For Quick Alerts
ALLOW NOTIFICATIONS  
For Daily Alerts

  ಮುಖದ ಸುಕ್ಕು, ರಂಧ್ರದ ಪರಿಹಾರಕ್ಕೆ ಇಲ್ಲಿದೆ ಮನೆಮದ್ದು

  By Manjula Balaraj
  |

  ಸಾಮಾನ್ಯವಾಗಿ ಕೆಲವರ ಮುಖದಲ್ಲಿ ಸುಕ್ಕು ಗಟ್ಟಿದ ಚರ್ಮ,ಸಣ್ಣ ಸಣ್ಣ ಅಥವಾ ದೊಡ್ಡ ರಂಧ್ರ(ಗುಂಡಿ) ಗಳಿರುವುದನ್ನು ನೀವೂ ನೋಡಿರಬಹುದು. ಇಂತಹ ರಂಧ್ರಗಳು ಮುಖದಲ್ಲಿದ್ದರೆ ವ್ಯಕ್ತಿ ನೋಡುವುದಕ್ಕೆ ಎಷ್ಟೇ ಸುಂದರವಾಗಿದ್ದರೂ ಆ ಸೌಂದರ್ಯವೂ ಈ ರಂಧ್ರಗಳಿಂದಾಗಿ ಅಡಗಿ ಹೋಗುತ್ತವೆ!  ಮುಖದಲ್ಲಿ ಉಂಟಾಗಿರುವ ರಂಧ್ರ ನಿವಾರಣೆ ಹೇಗೆ?

  ಚಿಂತಿಸದಿರಿ, ಈ ರೀತಿಯ ಸಮಸ್ಯೆಗಳಿಗೆ ತ್ವರಿತ ಗತಿಯಲ್ಲಿ ಮನೆಯಲ್ಲೇ ಸಿಗುವ ನೈಸರ್ಗಿಕ ಪರಿಹಾರದ ಬಗ್ಗೆ ಬೋಲ್ಡ್ ಸ್ಕೈ ಈ ಲೇಖನದ ಮೂಲಕ ತಿಳಿಸುತ್ತಿದೆ. ಈ ಪರಿಹಾರಗಳಿಂದ ಮುಖದಲ್ಲಿನ ಸುಕ್ಕು ಮತ್ತು ಚರ್ಮದಲ್ಲಿನ ತೆರೆದ ರಂಧ್ರಗಳಿಗೆ ಉತ್ತಮ ಚಿಕಿತ್ಸೆ ಸಿಗಬಲ್ಲದು. ಸಾಮಾನ್ಯವಾಗಿ ಇದಕ್ಕೆಲ್ಲಾ ಕಾರಣ ಬ್ಲಾಕ್ ಹೆಡ್ಸ್ ಮತ್ತು ಅತಿಯಾದ ಮೊಡವೆ ಆಗುವುದರಿಂದ ಇಂತಹ ರಂಧ್ರಗಳು ಉಂಟಾಗುತ್ತವೆ.  ಮೊಡವೆ ಕಾಟಕ್ಕೆ, ಟೊಮೆಟೊ ಹಣ್ಣಿನ ಫೇಸ್ ಪ್ಯಾಕ್

  ಕೆಲವರು ಈ ರೀತಿಯ ಮುಖದ ಮೇಲಿನ ರಂಧ್ರಗಳಿಂದ ಮುಕ್ತಿ ಪಡೆಯಲು ಮನೆ ಮದ್ದಿನ ಬದಲಾಗಿ ಕೆಲವರು ಕ್ರೀಮ್ ಮುಂತಾದವುಗಳನ್ನು ಉಪಯೋಗಿಸುತ್ತಾರೆ.ಇಲ್ಲವೇ ಯಾವುದಾದರು ಚಿಕಿತ್ಸೆಯ ಮೊರೆ ಹೋಗುತ್ತಾರೆ. ಆದರೆ ಇಂತಹ ಸಮಸ್ಯೆಗಳಿಂದ ಪಾರಾಗಲು ಮನೆ ಮದ್ದು ಎಲ್ಲಾ ಕೃತಕ ಪ್ರಸಾಧನಗಳಿಗಿಂತ ತುಂಬಾ ಉತ್ತಮ. ಈ ಕೆಳಗೆ ಹೇಳಿರುವಂತಹ ಮನೆ ಮದ್ದಿನ ಪರಿಹಾರಗಳನ್ನು ಒಮ್ಮೆ ಪ್ರಯತ್ನಿಸಿ. ನಂತರ ಇದರಿಂದಾಗುವ ಉತ್ತಮ ಬದಲಾವಣೆಗಳನ್ನು ನೋಡಿ ನೀವು ಆಶ್ಚರ್ಯ ಪಡುವುದರಲ್ಲಿ ಸಂಶಯವಿಲ್ಲ.

