For Quick Alerts
ALLOW NOTIFICATIONS  
For Daily Alerts

ಕೋಮಲವಾದ ತ್ವಚೆಗಾಗಿ ಹಣ್ಣಿನ ಫೇಸ್ ಪ್ಯಾಕ್

By Deepak
|

ಬೇಸಿಗೆಯಲ್ಲಿ ತ್ವಚೆ ಸಂರಕ್ಷಣೆ ಎಲ್ಲರೂ ಅನುಭವಿಸುವ ಕಷ್ಟ. ದುಬಾರಿ ಕ್ರೀಮ್, ಲೋಶನ್, ಫೇಸ್ ಪ್ಯಾಕ್ ಬಳಸಲು ಸಾಧ್ಯವಾಗದ ಜನ ಸಾಮಾನ್ಯರಿಗೆ ಸುಲಭ ರೀತಿಯಲ್ಲಿ ಚರ್ಮ ರಕ್ಷಣೆ ಮಾಡಿಕೊಳ್ಳಬಹುದಾದ ವಿಧಾನ ಇಲ್ಲಿದೆ. ಲಭ್ಯವಿರುವ ತರಕಾರಿ, ಹಣ್ಣುಗಳ ಸಹಾಯದಿಂದ ಮುಖದ ತ್ವಚೆಯನ್ನು ಮೃದುವಾಗಿ ಹೊಳೆಯುವಂತೆ ಮಾಡಿಕೊಳ್ಳಬಹುದು. ಯಾವುದೇ ಅಡ್ಡ ಪರಿಣಾಮದ ಭಯವಿಲ್ಲದೆ ನೈಸರ್ಗಿಕ ವಿಧಾನ ಬಳಕೆಯಿಂದ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಲು ಒಂದಿಷ್ಟು ಸಮಯ ವ್ಯಯಿಸಿದರೆ ಸಾಕು.

ಬೇಸಿಗೆಯ ಉರಿ ಬಿಸಿನಲ್ಲಿ ಕಾಡುವ ಸಾಮಾನ್ಯವಾದ ಮುಖಕ್ಕೆ ಸ೦ಬ೦ಧಿಸಿದ ಸಮಸ್ಯೆಗಳೆ೦ದರೆ, ಹಣೆಯ ಭಾಗವು ಕಪ್ಪಾಗುವುದು, ಕಣ್ಣುಗಳ ಕೆಳಗಿನ ಕಪ್ಪು ವರ್ತುಲಗಳು, ಮತ್ತು ಕಪ್ಪಾದ ತುಟಿಗಳು. ಹೀಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ, ಆದ್ದರಿಂದ ತ್ವಚೆಯ ಎಲ್ಲಾ ಬಗೆಯ ಕಲೆಯನ್ನು ಹೋಗಲಾಡಿಸಲು ನಾವು ಇಂದು ತಾಜಾ ಹಣ್ಣಿನ ಫೇಸ್ ಪ್ಯಾಕ್ ಅನ್ನು ಪರಿಚಯಿಸುತ್ತಿದ್ದೇವೆ. ಕಲೆರಹಿತ ಕಾಂತಿಯುಕ್ತ ತ್ವಚೆಗಾಗಿ ಖರ್ಬೂಜ ಹಣ್ಣಿನ ಫೇಸ್ ಪ್ಯಾಕ್!

ತಾಜಾ ಹಣ್ಣುಗಳಲ್ಲಿ ಅಧಿಕ ಪ್ರಮಾಣದ ಹಣ್ಣಿನ ಆಸಿಡ್‍ಗಳು ಇರುವುದರಿಂದ ಹಲವಾರು ತ್ವಚೆಯ ಸಮಸ್ಯೆಗಳನ್ನು ನಿವಾರಿಸಲು ಇದು ಸಹಕಾರಿ, ಅಲ್ಲದೆ ಸ್ವಾಭಾವಿಕವಾದ ಪ್ಯಾಕ್‍ಗಳಲ್ಲಿ ಯಾವುದೇ ರಾಸಾಯನಿಕಗಳು ಇರುವುದಿಲ್ಲ ಮತ್ತು ಅವುಗಳು ನಿಮ್ಮ ತ್ವಚೆಯ ಮೇಲೆ ಅಪಾಯಕಾರಿ ಪರಿಣಾಮಗಳನ್ನು ಬೀರುವುದಿಲ್ಲ. ಅಧಿಕ ವಿಟಮಿನ್ ಮತ್ತು ಕಿಣ್ವಗಳನ್ನು ಒಳಗೊಂಡಿರುವ ಹಣ್ಣುಗಳು ತ್ವಚೆಯ ಮೇಲೆ ಅದ್ಭುತವಾದ ಎಕ್ಸ್‌ಫೋಲಿಯೇಶನ್ ಕ್ರಿಯೆಯನ್ನು ಮಾಡುತ್ತವೆ.

