For Quick Alerts
ALLOW NOTIFICATIONS  
For Daily Alerts

ಹಬೆಯ ಜೊತೆ ಈ ವಸ್ತುಗಳಿದ್ರೆ ಲಾಭ ಇನ್ನಷ್ಟು ಹೆಚ್ಚು

By Su.Ra
|

ನಮ್ಮ ಮುಖ ಸುಂದರವಾಗಿರಬೇಕು. ಕಾಂತಿಯುತವಾಗಿರಬೇಕು ಅಂತ ಎಲ್ಲರೂ ಬಯಸ್ತಾರೆ. ಅದಕ್ಕಾಗಿರುವ ಒಂದು ಬೆಸ್ಟ್ ಮೆಥೆಡ್ ಮುಖಕ್ಕೆ ಹಬೆ ತೆಗೆದುಕೊಳ್ಳೋದು. ಮುಖಕ್ಕೆ ಹಬೆ ನೀಡಿದ್ರೆ ಮುಖದ ಡೆಡ್‌ ಸೆಲ್‌ ನಿವಾರಣೆಯಾಗಿ ಕಾಂತಿ ಬರುತ್ತೆ ಅಂತ ಎಲ್ಲರಿಗೂ ಗೊತ್ತು. ಆದ್ರೆ ಅದೇ ಹಬೆಯಲ್ಲಿ ಕೆಲವು ವಸ್ತುಗಳನ್ನು ಬಳಸಿದ್ರೆ ರಿಸಲ್ಟ್ ಇನ್ನೂ ಬೆಸ್ಟ್ ಆಗಿರುತ್ತೆ.

ಎಲ್ಲರಿಗೂ ಗೊತ್ತಿರೋ ಹಾಗೆ ಆಯುರ್ವೇದದಲ್ಲಿ ಹಬೆಯಿಂದ ನೀಡುವ ಚಿಕಿತ್ಸೆ ಹಲವಾರು ರೋಗಗಳನ್ನು ತಡೆಯುವ ಸಾಮರ್ಥ್ಯ ಹೊಂದಿದೆ ಅಂತ ಹೇಳಲಾಗುತ್ತೆ. ಹಾಗಾಗಿ ಹಬೆಯ ಚಿಕಿತ್ಸೆಗೆ ವಿಶೇಷ ಮಹತ್ವ ಕೂಡ ಇದೆ. ಅದ್ರಲ್ಲೂ ಪ್ರಮುಖವಾಗಿ ಸ್ಟೀಮ್‌ ತೆಗೆದುಕೊಳ್ಳೋದ್ರಿಂದ ಚರ್ಮದ ಕಾಂತಿ ಹೆಚ್ಚಳಕ್ಕೆ ಹೆಚ್ಚು ಪರಿಣಾಮಕಾರಿಯಾಗಿರುತ್ತೆ. ಕೇವಲ ನೀರಿನ ಹಬೆಗಿಂತ ಅದ್ರಲ್ಲೊಂದಿಷ್ಟು ಆಯುರ್ವೇದಿಯ ಸತ್ವಗಳನ್ನು ಸೇರಿಸೋದು ಇನ್ನೂ ಉತ್ತಮ. ಆ ನಿಟ್ಟಿನಲ್ಲಿ ಈ ಕೆಳಗಿನ ವಸ್ತುಗಳು ಹೆಚ್ಚು ಪ್ರಯೋಜನಕಾರಿಯಾಗಿರುತ್ತೆ. ಟ್ರೈ ಮಾಡಿ ನೋಡಿ..

Homemade steam facial treatment, for glowing skin

ಪುದಿನಾ ಎಲೆ
ಪುದಿನಾ ನಿಮ್ಗೆಲ್ಲ ಗೊತ್ತಿರೋ ಹಾಗೆ ಬೆಸ್ಟ್ ಆಯುರ್ವೇದಿಯ ಸಸ್ಯ. ಹಬೆ ತೆಗೆದುಕೊಳ್ಳುವಾಗ ಕುದಿಸುವ ನೀರಿಗೆ ಒಂದೆರಡು ಪುದಿನಾ ಎಲೆಗಳನ್ನು ಬೆರೆಸಿ. ಆಗ ನಿಮ್ಮ ಮುಖದ ಕಾಂತಿ ಡಬಲ್ ಹೆಚ್ಚುತ್ತೆ.