  ಮಂಜುಗಡ್ಡೆ

  ಮಂಜುಗಡ್ಡೆ

  ಮಂಜುಗಡ್ಡೆಯ ಒಂದು ಸಣ್ಣ ತುಂಡನ್ನು ತೆಗೆದುಕೊಂಡು ಮುಖದ ಮೇಲೆ ಯಾವ ಜಾಗದಲ್ಲಿ ತೊಂದರೆ ಉಂಟಾಗಿದೆಯೋ ಅಲ್ಲಿ ಸುಮಾರು 5-10 ಸೆಕೆಂಡುಗಳ ಕಾಲ ದಿನಕ್ಕೆರಡು ಬಾರಿ ಉಜ್ಜಬೇಕು. ಹೀಗೆ ಮಾಡುವುದರಿಂದ ಮುಖದಲ್ಲಿನ ರಂಧ್ರಗಳ ಗಾತ್ರ ಕಡಿಮೆಯಾಗುತ್ತಾ ಹೋಗುತ್ತದೆ. ಜೊತೆಗೆ, ಮುಖದಲ್ಲಿ ರಕ್ತ ಸಂಚಾರ ಸುಗಮವಾಗಿ ಚರ್ಮವು ತ್ವಚೆಯುಕ್ತವಾಗಿ ಕಾಣುತ್ತದೆ.

  ಮಂಜುಗಡ್ಡೆ

  ಮಂಜುಗಡ್ಡೆ

  ಜೇನು ತುಪ್ಪದಲ್ಲಿ ರೋಗನಿರೋಧಕ ಮತ್ತು ರೋಗನಿವಾರಕ ಅಂಶಗಳು ಹೇರಳವಾಗಿರುತ್ತದೆ. ಇದರಲ್ಲಿರುವ ಉನ್ನತ ಮಟ್ಟದ ಪೋಟ್ಯಾಷಿಯಂ ಚರ್ಮವನ್ನು ಪೋಷಣೆ ಮಾಡುವಲ್ಲಿ ಸಹಾಯಕವಾಗುತ್ತದೆ, ಜೇನು ತುಪ್ಪವನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ರಂಧ್ರದಲ್ಲಿರುವ ಬ್ಯಾಕ್ಟೀರಿಯಾಗಳು ಸಾಯುತ್ತವೆ. ಇದಾದ ನಂತರ ಮುಖಮನ್ನು ಬೆಚ್ಚಗಿನ ನೀರಿನಲ್ಲಿ 15 ನಿಮಿಷಗಳ ನಂತರ ತೊಳೆದುಕೊಳ್ಳಬೇಕು.

  ಬಾದಾಮಿ ಮತ್ತು ನಿಂಬೆ

  ಬಾದಾಮಿ ಮತ್ತು ನಿಂಬೆ

  5-6 ಬಾದಾಮಿಯನ್ನು ಪುಡಿಮಾಡಿಕೊಂಡು ನಿಂಬೆ ಹಣ್ಣಿನ ರಸದೊಂದಿಗೆ ಸೇರಿಸಬೇಕು. ಇದನ್ನು ಚೆನ್ನಾಗಿ ಅರೆದು ಮಿಶ್ರಣ ಮಾಡಿಕೊಂಡು ಮುಖದ ಮೇಲೆ ಹಚ್ಚಬೇಕು. ಹಚ್ಚಿದ 20 ನಿಮಿಷಗಳ ಕಾಲ ಹಾಗೆ ಅದನ್ನು ಬಿಡಬೇಕು. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಬೇಕು.