ನಾವು ಯಾವಾಗ ಪಟ್ಟಣಗಳಲ್ಲಿ ವಾಸಿಸಲು ಆರಂಭಿಸುತ್ತೇವೆಯೋ, ಆಗ ಬಿರು ಬಿಸಿಲು ಮತ್ತು ಬದಲಾಗುವ ಹವಾಮಾನಗಳಷ್ಟೇ ಅಲ್ಲದೆ, ಮಾಲಿನ್ಯ, ಧೂಳು ಮತ್ತು ಗ್ಯಾಸ್‌ಗಳು ಎಲ್ಲವೂ ನಿಮ್ಮ ತ್ವಚೆಯ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುತ್ತವೆ. ಇಂತಹ ಸಂದರ್ಭಗಳಲ್ಲಿ ನಿಮ್ಮ ತ್ವಚೆಯನ್ನು ಕಾಪಾಡಲು, ಹಲವಾರು ಮಾರ್ಗೋಪಾಯಗಳನ್ನು ನೀವು ಅನುಸರಿಸಬೇಕಾಗುತ್ತದೆ.

ಹಾಗಾಗಿ ಇಂದು ನಮ್ಮ ತ್ವಚೆಯನ್ನು ರಕ್ಷಿಸಿಕೊಳ್ಳಲು ಮನೆಯಲ್ಲಿಯೇ ತಯಾರಿಸಿದ ಮನೆ ಮದ್ದುಗಳನ್ನು ಬಳಸುವುದು ಬುದ್ಧಿವಂತಿಕೆಯ ಲಕ್ಷಣವೆನಿಸಿಕೊಳ್ಳುತ್ತದೆ. ಏಕೆಂದರೆ ಕೆಟ್ಟ ತ್ವಚೆಯ ಸಮಸ್ಯೆ ಎದುರಾದಗಲೆಲ್ಲ ನಾವು ಹೋಗಿ ಸಲೂನ್‌ನಲ್ಲಿ ಪ್ರತಿ ಬಾರಿ ಕುಳಿತುಕೊಳ್ಳಲು ಸಮಯಾವಕಾಶವಿರುವುದಿಲ್ಲ. ಮನೆಮದ್ದುಗಳು ನಮ್ಮ ಸಮಯವನ್ನು ಉಳಿಸುತ್ತವೆ, ಹಣವನ್ನು ಉಳಿಸುತ್ತವೆ ಮತ್ತು ಅಡ್ಡ ಪರಿಣಾಮಗಳುಂಟಾಗದಂತೆ ಕಾಪಾಡುತ್ತವೆ. ಬನ್ನಿ ಇಂದು ನಾವು ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಹಣ್ಣಿನ ಫೇಸ್ ಪ್ಯಾಕ್‌ಗಳ ಕುರಿತು ತಿಳಿದುಕೊಳ್ಳೋಣ.

ಅವೊಕ್ಯಾಡೊ ಪ್ಯಾಕ್

ಅವೊಕ್ಯಾಡೊ ಪ್ಯಾಕ್

ಒಣ ತ್ವಚೆಯ ಸಮಸ್ಯೆಯೇ? ಚಿಂತೆ ಏಕೆ! ಅವೊಕ್ಯಾಡೊಗಳು ನಿಮ್ಮ ಒಣ ತ್ವಚೆಯ ಸಮಸ್ಯೆಯನ್ನು ನಿವಾರಿಸುತ್ತವೆ. ಇವು ನಿಮ್ಮ ತ್ವಚೆಗೆ ಪರಿಣಾಮಕಾರಿಯಾಗಿ ನೀರಿನಂಶವನ್ನು ಒದಗಿಸುತ್ತವೆ. ಅವೊಕ್ಯಾಡೊಗಳನ್ನು ಜಜ್ಜಿ, ಅದರ ಪೇಸ್ಟನ್ನು ನಿಮ್ಮ ಮುಖಕ್ಕೆ ಹಚ್ಚಿ. 30 ನಿಮಿಷ ಬಿಟ್ಟು, ನಂತರ ಮುಖವನ್ನು ತೊಳೆಯಿರಿ.

