For Quick Alerts
ALLOW NOTIFICATIONS  
For Daily Alerts

ಮೊಸರಿನಲ್ಲಿ ಅಡಗಿದೆ ತ್ವಚೆಯ ಸೌಂದರ್ಯವನ್ನು ವೃದ್ಧಿಸುವ ರಹಸ್ಯ!

By Super
|

ಎಲ್ಲರೂ ತಾನು ಸುಂದರವಾಗಿ ಕಾಣಬೇಕೆಂದೇ ಬಯಸುತ್ತಾರೆ. ಆದರೆ ಸೌಂದರ್ಯವನ್ನು ಹೆಚ್ಚಿಸಲು ಬಳಸುವ ವಸ್ತುಗಳು ಯಾವಾಗಲೂ ಅಧಿಕ ವೆಚ್ಚದ್ದಾಗಿರುತ್ತವೆ ಅಲ್ಲವೇ? ಆದರೆ ಇದು ತಪ್ಪು! ನಿಮ್ಮ ಅಡುಗೆಮನೆಯಲ್ಲಿಯೇ ಸಾಕಷ್ಟು ವಸ್ತುಗಳನ್ನು ಸೌಂದರ್ಯವರ್ಧಕಗಳನ್ನಾಗಿ ಬಳಸಬಹುದು. ನೀವು ಯಾವುದೇ ಇತರ ಯಾವುದೇ ಸೌಂದರ್ಯವರ್ಧಕಗಳ ಮೊರೆಹೋಗಬೇಕಾಗಿಲ್ಲ.

ಇಂತಹ ಸೌಂದರ್ಯವರ್ಧವನ್ನಾಗಿ ಹಲವಾರು ಕಾರಣಗಳಿಗೆ ಬಳಸಬಹುದಾದ ಒಂದು ಪ್ರಮುಖ ಅಡುಗೆ ಮನೆ ಪದಾರ್ಥ ಮೊಸರು. ನೀವು ಈ ಮದುವೆ ಸಮಾರಂಭದ ದಿನಗಳಲ್ಲಿ ಸುಂದರವಾಗಿ ಕಾಣಲು, ಉತ್ತಮ ತ್ವಚೆ, ಕಲೆಮುಕ್ತ ತ್ವಚೆಯ ಜೊತೆಗೆ ಮುಖದಲ್ಲಿ ಕಾಂತಿಯನ್ನೂ ಪಡೆಯಲು ಬಯಸಿದರೆ ಇಲ್ಲಿದೆ, ಮೊಸರಿನಿಂದ ತಯಾರಿಸಬಹುದಾಡ ಕೆಲವು ನೈಸರ್ಗಿಕ ಫೇಸ್ ಪ್ಯಾಕ್ ಗಳು. ನಿಮ್ಮನ್ನು ನಿಬ್ಬೆರಗಾಗಿಸುವ ಜೇನು ತುಪ್ಪದ ಸೌಂದರ್ಯ ಚಿಕಿತ್ಸೆ!

