್ಲದ ಮುಖವಿಲ್ಲ". ಹೌದು, ಮೊಡವೆಗಳು ಸಾಂಕ್ರಾಮಿಕ ಸಮಸ್ಯೆಯಾಗಿ ಎಲ್ಲರನ್ನೂ ಕಾಡತೊಡಗಿದೆ. ಅದರಲ್ಲೂ ಮೊಡವೆ ವಾಸಿಯಾಗಿ ಉಳಿದ ಕಲೆಯನ್ನು ನಿವಾರಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಅನುಸರಿಸಲಾಗುತ್ತಿದೆ. ಮೊಡವೆ ಕಮ್ಮಿಯಾಗಲು ಪಾಲಿಸಬೇಕಾದ ವಿಧಾನಗಳು

ಈ ಪ್ರಯತ್ನದಲ್ಲಿ ಹೆಚ್ಚಿನವರು ವಿಫಲರಾಗಿ ನಿರಾಸೆಗೊಳಗಾಗುತ್ತಿದ್ದಾರೆ. ಅರಿವಿಲ್ಲದ ತಪ್ಪು ವಿಧಾನಗಳನ್ನು ಅನುಸರಿಸಿ ಕಲೆಗಳು ಹೆಚ್ಚಾಗಲು ಕಾರಣವಾಗುತ್ತಿದೆ. ಇದೊಂದು ಸಾಮಾನ್ಯ ಸಮಸ್ಯೆಯಾದರೂ ಅದರ ಪರಿಣಾಮದಿಂದ ಆತ್ಮವಿಶ್ವಾಸವನ್ನು ಕಳೆದುಕೊಂಡು ಹತಾಶೆಗೆ ಒಳಗಾಗಲು ಕಾರಣವಾಗುತ್ತಿದೆ. ಸೌಂದರ್ಯದಲ್ಲಿ ಸ್ವಲ್ಪ ಏರುಪೇರಾದರೂ ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗದವರು ಒಳ ಮನಸ್ಸಿನಲ್ಲಿಯೇ ಹೆಚ್ಚು ನೋವಿಗೆ ಒಳಗಾಗುತ್ತಾರೆ. ಈ ನಿಟ್ಟಿನಲ್ಲಿ ಮೊಡವೆಗಳು ನಿಮ್ಮನ್ನೆ ಹೆಚ್ಚು ಒತ್ತಡಕ್ಕೊಳ ಪಡಿಸುತ್ತವೆ. ಕಲೆ ಬೀಳದಂತೆ ಮೊಡವೆ ನಿವಾರಣೆಗೆ ಮನೆಮದ್ದು

ಇವು ಕೇವಲ ನೋವನ್ನು ಮಾತ್ರ ನೀಡದೆ ಅದರ ಕಲೆಗಳನ್ನು ನಿಮ್ಮ ತ್ವಚೆಯ ಮೇಲೆ ಹಾಗೆಯೇ ಉಳಿಯುವಂತೆ ಮಾಡುತ್ತವೆ. ಹೀಗೇಕೆ ಎಂಬುದನ್ನು ಯೋಚಿಸುವುದರಲ್ಲೇ ಅರ್ಧ ಜೀವನ ಕಳೆದು ಹೋಗಿರುತ್ತದೆ. ಚರ್ಮದ ಹಾನಿಯಿಂದ ಮೊಡವೆಗಳು ಬರುತ್ತವೆ. ಇದು ವಾಸಿಯಾಗುವ ಪ್ರಕ್ರಿಯೆಯಲ್ಲಿ ಹೊಸ ಜೀವಕೋಶಗಳ ಸತ್ವಗಳು ಉತ್ಪತ್ತಿಯಾಗಿ ಕಲೆಗಳು ಉಳಿಯುವಂತೆ ಮಾಡುತ್ತವೆ.

ಈ ಕಲೆಗಳು ಪೂರ್ಣವಾಗಿ ಹೋಗದೇ ಇದ್ದರೂ ಸಹ ಅದರ ಬಣ್ಣ, ಗಾತ್ರ ಮತ್ತು ಕಾಣುವಿಕೆಯನ್ನು ಮಾರ್ಪಡಿಸಬಹುದಾಗಿದೆ. ಇದರಿಂದ ತ್ವಚೆಯ ಅಂದ ಹೆಚ್ಚಿಸುತ್ತದೆ. ಮನೆಗಳಲ್ಲಿಯೇ ಸಿಗುವ ವಸ್ತುಗಳಿಂದ ಮೊಡವೆಯ ಕಲೆಗಳನ್ನು ಸ್ವಲ್ಪ ಮಟ್ಟಿಗೆ ನಿವಾರಿಸಲು ನೆರವಾಗುವ ಸುಲಭ ವಿಧಾನಗಳನ್ನು ನಿಮಗಾಗಿ ನೀಡಲಾಗಿದೆ. ಮುಂದೆ ಓದಿ...

