For Quick Alerts
ALLOW NOTIFICATIONS  
For Daily Alerts

ದಿನಕ್ಕೆರಡು ಬಾಳೆಹಣ್ಣು ಸೇವಿಸಿ, ವೈದ್ಯರಿಂದ ದೂರವಿರಿ!

By Manu
|

ದಿನಕ್ಕೊಂದು ಸೇಬು ವೈದ್ಯರನ್ನು ದೂರವಿಡುತ್ತದೆ ಎಂಬುದೊಂದು ಸುಭಾಷಿತ. ದಿನಕ್ಕೆರಡು ಬಾಳೆಹಣ್ಣು ಸಹಾ ವೈದ್ಯರನ್ನು ದೂರವಿಡುವಲ್ಲಿ ಸಮರ್ಥವಾಗಿದೆ. ಏಕೆಂದರೆ ಬಾಳೆಹಣ್ಣಿನಲ್ಲಿ ಆರೋಗ್ಯಕ್ಕೆ ಪೂರಕವಾದ ಹಲವು ಪೋಷಕಾಂಶಗಳು, ಕರಗುವ ಮತ್ತು ಕರಗದ ನಾರು ಹಾಗೂ ಉತ್ತಮ ಪ್ರಮಾಣದ ಸಕ್ಕರೆ, ಖನಿಜಗಳೂ ಇವೆ. ಸೇಬಿಗಿಂತಲೂ ಬಾಳೆಹಣ್ಣನ್ನು ಆಯ್ದುಕೊಳ್ಳಲು ಇನ್ನೂ ಹಲವು ಕಾರಣಗಳಿವೆ. ಸುಲಭದರದಲ್ಲಿ ವರ್ಷಪೂರ್ತಿ ಎಲ್ಲೆಡೆ ಸಿಗುವ ಹಣ್ಣು ಎಂದರೆ ಬಾಳೆಹಣ್ಣು. ಬಾಳೆ ಹಣ್ಣಿನ ಸಿಪ್ಪೆಯ 10 ಅದ್ಭುತ ಪ್ರಯೋಜನಗಳು

Powerful Reasons to Eat Bananas Daily

ಒಂದು ವೇಳೆ ಊಟ ಸಿಗದಿದ್ದ ಪಕ್ಷದಲ್ಲಿ ಎರಡು ಬಾಳೆಹಣ್ಣು ತಿಂದು ಒಂದು ಲೋಟ ನೀರು ಕುಡಿದರೂ ಊಟದಿಂದ ಸಿಗುವಷ್ಟೇ ಶಕ್ತಿ ಸಿಗುವ ಕಾರಣ ಇದೊಂದು ಪರಿಪೂರ್ಣ ಫಲವಾಗಿದೆ. ಆದರೆ ಈ ಬಾಳೆಹಣ್ಣಿನ ಉಪಯೋಗ ತಿನ್ನುವ ಹೊರತಾಗಿಯೂ ಇದೆ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ? ಹೌದು, ಸೊಳ್ಳೆ ಓಡಿಸಲು ಬಾಳೆಹಣ್ಣನ್ನು ಬಳಸಬಹುದು. ಬಾಳೆಹಣ್ಣಿನ ಸಿಪ್ಪೆಯ ಒಳಭಾಗವನ್ನು ಉಪಯೋಗಿಸಿ ಶೂ ಪಾಲಿಷ್ ಕೂಡ ಮಾಡಬಹುದು! ಬನ್ನಿ ಈ ಅದ್ಭುತ ಕದಳೀಫಲದ ಬಗ್ಗೆ ಕೆಲವು ಮಹತ್ವದ ಮಾಹಿತಿಗಳ ಸಂಗ್ರಹವನ್ನು ಇಲ್ಲಿ ನೀಡಲಾಗಿದೆ...

