For Quick Alerts
ALLOW NOTIFICATIONS  
For Daily Alerts

ಪಪ್ಪಾಯಿ-ಲೋಳೆ ಸರ ಫೇಸ್ ಪ್ಯಾಕ್: ಕಡಿಮೆ ವೆಚ್ಚ, ಅಧಿಕ ಲಾಭ!

By manu
|

ತಮ್ಮ ಸೌಂದರ್ಯಕ್ಕೆ ಹೆಚ್ಚು ಒತ್ತು ನೀಡುವವರೂ ನೀಡದೇ ಇರುವವರೂ ಒಪ್ಪುವ ಒಂದೇ ವಿಷಯವೆಂದರೆ ತಮ್ಮ ತ್ವಚೆ ಮುಂದಿನವರಿಗೆ ಚೆನ್ನಾಗಿ ಕಾಣಬೇಕು ಎಂಬುದು. ಚೆನ್ನಾಗಿ ಎಂದರೆ ಹೆಚ್ಚಿನವರು ಬೆಳ್ಳಗೆ ಎಂದೇ ತಿಳಿದುಕೊಂಡಿದ್ದಾರೆ. ವಾಸ್ತವವಾಗಿ ಆರೋಗ್ಯಕರ ತ್ವಚೆಗೂ ಚರ್ಮದ ವರ್ಣಕ್ಕೂ ಯಾವುದೇ ಸಂಬಂಧವಿಲ್ಲ.

ಆದರೆ ಅರೈಕೆಯ ಕೊರತೆ, ನಿಷ್ಕಾಳಜಿ, ಕೆಲವು ಔಷಧಿಗಳ ಅಡ್ಡಪರಿಣಾಮಗಳ ಮೂಲಕ ಆಗಮಿಸುವ ಮೊಡವೆ, ಕಲೆ, ಕಪ್ಪು ಗುರುತುಗಳು ಮೊದಲಾದವು ಮಾತ್ರ ಸೌಂದರ್ಯದ ಜೊತೆಗೇ ವ್ಯಕ್ತಿಯ ಆತ್ಮವಿಶ್ವಾಸವನ್ನೂ ಕುಗ್ಗಿಸುತ್ತವೆ. ಸೌಂದರ್ಯದ ರಕ್ಷಣಾ ಕವಚ ಲೋಳೆಸರ

ಆದ್ದರಿಂದ ತ್ವಚೆಯ ಆರೈಕೆಗಾಗಿ ಕೊಂಚ ಸಮಯ ಮತ್ತು ಶ್ರಮವನ್ನು ಮೀಸಲಿಡುವುದು ಪ್ರತಿಯೊಬ್ಬರಿಗೂ ಅನಿವಾರ್ಯವಾಗಿದೆ. ಈ ಆರೈಕೆಯನ್ನು ನಮ್ಮ ಮನೆಯಂಗಳದಲ್ಲಿಯೇ ಇರುವ ಕೆಲವು ಸೊಪ್ಪು ತರಕಾರಿಗಳೇ ಚರ್ಮದ ಆರೈಕೆಗೂ ಸೂಕ್ತವಾಗಿವೆ. ಇದರಲ್ಲಿ ಒಂದಾದ ಪಪ್ಪಾಯಿ ಮತ್ತು ಲೋಳೆಸರ (ಆಲೋವೆರಾ) ಚರ್ಮದ ಆರೈಕೆಯಲ್ಲಿ ಅತ್ಯುತ್ತಮವಾಗಿದೆ. ಚರ್ಮಕ್ಕೆ ಈ ಜೋಡಿ ನೀಡುವ ಆರೈಕೆಯಲ್ಲಿ ಪ್ರಮುಖವಾದ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ. ಮೊದಲು ಈ ಆರೈಕೆಗಾಗಿ ಲೇಪವನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ:

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

ಪಪ್ಪಾಯಿ: ಚೆನ್ನಾಗಿ ಕಳಿತ ಹಣ್ಣಿನ ಒಂದು ತುಂಡು

ಲೋಳೆಸರ: ಒಂದು ದೊಡ್ಡ ಕೋಡು.

ವಿಧಾನ

ವಿಧಾನ

*ಮೊದಲು ಲೋಳೆಸರದ ಸಿಪ್ಪೆ ನಿವಾರಿಸಿ ಇದರಿಂದ ಒಂದು ದೊಡ್ಡ ಚಮಚದಷ್ಟು ತಿರುಳನ್ನು ಸಂಗ್ರಹಿಸಿ ಮಿಕ್ಸಿಯ ಬ್ಲೆಂಡರಿನಲ್ಲಿ ಹಾಕಿ

*ಇದಕ್ಕೆ ಸರಿಸುಮಾರು ಎರಡರಷ್ಟು ಭಾಗದ ಪಪ್ಪಾಯಿ ಹಣ್ಣನ್ನು ಸೇರಿಸಿ ನುಣ್ಣಗೆ ಕಡೆಯಿರಿ.

