ಬಿಸಿಲಿನ ತಾಪಕ್ಕೆ, ತಂಪಾಗಿಸುವ 'ಕಿವಿ ಹಣ್ಣಿನ' ಫೇಸ್ ಪ್ಯಾಕ್

By: Hemanth
Subscribe to Boldsky

ಬೇಸಿಗೆಯಲ್ಲಿ ತ್ವಚೆಯ ಆರೈಕೆ ಮಾಡುವುದು ತುಂಬಾ ಕಠಿಣ ಕೆಲಸ. ಹೊರಗಡೆ ಹೋದರೆ ಸಾಕು ಧೂಳು, ಬಿಸಿಲು ತ್ವಚೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ತ್ವಚೆಯಲ್ಲಿ ಸೂರ್ಯನ ಬಿಸಿಲಿನಿಂದ ಆದ ಕಲೆಗಳು ಹಾಗೂ ಮೊಡವೆಗಳು ಮೂಡುತ್ತದೆ. ಇಂತಹ ಕಲೆಗಳು ಹಾಗೂ ಮೊಡವೆಗಳನ್ನು ನಿವಾರಣೆ ಮಾಡಲು ಹಲವಾರು ರೀತಿಯ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರ ಅಡ್ಡಪರಿಣಾಮಗಳು ನಮಗೆ ತಿಳಿದೇ ಇರುವುದಿಲ್ಲ. ಆದರೆ ಪ್ರಕೃತಿಯಲ್ಲಿ ಸಿಗುವಂತಹ ಕೆಲವೊಂದು ಹಣ್ಣುಗಳಿಂದಲೂ ತ್ವಚೆಯ ಆರೈಕೆಯನ್ನು ಮಾಡಬಹುದು.  ಅತ್ಯಾಧಿಕ ಪೋಷಕಾಂಶವಿರುವ ಹಣ್ಣು-ಕಿವಿ

ಇದರಲ್ಲಿ ಪ್ರಮುಖವಾಗಿರುವ ಒಂದು ಹಣ್ಣೆಂದರೆ ಅದು ಕಿವಿ ಹಣ್ಣು. ಈ ಹಣ್ಣು ತಿನ್ನಲು ತುಂಬಾ ರುಚಿಕರ ಹಾಗೂ ಚರ್ಮವನ್ನು ಆರೋಗ್ಯಕರ ಹಾಗೂ ಕಾಂತಿಯುತವಾಗಿಡುವುದು. ಬೇಸಿಗೆಯಲ್ಲಿ ಕಿವಿ ಹಣ್ಣು ಒಣ, ಬಿಸಿಲಿನ ತಾಪದಿಂದ ಬೀಳುವ ಕಲೆಗಳನ್ನು ನಿವಾರಿಸುತ್ತದೆ.   ಆರೋಗ್ಯದ ಖಜಾನೆ, ಕಿವಿ ಹಣ್ಣು!

ಕಿವಿ ಹಣ್ಣಿನಲ್ಲಿ ಹಲವಾರು ರೀತಿಯ ವಿಟಮಿನ್ ಹಾಗೂ ಪ್ರೋಟೀನ್ ಚರ್ಮವನ್ನು ಕಾಂತಿಯುತ ಹಾಗೂ ಆರೋಗ್ಯವಾಗಿಡುವುದು. ಕಿವಿ ಹಣ್ಣಿನಲ್ಲಿರುವ ಆ್ಯಂಟಿಆಕ್ಸಿಡೆಂಟ್ ತ್ವಚೆಯನ್ನು ಯೌವನಯುತವಾಗಿ ಮಾಡುವುದು. ಕಿವಿ ಹಣ್ಣಿನ ಮಾಸ್ಕ್ ನಿಂದ ತ್ವಚೆಯ ಆರೋಗ್ಯವನ್ನು ಯಾವ ರೀತಿಯಿಂದ ಕಾಪಾಡಿಕೊಳ್ಳಬಹುದು ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ.... 

ಕಿವಿ ಮತ್ತು ಜೇನುತುಪ್ಪದ ಮಾಸ್ಕ್

ಕಿವಿ ಮತ್ತು ಜೇನುತುಪ್ಪದ ಮಾಸ್ಕ್

ಕೆಲವು ಕಿವಿ ಹಣ್ಣನ್ನು ತೆಗೆದುಕೊಂಡು ಅದನ್ನು ತುಂಡು ಮಾಡಿ. ಇನ್ನು ಇದನ್ನು ಕಿವುಚಿಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪ ಹಾಕಿ.

ಕಿವಿ ಮತ್ತು ಜೇನುತುಪ್ಪದ ಮಾಸ್ಕ್

ಕಿವಿ ಮತ್ತು ಜೇನುತುಪ್ಪದ ಮಾಸ್ಕ್

ಇನ್ನು ಇವೆರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ ಮತ್ತು ಮುಖದ ಮೇಲೆ ಮಸಾಜ್ ಮಾಡಿಕೊಳ್ಳಿ. ಮುಖಕ್ಕೆ ಈ ಮಾಸ್ಕ್ ನ್ನು ಹಚ್ಚಿಕೊಂಡು 10-15 ನಿಮಿಷ ಬಿಟ್ಟು ತೊಳೆಯಿರಿ.

