ನಂಬಿಕೆಯೇ ಬರುತ್ತಿಲ್ಲ!! 'ದಾಲ್ಚಿನ್ನಿ' ಇಷ್ಟೊಂದು ಪ್ರಯೋಜನಕಾರಿಯೇ?

By: jaya
Subscribe to Boldsky

ನೈಸರ್ಗಿಕ ಉತ್ಪನ್ನಗಳನ್ನು ಬಳಸಿಕೊಂಡು ಸೌಂದರ್ಯವನ್ನು ಪೋಷಿಸುವ ಕಲೆ ಹಿಂದಿನ ಕಾಲದಿಂದಲೂ ಚಾಲ್ತಿಯಲ್ಲಿದ್ದು ಇಂದಿನ ಆಧುನಿಕ ಸೌಂದರ್ಯ ವಿಧಾನಗಳೂ ಇದೇ ಕಲೆಯನ್ನು ಬಳಸಿಕೊಂಡು ಆಧುನಿಕವಾಗಿ ತಮ್ಮ ವಸ್ತುಗಳ ಮಾರಾಟವನ್ನು ಮಾಡುತ್ತಿದೆ. ಕಳೆಗುಂದಿದ ಚರ್ಮದ ಆರೈಕೆಗೆ ದಾಲ್ಚಿನ್ನಿ ಪೌಡರ್!

ಸಾಂಬಾರ ಪದಾರ್ಥಗಳು ಕೂಡ ನಿಮ್ಮ ಸೌಂದರ್ಯ ವಿಷಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂಬುದಾಗಿ ಅನಾದಿ ಕಾಲದಲ್ಲಿಯೇ ವೈದ್ಯರುಗಳು ತಿಳಿಸಿಕೊಟ್ಟಿದ್ದಾರೆ. ಈ ವಸ್ತುಗಳಲ್ಲಿರುವ ಅತ್ಯಂತ ಪ್ರಮುಖ ವೈಶಿಷ್ಟ್ಯತೆಗಳು ನಿಮ್ಮ ಕೂದಲು ಮತ್ತು ಮುಖ ಸೌಂದರ್ಯವನ್ನು ವೃದ್ಧಿಸುವಲ್ಲಿ ಕಾರಣವಾಗಲಿವೆ.  ದಾಲ್ಚಿನ್ನಿ ಬೆರೆಸಿದ ಹಾಲು ಕುಡಿಯಿರಿ-ಆರೋಗ್ಯ ಪಡೆಯಿರಿ

ಇಂತಹುದೇ ಅದ್ಭುತ ವಿಶೇಷತೆಗಳನ್ನು ಪಡೆದುಕೊಂಡಿರುವ ದಾಲ್ಚಿನ್ನಿಯ ಬಗ್ಗೆಯೇ ಇಂದಿನ ಲೇಖನದಲ್ಲಿ ನಾವು ತಿಳಿಸಿಕೊಡಲಿರುವೆವು. ಬರಿಯ ತೂಕ ಇಳಿಕೆಯಲ್ಲಿ ಮಾತ್ರವಲ್ಲದೆ ಸೌಂದರ್ಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಎತ್ತಿದ ಕೈಯಾಗಿದೆ. ಹಾಗಿದ್ದರೆ ಇನ್ನಷ್ಟು ಪ್ರಯೋಜನಗಳನ್ನು ಇಂದಿಲ್ಲಿ ತಿಳಿದುಕೊಳ್ಳೋಣ...   

