ಮನೆಯಲ್ಲೇ ಇದೆ ಸೌಂದರ್ಯವರ್ಧಕ! ಹಣ ಖರ್ಚು ಮಾಡಬೇಡಿ!

By Hemanth
Subscribe to Boldsky

ಬಿಳಿಯಾಗಬೇಕೆಂಬ ಕನಸು ಕಟ್ಟಿಕೊಂಡು ಹಲವಾರು ರೀತಿಯ ಜಾಹೀರಾತುಗಳನ್ನು ನೋಡಿ ಆ ಕ್ರೀಮ್‌ಗಳನ್ನು ಬಳಸಿ ಈಗ ಕಂಗಾಲಾಗಿದ್ದೀರಿ ತಾನೇ? ಯಾಕೆಂದರೆ ಯಾವ ಕ್ರೀಮ್ ಬಳಸಿದರೂ ಮೈಯ ಬಣ್ಣ ಮಾತ್ರ ಹಾಗೆ ಇರುತ್ತದೆ. ಆದರೆ ಜೇಬಿಗೆ ಮಾತ್ರ ಕತ್ತರಿ ಬೀಳುತ್ತಾ ಹೋಗುತ್ತದೆ. ಆದರೆ ಮನೆಯಲ್ಲೇ ಸಿಗುವಂತಹ ಕೆಲವೊಂದು ನೈಸರ್ಗಿಕ ಮನೆಮದ್ದುಗಳನ್ನು ನಾವು ಕಡೆಗಸುತ್ತೇವೆ. ಯಾಕೆಂದರೆ ಅದರ ಬಗ್ಗೆ ನಮಗೆ ಉದಾಸೀನ ಹಾಗೂ ನಿರ್ಲಕ್ಷ್ಯ ಭಾವನೆ.  ಸೌಂದರ್ಯ ವೃದ್ಧಿಗೆ, ಮೊಸರಿನ ಫೇಸ್ ಪ್ಯಾಕ್

ನೈಸರ್ಗಿಕವಾಗಿರುವಂತಹ ಮೊಸರನ್ನು ಬಳಸಿಕೊಂಡು ಮೈ ಬಣ್ಣವನ್ನು ಹೇಗೆ ಬಿಳಿ ಮಾಡಬಹುದು ಎಂದು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ವಾರದಲ್ಲಿ ಒಂದು ಸಲ ಬಳಸಿ ಫಲಿತಾಂಶ ಪಡೆಯಿರಿ.  ಮೊಸರಿನಲ್ಲಿ ಅಡಗಿದೆ ತ್ವಚೆಯ ಸೌಂದರ್ಯವನ್ನು ವೃದ್ಧಿಸುವ ರಹಸ್ಯ!

ಮಾರುಕಟ್ಟೆಯಲ್ಲಿ ಸಿಗುವಂತಹ ಕ್ರೀಮ್ ಬಳಸಿದರೆ ಅದರಿಂದ ಹಲವಾರು ರೀತಿಯ ಅಡ್ಡ ಪರಿಣಾಮಗಳು ಕೂಡ ಕಾಣಿಸುತ್ತದೆ. ಆದರೆ ಮೊಸರನ್ನು ಬಳಸಿದರೆ ಯಾವುದೇ ರೀತಿಯ ಅಡ್ಡ ಪರಿಣಾಮವಿಲ್ಲ. ಮೊಸರನ್ನು ಯಾವ ರೀತಿಯಿಂದ ಬಳಸಿಕೊಳ್ಳಬಹುದು ಎಂದು ನೀವು ಮುಂದಕ್ಕೆ ಓದುತ್ತಾ ತಿಳಿಯಿರಿ.....  

