Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಸುಂದರವಾಗಿ ಕಾಣಬೇಕಾದರೆ, ಸಿಕ್ಕಾಪಟ್ಟೆ ಖರ್ಚು ಮಾಡಬೇಕಾಗಿಲ್ಲ!
ದೇವರು ಭೂಮಿ ಮೇಲಿರುವ ಪ್ರತಿಯೊಬ್ಬರಿಗೂ ಸೌಂದರ್ಯವನ್ನು ನೀಡಿರುವುದಿಲ್ಲ. ಕೆಲವರು ತುಂಬಾ ಸುಂದರವಾಗಿದ್ದರೆ, ಇನ್ನು ಕೆಲವರು ಮಧ್ಯಮ, ಮತ್ತೆ ಕೆಲವರು ಸ್ವಲ್ಪವಷ್ಟೇ ಸುಂದರವಾಗಿರುತ್ತಾರೆ. ಸೌಂದರ್ಯವೆನ್ನುವುದು ದೇವರು ನೀಡಿದ ವರ ಎಂದರೆ ತಪ್ಪಾಗಲಾರದು. ಆದರೆ ದೇವರು ನೀಡಿದಂತಹ ದೇಹವನ್ನು ಸರಿಯಾಗಿ ನೋಡಿಕೊಂಡರೆ ಆಗ ನೀವು ಕೂಡ ಹುಡುಗಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಬಹುದು! ಬ್ಯೂಟಿ ಟಿಪ್ಸ್- ಇದು ಸೌಂದರ್ಯ ಪ್ರಿಯ ಪುರುಷರಿಗೆ ಮಾತ್ರ!
ಕೆಲವರಿಗೆ ತಮ್ಮ ದೇಹದ ಬಗ್ಗೆ ಕಾಳಜಿಯೇ ಇರುವುದಿಲ್ಲ. ಅವರು ವೃತ್ತಿಯಲ್ಲಿ ಎತ್ತರಕ್ಕೆ ಬೆಳೆಯುತ್ತಿದ್ದರೆ ಅವರ ದೇಹ ಅಡ್ಡ ಬೆಳೆಯುತ್ತಿರುತ್ತದೆ. ಇನ್ನು ಕೆಲವರು ಕೂದಲು, ಗಡ್ಡ ಬಿಟ್ಟುಕೊಂಡು ಸನ್ಯಾಸಿಗಳಂತೆ ಇರುತ್ತಾರೆ. ಇದೆಲ್ಲವನ್ನು ಕಡೆಗಣಿಸಬೇಕು. ಸುಂದರ ಹುಡುಗಿ ನಿಮ್ಮ ತೋಳಿನಲ್ಲಿ ಇರಬೇಕೆಂದರೆ ಪ್ರತಿ ದಿನವೂ ನೀವು ದೇಹವನ್ನು ಚೆನ್ನಾಗಿಟ್ಟುಕೊಳ್ಳಬೇಕು. ಸುಂದರವಾಗಿ ಕಾಣಲು ದೇಹವನ್ನು ಯಾವ ರೀತಿಯಿಂದ ಆರೈಕೆ ಮಾಡಿಕೊಳ್ಳಬಹುದು ಎನ್ನುವ ಸುಲಭ ಸೂತ್ರಗಳನ್ನು ಇಲ್ಲಿ ನೀಡಲಾಗಿದೆ. ಇದನ್ನು ಪಾಲಿಸಿಕೊಂಡು ಹೋಗಿ.

ನೀರು
ಖಾಲಿ ಹೊಟ್ಟೆಯಲ್ಲಿ ಸರಿಯಾಗಿ ನೀರು ಕುಡಿದರೆ ಚರ್ಮದ ಕಾಂತಿಯು ಹೆಚ್ಚುವುದು. ಆದರೆ ಇದನ್ನು ಜೀವನಪೂರ್ತಿ ಕಡೆಗಣಿಸುತ್ತಲೇ ಇರುತ್ತೇವೆ. ನೀರು ದೇಹದಲ್ಲಿರುವ ವಿಷವನ್ನು ಹೊರಹಾಕುತ್ತದೆ. ಇದರಿಂದ ಚರ್ಮವು ಕಾಂತಿ ಹಾಗೂ ಶಕ್ತಿಯನ್ನು ಪಡೆಯುತ್ತದೆ. ಇಷ್ಟು ಮಾತ್ರವಲ್ಲದೆ ಇದು ದೇಹದ ತೂಕ ಕಡಿಮೆ ಮಾಡಲು ಸಹಕಾರಿ.