ಕೂದಲಿನ ಬಣ್ಣಕ್ಕಾಗಿ

ಕೂದಲಿನ ಬಣ್ಣಕ್ಕಾಗಿ

ನಿಮ್ಮ ಕೂದಲಿಗೆ ನೈಸರ್ಗಿಕ ಕೆಂಪು ಬಣ್ಣವನ್ನು ಹಚ್ಚಲು ನೀವು ಬಯಸುತ್ತೀರಿ ಎಂದಾದಲ್ಲಿ ನಿಮ್ಮ ದೈನಂದಿನ ಸೌಂದರ್ಯ ಕಾಳಜಿಯಲ್ಲಿ ದಾಲ್ಚಿನ್ನಿಯನ್ನು ಬಳಸಿಕೊಳ್ಳಿ. ದಾಲ್ಚಿನ್ನಿಯನ್ನು ತೆಗೆದುಕೊಂಡು ನಿಮ್ಮ ಕಂಡೀಷನರ್‌ ಮತ್ತು ಶಾಂಪೂವಿನಲ್ಲಿ ಬೆರೆಸಿ. ಅಂತೆಯೇ ದಾಲ್ಚಿನ್ನಿಯನ್ನು ಹುಡಿ ಮಾಡಿಕೊಂಡು ನಿಮ್ಮ ತಲೆಬುರುಡೆಗೆ ಹಚ್ಚಿಕೊಳ್ಳಿ ಮತ್ತು 6 ರಿಂದ 8 ಗಂಟೆಗಳ ಕಾಲ ಹಾಗೆಯೇ ಬಿಟ್ಟು ಕೂದಲನ್ನು ತೊಳೆದುಕೊಳ್ಳಿ.

ಉತ್ತಮ ಸ್ಕ್ರಬ್

ಉತ್ತಮ ಸ್ಕ್ರಬ್

ನಿಮ್ಮ ಸ್ಕ್ರಬ್‌ನಲ್ಲಿ ಇದನ್ನು ಬಳಸುವುದು ಹೊಳೆಯುವ ಮತ್ತು ಕಾಂತಿಯುಕ್ತ ತ್ವಚೆಯನ್ನು ನಿಮಗೆ ನೀಡಲಿದೆ. ಎಪ್ಸಮ್ ಉಪ್ಪನ್ನು ತೆಗೆದುಕೊಂಡು ಅದನ್ನು ದಾಲ್ಚಿನ್ನಿ ಹುಡಿಯೊಂದಿಗೆ ಬೆರೆಸಿ. ಎರಡನ್ನೂ ಮಿಶ್ರ ಮಾಡಿಕೊಂಡು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ ತದನಂತರ ನೀರಿನಿಂದ ಇದನ್ನು ತೊಳೆದುಕೊಳ್ಳಿ. ನಿಯಮಿತವಾಗಿ ಈ ಸ್ಕ್ರಬ್ ಅನ್ನು ಬಳಸಿ ಮತ್ತು ಮೃತಕೋಶಗಳನ್ನು ಸರಳವಾಗಿ ಹೊರದೂಡುತ್ತದೆ. ನಿಮ್ಮ ಫೇಸ್ ಮಾಸ್ಕ್‌ನಲ್ಲಿ ದಾಲ್ಚಿನ್ನಿಯನ್ನು ಬಳಸುವುದರಿಂದ ನಿಮ್ಮ ತ್ವಚೆ ಆರೋಗ್ಯಪೂರ್ಣ ಮತ್ತು ಕಾಂತಿಯುಕ್ತವಾಗಲಿದೆ.

ಹೊಳೆಯುವ ಫೌಂಡೇಶನ್

ಹೊಳೆಯುವ ಫೌಂಡೇಶನ್

ನಿಮ್ಮ ಮೇಕಪ್‌ನಲ್ಲಿ ಚಿನ್ನದ ಬಣ್ಣವನ್ನು ನೀವು ಬಯಸಿದ್ದೀರಿ ಎಂದಾದಲ್ಲಿ ದಾಲ್ಚಿನ್ನಿ ಅವಶ್ಯಕವಾಗಿ ನಿಮಗೆ ಸಹಾಯ ಮಾಡಲಿದೆ. ಸ್ವಲ್ಪ ದಾಲ್ಚಿನ್ನಿ ಹುಡಿಯನ್ನು ತೆಗೆದುಕೊಂಡು ಅದನ್ನು ಮೇಕಪ್ ಪೌಡರ್‌ನೊಂದಿಗೆ ಮಿಶ್ರ ಮಾಡಿ ನಂತರ ಇದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ನಿಮ್ಮ ಅಗತ್ಯಕ್ಕೆ ಬೇಕಾದಂತೆ ದಾಲ್ಚಿನ್ನಿ ಹುಡಿಯನ್ನು ನಿಮಗೆ

ಬಳಸಿಕೊಳ್ಳಬಹುದಾಗಿದೆ.

