For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಮುಖದ ಕಾಂತಿ ಹೆಚ್ಚಿಸಲು ಮೊಸರಿನ ಲೇಪನ!

By Divya
|

ದೈನಂದಿನ ಸೌಂದರ್ಯ ಚಿಕಿತ್ಸೆಯ ಕಾರ್ಯಕ್ಕೆ ಮೊಸರು ಅತ್ಯುತ್ತಮವಾದ ಸಾಧನ. ಕ್ಲೀನರ್ ಮತ್ತು ಟೋನರ್ ಆಗಿ ಕೆಲಸ ನಿರ್ವಹಿಸುವ ಇದು ಫೇಸ್ ಪ್ಯಾಕ್‍ಗೆ ಅದ್ಭುತವಾದ ಆಯ್ಕೆ. ಅಧಿಕ ಪ್ರಮಾಣದ ಸತು, ಫಾಸ್ಫರಸ್ ಮತ್ತು ವಿಟಮಿನ್-ಇ ಯನ್ನು ಹೊಂದಿರುವುದರಿಂದ ಇದು ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ.

ಅಷ್ಟೇ ಅಲ್ಲದೆ ಚರ್ಮದ ಮೇಲಿರುವ ಗ್ರಂಥಿಗಳಲ್ಲಿ ಶೇಖರಣೆಯಾಗಿರುವ ಬ್ಯಾಕ್ಟೀರಿಯಾ ಮತ್ತು ಕೊಳೆಯನ್ನು ಶುಚಿಗೊಳಿಸುತ್ತದೆ. ಸೂರ್ಯನ ಕಿರಣಗಳಿಂದ ಸುಟ್ಟ ಕಲೆಯನ್ನು ನಿವಾರಿಸಿ ಮೊಡವೆಯಾಗದಂತೆ ನೋಡಿಕೊಳ್ಳುತ್ತದೆ. ಬೇಸಿಗೆ ಬಿಸಿಗೆ ತ್ವಚೆಯ ಸೌಂದರ್ಯ ಹಾಗೂ ಮೈಬಣ್ಣ ಹಾಳಾಗದಂತೆ ಕಾಪಾಡಲು ಮೊಸರು ಸಹಾಯಮಾಡುತ್ತದೆ.

ಮೊಸರಿನಲ್ಲಿ ಅಡಗಿದೆ ತ್ವಚೆಯ ಸೌಂದರ್ಯವನ್ನು ವೃದ್ಧಿಸುವ ರಹಸ್ಯ!

ಶುಷ್ಕ ತ್ವಚೆ, ಎಣ್ಣೆ ತ್ವಚೆ ಮತ್ತು ಸಂಯೋಜನೆಯ ತ್ವಚೆ ಹೊಂದಿದವರಿಗೆ ಅನುಕೂಲವಾಗುವಂತಹ ಮೊಸರು ಫೇಸ್ ಪ್ಯಾಕ್‍ಗಳು ಇವೆ. ಅವುಗಳ ಅನ್ವಯ ಹಾಗೂ ಮಿಶ್ರಣಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಲೇಖನವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ... ಮುಂದೆ ಓದಿ..

ಆಲಿವ್ ಎಣ್ಣೆ ಮತ್ತು ಫೇಸ್ ಪ್ಯಾಕ್

ಆಲಿವ್ ಎಣ್ಣೆ ಮತ್ತು ಫೇಸ್ ಪ್ಯಾಕ್

ಒಂದು ಚಮಚ ಆಲಿವ್ ಎಣ್ಣೆ ಮತ್ತು ಒಂದು ಚಮಚ ಮೊಸರು ಸೇರಿಸಿ, ಒಂದು ಮಿಶ್ರಣ ತಯಾರಿಸಿ. ಈ ಮಿಶ್ರಣವನ್ನು ಮುಖ ಹಾಗೂ ಕತ್ತಿನ ಬಳಿಯೂ ಅನ್ವಯಿಸಬೇಕು. 15 ನಿಮಿಷ ಆರಲು ಬಿಟ್ಟು, ತಣ್ಣೀರಿನಲ್ಲಿ ತೊಳೆಯಬೇಕು. ವಾರಕ್ಕೊಮ್ಮೆ ಈ ಫೇಸ್ ಪ್ಯಾಕ್ ಮಾಡಿಕೊಂಡರೆ ಸುಕ್ಕುಗಟ್ಟುವುದು ಮತ್ತು ವಯಸ್ಸಾದ ರೇಖೆಗಳನ್ನು ತಡೆಗಟ್ಟಲು ಸಹಾಯವಾಗುವುದು. ಎಣ್ಣೆ ತ್ವಚೆಯವರಾಗಿದ್ದರೆ ಇದನ್ನು ಕಡಿಮೆ ಪ್ರಮಾಣದಲ್ಲಿ ಬಳಸಬೇಕು.

