For Quick Alerts
ALLOW NOTIFICATIONS  
For Daily Alerts

ಮುಖದ ಅಂದ ಹೆಚ್ಚಿಸುವ ಸಿಹಿ ಹಣ್ಣುಗಳ ಫೇಸ್ ಪ್ಯಾಕ್

By Arshad
|

ಚರ್ಮದ ಸೌಂದರ್ಯ ವೃದ್ಧಿಸಲು ಮಾರುಕಟ್ಟೆಯಲ್ಲಿ ನೂರಾರು ಪ್ರಸಾಧನಗಳಿವೆ. ಇವೆಲ್ಲವೂ ರಾಸಾಯನಿಕ ಆಧಾರಿತವಾಗಿದ್ದು ತಾತ್ಕಾಲಿಕವಾಗಿ ಹೊಳಪು ನೀಡಿದರೂ ಕ್ರಮೇಣ ಚರ್ಮಕ್ಕೆ ಹಾನಿ ಎಸಗುತ್ತವೆ. ಬದಲಿಗೆ ನಿಸರ್ಗ ನೀಡಿರುವ ಹಣ್ಣುಗಳಲ್ಲಿ ಇದಕ್ಕೂ ಉತ್ತಮವಾದ ಪೋಷಕಾಂಶಗಳಿದ್ದು ಈ ಪ್ರಸಾಧನಕ್ಕಿಂತಲೂ ಉತ್ತಮ ಪೋಷಣ ನೀಡುತ್ತವೆ, ಅದೂ ಅದಕ್ಕಿಂತ ಎಷ್ಟೋ ಪಟ್ಟು ಕಡಿಮೆ ಖರ್ಚಿನಲ್ಲಿ.

fresh fruit face masks

ಇದರ ಪರಿಣಾಮ ಕಂಡುಬರುವುದು ಕೊಂಚ ನಿಧಾನ ಎಂಬ ಒಂದೇ ಕಾರಣ ಬಿಟ್ಟರೆ ಇದನ್ನು ಬಳಸದೇ ಇರಲು ಬೇರೆ ಯಾವ ಕಾರಣವೂ ಉಳಿಯುವುದಿಲ್ಲ. ಬನ್ನಿ, ಸೌಂದರ್ಯ ತಜ್ಞರು ಉಪಯೋಗಿಸಿ ಫಲಕಾರಿ ಎಂದು ಕಂಡುಕೊಂಡಿರುವ ಕೆಲವು ವಿಧಾನಗಳ ಬಗ್ಗೆ ತಿಳಿಯೋಣ.... ಕೋಮಲವಾದ ತ್ವಚೆಗಾಗಿ ಹಣ್ಣಿನ ಫೇಸ್ ಪ್ಯಾಕ್

ಒಣಚರ್ಮಕ್ಕಾಗಿ ಬಾಳೆಹಣ್ಣು
ಕೆಲವು ಮಹಿಳೆಯರ ಚರ್ಮ ಹೆಚ್ಚು ಒಣಗಿದ್ದು ಸದಾ ಕಳೆಗುಂದಿರುವಂತೆ ಕಾಣುತ್ತದೆ. ಇದಕ್ಕೆ ಪ್ರಮುಖ ಕಾರಣ ಆರ್ದ್ರತೆಯ ಕೊರತೆ ಅಥವಾ ಆರ್ದ್ರತೆಯನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯದ ಕೊರತೆ. ಈ ಕೊರತೆಯನ್ನು ಚೆನ್ನಾಗಿ ಕಳಿತ ಬಾಳೆಹಣ್ಣಿನ ತಿರುಳಿ ಪೂರೈಸುತ್ತದೆ.

ಇದಕ್ಕಾಗಿ ಒಂದು ಬಾಳೆಹಣ್ಣು ಮತ್ತು ಹಸಿಹಾಲನ್ನು ಮಿಶ್ರಣ ಮಾಡಿ ಚೆನ್ನಾಗಿ ಬೆರೆಸಿ ದಪ್ಪನೆಯ ಲೇಪನ ತಯಾರಿಸಿ. ಇದಕ್ಕೆ ಕೆಲವು ಹನಿ ಜೇನು ಮತ್ತು ಅರ್ಧ ಚಿಕ್ಕ ಚಮಚ kaolin powder ಬೆರೆಸಿ. ಈ ಮಿಶ್ರಣವನ್ನು ಈಗತಾನೇ ತೊಳೆದುಕೊಂಡ ಮುಖಕ್ಕೆ ಹಚ್ಚಿ ಒಣಗಲು ಬಿಡಿ. ಒಣಚರ್ಮ ಈ ಲೇಪನದ ತೇವಾಂಶವನ್ನು ಹೀರಿ ಲೇಪನ ಬಿರಿಬಿಡುವಂತಾಗುತ್ತದೆ. ಬಳಿಕ ಇದನ್ನು ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಬಳಸದಿರಿ. ಒಣಚರ್ಮ ಇಲ್ಲವಾಗುವವರೆಗೂ ನಿಯಮಿತವಾಗಿ ಉಪಯೋಗಿಸುತ್ತಿರಿ.