ನೈಸರ್ಗಿಕ ಫೇಸ್ ಪೌಡರ್

ನೈಸರ್ಗಿಕ ಫೇಸ್ ಪೌಡರ್

ಹೆಚ್ಚಿನ ಯುವತಿಯರು ನೈಸರ್ಗಿಕ ಸೌಂದರ್ಯ ವಿಧಾನಗಳನ್ನೇ ತಮ್ಮ ತ್ವಚೆಗೆ ಬಳಸಲು ಬಯಸುತ್ತಾರೆ. ಮನೆಯಲ್ಲೇ ನೈಸರ್ಗಿಕ ಫೇಸ್ ಪೌಡರ್ ಅನ್ನು ತಯಾರಿಸಿಕೊಳ್ಳಬಹುದಾಗಿದೆ. ಇದು ನಿಮಗೆ ಉತ್ತಮ ಫಲಿತಾಂಶವನ್ನು ನೀಡಲಿದೆ. ಕೋರ್ನ್ ಸ್ಟ್ರಾಚ್ ಅನ್ನು ತೆಗೆದುಕೊಳ್ಳಿ ಮತ್ತು ಇದಕ್ಕೆ ಸ್ವಲ್ಪ ದಾಲ್ಚಿನ್ನಿ ಹುಡಿಯನ್ನು ಸೇರಿಸಿ. ಮುಖಕ್ಕೆ ಹಚ್ಚಿಕೊಂಡು ನಿಮಗೆ ಬೇಕಾದಂತೆ ಬಳಸಿಕೊಳ್ಳಿ.

ನೈಸರ್ಗಿಕ ಲಿಪ್ ಬಾಮ್

ನೈಸರ್ಗಿಕ ಲಿಪ್ ಬಾಮ್

ದಾಲ್ಚಿನ್ನಿಯನ್ನು ಬಳಸಿಕೊಂಡು ಮನೆಯಲ್ಲೇ ನೈಸರ್ಗಿಕ ಲಿಪ್ ಬಾಮ್ ಅನ್ನು ತಯಾರಿಸಿಕೊಳ್ಳಬಹುದಾಗಿದೆ. ಸ್ವಲ್ಪ ತೆಂಗಿನೆಣ್ಣೆಯನ್ನು ತೆಗೆದುಕೊಳ್ಳಿ ಮತ್ತು ಇದಕ್ಕೆ ಸ್ವಲ್ಪ ದಾಲ್ಚಿನ್ನಿ ಹುಡಿಯನ್ನು ಸೇರಿಸಿ. ಈ ಎರಡನ್ನು ಬೆರೆಸಿಕೊಂಡು ನಿಮ್ಮ ತುಟಿಗೆ ಹಚ್ಚಿಕೊಳ್ಳಿ. ಇದು ತುಟಿಗೆ ಆರೋಗ್ಯಕರವಾಗಿದ್ದು ತುಟಿ ಒಡೆಯುವ ಸಮಸ್ಯೆಗಳನ್ನು ಪರಿಹರಿಸಲಿದೆ.