  ರೋಸ್ ವಾಟರ್ ಮತ್ತು ಸೌತೆಕಾಯಿ ರಸ

  ರೋಸ್ ವಾಟರ್ ಮತ್ತು ಸೌತೆಕಾಯಿ ರಸ

  ಮುಖದ ಮೇಲಿನ ರಂಧ್ರಗಳ ನಿವಾರಣೆಗೆ ಈ ವಿಧಾನ ಒಂದು ಅತ್ಯುತ್ತಮವಾದುದಾಗಿದೆ. ಕೆಲವು ಹನಿಯಷ್ಟು ರೋಸ್ ವಾಟರ್ ನೊಂದಿಗೆ ಅಷ್ಟೇ ಪ್ರಮಾಣದಲ್ಲಿ ಸೌತೆಕಾಯಿಯ ರಸವನ್ನು ಸೇರಿಸಿ ಸಾಧಾರಣ ಒಂದು ಟೀ ಚಮಚವಾಗುವಷ್ಟು ಬೆರೆಸಿ ಈ ಮಿಶ್ರಣವನ್ನು ಮುಖಕ್ಕೆ ಒಂದು ಹತ್ತಿಯ ಉಂಡೆ ಮಾಡಿಕೊಂಡು ನಿಧಾನಕ್ಕೆ ಹಚ್ಚಬೇಕು. 15-20 ನಿಮಿಷಗಳ ನಂತರ ಮುಖವನ್ನು ತೊಳೆಯಬೇಕು. ಹೀಗೆ ಮಾಡುವುದರಿಂದ ರಂಧ್ರದ ಗಾತ್ರವು ಕಡಿಮೆಯಾಗುತ್ತದೆ.

  ಗಂಧ, ಅರಿಶಿನ ಮತ್ತು ಬಾದಾಮಿ ಎಣ್ಣೆ

  ಗಂಧ, ಅರಿಶಿನ ಮತ್ತು ಬಾದಾಮಿ ಎಣ್ಣೆ

  ಒಂದೊಂದು ಟೇಬಲ್ ಚಮಚ ಗಂಧ ಮತ್ತು ಅರಿಶಿನವನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಇದಕ್ಕೆ ಬಾದಾಮಿ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಇದನ್ನು ಕತ್ತಿನ ಭಾಗ ಮತ್ತು ಮುಖಕ್ಕೆ ಹಚ್ಚಬೇಕು. 20 ನಿಮಿಷದ ನಂತರ ಮುಖವನ್ನು ತಣ್ಣಗಿನ ನೀರಿನಲ್ಲಿ ತೊಳೆಯಬೇಕು.

  ಬೆಣ್ಣೆ ಮತ್ತು ಉಪ್ಪು

  ಬೆಣ್ಣೆ ಮತ್ತು ಉಪ್ಪು

  ಇದು ಒಂದು ಸಾಮಾನ್ಯವಾದ ಪರಿಹಾರ. ಬೆಣ್ಣೆಗೆ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ತದನಂತರ ಇದನ್ನು ಮುಖದ ಮೇಲೆ ತೆರೆದಿರುವಂತಹ ರಂಧ್ರಗಳಿಗೆ ಚೆನ್ನಾಗಿ ಹಚ್ಚಿ, 20 ನಿಮಿಷಗಳ ಕಾಲ ಹಾಗೆ ಬಿಡಬೇಕು. ಇದಾದ ನಂತರ ತಣ್ಣಗಿನ ನೀರಿನಲ್ಲಿ ಮುಖವನ್ನು ತೊಳೆಯಬೇಕು.

  ಮೊಟ್ಟೆಯ ಬಿಳಿ , ಆಸ್ಪಿರಿನ್ ಮತ್ತು ಮೊಸರು

  ಮೊಟ್ಟೆಯ ಬಿಳಿ , ಆಸ್ಪಿರಿನ್ ಮತ್ತು ಮೊಸರು

  ಈ ವಿಧಾನವು ಜಿಡ್ಡಿನಿಂದ ಕೂಡಿದ ತ್ವಚೆ ಇರುವವರು ಉಪಯೋಗಿಸಿದರೆ ಉತ್ತಮ. ಮೊಟ್ಟೆಯ ಬಿಳಿಯ ಭಾಗ, 2 ಆಸ್ಪಿರಿನ್ ಮಾತ್ರೆ (ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು). ಮತ್ತು ಒಂದು ಟೇಬಲ್ ಚಮಚ ಮೊಸರು. ಇವೆಲ್ಲವನ್ನು ಸೇರಿಸಿ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಇದನ್ನು ಮುಖದ ಮೇಲೆ ಹಚ್ಚಿ 20 ನಿಮಿಷಗಳ ಕಾಲ ಹಾಗೆ ಬಿಡಬೇಕು. ಇದಾದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಬೇಕು.

   

  English summary

  Quick Home Remedies To Shrink Open Pores

  Having enlarged or open pores on your skin and face can make your skin look aged and unhealthy. So, one needs to find ways to get rid of this, as it can be a cause of trouble for the skin. In this article, we are here to share some of the easy and quick home remedies that you can try to reduce the size of open pores on the skin. Generally, pores are formed due to the increased skin care problems like acne and blackheads. in the article, and see the stunning results of shrunk pores instantly for yourself. Read on to know more.
  Story first published: Wednesday, July 13, 2016, 13:37 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more