 ಖಿನ್ನತೆಯನ್ನು ಕಡಿಮೆಗೊಳಿಸುತ್ತದೆ

ಖಿನ್ನತೆಯನ್ನು ಕಡಿಮೆಗೊಳಿಸುತ್ತದೆ

ಬಾಳೆಹಣ್ಣಿನಲ್ಲಿರುವ ಪೋಷಕಾಂಶಗಳಲ್ಲಿ ಟ್ರಿಪ್ಟೋಫಾನ್ (tryptophan) ಸಹಾ ಒಂದು. ಇದು ರಕ್ತದಲ್ಲಿ ಸೇರಿದ ಬಳಿಕ ರಾಸಾಯನಿಕ ಪ್ರತಿಕ್ರಿಯೆಗೊಂಡು ಸೆರೋಟೋನಿನ್ ಎಂಬ ರಸದೂತವಾಗಿ ಮಾರ್ಪಾಡು ಹೊಂದುತ್ತದೆ. ಈ ಸೆರೋಟೋನಿನ್ ಒಂದು ನ್ಯೂರೋಟ್ರಾನ್ಸ್ ಮಿಟರ್ (ಮೆದುಳನ್ನು ಶಾಂತಗೊಳಿಸುವ ರಸದೂತ) ಆಗಿದ್ದು ಮನಸ್ಸನ್ನು ಶಾಂತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ಖಿನ್ನತೆಗೆ ಒಳಗಾಗಿದ್ದ ಮನ ಪ್ರಶಾಂತಗೊಂಡು ಮತ್ತೆ ಸಹಜಸ್ಥಿತಿಗೆ ಬರಲು ಸಹಕರಿಸುತ್ತದೆ.

ಎರಡು ಬಾಳೆಹಣ್ಣು ತಿಂದರೆ ವ್ಯಾಯಾಮ ಸುಲಭ

ಎರಡು ಬಾಳೆಹಣ್ಣು ತಿಂದರೆ ವ್ಯಾಯಾಮ ಸುಲಭ

ನಿತ್ಯವೂ ವ್ಯಾಯಾಮ ಮಾಡುವವರು ವ್ಯಾಯಾಮ ಪ್ರಾರಂಭಿಸುವ ಸುಮಾರು ಇಪ್ಪತ್ತು ನಿಮಿಷಕ್ಕೂ ಮುನ್ನ ಎರಡು ಬಾಳೆಹಣ್ಣು ತಿಂದರೆ ವ್ಯಾಯಾಮದ ಅವಧಿಯಲ್ಲಿ ಅತಿ ಕಡಿಮೆ ಆಯಾಸ ಅನುಭವಿಸುತ್ತಾರೆ. ಬಾಳೆಹಣ್ಣಿನಲ್ಲಿರುವ ಸಕ್ಕರೆ ರಕ್ತದಲ್ಲಿ ನಿಧಾನವಾಗಿ ಮಿಳಿತಗೊಂಡು ಸೂಕ್ತ ಪ್ರಮಾಣದಲ್ಲಿ ಸ್ನಾಯುಗಳಿಗೆ ಪೂರೈಸುವುದೇ ಇದಕ್ಕೆ ಕಾರಣ.

ಹೊಳೆಯುವ ತ್ವಚೆಗಾಗಿ

ಹೊಳೆಯುವ ತ್ವಚೆಗಾಗಿ

ಸರಿಯಾದ ನಿದ್ದೆ ಒದಗಿಸುವುದರ ಜೊತೆಗೆ ಬಾಳೆಹಣ್ಣು ಸೌಂದರ್ಯವರ್ಧಕವಾಗಿ ಕೂಡ ಸಹಕರಿಸುತ್ತದೆ. ಬಾಳೆಹಣ್ಣಿನ ಮಾಸ್ಕ್ ಬಳಸುವುದರಿಂದ ತ್ವಚೆ ಹೊಳೆಯುತ್ತದೆ ಮತ್ತು ಮೃದುವಾಗುತ್ತದೆ.ಒಣಗಿದ ಚರ್ಮ ಹೊಂದಿದವರಿಗೆ ಮೋಶ್ಚರೈಸರ್ ಆಗಿ ಕೆಲಸ ಮಾಡುತ್ತದೆ.