ಗಡ್ಡ ಮೀಸೆ ಟ್ರಿಮ್ ಮಾಡಿಕೊಳ್ಳಿ
ಮುಖದ ಕೂದಲು ಯಾವಾಗಲೂ ಬೆಳೆಯುತ್ತಲೇ ಇರುತ್ತದೆ. ನಿನ್ನೆ ಗಡ್ಡ ಮತ್ತು ಮೀಸೆ ಟ್ರಿಮ್ ಮಾಡಿದೆ ಎಂದು ನಿಮಗೆ ಅನಿಸಬಹುದು. ಆದರೆ ಕೆಲವೊಂದು ಬೇಡದ ಕೂದಲು ನಿಮ್ಮ ಸೌಂದರ್ಯವನ್ನು ಕೆಡಿಸಬಹುದು. ಮೂಗಿನ ಕೂದಲನ್ನು ತೆಗೆಯಬೇಕು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ತಾನೇ? ಫ್ಯಾಷನ್ ಬದಲಾಗಿದೆ, ಇನ್ನು ಎರ್ರಾಬಿರ್ರಿ ಗಡ್ಡ ಬೆಳೆಸಿಕೊಳ್ಳಬೇಡಿ!
ದಿನದಲ್ಲಿ ಎರಡು ಸಲ ಹಲ್ಲುಗಳಿಗೆ ಬ್ರಶ್ ಮಾಡಿ
ಯಾರಾದರೂ ನಿಮ್ಮನ್ನು ನೋಡಿದಾಗ ಮೊದಲು ಗಮನಿಸುವುದು ನಗೆಯನ್ನು. ನೀವು ಚೆನ್ನಾಗಿ ಕಾಣುತ್ತಿದ್ದರೂ ನಗುವಾಗ ಹಲ್ಲುಗಳು ಹಳದಿಯಾಗಿ ಕಾಣಿಸಿದರೆ ಎಲ್ಲವೂ ಮಣ್ಣುಪಾಲು. ಹಲ್ಲುಗಳನ್ನು ಬಿಳಿಯಾಗಿಸುವ ಟೂಥ್ ಪೇಸ್ಟ್ ಬಳಸಿ ಮತ್ತು ಹಲ್ಲುಗಳನ್ನು ಯಾವಾಗಲೂ ಬಿಳಿಯಾಗಿರಿಸಿ.
ಸನ್ ಸ್ಕ್ರೀನ್ ಬಳಸಿ
ತಾಪಮಾನವು ಅತಿಯಾದಾಗ ಸೂರ್ಯನ ಕಿರಣಗಳಲ್ಲಿರುವ ಯುವಿ ವಿಕಿರಣಗಳಿಂದ ದೂರವಿರುವುದು ತುಂಬಾ ಮುಖ್ಯ. ಉರಿಯುವ ಬಿಸಿಲಿಗೆ ಹೋಗುವ ಮೊದಲು ನಿಮ್ಮ ಚರ್ಮಕ್ಕೆ ಹೊಂದಿಕೊಳ್ಳುವ ಸನ್ ಸ್ಕ್ರೀನ್ ಬಳಸುವ ಅಭ್ಯಾಸ ಬೆಳೆಸಿಕೊಳ್ಳಿ.
ಚೆನ್ನಾಗಿ ನಿದ್ರೆ ಮಾಡಿ
ಕಪ್ಪು ವೃತ್ತಗಳು ಮತ್ತು ಕಳೆಗುಂದಿರುವ ಚರ್ಮವು ನಿಮ್ಮ ಸೌಂದರ್ಯವನ್ನು ಕೆಡಿಸುತ್ತದೆ. ಸರಿಯಾಗಿ ನಿದ್ರೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ದಿನದಲ್ಲಿ 7 ಗಂಟೆ ನಿದ್ರೆ ಮಾಡಿದರೆ ಮರುದಿನ ಬೆಳಗ್ಗೆ ನೀವು ತುಂಬಾ ಉಲ್ಲಾಸದಿಂದ ಇರುತ್ತೀರಿ.



Click it and Unblock the Notifications