ಮೊಸರು

ಮೊಸರು

ಇನ್ನಿತರ ಫೇಸ್ ಮಾಸ್ಕ್‌ಗಳನ್ನು ಬಳಸುವುದಕ್ಕಿಂತ ಮೊದಲು ನಾವು ಕೇಮಲ ಮೊಸರನ್ನು ಮಾತ್ರ ಮುಖಕ್ಕೆ ಬಳಸಿ ಮೃದುವಾದ ತ್ವಚೆಯನ್ನು ಪಡೆಯಲು ಪ್ರಯತ್ನಿಸಬಹುದು. ಮೊಸರು ನಮ್ಮ ಚರ್ಮಕ್ಕೆ ಅತ್ಯಗತ್ಯವಾದ ಲ್ಯಾಕ್ಟಿಕ್ ಆಮ್ಲವನ್ನು ಹೊಂದಿದ್ದು ಅತ್ಯಂತ ಉತ್ತಮ ಸೌಂದರ್ಯವರ್ಧಕವಾಗಿದೆ. ತ್ವಚೆಯನ್ನು ಪೋಷಕಾಂಶಯುಕ್ತ ಮತ್ತು ತೇವಾಂಶಯುಕ್ತವನ್ನಾಗಿ ಮಾಡುವಂತಹ ಜೀವಸತ್ವಗಳು ಮತ್ತು ಖನಿಜಗಳು ಮೊಸರಿನಲ್ಲಿ ಅಧಿಕ ಪ್ರಮಾಣದಲ್ಲಿರುತ್ತವೆ. ಇದು ಚರ್ಮದ ಸಮಸ್ಯೆಯನ್ನು ನೈಸರ್ಗಿಕವಾಗಿ ಹೋಗಲಾಡಿಸುವಂತಹ ಆಂಟಿಮೈಕ್ರೊಬೈಯಲ್ ನ್ನು ಕೂಡ ಹೊಂದಿದೆ.

ಸುಮಾರು ಹತ್ತು ನಿಮಿಷಗಳ ಕಾಲ ಮುಖಕ್ಕೆ ಗಟ್ಟಿಯಾದ ಮೊಸರನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ನಂತರ ತೊಳೆಯಿರಿ. ಇದು ತ್ವಚೆಯಲ್ಲಿನ ಡೆಡ್ ಸ್ಕಿನ್ (ಜೀವಕೋಶಗಳು ಶಕ್ತಿ ಕಳೆದುಕೊಂಡಿರುವುದು) ಮತ್ತು ಸೂಕ್ಷ್ಮರೇಖೆಗಳನ್ನು ಹೋಗಲಾಡಿಸುವಲ್ಲಿ ಸಹಕಾರಿಯಾಗಿದೆ. ಜೊತೆಗೆ ಒಣ ಚರ್ಮವನ್ನು ಸುಧಾರಿಸಿ ತೇವಾಂಶವನ್ನು ಹೆಚ್ಚಿಸುವುದಲ್ಲದೇ ಮುಖದಲ್ಲಿರುವ ರಂಧ್ರಗಳನ್ನೂ ಬಿಗಿಗೊಳಿಸುತ್ತದೆ, ನೀವು ಮೊಸರನ್ನು ಬಳಸುವುದರಿಂದ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ.

ಸೌತೆಕಾಯಿ + ಮೊಸರು

ಸೌತೆಕಾಯಿ + ಮೊಸರು

ಸೌತೆಕಾಯಿ ಮತ್ತು ಮೊಸರಿನ ಫೇಸ್ ಪ್ಯಾಕ್ ನಷ್ಟು ಉಲ್ಲಾಸಕರ ಮತ್ತು ತೇವಾಂಶಯುಕ್ತ ತ್ವಚೆ ನಿಮಗೆ ಬೇರೆ ಯಾವುದೇ ಸೌಂದರ್ಯವರ್ಧಕಗಳನ್ನು ಬಳಸಿದರೂ ಸಿಗದು. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲ, ಮುಖದಲ್ಲಿನ ಮೊಡವೆ ಹಾಗೂ ಟ್ಯಾನ್ (ಕಪ್ಪು ಕಲೆಯನ್ನು) ಹೋಗಲಾಡಿಸುವುದು ಮಾತ್ರವಲ್ಲದೇ ತ್ವಚೆಯಲ್ಲಿ ಜೀವಸತ್ವ ತುಂಬಿ ಕಾಂತಿಯುತವಾಗಿ ಕಾಣುವಂತೆ ಮಾಡುತ್ತದೆ.

