For Quick Alerts
ALLOW NOTIFICATIONS  
For Daily Alerts

'ಲವಂಗ'ದ ಜಬರ್ದಸ್ತ್ ಪವರ್‌ಗೆ ಮೆಚ್ಚಲೇಬೇಕು...

By Manu
|

ಇತ್ತೀಚಿನ ಯಾವುದೇ ಟೂಥ್ ಪೇಸ್ಟ್‌ನ ಜಾಹೀರಾತನ್ನು ನೋಡಿದರೂ ಅದರಲ್ಲಿ ನಿಮಗೆ ಕಂಡುಬರುವಂತಹ ಅಂಶವೆಂದರೆ ಲವಂಗದ ಎಣ್ಣೆಯನ್ನು ಬಳಸಿದ್ದೇವೆಂದು ಹೇಳಿರುವುದು. ಲವಂಗವು ವಿಶ್ವದಾದ್ಯಂತ ಸಾಂಬಾರ ಪದಾರ್ಥಗಳಲ್ಲಿ ತನ್ನದೇ ಆದಂತಹ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಆಹಾ...ಲವಂಗ ಚಹಾ, ಕಣ ಕಣದಲ್ಲೂ ಆರೋಗ್ಯದ ಶಕ್ತಿ! ಆಹಾ...ಲವಂಗ ಚಹಾ, ಕಣ ಕಣದಲ್ಲೂ ಆರೋಗ್ಯದ ಶಕ್ತಿ!

ಉರಿಯೂತ ಶಮನಕಾರಿ, ನಂಜುನಿರೋಧಕ ಗುಣಗಳನ್ನು ಹೊಂದಿರುವಂತಹ ಲವಂಗವನ್ನು ಹೆಚ್ಚಾಗಿ ಆಯುರ್ವೇದದಲ್ಲಿ ಬಳಕೆ ಮಾಡಲಾಗುತ್ತದೆ. ಹಲ್ಲುನೋವು, ಕಫ, ಅಸ್ತಮಾ ಮತ್ತು ಅಜೀರ್ಣ, ಒತ್ತಡದಂತಹ ಸಮಸ್ಯೆಗಳಿಗೆ ಲವಂಗವು ತುಂಬಾ ಪರಿಣಾಮಕಾರಿ ಔಷಧಿಯಾಗಿದೆ. ಇದರ ಸುವಾಸನೆ ಕೂಡ ತುಂಬಾ ಚೆನ್ನಾಗಿರುತ್ತದೆ. ನಿಮ್ಮ ಅಡುಗೆ ಮನೆಯ ದಾದಿ ಲವಂಗ

ಇದನ್ನು ಅಡುಗೆ ಹಾಗೂ ಮನೆಮದ್ದಿನಲ್ಲಿ ಮಾತ್ರ ಬಳಕೆ ಮಾಡುವುದಲ್ಲದೆ ಕೆಲವೊಂದು ವೈನ್‌ಗಳಿಗೆ ಸುವಾಸನೆಯನ್ನು ನೀಡಲು ಬಳಕೆ ಮಾಡಲಾಗುತ್ತದೆ. ಲವಂಗದಿಂದ ಯಾವ ರೀತಿಯಲ್ಲಿ ತ್ವಚೆಯನ್ನು ಆರೈಕೆ ಮಾಡಿಕೊಳ್ಳಬಹುದು ಎಂದು ತಿಳಿದುಕೊಳ್ಳುವ. ಲವಂಗದಲ್ಲಿದೆ ನಾನಾ ಔಷಧೀಯ ಗುಣಗಳು!

ಮೊಡವೆ ನಿವಾರಣೆ

ಮೊಡವೆ ನಿವಾರಣೆ

ಮೊಡವೆಗಳನ್ನು ನಿವಾರಣೆ ಮಾಡುವಲ್ಲಿ ಲವಂಗವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಲವಂಗವು ತುಂಬಾ ಘಾಟನ್ನು ಹೊಂದಿರುವ ಕಾರಣದಿಂದಾಗಿ ಆಲಿವ್ ತೈಲ ಅಥವಾ ತೆಂಗಿನ ಎಣ್ಣೆಯೊಂದಿಗೆ ಮಿಶ್ರಣ ಮಾಡಿಕೊಂಡು ಇದನ್ನು ಬಳಸಿದರೆ ಒಳ್ಳೆಯದು.