ವ್ಯಾಯಾಮದ ಹೊತ್ತಿನ ಸ್ನಾಯುಸೆಳೆತದಿಂದ ರಕ್ಷಿಸುತ್ತದೆ

ವ್ಯಾಯಾಮದ ಹೊತ್ತಿನ ಸ್ನಾಯುಸೆಳೆತದಿಂದ ರಕ್ಷಿಸುತ್ತದೆ

ಕೆಲವೊಮ್ಮೆ ವ್ಯಾಯಾಮದ ಅವಧಿಯಲ್ಲಿ ಸ್ನಾಯುಗಳಿಗೆ ಲಭ್ಯವಾಗುವ ನೀರು ಮತ್ತು ರಕ್ತಪೂರೈಕೆಯಲ್ಲಿ ಬಾಧೆಗೊಂಡು ಆ ಸ್ನಾಯು ಸಂಕುಚಿತಗೊಳ್ಳುವ ಮೂಲಕ ಸೆಳೆತಕ್ಕೆ ಒಳಗಾಗುತ್ತದೆ. ಕೆಲವರಿಗೆ ರಾತ್ರಿ ಮಲಗಿದ್ದಾಗಲೂ ಈ ಸೆಳೆತವಾಗುತ್ತದೆ. ವ್ಯಾಯಾಮಕ್ಕೆ ಹಾಗೂ ರಾತ್ರಿ ಮಲಗುವ ಮುನ್ನ ಕನಿಷ್ಟ ಒಂದು ಬಾಳೆಹಣ್ಣು ತಿಂದರೆ ಈ ಪರಿಸ್ಥಿತಿಯಿಂದ ಬಚಾವಾಗಬಹುದು

ಮೂತ್ರದ ಮೂಲಕ ಕ್ಯಾಲ್ಸಿಯಂ ಸೋರಿಹೋಗುವುದನ್ನು ತಪ್ಪಿಸಬಹುದು

ಮೂತ್ರದ ಮೂಲಕ ಕ್ಯಾಲ್ಸಿಯಂ ಸೋರಿಹೋಗುವುದನ್ನು ತಪ್ಪಿಸಬಹುದು

ಆಹಾರದ ಮೂಲಕ ಲಭ್ಯವಾಗುವ ಕ್ಯಾಲ್ಸಿಯಂ ಮೂಳೆಗಳು ಹೀರಿಕೊಳ್ಳುವಂತಾಗಲು ಬಾಳೆಹಣ್ಣು ಸಹಕರಿಸುತ್ತದೆ. ಮೂಳೆಗಳು ಗಟ್ಟಿಗೊಳ್ಳಲು ಜೇನು ಸೇರಿಸಿದ ಹಾಲು ಮತ್ತು ಬಾಳೆಹಣ್ಣನ್ನು ರಾತ್ರಿ ಮಲಗುವ ಮುನ್ನ ಸೇವಿಸುವುದರಿಂದ ಕ್ಯಾಲ್ಸಿಯಂ ಸೋರಿಹೋಗುವುದನ್ನು ತಪ್ಪಿಸಿ ಮೂಳೆಗಳ ದೃಢತೆ ಹೆಚ್ಚಿಸಬಹುದು.

ದುಃಖದ ಮನಃಸ್ಥಿತಿ ಮತ್ತು ರಜೋನಿವೃತ್ತಿ ಕಾಲದ ದುಮ್ಮಾನವನ್ನು ನಿವಾರಿಸುತ್ತದೆ

ದುಃಖದ ಮನಃಸ್ಥಿತಿ ಮತ್ತು ರಜೋನಿವೃತ್ತಿ ಕಾಲದ ದುಮ್ಮಾನವನ್ನು ನಿವಾರಿಸುತ್ತದೆ

ದುಃಖದ ಪರಿಸ್ಥಿತಿಯಲ್ಲಿ ಮನ ಖಿನ್ನತೆಯತ್ತ ವಾಲುತ್ತದೆ. ರಜೋನಿವೃತ್ತಿಯ ಕಾಲದಲ್ಲಿಯೂ ವಿವಿಧ ಹಾರ್ಮೋನುಗಳ ಪ್ರಭಾವದಿಂದ ಸಿಡುಕುತನ ಕಂಡುಬರುತ್ತದೆ. ಈ ಸಮಯದಲ್ಲಿ ಬಾಳೆಹಣ್ಣುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದರಿಂದ ರಕ್ತದಲ್ಲಿ ಉತ್ತಮ ಪ್ರಮಾಣದ ಸಕ್ಕರೆ ಮತ್ತು ದುಃಖ, ಸಿಡುಕುತವನ್ನು ದೂರಮಾಡಬಲ್ಲ ರಸದೂತಗಳು ಲಭ್ಯವಾಗಿ ಮನಃಸ್ಥಿತಿಯನ್ನು ಉತ್ತಮಗೊಳಿಸುತ್ತವೆ.