ಎಣ್ಣೆಚರ್ಮಕ್ಕಾಗಿ ಕಿತ್ತಳೆ ರಸ
ಅಗತ್ಯಕ್ಕೂ ಹೆಚ್ಚಿನ ಪ್ರಮಾಣದಲ್ಲಿ ತೈಲ ಸ್ರವಿಸುವುದೇ ಎಣ್ಣೆಚರ್ಮಕ್ಕೆ ಕಾರಣ. ಇದಕ್ಕೆ ಕಿತ್ತಳೆ ರಸ ಸೂಕ್ತವಾಗಿದೆ. ಎರಡು ದೊಡ್ಡಚಮಚ ತಾಜಾ ಕಿತ್ತಳೆಯ ರಸ, ಒಂದು ಚಿಕ್ಕಚಮದ ಗಂಧದ ಪುಡಿ ಮತ್ತು ಒಂದು ಚಿಕ್ಕ ಚಮಚ ಕ್ಯಾಲಮೈನ್ ಪೌಡರ್ ಸೇರಿಸಿ ನಯವಾದ ಲೇಪನ ತಯಾರಿಸಿ. ಈ ಲೇಪನವನ್ನು ಈಗತಾನೇ ತೊಳೆದುಕೊಂಡ ಮುಖಕ್ಕೆ ತೆಳುವಾಗಿ ಹಚ್ಚಿ ಒಣಗಲು ಬಿಡಿ.


ಈ ಲೇಪನ ಸರಿಸುಮಾರು ಅರ್ಧಭಾಗ ಒಣಗಿದೆ ಎಂದ ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಅನಗತ್ಯವಾದ ತೈಲ ನಿವಾರಣೆಯಾಗುತ್ತದೆ ಹಾಗೂ ಮೃದುವಾದ ಮತ್ತು ಗೌರವರ್ಣದ ತ್ವಚೆ ಪಡೆಯಲು ಸಾಧ್ಯವಾಗುತ್ತದೆ. ಎಣ್ಣೆ ಜಿಡ್ಡಿನ ತೊಂದರೆ ಇರುವವರಿಗೆ ಈ ವಿಧಾನ ಅತ್ಯುತ್ತಮವಾಗಿದೆ. ಮುಖದ ಅಂದ-ಚೆಂದ ಹೆಚ್ಚಿಸುವ ಕಿತ್ತಳೆ ಸಿಪ್ಪೆಯ ಫೇಸ್ ಪ್ಯಾಕ್

ಸಾಮಾನ್ಯ ಚರ್ಮಕ್ಕಾಗಿ ಸೇಬುಹಣ್ಣು
ಅತಿ ಒಣದೂ ಅಲ್ಲ, ಅತಿ ಎಣ್ಣೆಯೂ ಅಲ್ಲ ಎಂಬುವವರ ಚರ್ಮಕ್ಕೆ ಸೇಬು ಹಣ್ಣು ಉತ್ತಮವಾಗಿದೆ. ಇದಕ್ಕಾಗಿ ಒಂದು ತಾಜಾ ಸೇಬುಹಣ್ಣಿನ ತಿರುಳನ್ನು ಸಂಗ್ರಹಿಸಿ (ಸಿಪ್ಪೆ, ಬೀಜ ನಿವಾರಿಸಿ) ಕೊಂಚ ಹಸಿ ಹಾಲು ಬೆರೆಸಿ ಮಿಕ್ಸಿಯಲ್ಲಿ ನಯವಾಗಿ ಕಡೆಯಿರಿ. ಇದಕ್ಕೆ ಕೊಂಚವೇ ಹಾಲಿನ ಪುಡಿ ಮತ್ತು ಮುಲ್ತಾನಿ ಮಿಟ್ಟಿ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಬಹುದಾದಷ್ಟು ಗಾಢವಾಗಿಸಿ.

