ಮುಖದ ಅಂದ-ಚೆಂದ ಹೆಚ್ಚಿಸುವ ಕಿತ್ತಳೆ ಸಿಪ್ಪೆಯ ಫೇಸ್ ಪ್ಯಾಕ್

By: Arshad
Subscribe to Boldsky

ನಿಮಗೆ ಮೊಡವೆಯ ತೊಂದರೆ ಇದೆಯೇ? ಮುಖದ ಕಾಂತಿಯೂ ಕುಂದಿದೆಯೇ? ಇದುವರೆಗೆ ನಡೆಸಿದ ಪ್ರಯತ್ನ ಅಷ್ಟೊಂದು ಫಲಕಾರಿಯಾಗಿಲ್ಲವೇ? ಹಾಗಾದರೆ ಕಿತ್ತಳೆ ಸಿಪ್ಪೆಯ ಆರೈಕೆ ನಿಮ್ಮ ಮೊಡವೆಗಳನ್ನು ನಿವಾರಿಸಬಹುದು.

ಇದಕ್ಕೆ ಕೊಂಚ ಪೂರ್ವ ತಯಾರಿ ಅಗತ್ಯ. ಕೆಲವು ಕಿತ್ತಳೆ ಸಿಪ್ಪೆಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಚಿಕ್ಕದಾಗಿ ಪುಡಿ ಮಾಡಿ ಕೊಂಚ ನೀರಿನೊಂದಿಗೆ ಕಡೆದು ಅಥವಾ ಅರೆದು ಮುಖಕ್ಕೆ ಹಚ್ಚಿಕೊಳ್ಳುವ ಮೂಲಕ ಮೊಡವೆಗಳು ಶೀಘ್ರವಾಗಿ ಕಲೆಯಿಲ್ಲದೇ ಮಾಯವಾಗುತ್ತವೆ. ಕೆಲವೇ ವಾರಗಳಲ್ಲಿ ನಿಮ್ಮ ಮುಖ ಮೊಡವೆಯ ಕುರುಹೂ ಇಲ್ಲದೇ ಕಾಂತಿಯುಕ್ತವಾಗುತ್ತದೆ.

Orange Peel
 

ಇನ್ನೊಂದು ವಿಧಾನದಲ್ಲಿ ಎರಡು ಚಿಕ್ಕಚಮಚ ಮೊಸರಿಗೆ ಒಂದು ಚಿಕ್ಕಚಮಚ ಕಿತ್ತಳೆ ಸಿಪ್ಪೆಯ ಪುಡಿಯನ್ನು ಚೆನ್ನಾಗಿ ಬೆರೆಸಿ ಮೂಗಿನ ಪಕ್ಕ ಮತ್ತು ಮೂಗಿನ ತುದಿಯ ಭಾಗದಲ್ಲಿ ಆವರಿಸಿರುವ ಬ್ಲಾಕ್ ಹೆಡ್‌ಗಳ ಮೇಲೆ ತೆಳುವಾಗಿ ಹಚ್ಚಿ ವೃತ್ತಾಕಾರದ ಮಸಾಜ್ ಮೂಲಕ ಹಚ್ಚಿ. ಹದಿನೈದು ನಿಮಿಷ ಬಿಟ್ಟು ಉಗುರುಬೆಚ್ಚನಯೆ ನೀರಿನಿಂದ ತೊಳೆದುಕೊಳ್ಳಿ. ಇದರಿಂದ ಬ್ಲಾಕ್ ಹೆಡ್ ನಿವಾರಣೆಯಾಗುತ್ತದೆ. ಕಿತ್ತಳೆ- ಬಾಳೆಹಣ್ಣಿನ ಸಿಪ್ಪೆಯ ಪವರ್‌ಗೆ ಬೆರಗಾಗಲೇಬೇಕು..!   

