For Quick Alerts
ALLOW NOTIFICATIONS  
For Daily Alerts

ಸೌಂದರ್ಯ ವೃದ್ಧಿಗೆ, ಮೊಸರಿನ ಫೇಸ್ ಪ್ಯಾಕ್

By Super
|

ನಮ್ಮ ದೇಹದ ತ್ವಚೆಯಲ್ಲಿ ಅತ್ಯಂತ ಕೋಮಲವಾದ ಭಾಗದಲ್ಲಿ ಮುಖದ ಚರ್ಮ ಪ್ರಮುಖವಾಗಿದೆ. ಸೂಕ್ತ ಆರೈಕೆಯಿಲ್ಲದಿದ್ದರೆ ಈ ಚರ್ಮ ಇತರ ಭಾಗಗಳಿಗಿಂತ ಹೆಚ್ಚು ಸಡಿಲವಾಗುತ್ತದೆ. ಇದಕ್ಕಾಗಿ ಕೆಲವು ಆರೈಕೆಗಳು ಅಗತ್ಯವಾಗಿದೆ. ನಿಯಮಿತವಾಗಿ ಮುಖಕ್ಕೆ ಮುಖಲೇಪವನ್ನು ಹೆಚ್ಚಿಕೊಳ್ಳುತ್ತಿರುವುದು ಒಂದು ಉತ್ತಮ ವಿಧಾನವಾಗಿದೆ. ಅದರಲ್ಲೂ ಮೊಸರನ್ನು ಬಳಸಿ ಮಾಡಿದ ಮುಖಲೇಪ ಈ ತ್ವಚೆಯ ಆರೈಕೆಯಲ್ಲಿ ಅತ್ಯುತ್ತಮವಾಗಿದೆ.

ಮೊಸರಿನಲ್ಲಿರುವ ಪ್ರೋಟೀನುಗಳು ಮುಖದ ಚರ್ಮಕ್ಕೆ ಕಾಂತಿ ಮತ್ತು ಸೆಳೆತವನ್ನು ನೀಡುತ್ತದೆ. ಅಲ್ಲದೇ ಇದರಲ್ಲಿರುವ ಸತುವಿನಲ್ಲಿ ಉರಿಯೂತ ನಿವಾರಕ ಗುಣಗಳಿರುವ ಕಾರಣ ಇದು ಚರ್ಮದ ಉರಿಯಿಂದ ರಕ್ಷಿಸುತ್ತದೆ ಹಾಗೂ ಚರ್ಮದ ಜೀವಕೋಶಗಳ ಬೆಳವಣಿಗೆಗೂ ನೆರವಾಗುತ್ತದೆ. ಅಲ್ಲದೇ ಚರ್ಮದ ಕೆಳಪದರದಲ್ಲಿರುವ ಮೇದಸ್ಸಿನ ಗ್ರಂಥಿಗಳು (sebaceous glands) ಅಗತ್ಯವಿದ್ದಷ್ಟೇ ಪ್ರಮಾಣದಲ್ಲಿ ಉತ್ಪಾದಿಸಲು ಸತು ಅಗತ್ಯವಾಗಿದೆ. ಇದರಿಂದ ಮೊಡವೆಗಳು ಮೂಡದಿರಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ನಯವಾದ, ಕಾಂತಿಯುಕ್ತ ಮುಖದ ಚರ್ಮ ಹೊಂದಲು ಸಾಧ್ಯವಾಗುತ್ತದೆ.