ಅಕ್ಕಿ ಹಿಟ್ಟಿನೊಂದಿಗೆ ಮೊಸರು

ಅಕ್ಕಿ ಹಿಟ್ಟಿನೊಂದಿಗೆ ಮೊಸರು

ಇದು ತುಂಬಾ ಪರಿಣಾಮಕಾರಿಯಾಗಿರುವ ನೈಸರ್ಗಿಕ ಮನೆಮದ್ದಾಗಿದೆ. ಒಂದು ಚಮಚ ತಾಜಾ ಮೊಸರು ಹಾಗೂ ಒಂದು ಚಮಚ ಅಕ್ಕಿ ಹಿಟ್ಟನ್ನು ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ಬಳಿಕ ತಣ್ಣೀರಿನಿಂದ ತೊಳೆಯಿರಿ.ಅಕ್ಕಿಹಿಟ್ಟಿನ ಫೇಸ್ ಪ್ಯಾಕ್ ಪ್ರಯತ್ನಿಸಿ-ಸುಂದರವಾಗಿ ಕಾಣುವಿರಿ!

ಮೊಸರು, ಅಲೋವೆರಾ ಲೋಳೆ ಮತ್ತು ಆಲಿವ್ ತೈಲ

ಮೊಸರು, ಅಲೋವೆರಾ ಲೋಳೆ ಮತ್ತು ಆಲಿವ್ ತೈಲ

ಮೊಸರು, ಅಲೋವೆರಾ ಲೋಳೆ ಮತ್ತು ಆಲಿವ್ ತೈಲವು ಚರ್ಮವನ್ನು ಬಿಳಿಯಾಗಿ ಮಾಡಲು ನೆರವಾಗುವುದು. ಒಂದು ಚಮಚ ಮೊಸರಿಗೆ ಎರಡು ಚಮಚ ಅಲೋವೆರಾ ಲೋಳೆ ಮತ್ತು ಮೂರು ಹನಿ ಆಲಿವ್ ತೈಲ ಹಾಕಿಕೊಂಡು ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಒಣಗಲು ಬಿಡಿ. ಸ್ವಲ್ಪ ಸಮಯದ ಬಳಿಕ ಮುಖ ತೊಳೆಯಿರಿ ಮತ್ತು ಮುಖವನ್ನು ಒರೆಸಿಕೊಳ್ಳಿ.'ಅಲೋವೆರಾ'ದ ಫೇಸ್ ಪ್ಯಾಕ್-ಸೌಂದರ್ಯದ ಕೀಲಿಕೈ!

ಸೌತೆ ಮತ್ತು ಮೊಸರು

ಸೌತೆ ಮತ್ತು ಮೊಸರು

ಸೌತೆಕಾಯಿ ಮತ್ತು ಮೊಸರಿನ ಫೇಸ್ ಪ್ಯಾಕ್ ನಷ್ಟು ಉಲ್ಲಾಸಕರ ಮತ್ತು ತೇವಾಂಶಯುಕ್ತ ತ್ವಚೆ ನಿಮಗೆ ಬೇರೆ ಯಾವುದೇ ಸೌಂದರ್ಯವರ್ಧಕಗಳನ್ನು ಬಳಸಿದರೂ ಸಿಗದು. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲ, ಮುಖದಲ್ಲಿನ ಮೊಡವೆ ಹಾಗೂ ಟ್ಯಾನ್ (ಕಪ್ಪು ಕಲೆಯನ್ನು) ಹೋಗಲಾಡಿಸುವುದು ಮಾತ್ರವಲ್ಲದೇ ತ್ವಚೆಯಲ್ಲಿ ಜೀವಸತ್ವ ತುಂಬಿ ಕಾಂತಿಯುತವಾಗಿ ಕಾಣುವಂತೆ ಮಾಡುತ್ತದೆ. ಸೌತೆಕಾಯಿ ಮತ್ತು ಮೊಸರನ್ನು ಒಟ್ಟೂಡಿಸಿ ಅತ್ಯಂತ ಸುಲಭವಾಗಿ ಈ ಪ್ಯಾಕ್ ನ್ನು ತಯಾರಿಸಬಹುದು. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 15-20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತಣ್ಣೀರಿನಲ್ಲಿ ಮುಖವನ್ನು ತೊಳೆಯಿರಿ. ಕಣ್ಣಿನ ಮೇಲೆ ಸೌತೆಕಾಯಿಯ ಹೋಳುಗಳನ್ನು ಇಟ್ಟುಕೊಳ್ಳುವುದು ಕಣ್ಣಿಗೆ ಬಹಳ ಒಳ್ಳೆಯದು. ಮುಖದ ಸೌಂದರ್ಯಕ್ಕೆ ಸೌತೆಕಾಯಿಯ ಫೇಸ್ ಪ್ಯಾಕ್