ನಿಂಬೆ/ಕಿತ್ತಳೆ ಮತ್ತು ಮೊಸರು

ನಿಂಬೆ/ಕಿತ್ತಳೆ ಮತ್ತು ಮೊಸರು

ಒಂದು ಚಮಚ ಮೊಸರು ಮತ್ತು ಒಂದು ಚಮಚನಿಂಬೆ ರಸ ಅಥವಾ ಕಿತ್ತಳೆ ರಸ ಸೇರಿಸಿ, ಒಂದು ಮಿಶ್ರಣ ತಯಾರಿಸಿ. ಹೀಗೆ ತಯಾರಿಸಿದ ಮಿಶ್ರಣವನ್ನು ನಿತ್ಯವೂ ಮುಖಕ್ಕೆ ಹಚ್ಚಿಹೊಂಡರೆ ಕಪ್ಪುಕಲೆ ಮತ್ತು ಸೂರ್ಯನ ಕಿರಣದಿಂದ ಉಂಟಾದ ಸುಟ್ಟಕಲೆಯನ್ನು ನಿವಾರಿಸಬಹುದು.

ಕಿತ್ತಳೆ ಸಿಪ್ಪೆಯ ಪುಡಿ ಮತ್ತು ಮೊಸರು

ಕಿತ್ತಳೆ ಸಿಪ್ಪೆಯ ಪುಡಿ ಮತ್ತು ಮೊಸರು

ಒಂದು ಚಮಚ ಕಿತ್ತಳೆ ಸಿಪ್ಪೆಯ ಪುಡಿ ಮತ್ತು ಒಂದು ಚಮಚ ಮೊಸರನ್ನು ಸೇರಿಸಿ, ಒಂದು ಮಿಶ್ರಣ ತಯಾರಿಸಿ. ಈ ಮಿಶ್ರಣವನ್ನು ಮುಖಕ್ಕೆ ದಪ್ಪವಾದ ಪದರದಲ್ಲಿ ಅನ್ವಯಿಸಿ. ಇದು ಒಣಗಿದ ನಂತರ ತಣ್ಣನೆಯ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ತ್ವಚೆಯು ಕಲೆಯಿಂದ ಮುಕ್ತವಾಗಿ ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ.

ತ್ವಚೆಯ ಕಾಂತಿಗೆ ಕಿತ್ತಳೆ ಸಿಪ್ಪೆಯ ಮ್ಯಾಜಿಕ್ ಫೇಸ್ ಪ್ಯಾಕ್

 ಫುಲ್ಲರ್ಸ್ ಅರ್ಥ ಮತ್ತು ಮೊಸರು

ಫುಲ್ಲರ್ಸ್ ಅರ್ಥ ಮತ್ತು ಮೊಸರು

ಒಂದು ಚಮಚ ಮೊಸರು ಮತ್ತು ಒಂದು ಚಮಚ ಫುಲ್ಲರ್ಸ್ ಅರ್ಥ/ಮುಲ್ತಾನಿ ಮಿಟ್ಟಿಯನ್ನು ಸೇರಿಸಿ, ಒಂದು ಮಿಶ್ರಣ ತಯಾರಿಸಿ. ಈ ಮಿಶ್ರಣವನ್ನು ಮುಖಕ್ಕೆ ಗಣನೀಯವಾಗಿ ಹಚ್ಚಿಕೊಳ್ಳಬೇಕು. ಹೀಗೆ ಮಾಡುವುದರಿಂದ ತ್ವಚೆಯಲ್ಲಿರುವ ಕೊಳೆ ಹಾಗೂ ಕಲೆಯನ್ನು ನಿವಾರಿಸಬಹುದು. ಅಲ್ಲದೆ ತ್ವಚೆ ಸದಾ ತೇವಾಂಶದಿಂದ ಕೂಡಿರುವಂತೆ ಮಾಡುವುದು.

ಕೆಂಪು ಚಂದನ ಮತ್ತು ಮೊಸರು

ಕೆಂಪು ಚಂದನ ಮತ್ತು ಮೊಸರು

ಒಂದು ಚಮಚ ಕೆಂಪು ಚಂದನ/ಕೆಂಪು ಶ್ರೀಗಂಧದ ಪುಡಿ, ಒಂದು ಚಮಚ ಮೊಸರನ್ನು ಸೇರಿಸಿ, ಮಿಶ್ರಣ ತಯಾರಿಸಿ. ಈ ಮಿಶ್ರಣವನ್ನು ಮುಖದಿಂದ ಕತ್ತಿನ ವರೆಗೂ ದಪ್ಪ ಪದರದಲ್ಲಿ ಅನ್ವಯಿಸಬೇಕು. ಆರಿದ ನಂತರ ಮುಖವನ್ನು ತಣ್ಣೀರಿನಲ್ಲಿ ತೊಳೆಯಬೇಕು. ಹೀಗೆ ಮಾಡುವುದರಿಂದ ತ್ವಚೆಯ ಮೇಲಿರುವ ಕಲೆ, ಗುಳ್ಳೆಗಳು ಮತ್ತು ಚರ್ಮದ ಇನ್ನಿತರ ರೋಗಗಳನ್ನು ಗುಣಪಡಿಸಿ ಕಾಂತಿಯುತವಾಗಿರುವಂತೆ ಮಾಡುತ್ತದೆ.

ನಿಮ್ಮ ಅಂದದ ತ್ವಚೆಗೆ ಚಂದನದ ಆರೈಕೆ


English summary

Curd Face Packs That Can Help Soothe Your Skin

Today, we have made a list of some DIY face masks that have curd as their main ingredient. It doesn't matter if you have dry skin, oily skin or a combination skin; these curd face packs would definitely suit the skin.
Story first published: Sunday, May 28, 2017, 15:19 [IST]
X
Desktop Bottom Promotion