ವಿವಿಧ ರೋಗಗಳಿಗೆ ರಾಮಬಾಣವಾಗಿದೆ

ವಿವಿಧ ರೋಗಗಳಿಗೆ ರಾಮಬಾಣವಾಗಿದೆ

ಬಾಳೆಹಣ್ಣುಗಳು ವಿವಿಧ ರೋಗಗಳಿಗೆ ಉತ್ತಮ ಆರೈಕೆ ನೀಡುತ್ತದೆ. ಕೀಟಗಳು ಕಚ್ಚಿ ದದ್ದು, ತುರಿಕೆ, ಉರಿ ಉಂಟಾದಾಗ ಬಾಳೆಹಣ್ಣನ್ನು ಸವರುವುದರಿಂದ ಕೆಲವು ನಿಮಿಷಗಳಲ್ಲಿಯೇ ಶಮನವಾಗುತ್ತದೆ. ಟೈಪ್-2 ವಿಧದ ಮಧುಮೇಹವನ್ನು ನಿಯಂತ್ರಿಸುತ್ತದೆ, ತೂಕ ಕಡಿಮೆಗೊಳಿಸುವ ಯತ್ನಗಳಿಗೆ ಸಹಕಾರ ನೀಡುತ್ತದೆ ಹಾಗೂ ನರಮಂಡಲದ ಸುವ್ಯವಸ್ಥೆ ಕಾಪಾಡಲು ನೆರವಾಗುತ್ತದೆ. ಇದರಲ್ಲಿರುವ ವಿಟಮಿನ್ B-6 ರಕ್ತದಲ್ಲಿ ಬಿಳಿರಕ್ತಕಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲು ನೆರವಾಗಿ ರೋಗನಿರೋಧಕ ಶಕ್ತಿ ಉತ್ತಮಗೊಳ್ಳಲು ಸಹಕರಿಸುತ್ತದೆ. ಉತ್ತಮ ಪ್ರಮಾಣದಲ್ಲಿರುವ ಕಬ್ಬಿಣದ ಅಂಶ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಪೋಷಣೆ ನೀಡುತ್ತದೆ.

ರಕ್ತದೊತ್ತಡ ಕಡಿಮೆಗೊಳಿಸಲು ನೆರವಾಗುತ್ತದೆ.

ರಕ್ತದೊತ್ತಡ ಕಡಿಮೆಗೊಳಿಸಲು ನೆರವಾಗುತ್ತದೆ.

ಬಾಳೆಹಣ್ಣಿನಲ್ಲಿ ಅತಿಕಡಿಮೆ ಉಪ್ಪು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಶಿಯಂ ಇದೆ. ಈ ಪ್ರಮಾಣವನ್ನು FDA(Food and Drug administration) ಇಲಾಖೆ ಅಂಗೀಕರಿಸಿದ್ದು ರಕ್ತದೊತ್ತಡ ಕಡಿಮೆಗೊಳಿಸುವಲ್ಲಿ ನೆರವಾಗುತ್ತದೆ ಹಾಗೂ ತನ್ಮೂಲಕ ಹೃದಯ ಸ್ತಂಭನೆಯ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ.

ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ

ನಮ್ಮ ಜೀರ್ಣರಸದಲ್ಲಿರುವ ಅಂಶಗಳಲ್ಲಿ ಪೆಕ್ಟಿನ್ ಸಹಾ ಒಂದು. ಇದು ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದಲ್ಲಿರುವ ಕಾರಣ ಜೀರ್ಣಕ್ರಿಯೆ ಸುಲಭಗೊಳ್ಳುತ್ತದೆ. ಹೆಚ್ಚುವರಿ ಪೆಕ್ಟಿನ್ ಆಹಾರದಲ್ಲಿನ ವಿಷಕಾರಿ ವಸ್ತುಗಳನ್ನು ಒಡೆದು ತ್ಯಾಜ್ಯರೂಪದಲ್ಲಿ ದೇಹದಿಂದ ಹೊರಹಾಕಲು ಸಹಕಾರಿಯಾಗಿದೆ. ಜೊತೆಗೇ ದೇಹ ಅರಗಿಸಿಕೊಳ್ಳಲಾರದ ಖನಿಜಗಳನ್ನು ನಿವಾರಿಸಲೂ ಬಳಕೆಯಾಗುತ್ತದೆ.