ಸೌತೆಕಾಯಿ ಮತ್ತು ಮೊಸರನ್ನು ಒಟ್ಟೂಡಿಸಿ ಅತ್ಯಂತ ಸುಲಭವಾಗಿ ಈ ಪ್ಯಾಕ್ ನ್ನು ತಯಾರಿಸಬಹುದು. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 15-20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತಣ್ಣೀರಿನಲ್ಲಿ ಮುಖವನ್ನು ತೊಳೆಯಿರಿ. ಕಣ್ಣಿನ ಮೇಲೆ ಸೌತೆಕಾಯಿಯ ಹೋಳುಗಳನ್ನು ಇಟ್ಟುಕೊಳ್ಳುವುದು ಕಣ್ಣಿಗೆ ಬಹಳ ಒಳ್ಳೆಯದು.

ಸ್ಟ್ರಾಬೆರಿ + ಮೊಸರು

ಸ್ಟ್ರಾಬೆರಿ + ಮೊಸರು

ಪದಾರ್ಥಗಳು ಸಮಿಯಲು ರುಚಿಕರವಾಗಿದ್ದರೆ ಅವು ತ್ವಚೆಗೂ ಪ್ರಯೋಜನಕಾರಿಯಾಗಿರುತ್ತವೆ. ಈ ಫೇಸ್ ಪ್ಯಾಕ್ ತ್ವಚೆಗೆ ಕಾಂತಿಯನ್ನೂ ಜೊತೆಗೆ ಸ್ವಚ್ಛ ತ್ವಚೆಯನ್ನೂ ನೀಡುವುದರಲ್ಲಿ ಸಹಾಯಕಾರಿ.

ಅಲ್ಪಾವಧಿಯಲ್ಲಿ ತ್ವಚೆಗೆ ಕಾಂತಿಯನ್ನು ಪಡೆಯಲು ಎರಡು ಕಳಿತ ಹಿಸುಕಿದ ಸ್ಟ್ರಾಬೆರಿ, ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ಮೊಸರನ್ನು ಸೇರಿಸಿ ಮುಖಕ್ಕೆ ಹಚ್ಚಿ. ನಂತರ 15 -20 ನಿಮಿಷಗಳ ಕಾಲ ಹಾಗೆಯೇ ಬಿಡಿ. ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದು ಮುಖಕ್ಕೆ ಮಾಯಿಶ್ಚರೈಸರ್ (ಇಲ್ಲಿ ಓದಿ) ಹಚ್ಚಿ.

ಟೊಮೇಟೊ +ಜೇನು + ಮೊಸರು

ಟೊಮೇಟೊ +ಜೇನು + ಮೊಸರು

ಟೊಮೇಟೊ ಚರ್ಮದ ಹೊಳಪುಕೊಡುವ ಗುಣಗಳನ್ನು ಹೊಂದಿರುವ ಟೊಮೆಟೊ, ಆರ್ಧ್ರಕ ಗುಣಗಳನ್ನು ಒಳಗೊಂಡಿರುವ ಮೊಸರು ಮತ್ತು ಜೇನಿನ ಮಿಶ್ರಣ ಒಂದು ಉತ್ತಮ ನೈಸರ್ಗಿಕ ಫೇಸ್ ಪ್ಯಾಕ್ ಆಗಿದೆ. ಒಂದು ಟೊಮೆಟೊ ಮತ್ತು ಒಂದು ಚಮಚ ಜೇನು ತುಪ್ಪ ಮತ್ತು ಒಂದು ಚಮಚ ಮೊಸರನ್ನು ಸೇರಿಸಿ ಪೇಸ್ಟ್ ತಯಾರಿಸಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿ 15-20 ನಿಮಿಷಗಳ ಕಾಲ ಹಾಗೆಯೇ ಬಿಡಿ. ಜೇನುತುಪ್ಪದ ಬದಲಿಗೆ ಬಾದಾಮಿ ಎಣ್ಣೆಯನ್ನೂ ಸೇರಿಸಬಹುದು. ಜೀವಸತ್ವಗಳಿಂದ ಸಮೃದ್ಧವಾಗಿರುವ ಬಾದಾಮಿ ಎಣ್ಣೆ ತ್ವಚೆಗೆ ಆರೋಗ್ಯಕರ ಕಾಂತಿಯನ್ನು ನೀಡುತ್ತದೆ.

