ದಾಲ್ಚಿನ್ನಿ ಬೆರೆಸಿದ ಹಾಲು ಕುಡಿಯಿರಿ-ಆರೋಗ್ಯ ಪಡೆಯಿರಿ

By: manu
Subscribe to Boldsky

ಒಳ್ಳೆಯ ಆರೋಗ್ಯ ಎಲ್ಲರಿಗೂ ಬೇಕಿರುತ್ತದೆ. ಆದರೆ ಅದನ್ನು ಪಡೆಯುವುದು ತುಂಬಾ ಕಷ್ಟ. ಯಾಕೆಂದರೆ ನಾವು ಅನುಸರಿಸುವಂತಹ ಜೀವನಶೈಲಿ ಇದಕ್ಕೆ ಕಾರಣವಾಗಿದೆ. ಸಣ್ಣ ಆರೋಗ್ಯ ಸಮಸ್ಯೆಯಾದರೂ ಅಂಗೈಯಷ್ಟು ಮಾತ್ರೆಗಳನ್ನು ತಿನ್ನುತ್ತೇವೆ. ಇದರಿಂದ ಹಲವಾರು ರೀತಿಯ ಅಡ್ಡಪರಿಣಾಮಗಳು ಖಚಿತ.

ಆದರೆ ಹಿಂದಿನ ಕಾಲದಿಂದಲೂ ಹಿರಿಯರು ಸಾಂಬಾರು ಪದಾರ್ಥಗಳನ್ನು ಬಳಸಿಕೊಂಡು ರೋಗಗಳನ್ನು ನಿಯಂತ್ರಿಸಿದ್ದಾರೆ ಮತ್ತು ಅದನ್ನು ಸಂಪೂರ್ಣವಾಗಿ ನಿವಾರಿಸಿದ್ದಾರೆ. ನಮಗೆಲ್ಲರಿಗೂ ದಾಲ್ಚಿನ್ನಿ ಅಥವಾ ಚಕ್ಕೆ ಬಗ್ಗೆ ತಿಳಿದೇ ಇದೆ. ದಾಲ್ಚಿನ್ನಿ ಸಾಂಬಾರ ಪದಾರ್ಥಗಳಲ್ಲಿ ಪ್ರಮುಖವಾಗಿದೆ ಮತ್ತು ಸಿಹಿ ಹಾಗೂ ಖಾರ ಎರಡರಲ್ಲೂ ಇದನ್ನು ಬಳಸಲಾಗುತ್ತದೆ.   ಜೇನು ದಾಲ್ಚಿನ್ನಿ ಜೋಡಿ ಮಾಡಲಿದೆ ಕಮಾಲಿನ ಮೋಡಿ

ಇದರಲ್ಲಿರುವ ಔಷಧೀಯ ಗುಣಗಳು ಹಲವಾರು ರೀತಿಯ ರೋಗಗಳನ್ನು ಶಮನ ಮಾಡುವಂತಹ ಶಕ್ತಿಯನ್ನು ಹೊಂದಿದೆ. ದಾಲ್ಚಿನ್ನಿಯನ್ನು ಹಾಲಿನೊಂದಿಗೆ ಸೇರಿಸಿ ಕುಡಿದರೆ ಎರಡರಲ್ಲಿನ ಔಷಧೀಯ ಗುಣಗಳು ಆರೋಗ್ಯವನ್ನು ವೃದ್ಧಿಸುವುದರಲ್ಲಿ ಸಂಶಯವೇ ಇಲ್ಲ. ಉರಿಯೂತ ಶಮನಕಾರಿ ಗುಣ ಹೊಂದಿರುವ ದಾಲ್ಚಿನ್ನಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿರುವ ಹಾಲನ್ನು ಮಿಶ್ರಣ ಮಾಡಿದಾಗ ಸಿಗುವ ಫಲಿತಾಂಶ ಅದ್ಭುತವಾಗಿರುತ್ತದೆ.      ಕಳೆಗುಂದಿದ ಚರ್ಮದ ಆರೈಕೆಗೆ ದಾಲ್ಚಿನ್ನಿ ಪೌಡರ್!