ಆಹಾರದ ಇತರ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ

ಆಹಾರದ ಇತರ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ

ಬಾಳೆಹಣ್ಣಿನಲ್ಲಿರುವ ಕರಗುವ ನಾರು ಹೊಟ್ಟೆಯಲ್ಲಿ ಕರಗಿ ಜೀರ್ಣಕ್ರಿಯೆಗೆ ಅವಶ್ಯವಿರುವ ಕೆಲವು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ನೆರವಾಗುತ್ತದೆ. prebiotic ಎಂದು ಕರೆಯಲಾಗುವ ಈ ವಿದ್ಯಮಾನದಿಂದ ಇತರ ಆಹಾರಗಳ ಮೂಲಕ ಲಭ್ಯವಾದ, ಸುಲಭವಾಗಿ ಜೀರ್ಣವಾಗದ ಆಹಾರವನ್ನು ಈ ಬ್ಯಾಕ್ಟೀರಿಯಾಗಳು ಜೀರ್ಣಿಸಲು ನೆರವಾಗುತ್ತದೆ. ಅಲ್ಲದೇ ಜೀರ್ಣಕ್ರಿಯೆಗೆ ನೆರವಾಗುವ ಇತರ ಎಂಜೈಮು(enzymes)ಗಳನ್ನು ಉತ್ಪಾದಿಸುತ್ತದೆ. ಈ ಎಂಜೈಮುಗಳು ಹೆಚ್ಚಿನ ಪ್ರೋಟೀನ್ ಯುಕ್ತ ಆಹಾರ (ಉದಾಹರಣೆಗೆ ಮಾಂಸ) ಗಳನ್ನು ಜೀರ್ಣಿಸಿಕೊಳ್ಳಲು ಅಗತ್ಯವಾಗಿವೆ.

ಮಲಬದ್ಧತೆಯಿಂದ ರಕ್ಷಿಸುತ್ತದೆ

ಮಲಬದ್ಧತೆಯಿಂದ ರಕ್ಷಿಸುತ್ತದೆ

ಬಾಳೆಹಣ್ಣಿನಲ್ಲಿರುವ ಕರಗದ ನಾರು ಜಠರದಲ್ಲಿ ಮತ್ತು ಕರುಳುಗಳಲ್ಲಿ ಜೀರ್ಣವಾಗದೇ ತ್ಯಾಜ್ಯಗಳನ್ನು ಸುಲಭವಾಗಿ ಹೊರಹಾಕಲು ನೆರವಾಗುತ್ತದೆ. ಇದರಿಂದ ಮಲಬದ್ಧತೆಯಾಗುವುದರಿಂದ ರಕ್ಷಣೆ ಪಡೆದಂತಾಗುತ್ತದೆ. ರಾತ್ರಿ ಊಟದ ಬಳಿಕ ತಿನ್ನುವ ಒಂದು ಬಾಳೆಹಣ್ಣು ಮರುದಿನದ ವಿಸರ್ಜನೆಯನ್ನು ಸುಲಭಗೊಳಿಸುತ್ತದೆ.

ಆಮಶಂಕೆಯಿಂದ ರಕ್ಷಿಸುತ್ತದೆ

ಆಮಶಂಕೆಯಿಂದ ರಕ್ಷಿಸುತ್ತದೆ

ಆಮಶಂಕೆಯಾಗಿ ನಿತ್ರಾಣತೆ ಎದುರಾಗಿದ್ದಾಗ ಬಾಳೆಹಣ್ಣಿನ ಸೇವನೆ ಉತ್ತಮ. ಇದರಿಂದ ಕರುಳುಗಳಲ್ಲಿ ಆಮಶಂಕೆಯ ಮೂಲಕ ಇಲ್ಲವಾಗಿದ್ದ ಎಲೆಕ್ಟ್ರೋಲೈಟುಗಳನ್ನು ಮತ್ತೆ ಪಡೆಯಲು ನೆರವಾಗುತ್ತದೆ. ಇದರಿಂದ ಆಮಶಂಕೆಯಿಂದಾದ ನಿತ್ರಾಣತೆಯಿಂದ ಬಳಲಿದ್ದ ದೇಹ ಬೇಗನೇ ಚೈತನ್ಯ ಪಡೆಯುತ್ತದೆ.

