For Quick Alerts
ALLOW NOTIFICATIONS  
For Daily Alerts

ಬಾಳೆಹಣ್ಣಿನ ಬ್ಯೂಟಿ ಟಿಪ್ಸ್: ಖರ್ಚು ಕಡಿಮೆ-ಅಧಿಕ ಲಾಭ!

ಬಾಳೆಹಣ್ಣು ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳು ಮಾತ್ರವಲ್ಲ, ಇದು ಒಂದು ಉತ್ತಮ ಸೌಂದರ್ಯವರ್ಧಕವೂ ಆಗಿದೆ....

By Jaya Subramanya
|

ನಿಸರ್ಗ ಪ್ರತಿ ಹಣ್ಣು ತರಕಾರಿಯಲ್ಲಿಯೂ ಪ್ರತ್ಯೇಕವಾದ ಪೋಷಕಾಂಶಗಳನ್ನು ನೀಡಿದೆ. ಆದರೆ ನಮ್ಮ ಆರೋಗ್ಯಕ್ಕೆ ಪೂರಕವಾಗುವಂತಹ ಬಹುತೇಕ ಎಲ್ಲವನ್ನೂ ಕೆಲವು ಹಣ್ಣು ತರಕಾರಿಗಳಲ್ಲಿ ಮಾತ್ರ ಇರಿಸಿದೆ. ಬಾಳೆಹಣ್ಣು ಕೂಡ ಇಂತಹ ಒಂದು ಹಣ್ಣಾಗಿದ್ದು ಇದರಲ್ಲಿ ಉತ್ತಮ ಪ್ರಮಾಣದ ವಿಟಮಿನ್ನುಗಳು, ಪೊಟ್ಯಾಶಿಯಂ, ಕರಗುವ ನಾರು ಮತ್ತು ನೈಸರ್ಗಿಕ ಸಕ್ಕರೆ ಇದೆ. ದಿನಕ್ಕೆರಡು ಬಾಳೆಹಣ್ಣು ಸೇವಿಸಿ, ವೈದ್ಯರಿಂದ ದೂರವಿರಿ!

ಇಷ್ಟೆಲ್ಲಾ ಗುಣಗಳನ್ನು ಹೊಂದಿರುವ ಬಾಳೆಹಣ್ಣು, ಕೇವಲ ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯದ ವಿಷಯದಲ್ಲೂ ತಾನೂ ಏನು ಕಡಿಮೆ ಇಲ್ಲ ಎಂಬುದನ್ನು ಈಗಾಗಲೇ ಸಾಬೀತು ಪಡಿಸಿದೆ...! ಬನ್ನಿ ಇಂದು ಬೋಲ್ಡ್ ಸ್ಕೈ ಬಾಳೆಹಣ್ಣಿನಿಂದ ಮಾಡುವಂತಹ ಕೆಲವೊಂದು ಬ್ಯೂಟಿ ಟಿಪ್ಸ್ ಗಳ ಬಗ್ಗೆ ಮಾಹಿತಿ ನೀಡಿದ್ದೇವೆ ಮುಂದೆ ಓದಿ...


 ಸರಿಯಾಗಿ ಹಣ್ಣಾಗಿರುವ ಒಂದು ಬಾಳೆಹಣ್ಣು....

ಸರಿಯಾಗಿ ಹಣ್ಣಾಗಿರುವ ಒಂದು ಬಾಳೆಹಣ್ಣು....

ಸರಿಯಾಗಿ ಹಣ್ಣಾಗಿರುವ ಒಂದು ಬಾಳೆಹಣ್ಣನ್ನು ಸರಿಯಾಗಿ ಹಿಚುಕಿಕೊಂಡು ಅದಕ್ಕೆ ಎರಡು ಚಮಚ ಲಿಂಬೆರಸ ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಂಡು 20 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಕಾಂತಿಯುತ ಮುಖವು ನಿಮ್ಮದಾಗುವುದು.

ಬಾಳೆಹಣ್ಣಿನ ಸಿಪ್ಪೆ....

ಬಾಳೆಹಣ್ಣಿನ ಸಿಪ್ಪೆ....

ಬಾಳೆಹಣ್ಣಿನ ತಿರುಳಿನ ಜೊತೆಗೆ ಇದರ ಸಿಪ್ಪೆ ಸಹಾ ಪ್ರಯೋಜನಕಾರಿಯಾಗಿದೆ. ಇದರಲ್ಲಿಯೂ ಉತ್ತಮ ಆಂಟಿ ಆಕ್ಸಿಡೆಂಟುಗಳ ಗುಣವಿದ್ದು ಚರ್ಮಕ್ಕೆ ಉಪಯುಕ್ತವಾಗಿದೆ. ವಿಶೇಷವಾಗಿ ಮೊಡವೆಗಳ ನಿವಾರಣೆಗೆ ಈ ಗುಣ ಉತ್ತಮ ಪರಿಹಾರ ನೀಡುತ್ತದೆ.