ಕಿವಿ ಮತ್ತು ಮೊಸರಿನ ಮಾಸ್ಕ್

ಕಿವಿ ಮತ್ತು ಮೊಸರಿನ ಮಾಸ್ಕ್

ತಾಜಾ ಕಿವಿ ಹಣ್ಣು ಮತ್ತು ಒಂದು ಕಪ್ ಮೊಸರನ್ನು ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ವಿಟಮಿನ್ ಇ ಮತ್ತು ಆಲಿವ್ ಎಣ್ಣೆ ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿ.

ಕಿವಿ ಮತ್ತು ಮೊಸರಿನ ಮಾಸ್ಕ್

ಕಿವಿ ಮತ್ತು ಮೊಸರಿನ ಮಾಸ್ಕ್

ಇನ್ನು ಇದನ್ನು ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯ ಒಣಗಲು ಬಿಡಿ ಮತ್ತು ಬಳಿಕ

ತಣ್ಣೀರಿನಿಂದ ತೊಳೆಯಿರಿ. ಈ ಮಾಸ್ಕ್ ಕಾಂತಿಯುತ ಹಾಗೂ ಆರೋಗ್ಯಕಾರಿ ಚರ್ಮವನ್ನು ನೀಡುವುದು.

ಕಿವಿ ಮತ್ತು ನಿಂಬೆಯ ಮಾಸ್ಕ್

ಕಿವಿ ಮತ್ತು ನಿಂಬೆಯ ಮಾಸ್ಕ್

ಕಿವಿ ಮತ್ತು ನಿಂಬೆ ಹಣ್ಣಿನ ಮಾಸ್ಕ್ ಚರ್ಮದ ಬಣ್ಣವನ್ನು ಹೆಚ್ಚಿಸಿ ಕಾಂತಿಯನ್ನು ನೀಡುವುದು. ಒಂದು ಹಣ್ಣನ್ನು ತೆಗೆದುಕೊಳ್ಳಿ ಮತ್ತು ಅದನ್ನು ಕತ್ತರಿಸಿಕೊಳ್ಳಿ. ಇದಕ್ಕೆ ಎರಡು ಚಮಚ ನಿಂಬೆ ರಸವನ್ನು ಹಾಕಿ ಮತ್ತು ಸರಿಯಾಗಿ ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಂಡ ಬಳಿಕ ತಣ್ಣೀರಿನಿಂದ ತೊಳೆಯಿರಿ. ದಿನದಲ್ಲಿ ಎರಡು ಸಲ ಈ ಮಾಸ್ಕ್ ನ್ನು ಬಳಸಿದರೆ ಕಾಂತಿಯುತ ಚರ್ಮವು ನಿಮ್ಮದಾಗುವುದು.

ಕಿವಿ ಮತ್ತು ಬಾಳೆಹಣ್ಣಿನ ಮಾಸ್ಕ್

ಕಿವಿ ಮತ್ತು ಬಾಳೆಹಣ್ಣಿನ ಮಾಸ್ಕ್

ನಿಮ್ಮ ಚರ್ಮವು ಯಾವುದೇ ವಿಧದಾಗಿದ್ದರೂ ಕಿವಿ ಹಾಗೂ ಬಾಳೆಹಣ್ಣಿನ ಮಾಸ್ಕ್ ಇದಕ್ಕೆ ಹೊಂದಿಕೊಳ್ಳುತ್ತದೆ. ಒಂದು ಹಣ್ಣಾದ ಬಾಳೆಹಣ್ಣು ಮತ್ತು ಒಂದು ಕಿವಿ ಹಣ್ಣನ್ನು ಕಿವುಚಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಒಂದು ಚಮಚ ಮೊಸರನ್ನು ಸೇರಿಸಿಕೊಳ್ಳಿ.

ಕಿವಿ ಮತ್ತು ಬಾಳೆಹಣ್ಣಿನ ಮಾಸ್ಕ್

ಕಿವಿ ಮತ್ತು ಬಾಳೆಹಣ್ಣಿನ ಮಾಸ್ಕ್

ಇನ್ನು ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡ ಬಳಿಕ ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಕಾಲ ಹಾಗೆ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಕಿವಿ ಮತ್ತು ಬಾಳೆಹಣ್ಣಿನ ಮಾಸ್ಕ್ ಚರ್ಮಕ್ಕೆ ಉನ್ನತ ಮಟ್ಟದ ಪೋಷಕಾಂಶಗಳನ್ನು ನೀಡುವುದು.

 
English summary

Different Kiwi Face Masks To Try This Summer

Kiwi is one among the soothing fruits that helps to keep your skin healthy and glowing all the time. This sweet and tangy-tasting fruit not only helps to soothe your tastebuds but it is surely one among the easy remedies to alleviate sunburned, dull and dry skin in summer.
Subscribe Newsletter