ಟೊಮೇಟೊ

ಟೊಮೇಟೊ

ಟೊಮೇಟೊಗಳು ಬೇಸಿಗೆಯಲ್ಲಿ ಉಪಯೋಗಕ್ಕೆ ಬರುತ್ತವೆ. ಟೊಮೇಟೊಗಳನ್ನು ಆಲೀವ್ ಎಣ್ಣೆಯ ಜೊತೆಗೆ ರುಬ್ಬಿಕೊಂಡು ಮುಖಕ್ಕೆ ಲೇಪಿಸಿ. ಇದು ಸನ್ ಬರ್ನ್ ಸಮಸ್ಯೆಯನ್ನು ನಿವಾರಿಸುತ್ತದೆ. ಟೊಮೇಟೊದಲ್ಲಿರುವ ಲೈಕೊಪೀನ್ ಎಂಬ ಅಂಶವು ಸನ್ ಬರ್ನ್‌ಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಹಲವಾರು ಆರೋಗ್ಯಕಾರಿ ಪ್ರಯೋಜನಗಳು ಅಡಗಿರುತ್ತವೆ. ಬಾಳೆಹಣ್ಣನ್ನು ರುಬ್ಬಿಕೊಂಡು, ಅದನ್ನು ಒಂದು ಟೀ ಸ್ಪೂನ್ ಜೇನು ತುಪ್ಪ ಮತ್ತು ಲಿಂಬೆ ರಸದ ಜೊತೆಗೆ ಬೆರೆಸಿಕೊಳ್ಳಿ. ಇದನ್ನು ಮುಖಕ್ಕೆ ಲೇಪಿಸಿಕೊಂಡು 20 ನಿಮಿಷ ಬಿಟ್ಟು, ನಂತರ ಮುಖ ತೊಳೆಯಿರಿ. ಇದರಿಂದ ಮೊಡವೆಗಳ ಸಮಸ್ಯೆ ದೂರಾಗುತ್ತದೆ.

 ಪಪ್ಪಾಯಿ ಹಣ್ಣು

ಪಪ್ಪಾಯಿ ಹಣ್ಣು

ಪಪ್ಪಾಯಿ ಹಣ್ಣಿನಂತಹ ಪ್ಯಾಕ್‍ಗಳು ತ್ವಚೆಗೆ ಯೌವನವನ್ನು ತಂದು ಕೊಡುತ್ತವೆ. ಪಪ್ಪಾಯಿ ಹಣ್ಣನ್ನು ತೆಗೆದುಕೊಂಡು,ಅದನ್ನು ರುಬ್ಬಿಕೊಳ್ಳಿ. ನಂತರ ಅದನ್ನು ಮುಖಕ್ಕೆ ಲೇಪಿಸಿ, 15-20 ನಿಮಿಷ ಬಿಡಿ. ಇದು ಟ್ಯಾನ್ ಆಗಿರುವ ತ್ವಚೆಯ ಕೋಶಗಳಿಗೆ ಪುನಃಶ್ಚೇತನವನ್ನು ಒದಗಿಸುತ್ತದೆ.

ಸ್ಟಾಬೆರ್ರಿ ಫೇಸ್ ಪ್ಯಾಕ್

ಸ್ಟಾಬೆರ್ರಿ ಫೇಸ್ ಪ್ಯಾಕ್

ಒಂದು ವೇಳೆ ನಿಮಗೆ ಕಾಂತಿ ಹೀನ ತ್ವಚೆಯಿದ್ದಲ್ಲಿ, ಹೊರಗೆ ಕೆಲಸ ಮಾಡಬೇಡಿ. ಕಾಂತಿಹೀನ ತ್ವಚೆಗೆ ಮತ್ತೆ ಜೀವ ಕಳೆಯನ್ನು ನೀಡಲು ಸ್ಟ್ರಾಬೆರ್ರಿಗಳು ಸಹಕರಿಸುತ್ತವೆ. ಇದಕ್ಕಾಗಿ ಸ್ಟ್ರಾಬೆರ್ರಿಗಳನ್ನು ನೀರಿನಲ್ಲಿ ಬೆರೆಸಿ, ರುಬ್ಬಿಕೊಂಡು ಮುಖಕ್ಕೆ ಲೇಪಿಸಿ.

ಕ್ಯಾರೆಟ್

ಕ್ಯಾರೆಟ್

1/4 ಟೀ ಚಮಚ ಕ್ಯಾರೆಟ್ ರಸಕ್ಕೆ 1 ಟೀ ಚಮಚ ಜೇನುತುಪ್ಪ ಬೆರೆಸಿ ಮುಖಕ್ಕೆ ಲೇಪಿಸಿ. 15 ನಿಮಿಷಗಳ ನಂತರ ಸೋಡಾ ಬೈಕಾರ್ಬೊನೇಟ್ ಬೆರೆಸಿದ ನೀರಿನಲ್ಲಿ ಹತ್ತಿಯನ್ನು ಅದ್ದಿ ಮುಖವನ್ನು ಒರೆಸಿಕೊಳ್ಳಿ. ಇದರಿಂದ ತ್ವಚೆ ಮೃದುವಾಗಿ ನಳನಳಿಸುತ್ತದೆ.

English summary

Best Homemade Fruit Face Packs

Fresh fruits contain a lot of fruit acids which are cure for many skin problems. Natural packs do not contain any chemicals and harsh substances that make your skin whither. Fruits which are high on vitamin and enzymes have a powerful exfoliating effect of skin. Fruits are a natures way to provide for us in various ways.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X