Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಳೆಗುಂದಿದ ಚರ್ಮದ ಆರೈಕೆಗೆ ದಾಲ್ಚಿನ್ನಿ ಪೌಡರ್!
ಚರ್ಮವು ದೇಹದ ಆರೋಗ್ಯವನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ. ಅದೇ ಚರ್ಮವನ್ನು ಆರೈಕೆ ಮಾಡುವುದು ತುಂಬಾ ಕಷ್ಟ. ಎಲ್ಲರ ಚರ್ಮವು ಒಂದೇ ರೀತಿಯಾಗಿರುವುದಿಲ್ಲ. ಕೆಲವರ ಚರ್ಮವು ಒಣ, ಇನ್ನು ಕೆಲವರದ್ದು ಜಿಡ್ಡಿನಿಂದ ಕೂಡಿರುತ್ತದೆ ಮತ್ತೆ ಕೆಲವರದ್ದು ತುಂಬಾ ಸೂಕ್ಷ್ಮ ಚರ್ಮವಾಗಿರುತ್ತದೆ. ಇಂತಹ ಸನ್ನಿವೇಶದಲ್ಲಿ ಎಲ್ಲಾ ಚರ್ಮಗಳಿಗೂ ಒಂದೇ ರೀತಿಯ ಉತ್ಪನ್ನಗಳನ್ನು ಬಳಸಲು ಸಾಧ್ಯವಾಗುವುದಿಲ್ಲ.

ಆದರೆ ಕೆಲವೊಂದು ಮನೆಮದ್ದುಗಳು ಎಲ್ಲಾ ರೀತಿಯ ಚರ್ಮಗಳಿಗೂ ಹೊಂದಿಕೊಳ್ಳುವ ಸಾಧ್ಯಯಿರುತ್ತದೆ. ಇದಕ್ಕಾಗಿಯೇ ಮನೆಮದ್ದನ್ನು ಬಳಸಿದರೆ ಉತ್ತಮ. ಅಡುಗೆಗೆ ಬಳಸುವಂತಹ ದಾಲ್ಚಿನ್ನಿ ಹುಡಿಯನ್ನು ಜಿಡ್ಡಿನಾಂಶವುಳ್ಳ ಚರ್ಮದವರು ಬಳಸಬಹುದು. ಚರ್ಮದ ಆರೈಕೆಗೆ ಹಣ ವ್ಯಯಿಸುವ ಬದಲು ಇಲ್ಲಿ ಕೊಟ್ಟಿರುವ ಸಲಹೆಗಳನ್ನು ಪಾಲಿಸಿಕೊಂಡು ಹೋದರೆ ಚರ್ಮವು ಕಾಂತಿಯನ್ನು ಪಡೆಯುವುದು.
ಮುಖದ ಮೇಲೆ ಬಿದ್ದಿರುವ ಗೆರೆಗಳು
ಎರಡು ಚಮಚ ಆಲಿವ್ ಎಣ್ಣೆ ಅಥವಾ ಪೆಟ್ರೋಲಿಯಂ ಜೆಲ್ ಜತೆಗೆ ದಾಲ್ಚಿನ್ನಿ ಹುಡಿಯನ್ನು ಸೇರಿಸಿ ಚರ್ಮಕ್ಕೆ ಹಚ್ಚಿಕೊಂಡರೆ, ಮುಖದ ಮೇಲೆ ಬಿದ್ದಿರುವ ಗೆರೆಗಳು ಮಾಯವಾಗುತ್ತದೆ. ದಾಲ್ಚಿನ್ನಿಯು ಚರ್ಮವು ದಷ್ಟಪುಷ್ಟವಾಗಿ ಕಾಣುವಂತೆ ಮಾಡುವುದು.