ನಿಂಬೆರಸ

ಬಿಸಿನೀರಿಗೆ ಒಂದೆರಡು ಹನಿ ನಿಂಬೆರಸವನ್ನು ಸೇರಿಸಿ ಆ ನೀರಿನ ಹಬೆಯನ್ನು ಮುಖಕ್ಕೆ ತೆಗೆದುಕೊಂಡ್ರೆ ಮುಖದಲ್ಲಿನ ಬ್ಲಾಕ್‌ಹೆಡ್ಸ್ ತೆಗೆಯಲು ಸಹಕಾರಿಯಾಗುತ್ತೆ. ನಿಂಬೆಯಲ್ಲಿನ ಸಿಟ್ರಿಕ್ ಅಂಶ ನಿಮ್ಮ ಮುಖಕ್ಕೆ ಉತ್ತಮ ಪರಿಣಾಮಗಳನ್ನು ಹಬೆಯ ಮೂಲಕ ಮಾಡುತ್ತೆ.

ಗುಲಾಬಿ ದಳಗಳು
ರೋಸ್ ಪೆಟಲ್ಸ್ ಯಾವಾಗ್ಲೂ ಕೂಡ ನಿಮ್ಮ ಕಾಂತಿ ಹೆಚ್ಚಿಸುವ ಬೆಸ್ಟ್ ಪ್ರೊಡಕ್ಟ್.. ಒಂದೆರಡು ಗುಲಾಬಿ ದಳಗಳನ್ನು ನೀರಿಗೆ ಹಾಕಿ ನಂತ್ರ ಆ ಬಿಸಿನೀರನ್ನು ಮುಖಕ್ಕೆ ಹಬೆಯ ರೂಪದಲ್ಲಿ ಪಡೆಯಿರಿ,... ಆಗ ನಿಮ್ಮ ಮುಖಕ್ಕೆ ಹೊಳಪು ಬರುತ್ತೆ.

ತುಳಸಿ ಎಲೆಗಳು
ಒಂದು ಎಲೆ ತುಳಸಿ ಹಲವು ವೈದ್ಯಕೀಯ ಶಕ್ತಿ ಇದೆ.. ಹಾಗಾಗಿ ಒಂದೆರಡು ತುಳಸಿ ಎಲೆಗಳನ್ನು ಬಿಸಿನೀರಿನಲ್ಲಿ ಹಾಕಿ ಅದರಿಂದ ಮುಖಕ್ಕೆ ಹಬೆ ನೀಡಿ. ಇದು ಮುಖದಲ್ಲಿನ ಮೊಡವೆಗಳ ನಿವಾರಣೆಗೆ ಸಹಕಾರಿಯಾಗಿರುತ್ತೆ. ಸ್ಟೀಮಿಂಗ್ ಮಾಡಿದರೆ ತ್ವಚೆಗೆ 6 ಲಾಭ

ಸಬ್ಬಸಿಗೆ ಸೊಪ್ಪು
ಸಬ್ಬಸಿಗೆ ಸೊಪ್ಪನ್ನು ಕೂಡ ಬಿಸಿನೀರಿಗೆ ಹಾಕಿ ಮುಖಕ್ಕೆ ಹಬೆ ತೆಗೆದುಕೊಳ್ಳಬಹುದು. ಇದ್ರಿಂದ ನಿಮ್ಮ ಮುಖದ ಕಾಂತಿ ಅಧಿಕವಾಗುತ್ತೆ.ಬ್ಲಾಕ್‌ಹೆಡ್ಸ್, ಡೆೆಡ್‌ಸೆಲ್ಸ್, ಮೊಡವೆಗಳು ಇತ್ಯಾದಿ ಎಲ್ಲಾ ಸಮಸ್ಯೆಗಳಿಗೆ ಇದು ಪರಿಹಾರ ನೀಡಬಲ್ಲದು..

ಪಾರಿಜಾತ ಹೂವು
ಪಾರಿಜಾತ ಹೂವು ಘಮಘಮ ಪರಿಮಳದ ಪುಷ್ಪ.ಈ ಪುಷ್ಫವನ್ನು ನೀರಿನಲ್ಲಿ ಹಾಕಿ ಮುಖಕ್ಕೆ ಹಬೆ ತೆಗೆದುಕೊಳ್ಳಿ. ಇದ್ರಿಂದ ಕೂಡ ನೀವು ನಿಮ್ಮ ಮುಖವನ್ನು ಕಾಂತಿಯುಕ್ತಗೊಳಿಸಿಕೊಳ್ಳಬಹುದು.

ಮಲ್ಲಿಗೆ ಹೂವು
ಬಿಸಿನೀರಿಗೆ ಒಂದೆರಡು ಮಲ್ಲಿಗೆಹೂವು ಹಾಕಿ ನಂತ್ರ ಆ ಹಬೆಯನ್ನು ಮುಖಕ್ಕೆ ತೆಗೆದುಕೊಳ್ಳಿ. ಇದ್ರಿಂದಲೂ ಕೂಡ ನೀವು ಸುಂದರವಾಗಲು ಸಾಧ್ಯ. ಒಣತ್ವಚೆಯ ನಿವಾರಣೆಗೆ ಇದು ಸಹಕಾರಿ..