*ಈ ಲೇಪನವನ್ನು ಚರ್ಮದ ಮೇಲೆ ತೆಳುವಾಗಿ ಹಚ್ಚಿ ಒಣಗಿದ ಬಳಿಕ ಮತ್ತೊಮ್ಮೆ , ಇದೂ ಒಣಗಿದ ಬಳಿಕ ಮತ್ತೊಂದು ಹೀಗೆ ಮೂರರಿಂದ ನಾಲ್ಕು ಪದರಗಳನ್ನು ಹಚ್ಚಿ.

ವಿಧಾನ

ವಿಧಾನ

*ಬಳಿಕ ಸುಮಾರು ಇಪ್ಪತ್ತು ನಿಮಿಷ ಒಣಗಲು ಬಿಡಿ.

*ನಂತರ ಸೌಮ್ಯ ಸೋಪು ಮತ್ತು ಉಗುರುಬೆಚ್ಚನೆಯ ನೀರು ಬಳಸಿ ತೊಳೆದುಕೊಳ್ಳಿ. ಬನ್ನಿ, ಈಗ ಈ ಲೇಪನವನ್ನು ನಿಯಮಿತವಾಗಿ ಬಳಸುವ ಮೂಲಕ ಚರ್ಮಕ್ಕೆ ಯಾವ ರೀತಿಯಲ್ಲಿ ಪ್ರಯೋಜನಗಳಿವೆ ಎಂಬುದನ್ನು ಮುಂದಿನ ಸ್ಲೈಡ್ ಮೂಲಕ ನೋಡೋಣ:

ಎಣ್ಣೆಯ ಚರ್ಮದ ತೈಲಾಂಶವನ್ನು ನಿಯಂತ್ರಿಸುತ್ತದೆ

ಎಣ್ಣೆಯ ಚರ್ಮದ ತೈಲಾಂಶವನ್ನು ನಿಯಂತ್ರಿಸುತ್ತದೆ

ನಿಯಮಿತವಾಗಿ ಎಣ್ಣೆಚರ್ಮದ ಮೇಲೆ ಈ ಲೇಪನವನ್ನು ಹಚ್ಚಿಕೊಳ್ಳುತ್ತಾ ಬಂದರೆ ಎಣ್ಣೆಚರ್ಮದಲ್ಲಿರುವ ಎಣ್ಣೆಯ ಅಂಶವನ್ನು ಗಮನಾರ್ಹ ಮಟ್ಟಿಗೆ ನಿಯಂತ್ರಿಸುತ್ತದೆ. ಎಣ್ಣೆಚರ್ಮದವರಿಗೆ ಈ ಲೇಪನ ನಿಜವಾಗಿಯೂ ಇದೊಂದು ವರದಾನವಾಗಿದೆ.

ಸೂರ್ಯನ ಕಿರಣಗಳಿಂದ ಚರ್ಮ ಕಪ್ಪಗಾಗುವುದನ್ನು ತಡೆಯುತ್ತದೆ

ಸೂರ್ಯನ ಕಿರಣಗಳಿಂದ ಚರ್ಮ ಕಪ್ಪಗಾಗುವುದನ್ನು ತಡೆಯುತ್ತದೆ

ಈ ಲೇಪನದಲ್ಲಿರುವ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟುಗಳು ಚರ್ಮವನ್ನು ಸೂರ್ಯನ ಪ್ರಖರ ಕಿರಣಗಳ ಪ್ರಭಾವದಿಂದ ಸಾಕಷ್ಟು ಮಟ್ಟಿಗೆ ರಕ್ಷಣೆ ಒದಗಿಸುತ್ತವೆ. ಇದರಿಂದ ಚರ್ಮ ಬಿಸಿಲಿಗೆ ಕಪ್ಪಗಾಗುವ ಸಂಭವ ಕಡಿಮೆಯಾಗುತ್ತದೆ.