ಅಷ್ಟೇ ಅಲ್ಲ, ಮೊಸರಿನಲ್ಲಿರುವ ಕ್ಯಾಲ್ಸಿಯಂ ಚರ್ಮದ ಬೆಳವಣಿಗೆಗೆ ಮತ್ತು ಸವೆದು ಹೋದ ಜೀವಕೋಶಗಳ ಬದಲಿಗೆ ಹೊಸ ಜೀವಕೋಶಗಳು ಬೆಳೆಯಲು ನೆರವಾಗುತ್ತದೆ. ಅಲ್ಲದೇ ಮೊಸರಿನಲ್ಲಿ ಹೇರಳವಾಗಿರುವ ವಿವಿಧ ವಿಟಮಿನ್ನುಗಳು ಚರ್ಮದ ಕಾಂತಿ ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ಸೂಕ್ಷ್ಮ ಗೆರೆಗಳು ಮತ್ತು ನೆರಿಗೆಗಳು ಮೂಡದಿರಲು ನೆರವಾಗಿ ವೃದ್ಧಾಪ್ಯವನ್ನು ದೂರವಾಗಿಸಲು ಸಾಧ್ಯವಾಗುತ್ತದೆ. ಅಲ್ಲದೇ ಮೊಸರಿನಲ್ಲಿ ಸೌಂದರ್ಯವನ್ನು ವೃದ್ಧಿಸುವ ಹಲವಾರು ಗುಣಗಳಿವೆ. ಮೊಸರನ್ನು ಮುಖಲೇಪವಾಗಿ ಬಳಸುವ ಮೂಲಕ ಇನ್ನೂ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ತಿಳಿಸಲು ಬೋಲ್ಡ್ ಸ್ಕೈ ತಂಡ ಹರ್ಷಿಸುತ್ತದೆ...

 ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ

ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ

ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ಚರ್ಮಕ್ಕೆ ಬಣ್ಣ ನೀಡುವ ಮಲನಿನ್ ಎಂಬ ವರ್ಣದ್ರವ್ಯವನ್ನು ಕಡಿಮೆ ಪ್ರಮಾಣದಲ್ಲಿ ಉತ್ಪಾದಿಸಲು ನೆರವಾಗುತ್ತದೆ. ಬಿಸಿಲಿಗೆ ಒಡ್ಡಿದ ಚರ್ಮದಲ್ಲಿ ಮೆಲನಿನ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಇದು ಚರ್ಮದ ಬಣ್ಣ ಗಾಢವಾಗಲು ಕಾರಣವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

 ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ

ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ

ಮೊಸರಿನ ಮುಖಲೇಪದಿಂದ ಮೆಲನಿನ್ ಉತ್ಪಾದನೆ ಕಡಿಮೆಯಾಗಿ ಚರ್ಮ ಸಹಜವರ್ಣ ಹಾಗೂ ಕಾಂತಿ ಹೆಚ್ಚಿಸಲು ನೆರವಾಗುತ್ತದೆ. ಇದಕ್ಕಾಗಿ ಈಗ ತಾನೇ ತೊಳೆದುಕೊಂಡ ಮುಖದ ಮೇಲೆ ಕೊಂಚ ಮೊಸರನ್ನು ದಪ್ಪನಾಗಿ ಹಚ್ಚಿ ಕೊಂಚ ಹೊತ್ತು ಒಣಗಲು ಬಿಡಿ. ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಚರ್ಮಕ್ಕೆ ಆರ್ದ್ರತೆಯನ್ನು ನೀಡುತ್ತದೆ.

ಚರ್ಮಕ್ಕೆ ಆರ್ದ್ರತೆಯನ್ನು ನೀಡುತ್ತದೆ.

ಚರ್ಮದ ಆರೈಕೆಗೆ ಆರ್ದ್ರತೆ ಅತ್ಯಗತ್ಯವಾಗಿದೆ. ಇದನ್ನು ನೀರಿನಿಂದ ಪಡೆಯಲು ಸಾಧ್ಯವಿಲ್ಲ. ಆದರೆ ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ಚರ್ಮದ ಸೂಕ್ಷ್ಮ ರಂಧ್ರಗಳು ಆರ್ದ್ರತೆಯನ್ನು ಹೀರಿಕೊಳ್ಳಲು ನೆರವಾಗುತ್ತದೆ. ಇದರಿಂದ ಚರ್ಮ ತಾಜಾ ಮತ್ತು ತುಂಬಿಕೊಂಡಿರುವಂತೆ ಕಾಣಲು ನೆರವಾಗುತ್ತದೆ. ಇದಕ್ಕಾಗಿ ತಾಜಾ ಮೊಸರಿನಿಂದ ಮುಖವನ್ನು ವೃತ್ತಾಕಾರದ ಮಸಾಜ್ ಮೂಲಕ ತೆಳುವಾಗಿ ಹಚ್ಚಿಕೊಳ್ಳಿ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಸತ್ತ ಜೀವಕೋಶಗಳನ್ನು ನಿವಾರಿಸುತ್ತದೆ (Exfoliation)

ಸತ್ತ ಜೀವಕೋಶಗಳನ್ನು ನಿವಾರಿಸುತ್ತದೆ (Exfoliation)