ನೀಲಗಿರಿ
ಹೊರಗಿನ ಧೂಳಿನಿಂದ ಅಥ್ವಾ ಇತ್ಯಾದಿಗಳಿಂದ ನಿಮ್ಮ ಮುಖಕ್ಕೆ ಆಗುವ ದುಷ್ಪರಿಣಾಮಗಳ ನಿವಾರಣೆಗೆ ಈ ನೀಲಗಿರಿ ಸಹಕಾರಿ. ಒಂದೆರಡು ಹನಿ ನೀಲಗಿರಿಯನ್ನು ನೀರಿನಲ್ಲಿ ಹಾಕಿ ಅದ್ರ ಹಬೆಯನ್ನು ಮುಖಕ್ಕೆ ಒಂದೆರಡು ನಿಮಿಷ ತೆಗೆದುಕೊಳ್ಳಿ. ಇದ್ರಿಂದ ನೀವು ಬ್ಯೂಟಿಫುಲ್ ಆಗಲು ಸಾದ್ಯ. ಅಷ್ಟೇ ಅಲ್ಲ ಕೆಮ್ಮು,, ಶೀತ,ಮೂಗು ಕಟ್ಟಿದಂತ ಫೀಲಿಂಗ್ ಇಂತಹ ಸಂದರ್ಬದಲ್ಲಿ ನೀಲಗಿರಿ ಹಬೆ ತೆಗೆದುಕೊಳ್ಳೋದ್ರಿಂದ ರಿಲ್ಯಾಕ್ಸ್ ಆಗಬಹುದು.

ಕಿತ್ತಳೆ ಸಿಪ್ಪೆ
ಬಿಸಿಬಿಸಿಯಾದ ನೀರಿಗೆ ಒಂದು ಕಿತ್ತಲೆ ಹಣ್ಣಿನ ಸಿಪ್ಪೆಯನ್ನು ಹಾಕಿ ಆ ನೀರಿನ ಹಬೆಯನ್ನು ಮುಖಕ್ಕೆ ತೆಗೆದುಕೊಳ್ಳಿ. ಇದೂ ಕೂಡ ನಿಮ್ಮ ಚರ್ಮದ ಆರೋಗ್ಯವನ್ನು ಹೆಚ್ಚಿಸುವಲ್ಲಿ ಪರಿಮಾಮಕಾರಿಯಾಗಿರುತ್ತೆ.

ಲಾವಂಚದ ಬೇರು
ಲಾವಂಚ ಕೇಳಿದ್ದೀರಾ. ಆ ಗಿಡದ ಬೇರನ್ನು ನೀರಿನಲ್ಲಿ ಕುದಿಸಿ ಕುಡಿಯೋದ್ರಿಂದಲೇ ಹಲವು ಆರೋಗ್ಯ ಪರಿಣಾಮಗಳಿರುವಾಗ ಅದರ ಹಬೆ ಕೂಡ ನಿಮ್ಮ ಚರ್ಮದ ಸೌಂದರ್ಯ ಹೆಚ್ಚಿಸುವಲ್ಲಿ ನೆರವಾಗುತ್ತೆ. ಲಾವಂಚದ ಬೇರು ನೀರಿನಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳನ್ನು ತೊಡೆದು ಹಾಕಿ ನೀರು ಶುದ್ಧವಾಗುವಂತೆ ಮಾಡುವುದೂ ಅಲ್ಲದೆ ಅದರ ಹಬೆ ನಿಮ್ಮ ಆರೋಗ್ಯವನ್ನು ಹೆಚ್ಚಿಸಲು ನೆರವಾಗುತ್ತೆ.ಒಟ್ಟಿನಲ್ಲಿ ಹಬೆಯಿಂದ ನಿಮ್ಮ ಮುಖದ ಕಾಂತಿ ಹೆಚ್ಚುತ್ತೆ ಅನ್ನೋದು ಗೊತ್ತಿರೋ ಸತ್ಯವೇ. ಇದ್ರ ಜೊತೆಗೆ ಈ ವಸ್ತುಗಳೂ ಇದ್ದಲ್ಲಿ ಇನ್ನಷ್ಟು ಬ್ಯೂಟಿಫುಲ್ ಆಗಲು ಕಾರಣವಾಗುತ್ತೆ.

X
Desktop Bottom Promotion