Orange Peel
 

*ಮುಖದ ಕಾಂತಿಗೆ

ಒಂದು ಚಿಕ್ಕಚಮಚ ಮೊಸರು, ಅರ್ಧ ಚಿಕ್ಕಚಮಚ ಜೇನು ಮತ್ತು ಒಂದು ಚಿಕ್ಕಚಮಚ ಕಿತ್ತಳೆಸಿಪ್ಪೆಯ ಪುಡಿ ಬೆರೆಸಿ ನಯವಾದ ಲೇಪನ ತಯಾರಿಸಿ. ಈ ಲೇಪನವನ್ನು ತೆಳುವಾಗಿ ಮುಖಕ್ಕೆ ಲೇಪಿಸಿ ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ ಹಾಗೂ ಕಲೆಗಳು ಇಲ್ಲವಾಗುತ್ತವೆ. ಒಂದು ವೇಳೆ ನಿಮ್ಮ ಚರ್ಮ ಒಣಚರ್ಮವಾಗಿದ್ದರೆ ಈ ಲೇಪನದಲ್ಲಿ ಮೂರು ಹನಿ ಆಲಿವ್ ಅಥವಾ ಕೊಬ್ಬರಿ ಎಣ್ಣೆಯನ್ನು ಸೇರಿಸಿ.

Orange Peel
 

*ಒಂದು ದೊಡ್ಡಚಮಚ ಜೇನು, ಅರ್ಧ ಚಿಕ್ಕ ಚಮಚ ಕಿತ್ತಳೆ ಸಿಪ್ಪೆಯ ರಸ, ಅರ್ಧ ಚಿಕ್ಕಚಮಚ ಲಿಂಬೆರಸ ಸೇರಿಸಿ ಮುಖಲೇಪ ತಯಾರಿಸಿ. ಈ ಲೇಪನವನ್ನು ಈಗತಾನೇ ತೊಳೆದ ಮುಖಕ್ಕೆ ತೆಳುವಾಗಿ ಲೇಪಿಸಿ ಹದಿನೈದು ನಿಮಿಷ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನದಿಂದ ಮುಖದ ಕಾಂತಿ ಹೆಚ್ಚುತ್ತದೆ. ಕಿತ್ತಳೆ ಸಿಪ್ಪೆಯಿಂದ ಹೆಚ್ಚಿಸಿ ಮುಖದ ಬಿಳುಪು  

Orange Peel
 

ಮುಖದ ನೆರಿಗೆಗಳಿಗೆ

ಸುಮಾರು ಒಂದು ದೊಡ್ಡಚಮಚ ಕಿತ್ತಳೆ ಸಿಪ್ಪೆಯ ಪುಡಿಗೆ ಅರ್ಧ ಚಿಕ್ಕಚಮದ ಅರಿಶಿನಪುಡಿ ಮತ್ತು ಅರ್ಧ ಚಿಕ್ಕಚಮಚ ಜೇನು ಸೇರಿಸಿ ಚೆನ್ನಾಗಿ ಬೆರೆಸಿ. ಈ ಲೇಪನವನ್ನು ಮುಖದ ಮೇಲೆ ಹಚ್ಚಿ ಇಪ್ಪತ್ತು ನಿಮಿಷ ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನದಿಂದ ಮುಖದ ನೆರಿಗೆಗಳು ಇಲ್ಲವಾಗುತ್ತವೆ. ಸರ್ವ ವಿಧದಲ್ಲೂ ಪ್ರಯೋಜನಕಾರಿಯಾಗಿರುವ ಕಿತ್ತಳೆ ಸಿಪ್ಪೆ 

English summary

Orange Peel Face Pack which should surprise you...

Orange peel is one of those miracle solutions that work wonders for your face and complexion. It gets rid of oily skin, unclogs pores, eliminates inflammation, treats acne, removes blemishes, evens skin tone and brings a glow to your face. It is very easy to make orange peel power to store and apply on your face. Here are some of the ways to use orange peel face packs to bring a glow to your skin and remove blemishes.
Please Wait while comments are loading...
Subscribe Newsletter