ಕಳೆದ ಹಲವಾರು ವರ್ಷಗಳಿಂದ ವೈದ್ಯಕೀಯ ಲೋಕದಲ್ಲಿ ದಾಲ್ಚಿನ್ನಿ ಹಾಲಿನ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇದೆ. ಇದು ರೋಗಗಳನ್ನು ತಡೆಗಟ್ಟುವ ಮತ್ತು ಆರೋಗ್ಯವನ್ನು ಸುಧಾರಿಸುವಂತಹ ಗುಣವನ್ನು ಹೊಂದಿದೆ. ದಾಲ್ಚಿನ್ನಿ ಹಾಲನ್ನು ತಯಾರಿಸುವುದು ತುಂಬಾ ಸುಲಭ. ಎರಡು ಚಮಚ ದಾಲ್ಚಿನ್ನಿ ಹುಡಿಯನ್ನು ಹಾಲಿನೊಂದಿಗೆ ಬೆರೆಸಿಕೊಂಡು ಕುಡಿಯಬೇಕು. ದಾಲ್ಚಿನ್ನಿ ಹಾಲಿನಿಂದ ಆಗುವಂತಹ ಲಾಭಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಇಂದು ಹೇಳಿಕೊಡಲಿದೆ. ಆದರೆ ಇದನ್ನು ಸೇವಿಸುವ ಮೊದಲು ನಿಮ್ಮ ವೈದ್ಯರಿಂದ ಸಲಹೆ ಪಡೆದುಕೊಂಡರೆ ಒಳ್ಳೆಯದು.

ಒಳ್ಳೆಯ ಜೀರ್ಣಕ್ರಿಯೆಗೆ

ಒಳ್ಳೆಯ ಜೀರ್ಣಕ್ರಿಯೆಗೆ

ದಾಲ್ಚಿನ್ನಿ ಹಾಲು ಉತ್ತಮ ಜೀರ್ಣಕ್ರಿಯೆಗೆ ನೆರವಾಗುತ್ತದೆ. ಇದರಲ್ಲಿನ ಕೆಲವೊಂದು ಅಂಶಗಳು ಕರುಳಿನ ಕ್ರಿಯೆಯನ್ನು ಸರಾಗವಾಗಿಸಿ ಅಜೀರ್ಣದಿಂದ ಆಗುವಂತಹ ಹೊಟ್ಟೆಯ ತಳಮಳವನ್ನು ನಿವಾರಿಸುವುದು.

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕಾಗಿ

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕಾಗಿ

ದಾಲ್ಚಿನ್ನಿಯಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವಂತಹ ಅಂಶಗಳಿವೆ ಎಂದು ಪತ್ತೆಯಾಗಿದೆ. ಅದರಲ್ಲೂ ಎರಡನೇ ವರ್ಗದ ಮಧುಮೇಹಿಗಳಿಗೆ ಇದು ಒಳ್ಳೆಯದು. ಪ್ರತಿದಿನವೂ ಈ ಹಾಲನ್ನು ಸೇವನೆ ಮಾಡಿದರೆ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ.

ಉತ್ತಮ ನಿದ್ರೆಗಾಗಿ

ಉತ್ತಮ ನಿದ್ರೆಗಾಗಿ

ನೀವು ಒಳ್ಳೆಯ ರೀತಿ ನಿದ್ರಿಸಬೇಕೆಂದರೆ ದಾಲ್ಚಿನ್ನಿ ಹಾಲವನ್ನು ಕುಡಿಯಬೇಕು. ದಾಲ್ಚಿನ್ನಿ ಮತ್ತು ಹಾಲಿನಲ್ಲಿನ ಕೆಲವೊಂದು ಅಂಶಗಳು ಒಳ್ಳೆಯ ನಿದ್ರೆ ನೀಡುವುದು. ಮಲಗುವ ಮೊದಲು ಒಂದು ಲೋಟ ಹಾಲು ಕುಡಿಯಿರಿ ಮತ್ತು ಮಗುವಿನಂತೆ ಮಲಗಿರಿ.