ಕಲೆಗಳ ನಿವಾರಣೆ

ಕಲೆಗಳ ನಿವಾರಣೆ

ಮುಖದಲ್ಲಿ ಗಾಯದಿಂದ ಅಥವಾ ತರುಚಿದ ಗಾಯದಿಂದ ಉಂಟಾಗಿರುವ ಯಾವುದೇ ರೀತಿಯ ಕಲೆಗಳನ್ನು ಲವಂಗದ ಎಣ್ಣೆ ಹಚ್ಚುವುದರಿಂದ ನಿವಾರಣೆ ಮಾಡಬಹುದು. ಈ ನೈಸರ್ಗಿಕ ತೈಲದಿಂದ ಮೃಧು ಹಾಗೂ ಕಾಂತಿಯುತ ಚರ್ಮವು ನಿಮ್ಮದಾಗುತ್ತದೆ.

ನೆರಿಗೆ ರಹಿತ ಚರ್ಮಕ್ಕಾಗಿ

ನೆರಿಗೆ ರಹಿತ ಚರ್ಮಕ್ಕಾಗಿ

ಚರ್ಮಕ್ಕೆ ವಯಸ್ಸಾಗುವ ಲಕ್ಷಣಗಳನ್ನು ಲವಂಗವು ನಿವಾರಣೆ ಮಾಡುತ್ತದೆ. ಲವಂಗದ ಎಣ್ಣೆಯನ್ನು ಇತರ ಯಾವುದೇ ಸಾರಭೂತ ತೈಲದೊಂದಿಗೆ ಮಿಶ್ರಣ ಮಾಡಿಕೊಂಡು ಬಳಸುವುದರಿಂದ ಯೌವನಯುವ ತ್ವಚೆಯು ನಿಮ್ಮದಾಗುತ್ತದೆ.

ತಾಜಾ ಹಾಗೂ ಆರೋಗ್ಯಕರ

ತಾಜಾ ಹಾಗೂ ಆರೋಗ್ಯಕರ

ತಾಜಾ ಹಾಗೂ ಆರೋಗ್ಯಕರ ಚರ್ಮಕ್ಕಾಗಿ ಲವಂಗದ ಎಣ್ಣೆಯನ್ನು ಬಳಸಬೇಕು. ಈ ನೈಸರ್ಗಿಕ ಎಣ್ಣೆಯು ಪುನರುಜ್ಜೀವನವನ್ನು ನೀಡುವುದು ಮಾತ್ರವಲ್ಲದೆ ಇದರಲ್ಲಿ ಇರುವಂತಹ ಉತ್ತೇಜನಕಾರಿ ಗುಣಗಳು ಚರ್ಮವು ತಾಜಾ ಹಾಗೂ ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುತ್ತದೆ.

ರಕ್ತದ ಶುದ್ಧೀಕರಣ

ರಕ್ತದ ಶುದ್ಧೀಕರಣ

ಲವಂಗದ ಎಣ್ಣೆಯು ರಕ್ತವನ್ನು ಒಳ್ಳೆಯ ರೀತಿಯಿಂದ ಶುದ್ಧೀಕರಿಸುತ್ತದೆ ಮತ್ತು ಇದರಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣಗಳು ಸುಂದರ ಹಾಗೂ ಶುಭ್ರ ಚರ್ಮವನ್ನು ನೀಡುವುದು. ನಿಯಮಿತವಾಗಿ ಲವಂಗದ ಎಣ್ಣೆಯನ್ನು ಬಳಸುವುದರಿಂದ ಆರೋಗ್ಯಕರ ಚರ್ಮವನ್ನು ನಿಮ್ಮದಾಗಿಸಿಕೊಳ್ಳಬಹುದು.