ಕಾಫಿ

ಕಾಫಿ

ಒಂದು ಪಾತ್ರೆಗೆ ಸ್ವಲ್ಪ ಕಾಫಿ ಹುಡಿಯನ್ನು ಹಾಕಿ. ಇದಕ್ಕೆ ಬೇಕಾದಷ್ಟು ನೀರು ಸೇರಿಸಿ ದಪ್ಪನೆಯ ಪೇಸ್ಟ್ ತಯಾರಿಸಿಕೊಳ್ಳಿ. ಮುಖದಲ್ಲಿ ಮೂಡಿರುವ ಮೊಡವೆ ಕಲೆಗಳ ಮೇಲೆ ಈ ಪೇಸ್ಟ್ ಅನ್ನು ಹಚ್ಚಿಕೊಂಡು, ಸುಮಾರು 15 ನಿಮಿಷ ಇದನ್ನು ಒಣಗಲು ಬಿಡಿ ನಂತರ ತಣ್ಣಗಿನ ನೀರಿನಿಂದ ಮುಖ ತೊಳೆದುಕೊಳ್ಳಿ. ಅಡುಗೆ ಮನೆಯ ಸಾಮಾಗ್ರಿ ನಿಮ್ಮ ತ್ವಚೆಯ ಸಮಸ್ಯೆಗೆ ಉತ್ತಮ ಪರಿಹಾರಕವಾಗಿ ಬಂದೊದಗಿದ್ದನ್ನು ನೀವೇ ನೋಡಿ. ಸೌಂದರ್ಯ ವೃದ್ಧಿಗೆ ಒಂದು ಚಮಚ ಕಾಫಿ ಪುಡಿ ಸಾಕು!

ಅರಿಶಿನ

ಅರಿಶಿನ

ಅನಾದಿ ಕಾಲದಿಂದಲೂ ಮೊಡವೆ ಮತ್ತು ಕಲೆಗಳನ್ನು ಹೋಗಲಾಡಿಸಲು ಈ ಔಷಧವನ್ನು ಬಳಸಿಕೊಳ್ಳಲಾಗುತ್ತಿದೆ. ಹಾಲು ಮತ್ತು ಅರಿಶಿನವನ್ನು ಸೇರಿಸಿ ದಪ್ಪನೆಯ ಪೇಸ್ಟ್ ತಯಾರಿಸಿಕೊಳ್ಳಿ. ನಂತರ ಮೊಡವೆ ಇರುವ ಭಾಗಕ್ಕೆ ಇದನ್ನು ಹಚ್ಚಿಕೊಂಡು ಒಣಗಲು ಬಿಡಿ. ನಂತರ ತೊಳೆದುಕೊಳ್ಳಿ. ಆಗಾಗ್ಗೆ ಈ ಮದ್ದನ್ನು ಮಾಡಿಕೊಂಡು ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಿ. ಅರಿಶಿನ ಪುಡಿಯಲ್ಲಿ ಅಡಗಿದೆ ತ್ವಚೆಯ ಸೌಂದರ್ಯದ ರಹಸ್ಯ