ಚರ್ಮದ ಕಾಂತಿ ಹೆಚ್ಚಿಸುತ್ತದೆ

ಚರ್ಮದ ಕಾಂತಿ ಹೆಚ್ಚಿಸುತ್ತದೆ

ಈ ಲೇಪನದಲ್ಲಿರುವ ವಿವಿಧ ಪೋಷಕಾಂಶಗಳು ಚರ್ಮದ ಪ್ರತಿ ಜೀವಕೋಶಕ್ಕೂ ಉತ್ತಮ ಪೋಷಣೆ ನೀಡುವ ಮೂಲಕ ಚರ್ಮದ ಸೆಳೆತ ಹೆಚ್ಚುತ್ತದೆ ಹಾಗೂ ಚರ್ಮದ ಕಾಂತಿ ಹೆಚ್ಚುತ್ತದೆ.

ಚರ್ಮಕ್ಕೆ ಆಗತ್ಯವಾದ ಆರ್ದ್ರತೆ ದೊರಕುತ್ತದೆ

ಚರ್ಮಕ್ಕೆ ಆಗತ್ಯವಾದ ಆರ್ದ್ರತೆ ದೊರಕುತ್ತದೆ

ಪಪ್ಪಾಯಿ ಮತ್ತು ಲೋಳೆಸರ ಎರಡರಲ್ಲಿಯೂ ಇರುವ ಪೋಷಕಾಂಶಗಳು ಒಟ್ಟಾಗಿ ಚರ್ಮದ ದ್ರವ ಆಮ್ಲೀಯವೂ ಅಲ್ಲದೇ ಕ್ಷಾರೀಯವೂ ಇಲ್ಲದೆ ತಟಸ್ಥವಾಗಿರಲು ನೆರವಾಗುತ್ತವೆ. ಅಲ್ಲದೇ ಇದರಿಂದ ದೊರಕುವ ಆರ್ದ್ರತೆ ಚರ್ಮ ಕೋಮಲ ಮತ್ತು ಮೃದುವಾಗಿರಲು ನೆರವಾಗುತ್ತದೆ.

ವೃದ್ಧಾಪ್ಯದ ಚಿಹ್ನೆಗಳನ್ನು ತಡವಾಗಿಸುತ್ತದೆ

ವೃದ್ಧಾಪ್ಯದ ಚಿಹ್ನೆಗಳನ್ನು ತಡವಾಗಿಸುತ್ತದೆ

ಈ ಮನೆಮದ್ದಿನಲ್ಲಿ ಕೊಲ್ಯಾಜೆನ್ ಎಂಬ ಕಣವನ್ನು ವೃದ್ಧಿಸಿ ಚರ್ಮದ ಸೆಳೆತ ಹೆಚ್ಚಿಸುವ ಗುಣವಿರುವ ಕಾರಣ ಚರ್ಮದ ನೆರಿಗೆ ಬೀಳುವ ಸಂಭವ ತಡವಾಗುತ್ತದೆ, ಇದರಿಂದ ವೃದ್ಧಾಪ್ಯವೂ ತಡವಾಗುತ್ತದೆ. ನೆರಿಗೆ, ಚಿಕ್ಕ ಚಿಕ್ಕ ಗೆರೆಗಳು, ಜೋಲುಬೀಳುವುದು ಮೊದಲಾದ ಚಿಹ್ನೆಗಳೆಲ್ಲಾ ತಡವಾಗುತ್ತಾ ಹೋಗುತ್ತವೆ.

ಕಲೆಗಳನ್ನು ತಿಳಿಯಾಗಿಸುತ್ತದೆ

ಕಲೆಗಳನ್ನು ತಿಳಿಯಾಗಿಸುತ್ತದೆ

ಹಿಂದಿನ ಮೊಡವೆ ಅಥವಾ ಗಾಯದ ಕಲೆಗಳು ಉಳಿದಿದ್ದರೆ ಈ ಲೇಪನ ಈ ಕಲೆಯನ್ನು ನಿಧಾನವಾಗಿ ತಿಳಿಯಾಗಿಸುತ್ತಾ ಹೋಗುತ್ತದೆ. ಪರಿಣಾಮವಾಗಿ ಕಲೆಯಿದ್ದ ಚರ್ಮದ ಭಾಗವೂ ಉಳಿದ ಭಾಗದ ಚರ್ಮದ ಬಣ್ಣವನ್ನೇ ಪಡೆದುಕೊಳ್ಳುತ್ತಾ ಹೋಗುತ್ತದೆ.

English summary

What Happens When You Apply Papaya And Aloe Vera On Your Skin?

Whether you are a person who gives utmost importance to physical appearance or not, you may agree that having a healthy, radiant complexion is something that is required to make you look presentable! Also, having healthy skin means you will not have to suffer from undesirable skin ailments like acne, pigmentation, blackheads, etc.
X
Desktop Bottom Promotion