ಹೊಟ್ಟೆಯಲ್ಲಿ ಆಮ್ಲೀಯತೆಯಾಗುವುದರಿಂದ ರಕ್ಷಿಸುತ್ತದೆ

ಹೊಟ್ಟೆಯಲ್ಲಿ ಆಮ್ಲೀಯತೆಯಾಗುವುದರಿಂದ ರಕ್ಷಿಸುತ್ತದೆ

ಬಾಳೆಹಣ್ಣು ಜಠರದಲ್ಲಿ ಕರಗಿದ ಬಳಿಕ ಹೊಟ್ಟೆಯಲ್ಲಿ ವಾಯು ಉತ್ಪನ್ನವಾಗುವ ಪ್ರಮಾಣವನ್ನು ತಗ್ಗಿಸಿ ಹುಳಿತೇಗು, ಹೊಟ್ಟೆಯುರಿ, ಎದೆಯುರಿ, gastroesophageal reflux disease (GERD) ಎಂಬ ಅನ್ನನಾಳದ ಉರಿಯ ತೊಂದರೆಯಿಂದ ರಕ್ಷಿಸುತ್ತದೆ.

ಅಲ್ಸರ್ ರೋಗಿಗಳು ತಿನ್ನಬಹುದಾದ ಏಕೈಕ ಆಹಾರ

ಅಲ್ಸರ್ ರೋಗಿಗಳು ತಿನ್ನಬಹುದಾದ ಏಕೈಕ ಆಹಾರ

ಕರುಳುಗಳ ಒಳಗೆ ಹುಣ್ಣು ಅಥವಾ ಅಲ್ಸರ್ ಆಗಿರುವ ರೋಗಿಗಳಿಗೆ ಬಾಳೆಹಣ್ಣು ಬಿಟ್ಟರೆ ಬೇರೆ ಯಾವ ಆಹಾರವನ್ನೂ ನೀಡುವಂತಿಲ್ಲ. ಏಕೆಂದರೆ ಬಾಳೆಹಣ್ಣು ಮಾತ್ರ ಕರುಳುಗಳಲ್ಲಿ ಹಾಯುವಾಗ ಹುಣ್ಣುಗಳಿಗೆ ಘಾಸಿಯುಂಟುಮಾದುವುದಿಲ್ಲ. ಬದಲಿಗೆ ಬಾಳೆಹಣ್ಣು ಈ ಹುಣ್ಣುಗಳನ್ನು ಸವರಿಕೊಂಡು ಹೋದ ಬಳಿಕ ಒಂದು ಪದರವನ್ನು ನಿರ್ಮಿಸಿ ಜಠರದ ಆಮ್ಲೀಯ ರಸಗಳೂ ಹುಣ್ಣುಗಳ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳುತ್ತದೆ.

ಮೂತ್ರಪಿಂಡಗಳ ಕ್ಯಾನ್ಸರ್ ಬರುವುದರಿಂದ ರಕ್ಷಿಸುತ್ತದೆ

ಮೂತ್ರಪಿಂಡಗಳ ಕ್ಯಾನ್ಸರ್ ಬರುವುದರಿಂದ ರಕ್ಷಿಸುತ್ತದೆ

ಬಾಳೆಹಣ್ಣಿನ ನಿಯಮಿತ ಸೇವನೆಯಿಂದ ಮೂತ್ರಪಿಂಡಗಳ ಕ್ಯಾನ್ಸರ್, ಕಣ್ಣುಗಳ ದೃಷ್ಟಿಯನ್ನು ಕುಂದಿಸುವ macular degeneration ಎಂಬ ತೊಂದರೆಯಿಂದ ರಕ್ಷಿಸುತ್ತದೆ.

ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ನೆರವಾಗುತ್ತದೆ

ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ನೆರವಾಗುತ್ತದೆ

ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದಲ್ಲಿರುವ ಪೊಟ್ಯಾಶಿಯಂ ಮೆದುಳನ್ನು ಚುರುಕಾಗಿಸಲು ನೆರವಾಗುವುದರಿಂದ ಕಲಿಯುವಿಕೆಯ ಕ್ಷಮತೆ ಹೆಚ್ಚುತ್ತದೆ. ಪರಿಣಾಮವಾಗಿ ಉತ್ತಮ ಅಂಕಗಳಿಸಲು, ಪಾಲಕ, ಅಧ್ಯಾಪಕರ ಮೆಚ್ಚುಗೆ ಪಡೆಯಲು ಸಾಧ್ಯವಾಗುತ್ತದೆ.

ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಕಣಗಳಿಂದ ರಕ್ಷಿಸುತ್ತದೆ

ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಕಣಗಳಿಂದ ರಕ್ಷಿಸುತ್ತದೆ

ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳು ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಕಣಗಳನ್ನು ಹೊಡೆದೋಡಿಸಿ ಕ್ಯಾನ್ಸರ್ ಮೊದಲಾದ ಮಾರಕ ರೋಗಗಳಿಂದ ರಕ್ಷಿಸುತ್ತದೆ.

ಗರ್ಭಾವಸ್ಥೆಯ ವಾಕರಿಕೆಯಿಂದ ರಕ್ಷಿಸುತ್ತದೆ

ಗರ್ಭಾವಸ್ಥೆಯ ವಾಕರಿಕೆಯಿಂದ ರಕ್ಷಿಸುತ್ತದೆ

ಗರ್ಭಿಣಿಯರಿಗೆ ಪ್ರಥಮ ಮೂರು ತಿಂಗಳ ಅವಧಿಯಲ್ಲಿ ವಾಂತಿ ಮತ್ತು ವಾಕರಿಕೆ ಸಹಜ. ಇದನ್ನು ಕಡಿಮೆಗೊಳಿಸಲು ಎರಡು ಹೊತ್ತಿನ ಆಹಾರ ಸೇವನೆಯ ನಡುವಣ ಸಮಯಲ್ಲಿ ಒಂದು ಬಾಳೆಹಣ್ಣು ತಿಂದರೆ ವಾಕರಿಕೆಗೆ ಕಾರಣವಾಗುವ ಕಣಗಳನ್ನು ನಿವಾರಿಸಿ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಸೂಕ್ತಪ್ರಮಾಣದಲ್ಲಿರುವಂತೆ ನೋಡಿಕೊಂಡು ವಾಂತಿ ಮತ್ತು ವಾಕರಿಕೆಯಿಂದ ರಕ್ಷಿಸುತ್ತದೆ.

ಕೀಟಗಳ ಕಡಿತದ ಉರಿ ಶಮನ ಮಾಡುತ್ತದೆ

ಕೀಟಗಳ ಕಡಿತದ ಉರಿ ಶಮನ ಮಾಡುತ್ತದೆ

ಕೀಟ, ಸೊಳ್ಳೆ ಮೊದಲಾದವು ಕಡಿದು ಉಂಟಾದ ದದ್ದು, ಉರಿ, ತುರಿಕೆಗಳನ್ನು ಕಡಿಮೆಗೊಳಿಸಲು ಬಾಳೆಸಿಪ್ಪೆಯ ಒಳಭಾಗದಿಂದ ಚರ್ಮವನ್ನು ಸವರಿಕೊಳ್ಳುವುದರಿಂದ ಬೇಗನೇ ಶಮನವಾಗುತ್ತದೆ.

ಧೂಮಪಾನ ತ್ಯಜಿಸಲು ನೆರವಾಗುತ್ತದೆ

ಧೂಮಪಾನ ತ್ಯಜಿಸಲು ನೆರವಾಗುತ್ತದೆ

ಬಾಳೆಹಣ್ಣಿನಲ್ಲಿರುವ ಬಿ-ವಿಟಮಿನ್, ಪೊಟ್ಯಾಶಿಯಂಗಳು ಧೂಮಪಾನ ತ್ಯಜಿಸುತ್ತಿರುವವರ ರಕ್ತದಲ್ಲಿ ನಿಕೋಟಿನ್ ಇಲ್ಲದೇ ದೇಹ ಎದುರಿಸುವ ವ್ಯಾಕುಲತೆಯನ್ನು ಕಡಿಮೆಗೊಳಿಸಿ ಮತ್ತೆ ಧೂಮಪಾನದತ್ತ ಮನ ಹೊರಳಿಸುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಪರಿಣಾಮವಾಗಿ ಧೂಮಪಾನದ ಚಟದಿಂದ ಬೇಗನೇ ಮುಕ್ತಿ ಪಡೆಯಬಹುದು.

English summary

Powerful Reasons to Eat Bananas Daily

Sure, most of us love to enjoy bananas for breakfast or, perhaps, a snack. But bananas have so much more going for them than just a delicious and nutritious treat. In fact, so many of the reasons bananas are great for other things beside eating has to do with their nutrients! Click through for clever ways to use bananas to tackle everything from insect bites to aphids.
X
Desktop Bottom Promotion