Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಸ್ಟೀಮಿಂಗ್ ಮಾಡಿದರೆ ತ್ವಚೆಗೆ 6 ಲಾಭ

ಸ್ಟೀಮಿಂಗ್ ನಿಂದ ದೊರೆಯುವ ಪ್ರಯೋಜನಗಳು:
1. ಮುಖಕ್ಕೆ ಹಬೆ ಕೊಡುವುದರಿಂದ ದೊರೆಯುವ ಅತೀ ಮುಖ್ಯ ಪ್ರಯೋಜವೆಂದರೆ ನಿರ್ಜೀವ ತ್ವಚೆಯನ್ನು ಹೋಗಲಾಡಿಸುತ್ತದೆ ಮತ್ತು ತ್ವಚೆ ರಂಧ್ರಗಳನ್ನು ಓಪನ್ ಮಾಡುತ್ತದೆ. ಇದರಿಂದ ತ್ವಚೆಗೆ ಉಸಿರಾಡಲು ಸಹಕಾರಿಯಾಗುವುದು.
2. ಸ್ಟೀಮ್ ಮಾಡಿದರೆ ವೈಟ್ ಮತ್ತು ಬ್ಲ್ಯಾಕ್ ಹೆಡ್ಸ್ ಹೋಗಲಾಡಿಸಬಹುದು. ಹಬೆ ಕೊಟ್ಟು 20 ನಿಮಿಷದ ಬಳಿಕ ಮುಖವನ್ನು ಸ್ಕ್ರಬ್ ಮಾಡಬೇಕು. ಈ ರೀತಿ ಮಾಡಿದರೆ ಬ್ಲ್ಯಾಕ್ ಹೆಡ್ಸ್ ಅನ್ನು ಸುಲಭದಲ್ಲಿ ತೆಗೆಯಬಹುದು.
3. ಸ್ಟೀಮ್ ಕೊಡುವುದರಿಂದ ಮೊಡವೆಯಿಂದ ಗುಣ ಪಡಿಸಬಹುದು. ಮುಖದಲ್ಲಿ ಜಿಡ್ಡಿನಂಶವಿದ್ದರೆ ಮೊಡವೆಗಳು ಬರುತ್ತದೆ. ಮುಖಕ್ಕೆ ಸ್ಟೀಮ್ ಕೊಡುವುದರಿಂದ ತ್ವಚೆಯಲ್ಲಿರುವ ಕಶ್ಮಲಗಳನ್ನು ಹೋಗಲಾಡಿಸುತ್ತದೆ. ಇದರಿಂದ ಮೊಡವೆ ಬರುವುದು ಕಡಿಮೆಯಾಗುವುದು.
4. ಸ್ಟೀಮ್ ಮಾಡುವುದರಿಂದ ಯೌವನದ ಕಳೆಯನ್ನು ಕಾಪಾಡಿಕೊಳ್ಳಬಹುದು. ವಯಸ್ಸಾಗುತ್ತಿದ್ದಂಯೆ ಮುಖದಲ್ಲಿ ನಿರ್ಜೀವ ತ್ವಚೆ ಎದ್ದು ಕಾಣದಂತೆ ಮಾಡುತ್ತದೆ. ಸ್ಟೀಮ್ ಕೊಡುವುದರಿಂದ ಮುಖದ ತ್ವಚೆ ಬಿಗಿಯಾಗುತ್ತದೆ. ಆದ್ದರಿಂದ ಬೇಗನೆ ನೆರಿಗೆಗಳು ಕಾಣಿಸಿಕೊಳ್ಳುವುದಿಲ್ಲ.
5. ಮೊಡವೆ ಇದ್ದವರು ಮುಖಕ್ಕೆ 4-5 ನಿಮಿಷ ಸ್ಟೀಮ್ ಕೊಟ್ಟ ನಂತರ 30 ನಿಮಿಷ ವಿಶ್ರಾಂತಿ ತೆಗದುಕೊಳ್ಳಬೇಕು. ಬಿಸಿ ಹಬೆ ಮುಖಕ್ಕೆ ತಾಗಿದಾಗ ಮೊಡವೆ ಒಡೆಯಬಹುದು. ನಂತರ ಐಸ್ ಕ್ಯೂಬ್ ಮೆದುವಾಗಿ ಮಸಾಜ್ ಮಾಡಬೇಕು. ಈ ರೀತಿ ಮಾಡುತ್ತಾ ಬಂದರೆ ಮೊಡವೆ ಕಡಿಮೆಯಾಗುವುದು.
6. ಸ್ಟೀಮ್ ಮುಖದಲ್ಲಿ ರಕ್ತ ಸಂಚಲವನ್ನು ಹೆಚ್ಚಿಸುವುದರಿಂದ ಮುಖದ ಹೊಳಪು ಹೆಚ್ಚಾಗುವುದು.



Click it and Unblock the Notifications