ಮೊಡವೆ ಇದ್ದವರು....

ಮೊಡವೆ ಇದ್ದವರು....

ಮೊಡವೆ ಇದ್ದವರು ಚೆನ್ನಾಗಿ ಕಳಿತ ಬಾಳೆಹಣ್ಣಿನ ಸಿಪ್ಪೆಯ ಒಳಭಾಗದ ನಾರುಗಳನ್ನು ಬೇರ್ಪಡಿಸಿ ನಯವಾಗಿ ಜಜ್ಜಿ ಲೇಪನ ತಯಾರಿಸಿ ದಪ್ಪನಾಗಿ ಹಚ್ಚಿಕೊಳ್ಳಬೇಕು. ಕೊಂಚ ಹೊತ್ತಿಗೆ ಈ ಲೇಪನ ಕಂದು ಬಣ್ಣಕ್ಕೆ ತಿರುಗುತ್ತದೆ.

ಮೊಡವೆ ಇದ್ದವರು....

ಮೊಡವೆ ಇದ್ದವರು....

ಬಳಿಕ ಇದನ್ನು ತಣ್ಣೀರಿನಿಂದ ತೊಳೆಯಬೇಕು.ಅಷ್ಟೇ ಅಲ್ಲ, ಮುಖದ ಕಲೆಗಳನ್ನು ಮತ್ತು ಗಾಯದ ಗುರುತುಗಳನ್ನು ನಿವಾರಿಸಲೂ ಈ ವಿಧಾನ ಸೂಕ್ತವಾಗಿದ್ದು ಶೀಘ್ರದಲ್ಲಿಯೇ ಚರ್ಮ ಸಹಜವರ್ಣ ಪಡೆಯಲು ನೆರವಾಗುತ್ತದೆ. ಈ ವಿಧಾನವನ್ನು ಉತ್ತಮ ಪರಿಣಾಮಕ್ಕಾಗಿ ವಾರಕ್ಕೆರಡು ಬಾರಿ ಪುನರಾವರ್ತಿಸಿ.

 ಬೆಣ್ಣೆ ಹಣ್ಣು ಮತ್ತು ಬಾಳೆಹಣ್ಣು

ಬೆಣ್ಣೆ ಹಣ್ಣು ಮತ್ತು ಬಾಳೆಹಣ್ಣು

ಅವಕಾಡೋ ಅಥವಾ ಬೆಣ್ಣೆ ಹಣ್ಣು ಮತ್ತು ಬಾಳೆಹಣ್ಣನ್ನು ಸರಿಯಾಗಿ ಹಿಚುಕಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ಬಳಿಕ ತೊಳೆಯಿರಿ. ಇದನ್ನು ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು. ಈ ಪ್ಯಾಕ್ ಅನ್ನು ಪ್ರಯತ್ನಿಸಿ ವಯಸ್ಸಾಗುವ ಲಕ್ಷಣಗಳನ್ನು ದೂರ ಮಾಡಿ.

ಪಾದಗಳ ಬಿರುಕನ್ನು ಹೋಗಲಾಡಿಸಲು

ಪಾದಗಳ ಬಿರುಕನ್ನು ಹೋಗಲಾಡಿಸಲು

ಬಿರುಕಿನ ಪಾದಗಳಿಗೆ ಹಿಸುಕಿದ ಬಾಳೆಹಣ್ಣನ್ನು ಹಚ್ಚಿಕೊಳ್ಳಿ ನಂತರ ಹಳೆಯ ಸಾಕ್ಸ್ ಅನ್ನು ಧರಿಸಿ. ರಾತ್ರಿ ಪೂರ್ತಿ ಹಾಗೆಯೇಬಿಟ್ಟು ಮರುದಿನ ನಿಮ್ಮ ಕಾಲುಗಳಲ್ಲಿ ಬಿರುಕು ಕಾಣಿಸಿಕೊಳ್ಳುವುದಿಲ್ಲ.

English summary

How You Can Use Bananas For Beauty

Bananas are rich in nutrients like potassium that make them really good for consumption. They are rich in antibacterial ingredients that help them to be a great remedy for the skin in general. Here are a few natural face masks that can be made using banana as the main ingredient.
Story first published: Thursday, January 12, 2017, 20:27 [IST]
X
Desktop Bottom Promotion