ಶ್ರೀಗಂಧದ ನೀರು

ಶ್ರೀಗಂಧದ ನೀರು

ಆಯುರ್ವೇದದ ಪ್ರಕಾರ ಶ್ರೀಗಂಧ ಅಥವಾ ಚಂದನ ಚರ್ಮಕ್ಕೆ ಹೆಚ್ಚು ತಂಪಾಗಿಸಲು ಮತ್ತು ಮೃದುಗೊಳಿಸಲು ಪರಿಣಾಮಕಾರಿ ಸಾಧನವಾಗಿದ್ದು, ಚರ್ಮದ ತೊಂದರೆಯ ನಿವಾರಕವೆಂದೆನಿಸಿದೆ. ಸಲಹೆ: ಕೆಲವು ಗಂಟೆಗಳ ಕಾಲ ಚಂದನವನ್ನು ನೀರಿನಲ್ಲಿ ಅದ್ದಿಡಿ. ನಂತರ ಅದನ್ನು ಒಣಗಿಸಿ ಮರುಉಪಯೋಗಿಸಲು ಶೇಖರಿಸಿಡಿ. ಹತ್ತಿಯ ಸಹಾಯದಿಂದ ಈ ನೀರನ್ನು ನಿಧಾನವಾಗಿ ಮೊಡವೆಯ ಕಲೆಗಳ ಜಾಗಕ್ಕೆ ನಯವಾಗಿ ಹಚ್ಚಿಕೊಳ್ಳಿ. ಈ ಪ್ರಕ್ರಿಯೆಯನ್ನು ಒಂದು ವಾರ ಕಾಲ ಪ್ರತಿದಿನ ಅನುಸರಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಶ್ರೀಗಂಧದ ನೀರು

ಶ್ರೀಗಂಧದ ನೀರು

ವಾರ ಕಳೆದಂತೆ ನಿಮಗೆ ಮೊಡವೆ ಕಲೆಯಲ್ಲಿ ವ್ಯತ್ಯಾಸ ಕಂಡುಬಂದು ನಿಮ್ಮ ತ್ವಚೆಯ ಅಂದ ಇಮ್ಮಡಿಯಾಗುತ್ತದೆ. ಪರ್ಯಾಯವಾಗಿ, ರೋಸ್ ವಾಟರ್ ಸಹಾಯದಿಂದ ಚಂದನದ ಚೆಕ್ಕೆಯನ್ನು ಒಂದು ಮರದ ತುಂಡಿನ ಮೇಲೆ ಚೆನ್ನಾಗಿ ತಿಕ್ಕಿ ಪೇಸ್ಟ್ ಆಗುವಂತೆ ಮಾಡಿಕೊಳ್ಳಿ. ಈ ಪೇಸ್ಟನ್ನು ನಿಮ್ಮ ಮೊಡವೆ ಕಲೆಯ ಮೇಲೆ ಹಚ್ಚಿ ಒಂದು ರಾತ್ರಿ ಹಾಗೆಯೇ ಬಿಡಿ. ಬೆಳಗ್ಗೆ ಎದ್ದ ಕೂಡಲೇ ತಣ್ಣನೆಯ ನೀರಿನಿಂದ ಸ್ವಚ್ಛಗೊಳಿಸಿ. ನಿಮಗೆ ಉತ್ತಮ ಫಲಿತಾಂಶ ದೊರೆಯಲಿದೆ.

ಸಕ್ಕರೆ

ಸಕ್ಕರೆ

ಮುಖದಲ್ಲಿರುವ ಕೂದಲನ್ನು ನಿವಾರಣೆ ಮಾಡುವ ಮೂಲಕ ಕಪ್ಪು ಮತ್ತು ಬಿಳಿ ಕಲೆಗಳ ನಿವಾರಣೆಗೆ ಸಕ್ಕರೆ ಸಹಕಾರಿ. ಸಕ್ಕರೆ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳುವ ಸಂದರ್ಭದಲ್ಲಿ ಆದಷ್ಟು ಮಸಾಜ್ ಮಾಡಿಕೊಳ್ಳಿ.

ಅಕ್ಕಿ ನೀರು

ಅಕ್ಕಿ ನೀರು

ಬೇಯಿಸಿದ ಅಕ್ಕಿ ನೀರು (ಗಂಜಿ) ಯನ್ನು ಒಂದು ಪಾತ್ರೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳಿ. ಈ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಈ ನೀರಿನಲ್ಲಿರುವ ನೈಸರ್ಗಿಕ ಗುಣಗಳು ಮುಖದ ಸಮಸ್ಯೆಗಳನ್ನು ಹೋಗಲಾಡಿಸಿ ತ್ವಚೆಯನ್ನು ಕಾಂತಿಯುಕ್ತ ಮತ್ತು ಮೃದುವಾಗಿಸುತ್ತದೆ. ಅಕ್ಕಿ ತೊಳೆದ ನೀರಿನ ಆಶ್ಚರ್ಯಕರ ಸಂಗತಿ

English summary

Fast Remedies That Lighten Pimple Scars

We all know that pimples when burst leave behind an ugly scar that ruins ones entire look. These scars leave an impression on the skin which can sometimes turn bigger and darker if not treated. In most cases women of today turn to chemically treated products to lighten the scar. Take a look at these 5 kitchen ingredients that work wonders for the skin.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more