ಸುಂದರ ಕೂದಲು ಮತ್ತು ತ್ವಚೆಗೆ

ಸುಂದರ ಕೂದಲು ಮತ್ತು ತ್ವಚೆಗೆ

ಕೂದಲು ಮತ್ತು ಚರ್ಮದಲ್ಲಿ ಕಾಣಿಸಿಕೊಳ್ಳುವಂತಹ ಹಲವಾರು ರೀತಿಯ ಸಮಸ್ಯೆಗಳನ್ನು ದಾಲ್ಚಿನ್ನಿ ಹಾಲು ನಿವಾರಿಸುತ್ತದೆ. ಆ್ಯಂಟಿ ಬ್ಯಾಕ್ಟೀರಿಯಾ ಗುಣಗಳನ್ನು ಹೊಂದಿರುವ ದಾಲ್ಚಿನ್ನಿ ಹಾಲನ್ನು ನಿಯಮಿತವಾಗಿ ಕುಡಿದರೆ ಸುಂದರ ಕೂದಲು ಮತ್ತು ಕಾಂತಿಯುವ ತ್ವಚೆ ಪಡೆಯಬಹುದು.

ಸದೃಢ ಮೂಳೆಗಳಿಗೆ

ಸದೃಢ ಮೂಳೆಗಳಿಗೆ

ದಾಲ್ಚಿನ್ನಿ ಹಾಲಿನಲ್ಲಿ ಮೂಳೆಗಳನ್ನು ಬಲಪಡಿಸುವಂತಹ ಗುಣಗಳು ಇವೆ. ದಾಲ್ಚಿನ್ನಿ ಹಾಲನ್ನು ನಿಯಮಿತವಾಗಿ ಕುಡಿಯುತ್ತಾ ಇದ್ದರೆ ಅರ್ಥಟೀಸ್ ನಂತಹ ಮೂಳೆಗಳ ಸಮಸ್ಯೆಯನ್ನು ಹೋಗಲಾಡಿಸಬಹುದು ಎಂದು ತಜ್ಞರು ನಂಬಿದ್ದಾರೆ.

ಶೀತ ಮತ್ತು ಜ್ವರ

ಶೀತ ಮತ್ತು ಜ್ವರ

ದಾಲ್ಚಿನ್ನಿ ಹಾಲನ್ನು ಸೇವಿಸುವ ಮತ್ತೊಂದು ಮಹತ್ತರ ಲಾಭವೆಂದರೆ ಅದು ಸಾಮಾನ್ಯ ಶೀತ ಮತ್ತು ಜ್ವರವನ್ನು ನಿವಾರಿಸುತ್ತದೆ. ಇದರಲ್ಲಿನ ಕೆಲವೊಂದು ಅಂಶಗಳು ದೇಹವನ್ನು ಒಳಗಿನಿಂದಲೇ ರಕ್ಷಣೆ ಮಾಡುವುದು ಮತ್ತು ಅಪಾಯಕಾರಿ ಬ್ಯಾಕ್ಟೀರಿಯಾ ನಿರ್ಮೂಲನೆ ಮಾಡಿ ಸೋಂಕು ಬರದಂತೆ ಕಾಪಾಡುವುದು.

 
English summary

Health Benefits Of Drinking Cinnamon Milk

Cinnamon is often considered a wonder spice because of its many health and beauty benefits. This spice is quite popular in the culinary world, as it can be used in both sweet and savoury kinds of food. But, it is the wide range of health benefits of cinnamon that have made it an absolute favourite in the health community. The compounds present in cinnamon are replete with medicinal properties, which can have a positive impact on a person's health and well-being.
Please Wait while comments are loading...
Subscribe Newsletter