ಆವಕಾಡೊ + ಆಲಿವ್ ಎಣ್ಣೆ + ಮೊಸರು

ಆವಕಾಡೊ + ಆಲಿವ್ ಎಣ್ಣೆ + ಮೊಸರು

ಒಣ ಹಾಗೂ ಗಟ್ಟಿ ಚರ್ಮವನ್ನು ಹೊಂದಿರುವವರಿಗೆ ಈ ಪ್ಯಾಕ್ ಒಂದು ವರವೇ ಸರಿ! ಮೊಸರು ಒಣ ತ್ವಚೆಯನ್ನು ಪುನಶ್ಚೇತನಗೊಳಿಸಲು ಸಹಾಯಕವಾದರೆ ಆವಕಾಡೊ ಮತ್ತು ಆಲಿವ್ ಎಣ್ಣೆ ಆರ್ಧ್ರಕ ಗುಣಗಳನ್ನು ಹೊಂದಿದ್ದು ತ್ವಚೆಗೆ ಆಳವಾಗಿ ಪೋಷಣೆಯನ್ನು ನೀಡುತ್ತವೆ. ಅರ್ಧ ಆವಕಾಡೊವನ್ನು ತೆಗೆದುಕೊಂಡು ಚೆನ್ನಾಗಿ ಪೇಸ್ಟ್ ಮಾಡಿ. ಇದಕ್ಕೆ ಇಂದೊಂದು ಚಮಚ ಆಲಿವ್ ಎಣ್ಣೆ ಮತ್ತು ಮೊಸರನ್ನು ಸೇರಿಸಿ. ಈ ಮಿಶ್ರಣವನ್ನು 10-15 ನಿಮಿಷಗಳ ಕಾಲ ಮುಖದಲ್ಲಿಯೇ ಇರುವಂತೆ ಫೇಸ್ ಪ್ಯಾಕ್ ಹಚ್ಚಿ. ನಂತರ ತೊಳೆಯಿರಿ. ತ್ವಚೆಯ ಹೊಳಪಿಗೆ ಹಾಗೂ ಮೃದು ತ್ವಚೆಗೆ ಈ ಫೇಸ್ ಪ್ಯಾಕ್ ಅತ್ಯಂತ ಪ್ರಯೋಜನಕಾರಿ.

ಸೇಬು + ಜೇನು + ಮೊಸರು

ಸೇಬು + ಜೇನು + ಮೊಸರು

ಸೇಬು ಹಣ್ಣಿನಲ್ಲಿ ಸಮೃದ್ಧವಾದ ಜೀವಸತ್ವಗಳಿವೆ. ಇದು ತ್ವಚೆಯ ಹೊಳಪಿಗೆ ಸಹಾಯಕವಾಗಿದೆ. ತ್ವಚೆಯ ಮೃದುತ್ವಕ್ಕೆ ಅತ್ಯಗತ್ಯವಾದ ಜೇನು ಮತ್ತು ತ್ವಚೆಗೆ ಪೋಷಣೆ ನೀಡುವ ಮೊಸರಿನೊಂದಿಗೆ ಸೇಬುವಿನೊಂದಿಗೆ ಸೇರಿಸಿ ಫೇಸ್ ಪ್ಯಾಕ್ ತಯಾರಿಸಿ, ಇದು ನಿಮ್ಮ ತ್ವಚೆಯಲ್ಲಿ ಉಂಟುಮಾಡುವ ಪರಿಣಾಮಕಾರಿ ಬದಲಾವಣೆಯನ್ನು ನೀವೆ ಗಮನಿಸಿ!