ನೈಸರ್ಗಿಕ ಬ್ರೋನ್ಜರ್

ನೈಸರ್ಗಿಕ ಬ್ರೋನ್ಜರ್

ನಿಮ್ಮ ತ್ವಚೆಗೆ ನೈಸರ್ಗಿಕ ಬ್ರೋನ್ಜರ್‌ನಂತೆ ಇದು ಕಾರ್ಯನಿರ್ವಹಿಸಲಿದೆ. ಸ್ವಲ್ಪ ದಾಲ್ಚಿನ್ನು ಹುಡಿಯನ್ನು ತೆಗೆದುಕೊಂಡು ಇದಕ್ಕೆ ನಟ್‌ಮಗ್ ಹುಡಿ ಮತ್ತು ಕೋಕಾ ಹುಡಿಯನ್ನು ಬೆರೆಸಿ. ಎಲ್ಲವನ್ನೂ ಬೆರೆಸಿಕೊಂಡು ನಿಮ್ಮ ಕೆನ್ನೆಗಳಿಗೆ ಹಚ್ಚಿಕೊಳ್ಳಿ. ನಿಮಗೆ ಗಾಢ ಬಣ್ಣ ಬೇಕು ಎಂದಾದಲ್ಲಿ, ಇದಕ್ಕೆ ಇನ್ನಷ್ಟು ದಾಲ್ಚಿನ್ನಿ ಹುಡಿಯನ್ನು ಸೇರಿಸಿ ಮತ್ತು ಹಚ್ಚಿ. ಅಂತೆಯೇ ನಿಮಗೆ ತಿಳಿಯಾದ ಬಣ್ಣ ಬೇಕು ಎಂದರೆ ಇದಕ್ಕೆ ಕಾರ್ನ್ ಸ್ಟ್ರಾಚ್ ಬೆರೆಸಿ.

ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು

ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು

ದುರ್ವಾಸನೆಯಂತಹ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿ ದಾಲ್ಚಿನ್ನಿ ಸಹಾಯಕವಾಗಲಿದೆ. ಹಲ್ಲಿನ ಹಳದಿಗಟ್ಟುವಿಕೆ ಮತ್ತು ದುರ್ವಾಸನೆ ನಿಜಕ್ಕೂ ಹೇಯವಾದ ಪರಿಸ್ಥಿತಿಯಾಗಿದೆ. ಈ ಸಮಸ್ಯೆಯನ್ನು ಹೋಗಲಾಡಿಸಲು, ನೀರಿನಲ್ಲಿ ದಾಲ್ಚಿನ್ನಿ ಹುಡಿಯನ್ನು ಬೆರೆಸಿ ಮತ್ತು ಅದರಲ್ಲಿ ಬಾಯಿ ಮುಕ್ಕಳಿಸಿ. ದುರ್ವಾಸನೆ ಸಮಸ್ಯೆ ಕೆಲವೇ ದಿನಗಳಲ್ಲಿ ಪರಿಹಾರವಾಗುತ್ತದೆ.

ಮೊಡವೆ ಮಾಸ್ಕ್

ಮೊಡವೆ ಮಾಸ್ಕ್

ದಾಲ್ಚಿನ್ನಿಯಲ್ಲಿ ಉತ್ಕರ್ಷಣ ನಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಅಂಶಗಳು ಇರುವುದರಿಂದ ಮುಖದಲ್ಲಿರುವ ಮೊಡವೆ ಸಮಸ್ಯೆಗಳನ್ನು ಇದು ನಿವಾರಿಸಲಿದೆ. ದಾಲ್ಚಿನ್ನಿ ಹುಡಿಯನ್ನು ತೆಗೆದುಕೊಂಡು ಇದಕ್ಕೆ ಸ್ವಲ್ಪ ಜೇನು ಬೆರೆಸಿ. ಎರಡನ್ನೂ ಚೆನ್ನಾಗಿ ಮಿಶ್ರ ಮಾಡಿಕೊಂಡು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಕಾಯಿರಿ ತದನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ದಿನದಲ್ಲಿ ಎರಡು ಬಾರಿ ಈ ವಿಧಾನವನ್ನು ಬಳಸುವುದು ಮೊಡವೆಗಳಿಂದ ನಿಮ್ಮ ತ್ವಚೆಗೆ ಮುಕ್ತಿಯನ್ನು ನೀಡಲಿದೆ. ಆರೋಗ್ಯ ಟಿಪ್ಸ್: ಚಿಟಿಕೆಯಷ್ಟು 'ದಾಲ್ಚಿನ್ನಿ' ಪುಡಿಯ ಜಬರ್ದಸ್ತ್ ಪವರ್

English summary

How To Use Cinnamon In Your Makeup Routine

Cinnamon is known to be highly beneficial for the skin and you could include it as a beauty ingredient for various skin care purposes. Read here to know more. Cinnamon is particularly used for weight loss, but let us tell you that this magical herb is of great use on the skin and hair as well.
Subscribe Newsletter