ಚರ್ಮದ ಆರೈಕೆಯ ಮುಖ್ಯ ಭಾಗವೆಂದರೆ ಸತ್ತ ಜೀವಕೋಶಗಳನ್ನು ನಿವಾರಿಸುವುದು. ಸಾಮಾನ್ಯವಾಗಿ ಚರ್ಮದ ಹೊರಪದರದಿಂದ ನಿತ್ಯವೂ ಸಾವಿರಾರು ಜೀವಕೋಶಗಳು ಸತ್ತು ಹೊಸ ಜೀವಕೋಶಗಳು ಹುಟ್ಟುತ್ತಲೇ ಇರುತ್ತವೆ. ಸತ್ತ ಜೀವಕೋಶಗಳು ಒಣಚರ್ಮದಿಂದ ಪುಡಿಯ ರೂಪದಲ್ಲಿ ಹೊರಬೀಳಬೇಕು. ಆದರೆ ಕೆಲವಾರು ಕಾರಣಗಳಿಂದ ಇದು ಹೊರಚರ್ಮಕ್ಕೆ ಅಂಟಿಕೊಂಡೇ ಇರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸತ್ತ ಜೀವಕೋಶಗಳನ್ನು ನಿವಾರಿಸುತ್ತದೆ (Exfoliation)

ಸತ್ತ ಜೀವಕೋಶಗಳನ್ನು ನಿವಾರಿಸುತ್ತದೆ (Exfoliation)

ಇದನ್ನು ನಿವಾರಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಇದು ಚರ್ಮದ ಸೂಕ್ಷ್ಮ ರಂಧ್ರಗಳಲ್ಲಿ ಹುದುಗಿ ಕುಳಿತಿರುತ್ತದೆ. ಮೊಡವೆಗಳು ಮೂಡಲು ಇದೂ ಒಂದು ಕಾರಣ. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ಈ ಜೀವಕೋಶಗಳನ್ನು ಸಡಿಲಗೊಳಿಸಿ ಸುಲಭವಾಗಿ ತೊಳೆದುಹೋಗಲು ನೆರವಾಗುತ್ತದೆ. ಇದರಿಂದ ಹೊಸ ಜೀವಕೋಶಗಳ ಆರೋಗ್ಯಕರ ಬೆಳವಣಿಗೆಗೆ ನೆರವಾಗುತ್ತದೆ.

ಕಲೆಗಳನ್ನು ಕಡಿಮೆಗೊಳಿಸುತ್ತದೆ

ಕಲೆಗಳನ್ನು ಕಡಿಮೆಗೊಳಿಸುತ್ತದೆ

ಮೊಸರಿನ ನಿಯಮಿತ ಲೇಪನದಿಂದ ಮುಖದಲ್ಲಿ ಮೊಡವೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಸಾಧ್ಯವಾಗುತ್ತದೆ. ಅಲ್ಲದೇ ಮೊಸರಿನಲ್ಲಿರುವ ಸತು ಚರ್ಮದ ಉರಿಯನ್ನು ನಿವಾರಿಸುತ್ತದೆ ಹಾಗೂ ಚರ್ಮದ ಕೆಳಪದರದಲ್ಲಿರುವ ಎಣ್ಣೆಯ ಗ್ರಂಥಿಗಳಿಂದ ಕಡಿಮೆ ಪ್ರಮಾಣದಲ್ಲಿ ಎಣ್ಣೆ ಸ್ರವಿಸಲು ನೆರವಾಗುತ್ತದೆ. ಅಲ್ಲದೇ ಮೊಸರಿನಲ್ಲಿರುವ ಪ್ರೋಬಯಾಟಿಕ್ಸ್ (probiotics) ಎಂಬ ಪೋಷಕಾಂಶಗಳು ರೋಗಕಾರಕ ಬ್ಯಾಕ್ಟ್ರೀರಿಯಾಗಳಿಂದ ರಕ್ಷಣೆ ನೀಡುತ್ತದೆ. ಪರಿಣಾಮವಾಗಿ ಮೊಡವೆಗಳಾಗದಂತೆ ಮತ್ತು ತನ್ಮೂಲಕ ಉಂಟಾಗಬಹುದಾಗಿದ್ದ ಕಲೆಗಳಿಂದ ರಕ್ಷಣೆ ಪಡೆದಂತಾಗುತ್ತದೆ.