ಸೇಬುವನ್ನು ತೆಗೆದುಕೊಂಡು ಅದನ್ನು ಪೇಸ್ಟ್ ನಂತೆ ತಯಾರಿಸಿ. ಇದಕ್ಕೆ ತಲಾ ಒಂದೊಂದು ಚಮಚ ಜೇನು ಮತ್ತು ಮೊಸರನ್ನು ಬೆರೆಸಿ. ತ್ವಚೆಗೆ ಹೊಳಪು ಮತ್ತು ಮೃದುತ್ವವನ್ನು ನೀಡಲು ಈ ಪ್ಯಾಕ್ ನ್ನು ಆಗಾಗ ಬಳಸಿ. ಗ್ರೀನ್ ಆಪಲ್ ನ್ನು ಕೂಡ ನೀವು ಈ ಫೇಸ್ ಪ್ಯಾಕ್ ತಯಾರಿಸಲು ಬಳಸಬಹುದು.

ಕಿತ್ತಳೆ + ಮೊಸರು

ಕಿತ್ತಳೆ + ಮೊಸರು

ಮಾಯಿಶ್ಚರೈಸರ್, ಕಲೆಮುಕ್ತ ತ್ವಚೆ ಹಾಗೂ ಮೃದುತ್ವ ಈ ಎಲ್ಲಾ ಗುಣಗಳನ್ನೂ ಒಂದಿರುವ ಒಂದು ಫೇಸ್ ಪ್ಯಾಕ್ ನಿಮ್ಮ ಮುಂದಿದೆ. ಕಿತ್ತಳೆ ತಿರುಳು ಮತ್ತು ಮೊಸರನ್ನು ಬೆರೆಸಿ ಮುಖಕ್ಕೆ ಹಚ್ಚುವುದರಿಂದ ತ್ವಚೆಯ ಸೌಂದರ್ಯ ಹೆಚ್ಚುವುದರಲ್ಲಿ ಸಂಶಯವಿಲ್ಲ. ಕಿತ್ತಳೆ ರಸದೊಂದಿಗೆ ಮೊಸರನ್ನು ಬೆರೆಸಿ ಮುಖಕ್ಕೆ ಹಚ್ಚಿ 10-15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಬೆಚ್ಚನೆಯ ನೀರಿನಲ್ಲಿ ತೊಳೆಯಿರಿ. ನೀವು ಒಣ ತ್ವಚೆಯನ್ನು ಹೊಂದಿದ್ದರೆ ಈ ಮಾಸ್ಕ್ ನೊಂದಿಗೆ ಜೇನುತುಪ್ಪವನ್ನೂ ಸೇರಿಸಬಹುದು.

ಮಾವು + ಮೊಸರು

ಮಾವು + ಮೊಸರು

ಆಳವಾದ ಪೋಷಣೆಯನ್ನು ನೀಡುವ ಮಾವು ತ್ವಚೆಗೆ ಉತ್ತಮ ಪೋಷಕಾಂಶದಂತೆ ಕೆಲಸಮಾಡುತ್ತದೆ. ಮಾವಿನಲ್ಲಿರುವ ಸಮೃದ್ಧವಾದ ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕ ಗುಣ ತ್ವಚೆಯಲ್ಲಿನ ಮಯಸ್ಸಾದ ಕಳೆಯನ್ನು ನಿವಾರಿಸಲು ಸಹಾಯಮಾಡುತ್ತವೆ.ಮಾವಿನ ಅರ್ಧ ಭಾಗ ಮತ್ತು ಎರಡರಿಂದ ಮೂರು ಚಮಚ ಮೊಸರನ್ನು ಬೆರೆಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ. ಈ ಎರಡು ಪೋಷಣಾ ಪದಾರ್ಥಗಳು ತ್ವಚೆಯ ಹೊಳಪನ್ನು ಹೆಚ್ಚಿಸುತ್ತವೆ.

English summary

11 Homemade Curd Face Packs to Get Glowing and Healthy Skin

Everyone wants to look beautiful, however there is always a cost associated with it right? Wrong! With so many wonderful ingredients readily available in your kitchen, there is no reason to look for cosmetic products to get that wonderful glow. here are some fantastic DIY yoghurt face packs for you.
X
Desktop Bottom Promotion