ಈ ಲೇಪನವನ್ನು ಈಗತಾನೇ ತೊಳೆದ ಮುಖಕ್ಕೆ ತೆಳುವಾಗಿ ಹಚ್ಚಿ ಸುಮಾರು ಹದಿನೈದು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಸಾಮಾನ್ಯ ಚರ್ಮದವರು ಹೆಚ್ಚಿನ ಕೋಮಲತೆ, ಆಮ್ಲೀಯವಲ್ಲದ ಕ್ಷಾರೀಯವೂ ಅಲ್ಲದ ಸಂತುಲತೆಯನ್ನು ಪಡೆಯಬಹುದು. ಪರಿಣಾಮವಾಗಿ ಹಿಂದೆಂದೂ ಇಲ್ಲದ ಚರ್ಮದ ಕಾಂತಿ ಮತ್ತು ಗೌರವರ್ಣ ಪಡೆಯಲು ಸಾಧ್ಯವಾಗುತ್ತದೆ. ಸೇಬಿನ ಸಿಪ್ಪೆಯೂ ಕೂಡ ಆರೋಗ್ಯಕ್ಕೆ ಉಪಕಾರಿ ಕಣ್ರೀ

ಇತರ ಸಂಯೋಜನೆಯ ಚರ್ಮಕ್ಕಾಗಿ ಸ್ಟ್ರಾಬೆರಿ
ಕೆಲವರ ಚರ್ಮ ಕೆಲಹೊತ್ತಿನಲ್ಲಿ ಎಣ್ಣೆಚರ್ಮದಂತೆಯೂ ಕೆಲವೊಮ್ಮೆ ಒಣಗಿರುವಂತೆಯೂ ಕಂಡುಬರುತ್ತಿರುತ್ತದೆ. ಎಣ್ಣೆಯ ಸ್ರವಿಕೆಯಲ್ಲಿ ಏರುಪೇರೇ ಇದಕ್ಕೆ ಕಾರಣ. ಈ ಚರ್ಮಕ್ಕೆ combination skin ಅಥವಾ ಸಂಯೋಜನೆಯ ಚರ್ಮ ಎಂದು ಕರೆಯುತ್ತಾರೆ.


ಈ ಚರ್ಮದ ಆರೈಕೆಗಾಗಿ ಕೆಲವು ಸ್ಟ್ರಾಬೆರಿ ಹಣ್ಣುಗಳು ಮತ್ತು ಕೊಂಚ ಪುದೀನಾ ಎಲೆಗಳನ್ನು ಬೆರೆಸಿ ನುಣ್ಣಗೆ ಕಡೆಯಿರಿ. ಇದಕ್ಕೆ ಕೊಂಚ kaolin powder ಮತ್ತು ಕೆಲವು ಹನಿ ಜೇನು ಸೇರಿಸಿ ಮಿಶ್ರಣ ಮಾಡಿ. ಇನ್ನು ಈ ಲೇಪನವನ್ನು ಮುಖಕ್ಕೆ ತೆಳುವಾಗಿ ಹಚ್ಚಿ ಕೆಲ ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.
ಇದರಿಂದ ತೈಲದ ಪ್ರಮಾಣ ಸೂಕ್ತವಾಗಿದ್ದು ಚರ್ಮದ ಕಾಂತಿ ಮತ್ತು ಮೃದುತ್ವ ಹೆಚ್ಚಲು ಸಾಧ್ಯವಾಗುತ್ತದೆ. ಚರ್ಮದ ಸೆಳೆತವನ್ನು ಹೆಚ್ಚಿಸುವ ಮೂಲಕ ನೆರಿಗೆಗಳಾಗುವ ಸಾಧ್ಯತೆಯನ್ನೂ ಕಡಿಮೆಗೊಳಿಸುತ್ತದೆ. ನವ ತಾರುಣ್ಯದ ತ್ವಚೆಗಾಗಿ ಸ್ಟ್ರಾಬೆರಿ ಹಣ್ಣಿನ ಫೇಸ್ ಪ್ಯಾಕ್
English summary

Homemade fresh fruit face masks for beautiful skin

Pamper your skin with fresh fruits which are toxin free and ditch the chemical beauty treatments. Use seasonal fruits which are cost- effective and also bring a visible difference to your skin...says beauty expert, have a look which they have shared a few packs that could be used.....
X
Desktop Bottom Promotion