ಕಣ್ಣ ಕೆಳಗಿನ ಕಪ್ಪು ವರ್ತುಲಗಳನ್ನು ನಿವಾರಿಸುತ್ತದೆ

ಕಣ್ಣ ಕೆಳಗಿನ ಕಪ್ಪು ವರ್ತುಲಗಳನ್ನು ನಿವಾರಿಸುತ್ತದೆ

ಕೆಲವು ಕಾರಣಗಳಿಂದ ಕಣ್ಣ ಕೆಳಗಿನ ಚರ್ಮದ ಬಣ್ಣ ಗಾಢವಾಗುತ್ತದೆ. ಇದರಿಂದ ಕಣ್ಣ ಕೆಳಗೆ ಕಪ್ಪು ವರ್ತುಲಗಳು ಮೂಡಿದಂತೆ ಕಾಣುತ್ತದೆ. ಇದರಿಂದ ಪಾರಾಗಲು ನಿತ್ಯವೂ ಮೊಸರಿನಿಂದ ಕಣ್ಣುಗಳ ಕೆಳಗಿನ ಭಾಗವನ್ನು ನಯವಾಗಿ ಮಸಾಜ್ ಮಾಡುತ್ತಾ ಹಚ್ಚಿಕೊಳುವ ಮೂಲಕ ಕೆಲವೇ ದಿನಗಳಲ್ಲಿ ಈ ಭಾಗದ ಬಣ್ಣ ಸಹಜವರ್ಣ ಪಡೆಯಲು ಸಾಧ್ಯವಾಗುತ್ತದೆ. ಮೊಸರಿನಲ್ಲಿರುವ ಸತು ಚರ್ಮದ ಬಣ್ಣವನ್ನು ತಿಳಿಗೊಳಿಸಲು ನೆರವಾಗುತ್ತದೆ.

ಬಿಸಿಲಿನಿಂದ ಬಾಡಿದ್ದ ಚರ್ಮಕ್ಕೆ ಪುನಃಚೇತನ ನೀಡುತ್ತದೆ

ಬಿಸಿಲಿನಿಂದ ಬಾಡಿದ್ದ ಚರ್ಮಕ್ಕೆ ಪುನಃಚೇತನ ನೀಡುತ್ತದೆ

ಬಹುಕಾಲ ಬಿಸಿಲಿಗೆ ಒಡ್ಡಿದ ಚರ್ಮ ಸುಟ್ಟಂತಾಗಿರುತ್ತದೆ (sunburn). ಮೊಸರಿನಿಂದ ಈ ಸುಟ್ಟ ಚರ್ಮಕ್ಕೆ ಪುನಃಚೇತನ ದೊರಕುತ್ತದೆ ಹಾಗೂ ತಣ್ಣನೆಯ ಭಾವನೆಯನ್ನು ನೀಡುತ್ತದೆ. ಇದರಲ್ಲಿರುವ ಸತು ಬಿಸಿಲಿನಿಂದ ಬಸವಳಿದಿದ್ದ ಚರ್ಮಕ್ಕೆ ಶಮನ ಹಾಗೂ ಕೆಂಪಗಾಗಿದ್ದ ಭಾಗವನ್ನು ಮೊದಲಿನಂತಾಗಿಸಲು ನೆರವಾಗುತ್ತದೆ. ಅಲ್ಲದೇ ಚರ್ಮಕ್ಕೆ ಅಗತ್ಯವಾದ ಎಣ್ಣೆಯಂಶವನ್ನು ಅಗತ್ಯ ಪ್ರಮಾಣದಲ್ಲಿ ಮಾತ್ರ ಉತ್ಪಾದಿಸಲು ನೆರವಾಗುತ್ತದೆ.

English summary

Benefits Of A Yoghurt Face Mask

A yoghurt face mask is one the effective face masks that is used widely for its innumerable skin benefits. It can work miracles on the skin if used on a regular basis. Since yoghurt is full of proteins, it provides the skin an awesome glow and radiance. Yoghurt also contains zinc that is known for its anti-inflammatory property. It facilitates skin regeneration and promotes tissue growth too. Zinc regulates the sebaceous glands to produce less oil, thereby reducing the appearance of acne and pimples.
Story first published: Saturday, January 9, 2016, 20:13 [IST]
X
Desktop Bottom Promotion