ಮಸಾಜ್

ಮಸಾಜ್

ಲವಂಗದ ಎಣ್ಣೆಯು ನೋವು ಹಾಗೂ ಒತ್ತಡವನ್ನು ಕಡಿಮೆ ಮಾಡುತ್ತದೆ. ಹೆಚ್ಚಿನ ಲೋಷನ್ ಹಾಗೂ ಕಾಸ್ಮೆಟಿಕ್ ಕ್ರೀಮ್‌ಗಳಲ್ಲಿ ಲವಂಗದ ಎಣ್ಣೆಯು ಇರುತ್ತದೆ. ಇಂತಹ ಕ್ರೀಮ್ ಅಥವಾ ಲೋಷನ್ ಹಚ್ಚಿಕೊಂಡರೆ ದೇಹದ ನೋವು ನಿವಾರಣೆಯಾಗುವುದು.

ಕಲೆರಹಿತ ತ್ವಚೆಯ ನಿರ್ವಹಣೆಗೆ

ಕಲೆರಹಿತ ತ್ವಚೆಯ ನಿರ್ವಹಣೆಗೆ

ಕೆಲವರು ತ್ವಚೆಯು ತುಂಬಾ ಒಳ್ಳೆಯದಿರುತ್ತದೆ. ಆದರೆ ಕೆಲವೊಂದು ಕಾರಣಗಳಿಂದಾಗಿ ಚರ್ಮವು ನಿಸ್ರೇಜವಾಗಿ ಕಾಣಿಸುತ್ತದೆ. ಹಲವಾರು ಉರಿಯೂತ ಶಮನಕಾರಿ ಗುಣಗಳನ್ನು ಹೊಂದಿರುವ ಲವಂಗದ ಎಣ್ಣೆಯನ್ನು ಹಚ್ಚಿಕೊಂಡರೆ ಕಲೆರಹಿತವಾದ ಚರ್ಮವು ನಿಮ್ಮದಾಗುವುದು.

ಕೀಟಗಳು ಕಚ್ಚಿದರೆ

ಕೀಟಗಳು ಕಚ್ಚಿದರೆ

ಕೀಟಗಳು ಕಚ್ಚಿದರೆ ಆಗ ನೋವು ಕಾಣಿಸಿಕೊಂಡು ಕಿರಿಕಿರಿಯಾಗುತ್ತದೆ ಮತ್ತು ಕೆಲವು ಸಲ ಆ ಭಾಗದ ಚರ್ಮವು ದಪ್ಪಗೆ ಆಗುತ್ತದೆ. ಲವಂಗದ ಎಣ್ಣೆಯನ್ನು ಈ ಭಾಗಕ್ಕೆ ಹಚ್ಚಿಕೊಂಡರೆ ಎಲ್ಲವೂ ಪರಿಹಾರವಾಗುವುದು. ಲವಂಗದ ಎಣ್ಣೆಯನ್ನು ಇತರ ಎಣ್ಣೆ ಅಥವಾ ಬೇರೆ ಯಾವುದೇ ಕ್ರೀಮ್ ನೊಂದಿಗೆ ಮಿಶ್ರಣ ಮಾಡಿಕೊಂಡು ಹಚ್ಚಿಕೊಳ್ಳಿ.

ಮಾಯಿಶ್ಚರೈಸರ್

ಮಾಯಿಶ್ಚರೈಸರ್

ನೀವು ಯಾವುದೇ ಮಾಯಿಶ್ಚರೈಸರ್ ಕ್ರೀಮ್ ಅಥವಾ ಲೋಷನ್ ಬಳಸುತ್ತಾ ಇದ್ದರೆ ಅದಕ್ಕೆ ಒಂದೆರಡು ಹನಿ ಲವಂಗದ ಎಣ್ಣೆ ಹಾಕಿ ಬಳಸಿದರೆ ಪರಿಣಾಮ ಕಂಡುಬರುವುದು. ಇದು ಆಕರ್ಷಣೀಯ ಚರ್ಮವನ್ನು ನೀಡುವುದರೊಂದಿಗೆ ಉರಿಯೂತವನ್ನು ತಗ್ಗಿಸುವುದು.

English summary

Incredible Ways To Use Cloves For Flawless Skin

Cloves have become an integral part of many cuisines across the world. Best quality cloves produce an aroma with just squeezing between the thumb and index fingers. Cloves are not only used for culinary purposes, but also used in flavouring wines and some beverages also. Let's talk about 10 incredible ways to use Laung (clove) for flawless skin
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more