ಟೊಮೇಟೊ +ಜೇನು + ಮೊಸರು

ಟೊಮೇಟೊ +ಜೇನು + ಮೊಸರು

ಟೊಮೇಟೊ ಚರ್ಮದ ಹೊಳಪುಕೊಡುವ ಗುಣಗಳನ್ನು ಹೊಂದಿರುವ ಟೊಮೆಟೊ, ಆರ್ಧ್ರಕ ಗುಣಗಳನ್ನು ಒಳಗೊಂಡಿರುವ ಮೊಸರು ಮತ್ತು ಜೇನಿನ ಮಿಶ್ರಣ ಒಂದು ಉತ್ತಮ ನೈಸರ್ಗಿಕ ಫೇಸ್ ಪ್ಯಾಕ್ ಆಗಿದೆ. ಒಂದು ಟೊಮೆಟೊ ಮತ್ತು ಒಂದು ಚಮಚ ಜೇನು ತುಪ್ಪ ಮತ್ತು ಒಂದು ಚಮಚ ಮೊಸರನ್ನು ಸೇರಿಸಿ ಪೇಸ್ಟ್ ತಯಾರಿಸಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿ 15-20 ನಿಮಿಷಗಳ ಕಾಲ ಹಾಗೆಯೇ ಬಿಡಿ. ಜೇನುತುಪ್ಪದ ಬದಲಿಗೆ ಬಾದಾಮಿ ಎಣ್ಣೆಯನ್ನೂ ಸೇರಿಸಬಹುದು. ಜೀವಸತ್ವಗಳಿಂದ ಸಮೃದ್ಧವಾಗಿರುವ ಬಾದಾಮಿ ಎಣ್ಣೆ ತ್ವಚೆಗೆ ಆರೋಗ್ಯಕರ ಕಾಂತಿಯನ್ನು ನೀಡುತ್ತದೆ.

ಲಿಂಬೆ ರಸದೊಂದಿಗೆ ಮೊಸರು ಹಾಗೂ ಓಟ್ ಮೀಲ್

ಲಿಂಬೆ ರಸದೊಂದಿಗೆ ಮೊಸರು ಹಾಗೂ ಓಟ್ ಮೀಲ್

ಒಂದು ಚಮಚ ತಯಾರಿಸಿದ ಓಟ್ ಮೀಲ್ ನೊಂದಿಗೆ ಎರಡು ಚಮಚ ಮೊಸರು ಹಾಗೂ ಎರಡು ಚಮಚ ನಿಂಬೆರಸವನ್ನು ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಒಣಗಲು ಬಿಡಿ. ನೀರಿನಿಂದ ತೊಳೆದ ಬಳಿಕ ಹಗುರವಾದ ಟೋನರ್ ಹಚ್ಚಿಕೊಳ್ಳಿ.

 
For Quick Alerts
ALLOW NOTIFICATIONS
For Daily Alerts

    English summary

    How To Use Yogurt For Skin Whitening

    Today, at Boldsky, we have compiled a list of ways in which you can include this stellar natural ingredient in your weekly skin care ritual. Try these wonderful ways and you'll be able to bid adieu to makeup items for good. Also, do perform skin patch tests to know how the ingredients fare on your skin type.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more