ತಲೆಬುರುಡೆಯ ಪೋಷಕಾಂಶಕ್ಕಾಗಿ
ಒಂದು ಚಮಚ ದಾಲ್ಚಿನ್ನಿ ಹುಡಿ, ¼ ಚಮಚ ಬಿಸಿ ಆಲಿವ್ ಎಣ್ಣೆ ಮತ್ತು ಒಂದು ಚಮಚ ಜೇನನ್ನು ಮಿಶ್ರಣ ಮಾಡಿಕೊಂಡು ತಲೆಗೆ ಚೆನ್ನಾಗಿ ಮಸಾಜ್ ಮಾಡಿದ ಬಳಿಕ ಶಾಂಪೂವಿನಿಂದ ತೊಳೆಯಿರಿ. ದಾಲ್ಚಿನ್ನಿ ಬುರುಡೆ ಮತ್ತು ಕೂದಲಿಗೆ ಪೋಷಕಾಂಶವನ್ನು ನೀಡುವುದು.
ಚರ್ಮದ ಕಿರಿಕಿರಿಗೆ
ಮುಖವನ್ನು ಹೊರತುಪಡಿಸಿ ನಿಮ್ಮ ಚರ್ಮದಲ್ಲಿ ಉರಿಯೂತ ಅಥವಾ ಕೆರೆತವಿದ್ದರೆ ಅದಕ್ಕೆ ದಾಲ್ಚಿನ್ನಿ ಹುಡಿ ಒಳ್ಳೆಯ ಔಷಧಿ. ಚರ್ಮದ ವೈದ್ಯರಿಂದ ಹಸಿರು ನಿಶಾನೆ ಸಿಕ್ಕಿದರೆ ಆಗ ಒಂದು ಚಮಚ ದಾಲ್ಚಿನ್ನಿ ಹುಡಿ ಮತ್ತು ಜೇನು ಬೆರೆಸಿ ಕಿರಿಕಿರಿಯಾಗುವ ಜಾಗಕ್ಕೆ ಹಚ್ಚಿಕೊಳ್ಳಿ.
ಚರ್ಮದ ಕಾಂತಿಗೆ
ಚರ್ಮದ ಕಾಂತಿಯನ್ನು ಹೆಚ್ಚಿಸಲು ಮಾರುಕಟ್ಟೆಯಲ್ಲಿ ಸಿಗುವಂತಹ ದುಬಾರಿ ಮತ್ತು ಅಡ್ಡಪರಿಣಾಮ ಉಂಟುಮಾಡಬಲ್ಲ ಕ್ರೀಮ್‌ಗಳನ್ನು ತ್ಯಜಿಸಿ ಮತ್ತು ದಾಲ್ಚಿನ್ನಿ ಹುಡಿಯನ್ನು ಬಳಸಿ. ಬಾಳೆಹಣ್ಣಿನ ಜ್ಯೂಸ್, ಮೊಸರು, ದಾಲ್ಚಿನ್ನಿ ಹುಡಿ ಮತ್ತು ಲಿಂಬೆರಸವನ್ನು ಮಿಶ್ರಣ ಮಾಡಿಕೊಂಡು ಚರ್ಮಕ್ಕೆ ಹಚ್ಚಿಕೊಳ್ಳಿ ಮತ್ತು ಅದನ್ನು ಒಣಗಲು ಬಿಡಿ. ಬಳಿಕ ಚರ್ಮವನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಸ್ಕ್ರಬ್ ಮಾಡಲು
ಒಂದು ಚಮಚ ದಾಲ್ಚಿನ್ನಿ ಹುಡಿ, ಎರಡು ಲೋಟ ಕಾಫಿ ಹುಡಿ, ½ ಕಪ್ ಸಮುದ್ರ ಉಪ್ಪು, 2-3 ಚಮಚ ಬಾದಾಮಿ ಎಣ್ಣೆಯನ್ನು ಮಿಶ್ರಣ ಮಾಡಿಕೊಂಡು ಸ್ಕ್ರಬ್ ಮಾಡಿದರೆ ದೇಹವು ಚೈತನ್ಯವನ್ನು ಪಡೆಯುವುದು.



Click it and Unblock the Notifications



